ಸಹದೇವನು ಮಮತೆ ಮತ್ತು ಆಸಕ್ತಿಗಳನ್ನು ತೊರೆದು ರಾಜ್ಯಭಾರಮಾಡುವಂತೆ ಯುಧಿಷ್ಠಿರನಿಗೆ ಸಲಹೆ ನೀಡಿದುದು
ರಾಜದಂಡವನ್ನು ಹಿಡಿದು ಪೃಥಿವಿಯನ್ನು ಶಾಸನಮಾಡುವಂತೆ ದ್ರೌಪದಿಯು ಯುಧಿಷ್ಠಿರನನ್ನು ಪ್ರೇರಿಸಿದುದು
ಅರ್ಜುನನು ರಾಜದಂಡದ ಮಹತ್ತ್ವವನ್ನು ವರ್ಣಿಸಿದುದು
ಭೀಮಸೇನನು-ಧರ್ಮರಾಜನಿಗೆ ತಾವು ಹಿಂದೆ ಅನುಭವಿಸಿದ ದುಃಖಗಳನ್ನು ಸ್ಮರಣೆಮಾಡಿಕೊಡುತ್ತಾ, ಮೋಹವನ್ನು ತ್ಯಜಿಸಿ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ರಾಜ್ಯಶಾಸನಮಾಡುವಂತೆಯೂ, ಯಜ್ಞಮಾಡುವಂತೆಯೂ ಸಲಹೆ ನೀಡಿದುದು
ಯುಧಿಷ್ಠಿರನು ಭೀಮಸೇನನ ಮಾತನ್ನು ಖಂಡಿಸಿ ಮುನಿಗಳ ಮತ್ತು ಜ್ಞಾನಿಗಳ ಮಾರ್ಗವನ್ನು ಪ್ರಶಂಸೆಮಾಡಿದುದು
ಅರ್ಜುನನು ಜನಕರಾಜನ ಮತ್ತು ಅವನ ಪತ್ನಿಯ ದೃಷ್ಟಾಂತವನ್ನು ಕೊಟ್ಟು ಸಂನ್ಯಾಸವನ್ನು ತೆಗೆದುಕೊಳ್ಳದಂತೆ ಯುಧಿಷ್ಠಿರನನ್ನು ತಡೆದುದು
ಯುಧಿಷ್ಠಿರನು ತನ್ನ ನಿಶ್ಚಿತಾಭಿಪ್ರಾಯವನ್ನೇ ಪುನಃ ಪ್ರತಿಪಾದಿಸಿದುದು
ದೇವಸ್ಥಾನಮುನಿಗಳು ಯುಧಿಷ್ಠಿರನಿಗೆ ಉತ್ತಮಧರ್ಮವನ್ನು ತಿಳಿಸಿ ಯಜ್ಞಾದಿಗಳನ್ನು ಮಾಡಲು ಉಪದೇಶಿಸಿದುದು
ಅರ್ಜುನನು ಕ್ಷತ್ರಿಯಧರ್ಮವನ್ನು ಪ್ರಶಂಸೆಮಾಡುತ್ತಾ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಪುನಃ ಪ್ರಯತ್ನಿಸಿದುದು
ವ್ಯಾಸರು ಶಂಖ-ಲಿಖಿತರ ಕಥೆಯನ್ನು ಹೇಳುವ ಪ್ರಸಂಗದಲ್ಲಿ ಸುದ್ಯುಮ್ನರಾಜನ ದಂಡಧರ್ಮಪಾಲನೆಯ ಮಹತ್ತ್ವವನ್ನು ಹೇಳಿ ಯುಧಿಷ್ಠಿರನನ್ನು ಕ್ಷತ್ರಿಯಧರ್ಮದಲ್ಲಿಯೇ ಇದ್ದು ರಾಜ್ಯಪರಿಪಾಲನೆ ಮಾಡುವಂತೆ ಆಜ್ಞಾಪಿಸಿದುದು
ವ್ಯಾಸರು ಯುಧಿಷ್ಠಿರನಿಗೆ ಹಯಗ್ರೀವಚರಿತ್ರೆಯನ್ನು ಹೇಳಿ ರಾಜೋಚಿತವಾದ ಕರ್ತವ್ಯವನ್ನು ಮಾಡಲು ಸಲಹೆ ನೀಡಿದುದು
ಯುಧಿಷ್ಠಿರನು ಸರ್ವತ್ಯಾಗದ ಮಹತ್ತ್ವವನ್ನೇ ಪುನಃ ಪ್ರತಿಪಾದಿಸಿದುದು
ಯುಧಿಷ್ಠಿರನು ಶೋಕಾಧಿಕ್ಯದಿಂದ ಶರೀರಪರಿತ್ಯಾಗ ಮಾಡಲು ಸಿದ್ಧನಾದಾಗ ವ್ಯಾಸರು ಪುನಃ ಸಮಾಧಾನ ಹೇಳಿದುದು
ಅಶ್ಮಮಹರ್ಷಿ ಮತ್ತು ಜನಕರ ಸಂವಾದೋಪಾಖ್ಯಾನದ ಮೂಲಕವಾಗಿ ವ್ಯಾಸರು ಯುಧಿಷ್ಠಿರನನ್ನು ಸಮಾಧಾನಗೊಳಿಸಿದುದು
ಶ್ರೀಕೃಷ್ಣನು ನಾರದ-ಸೃಂಜಯರ ಸಂವಾದರೂಪದಲ್ಲಿರುವ ಹದಿನಾರು ಮಂದಿ ರಾಜರ ಉಪಾಖ್ಯಾನಗಳನ್ನು ಹೇಳಿ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಯತ್ನಿಸಿದುದು
ಮಹರ್ಷಿಗಳಾದ ನಾರದ-ಪರ್ವತರ ಉಪಾಖ್ಯಾನ
ಸುವರ್ಣಷ್ಠೀವಿಯ ಜನನ-ಮರಣ ಪುನರ್ಜನ್ಮಗಳ ವೃತ್ತಾಂತ
ವ್ಯಾಸರು ಯುಕ್ತಿಯುಕ್ತವಾದ ಮಾತುಗಳಿಂದ ಯುಧಿಷ್ಠಿರನನ್ನು ಸಮಾಧಾನಗೊಳಿಸಲು ಪುನಃ ಯತ್ನಿಸಿದುದು
ವ್ಯಾಸರು ಧರ್ಮರಾಜನನ್ನು ಸಮಾಧಾನಗೊಳಿಸುತ್ತಾ ಕಾಲದ ಪ್ರಾಬಲ್ಯವನ್ನು ಹೇಳಿದುದು : ದೇವಾಸುರರ ಸಂಗ್ರಾಮದ ನಿದರ್ಶನವನ್ನೂ ಕೊಟ್ಟು ಧರ್ಮದ್ರೋಹಿಗಳನ್ನು ದಮನಮಾಡುವುದರಲ್ಲಿನ ಔಚಿತ್ಯವನ್ನು ವಿವರಿಸಿ ಪ್ರಾಯಶ್ಚಿತ್ತಮಾಡಿಕೊಳ್ಳುವುದರ ಆವಶ್ಯಕತೆಯನ್ನು ತಿಳಿಸಿದುದು
ಯಾವ ಕರ್ಮವನ್ನು ಮಾಡುವುದರಿಂದ ಮನುಷ್ಯನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು ಮತ್ತು ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದರಿಂದ ಕರ್ಮದ ಪಾಪವು ಪರಿಹಾರವಾಗುತ್ತದೆಂಬುದರ ವಿವೇಚನೆ
ಪಾಪಕರ್ಮಗಳಿಗೆ ಪ್ರಾಯಶ್ಚಿತ್ತಗಳ ವಿವರಣೆ
ಸ್ವಾಯಂಭುವಮನುವು ನಿರೂಪಿಸಿದ ಧರ್ಮದ ಸ್ವರೂಪ ವರ್ಣನೆ : ಪಾಪದಿಂದ ಮುಕ್ತನಾಗಲು ಶಾಸ್ತ್ರಗಳಲ್ಲಿ ಹೇಳಿರುವ ಪ್ರಾಯಶ್ಚಿತ್ತವಿಧಾನಗಳು : ಅಭಕ್ಷ್ಯವಸ್ತುಗಳ ವರ್ಣನೆ : ದಾನಸ್ವೀಕಾರಕ್ಕೆ ಪಾತ್ರಾಪಾತ್ರರ ವಿವೇಚನೆ
ಶ್ರೀಕೃಷ್ಣನ ಮತ್ತು ಕೃಷ್ಣದ್ವೈಪಾಯನರ ಸಲಹೆಯಂತೆ ಯುಧಿಷ್ಠಿರನು ನಗರವನ್ನು ಪ್ರವೇಶಿಸಿದುದು
ನಗರಪ್ರವೇಶದ ಸಮಯದಲ್ಲಿ ಹಸ್ತಿನಾಪಟ್ಟಣದ ನಿವಾಸಿಗಳೂ ಮತ್ತು ಬ್ರಾಹ್ಮಣರೂ ಯುಧಿಷ್ಠಿರನನ್ನು ಸತ್ಕರಿಸಿದುದು : ಧರ್ಮಜನನ್ನು ಆಕ್ಷೇಪಿಸಿದ ಚಾರ್ವಾಕನನ್ನು ಬ್ರಾಹ್ಮಣರು ಸಂಹರಿಸಿದುದು
ಚಾರ್ವಾಕನು ಹೊಂದಿದ್ದ ವರಗಳ ವಿಷಯವನ್ನು ಶ್ರೀಕೃಷ್ಣನು ಯುಧಿಷ್ಠಿರನಿಗೆ ವಿವರಿಸಿ ಹೇಳಿದುದು
ಯುಧಿಷ್ಠಿರನ ರಾಜ್ಯಾಭಿಷೇಕ
ಯುಧಿಷ್ಠಿರನು ಧೃತರಾಷ್ಟ್ರನಿಗೆ ಅಧೀನನಾಗಿದ್ದುಕೊಂಡು ರಾಜ್ಯದ ಆಡಳಿತದ ಸುವ್ಯವಸ್ಥೆಗಾಗಿ ಸಹೋದರರಿಗೂ ಮತ್ತು ಇತರರಿಗೂ ಖಾತೆಗಳನ್ನು ವಹಿಸಿಕೊಟ್ಟುದು
ಧೃತರಾಷ್ಟ್ರ-ಯುಧಿಷ್ಠಿರರು ಯುದ್ಧದಲ್ಲಿ ಅವಸಾನ ಹೊಂದಿದವರಿಗೆ ಶ್ರಾದ್ಧಕ್ರಿಯೆಗಳನ್ನು ಮಾಡಿದುದು