Volume 20: Shalya Parva

ಪರಿವಿಡಿ:

ಗದಾಪರ್ವ – ಸೌಪ್ತಿಕಪರ್ವ – ಐಷೀಕಪರ್ವ – ಸ್ತ್ರೀಪರ್ವ : ಜಲಪ್ರದಾನಿಕಪರ್ವ – ಸ್ತ್ರೀವಿಲಾಪಪರ್ವ

ಗದಾಪರ್ವ

  • ಕೃಪ-ಕೃತವರ್ಮಾಶ್ವತ್ಥಾಮರು ಸರೋವರದ ಸಮೀಪಕ್ಕೆ ಹೋಗಿ ಯುದ್ಧದ ವಿಷಯದಲ್ಲಿ ದುರ್ಯೋಧನನೊಡನೆ ಸಮಾಲೋಚನೆ ನಡೆಸಿದುದು : ಯುಧಿಷ್ಠಿರನು ವ್ಯಾಧರ ಮೂಲಕವಾಗಿ ದುರ್ಯೋಧನನಿರುವ ಸ್ಥಳವನ್ನು ಗುರುತಿಸಿ ಸೈನ್ಯಸಹಿತನಾಗಿ ಸರೋವರದ ಬಳಿಗೆ ಬಂದುದು : ಅಶ್ವತ್ಥಾಮಾದಿಗಳು ಯುಧಿಷ್ಠಿರನು ಬಂದುದನ್ನು ನೋಡಿ ದೂರಸರಿದುದು
  • ಪಾಂಡವರು ದ್ವೈಪಾಯನ ಸರೋವರಕ್ಕೆ ಹೋದುದು : ಯುಧಿಷ್ಠಿರ-ಕೃಷ್ಣರ ಮಾತುಕತೆ : ಸರೋವರದಲ್ಲಡಗಿದ್ದ ದುರ್ಯೋಧನನೊಡನೆ ಯುಧಿಷ್ಠಿರನ ಸಂಭಾಷಣೆ
  • ಯುಧಿಷ್ಠಿರನ ಮಾತಿನಂತೆ ದುರ್ಯೋಧನನು ಸರೋವರದಿಂದ ಮೇಲೆದ್ದು ಬಂದು ಗದಾಯುದ್ಧಕ್ಕೆ ಸಿದ್ಧನಾದುದು
  • ಶ್ರೀಕೃಷ್ಣನು ಯುಧಿಷ್ಠಿರನನ್ನು ಆಕ್ಷೇಪಿಸಿದುದು : ಭೀಮಸೇನನ ಪ್ರಶಂಸೆ : ಭೀಮ-ದುರ್ಯೋಧನರ ವಾಗ್ಯುದ್ಧ
  • ಬಲರಾಮನ ಆಗಮನ : ಪಾಂಡವರಿಂದ ಸ್ವಾಗತ : ಭೀಮ-ದುರ್ಯೋಧನರ ಯುದ್ಧಾರಂಭ
  • ಬಲರಾಮನ ತೀರ್ಥಯಾತ್ರೆಯ ವಿವರಣೆ : ಪ್ರಭಾಸಕ್ಷೇತ್ರದ ಪ್ರಭಾವವರ್ಣನೆ : ಪ್ರಸಂಗವಶದಿಂದ ಚಂದ್ರನ ಶಾಪ ವಿಮೋಚನೆಯ ಕಥೆ
  • ಉದಪಾನತೀರ್ಥದ ಉತ್ಪತ್ತಿ : ತ್ರಿತಮುನಿಯು ಕೂಪದಲ್ಲಿ ಬಿದ್ದುದು : ಅಲ್ಲಿ ಅವನು ಯಜ್ಞಮಾಡಿದುದು ಮತ್ತು ಸಹೋದರರಿಗೆ ಶಾಪವನ್ನಿತ್ತುದು
  • ವಿನಶನ, ಸಂಭೂಮಿಕ, ಗಂಧರ್ವ, ಗರ್ಗಸ್ರೋತ, ಶಂಖ, ದ್ವೈತವನ ಮತ್ತು ನೈಮಿಷೇಯ ತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡಿಕೊಂಡು ಬಲರಾಮನು ಸಪ್ತ ಸರಸ್ವತೀತೀರ್ಥಕ್ಷೇತ್ರವನ್ನು ಪ್ರವೇಶಿಸಿದುದು
  • ಸಪ್ತ ಸಾರಸ್ವತತೀರ್ಥದ ಉತ್ಪತ್ತಿ ಮತ್ತು ಮಹಿಮೆ : ಮಂಕಣಕಮುನಿಯ ಚರಿತ್ರೆ
  • ಔಶನಸ ಅಥವಾ ಕಪಾಲಮೋಚನತೀರ್ಥಕ್ಷೇತ್ರದ ಮಾಹಾತ್ಮ್ಯ : ರುಷಂಗುವಿನ ಆಶ್ರಮವರ್ಣನೆ : ಪೃಥೂದಕತೀರ್ಥದ ಮಹಿಮೆ
  • ಆರ್ಷ್ಟಿಷೇಣ, ಸಿಂಧುದ್ವೀಪ, ದೇವಾಪಿ ಮತ್ತು ವಿಶ್ವಾಮಿತ್ರರು ತಪಸ್ಸುಮಾಡಿ ಇಷ್ಟಾರ್ಥಗಳನ್ನು ಪಡೆದುಕೊಂಡುದು
  • ಆವಾಕೀರ್ಣ ಮತ್ತು ಯಾಯಾತತೀರ್ಥಗಳ ಮಹಿಮಾ ಪ್ರಸಂಗದಲ್ಲಿ ದಾಲ್ಭ್ಯರ ಕಥೆ : ಯಯಾತಿಯ ಯಜ್ಞದ ವರ್ಣನೆ
  • ವಸಿಷ್ಠಾಪವಾಹತೀರ್ಥದ ಉತ್ಪತ್ತಿ : ವಿಶ್ವಾಮಿತ್ರನ ಕ್ರೋಧ : ವಸಿಷ್ಠರ ಸಹನಶೀಲತೆ
  • ಋಷಿಗಳ ಪ್ರಯತ್ನದಿಂದ ಸರಸ್ವತಿಯ ಶಾಪವಿಮೋಚನೆ : ಜಲದ ಶುದ್ಧಿ : ಅರುಣಾಸಂಗಮಸ್ನಾನದಿಂದ ರಾಕ್ಷಸರಿಗೂ ಮತ್ತು ಇಂದ್ರನಿಗೂ ಸಂಕಟವು ಪರಿಹಾರವಾದುದು
  • ಕುಮಾರ ಕಾರ್ತಿಕೇಯನ ಆವಿರ್ಭಾವ : ಕುಮಾರನನ್ನು ದೇವಸೇನಾಪತಿಯನ್ನಾಗಿ ಮಾಡಲು ಅಭಿಷೇಕದ ಸಿದ್ಧತೆ
  • ಸ್ಕಂದನ ಅಭಿಷೇಕ : ಅವನ ಮಹಾಪಾರ್ಷದರ (ಸಭಿಕರ) ನಾಮಧೇಯಗಳು ಮತ್ತು ರೂಪಾದಿಗಳ ವರ್ಣನೆ
  • ಮಾತೃಗಣಗಳ ಪರಿಚಯ : ಸ್ಕಂದನ ರಣಯಾತ್ರೆ : ತಾರಕಾಸುರ-ಮಹಿಷಾಸುರರೇ ಮೊದಲಾದ ದೈತ್ಯರನ್ನು ಸಂಹರಿಸಿದುದು
  • ಜಲಾಧಿಪತಿಯಾಗಿ ವರುಣನಿಗೆ ಪಟ್ಟಾಭಿಷೇಕವಾದುದು : ಅಗ್ನಿತೀರ್ಥ, ಬ್ರಹ್ಮಯೋನಿ ಮತ್ತು ಕುಬೇರತೀರ್ಥಗಳ ಉತ್ಪತ್ತಿಕಥನ
  • ಬದರಪಾಚನತೀರ್ಥದ ಮಹಿಮಾಪ್ರಸಂಗದಲ್ಲಿ ಶ್ರುತಾವತೀ ಮತ್ತು ಅರುಂಧತಿಯರ ತಪಸ್ಸಿನ ಕಥೆ
  • ಇಂದ್ರತೀರ್ಥ, ರಾಮತೀರ್ಥ, ಯಮುನಾತೀರ್ಥ ಮತ್ತು ಆದಿತ್ಯತೀರ್ಥಗಳ ಮಹಿಮೆ
  • ಆದಿತ್ಯತೀರ್ಥದ ಮಹಿಮಾಪ್ರಸಂಗದಲ್ಲಿ ಅಸಿತದೇವಲ ಜೈಗೀಷವ್ಯರ ಪುಣ್ಯಚರಿತ್ರೆ
  • ಸಾರಸ್ವತತೀರ್ಥದ ಮಹಿಮಾಪ್ರಸಂಗದಲ್ಲಿ ದಧೀಚ ಮತ್ತು ಸಾರಸ್ವತಮುನಿಗಳ ಚರಿತ್ರೆ
  • ವೃದ್ಧಕನ್ಯೆಯ ಚರಿತ್ರೆ : ಶೃಂಗವಂತನೊಡನೆ ಅವಳ ವಿವಾಹ ಮತ್ತು ಸ್ವರ್ಗಾರೋಹಣ : ಆ ತೀರ್ಥದ ಮಹಿಮೆ
  • ಋಷಿಗಳ ಕುರುಕ್ಷೇತ್ರದ ಎಲ್ಲೆ ಮತ್ತು ಮಹಿಮೆಗಳನ್ನು ವರ್ಣಿಸಿದುದು
  • ಪ್ಲಕ್ಷಪ್ರಸ್ರವಣತೀರ್ಥಗಳ ಮತ್ತು ಸರಸ್ವತಿಯ ಮಹಿಮೆ : ನಾರದರು ಕೌರವರ ವಿನಾಶವನ್ನೂ, ದುರ್ಯೋಧನ-ಭೀಮಸೇನರ ಯುದ್ಧಪ್ರಸಂಗವನ್ನೂ ಬಲರಾಮನಿಗೆ ತಿಳಿಸಿದುದು : ಯುದ್ಧವನ್ನು ನೋಡುವ ಸಲುವಾಗಿ ಬಲರಾಮನು ತೆರಳಿದುದು
  • ಬಲರಾಮನ ಸಲಹೆಯಂತೆ ಎಲ್ಲರೂ ಕುರುಕ್ಷೇತ್ರದಲ್ಲಿನ ಸಮಂತಪಂಚಕತೀರ್ಥದ ಬಳಿಗೆ ಹೋದುದು : ಗದಾಯುದ್ಧಕ್ಕೆ ಭೀಮ-ದುರ್ಯೋಧನರ ಸಿದ್ಧತೆ
  • ದುರ್ಯೋಧನನಿಗೆ ಅಪಶಕುನವಾದುದು : ಭೀಮಸೇನನ ಉತ್ಸಾಹ : ಭೀಮ-ದುರ್ಯೋಧನರ ವಾಗ್ಯುದ್ಧ : ಗದಾಯುದ್ಧದ ಪ್ರಾರಂಭ
  • ಭೀಮ-ದುರ್ಯೋಧನರ ಗದಾಯುದ್ಧದ ವರ್ಣನೆ
  • ಕೃಷ್ಣಾರ್ಜುನರ ಸಂಭಾಷಣೆ : ಅರ್ಜುನನು ಸೂಚಿಸಿದ ಸಂಕೇತದಂತೆ ಭೀಮಸೇನನು ದುರ್ಯೋಧನನ ತೊಡೆಯನ್ನು ಪ್ರಹರಿಸಿ ಅವನನ್ನು ನೆಲಕ್ಕೆ ಕೆಡವಿದುದು : ಭಯಂಕರೋತ್ಪಾತಗಳ ಆವಿರ್ಭಾವ
  • ಭೀಮಸೇನನು ದುರ್ಯೋಧನನನ್ನು ನಿಂದಿಸಿದುದು : ಯುಧಿಷ್ಠಿರನು ಭೀಮಸೇನನನ್ನು ಸಮಾಧಾನಗೊಳಿಸಿ ದುರ್ಯೋಧನನನ್ನು ಸಮಾಧಾನಗೊಳಿಸುತ್ತಾ ತನ್ನ ಖೇದವನ್ನು ಪ್ರಕಟಿಸಿದುದು
  • ಕ್ರೋಧಾಭಿಭೂತನಾಗಿದ್ದ ಬಲರಾಮನನ್ನು ಶ್ರೀಕೃಷ್ಣನು ಸಮಾಧಾನಗೊಳಿಸಿದುದು : ಯುಧಿಷ್ಠಿರನೊಡನೆ ಶ್ರೀಕೃಷ್ಣ-ಭೀಮಸೇನರ ಸಂಭಾಷಣೆ
  • ಪಾಂಡವಸೈನಿಕರು ಭೀಮಸೇನನನ್ನು ಸ್ತುತಿಸಿದುದು : ಶ್ರೀಕೃಷ್ಣನು ದುರ್ಯೋಧನನನ್ನು ಆಕ್ಷೇಪಿಸಿದುದು : ದುರ್ಯೋಧನನ ಉತ್ತರ : ಶ್ರೀಕೃಷ್ಣನು ಪಾಂಡವರಿಗೆ ಸಮಾಧಾನ ಹೇಳಿದುದು
  • ಪಾಂಡವರು ಕೌರವರ ಶಿಬಿರದೊಳಗೆ ಪ್ರವೇಶಿಸಿದುದು : ಅರ್ಜುನನ ರಥವು ಭಸ್ಮವಾದುದು : ಪಾಂಡವರು ಶ್ರೀಕೃಷ್ಣನನ್ನು ಹಸ್ತಿನಾಪುರಕ್ಕೆ ಕಳುಹಿಸಿಕೊಟ್ಟುದು
  • ಯುಧಿಷ್ಠಿರನ ಪ್ರೇರಣೆಯಂತೆ ಶ್ರೀಕೃಷ್ಣನು ಹಸ್ತಿನಾಪಟ್ಟಣಕ್ಕೆ ಹೋಗಿ ಧೃತರಾಷ್ಟ್ರನನ್ನೂ-ಗಾಂಧಾರಿಯನ್ನೂ ಸಮಾಧಾನಗೊಳಿಸಿ ಹಿಂದಿರುಗಿದುದು
  • ದುರ್ಯೋಧನನು ಸಂಜಯನ ಸಮ್ಮುಖದಲ್ಲಿ ವಿಲಪಿಸಿದುದು : ವಾಹಕರ ಮೂಲಕವಾಗಿ ತನ್ನ ಸ್ನೇಹಿತರಿಗೆ ವಾರ್ತಾಸಂದೇಶ ನೀಡಿದುದು
  • ದುರ್ಯೋಧನನ ದುರವಸ್ಥೆಯನ್ನು ಕಂಡು ಅಶ್ವತ್ಥಾಮನು ವಿಷಾದಿಸಿದುದು : ಪಾಂಡವರನ್ನು ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದುದು : ದುರ್ಯೋಧನನು ಅಶ್ವತ್ಥಾಮನನ್ನು ಸೇನಾಪತಿಯ ಸ್ಥಾನದಲ್ಲಿ ಅಭಿಷೇಕಮಾಡಿದುದು

ಸೌಪ್ತಿಕಪರ್ವ

  • ಮೂವರು ಕೌರವಮಹಾರಥರೂ ವನವೊಂದರಲ್ಲಿ ವಿಶ್ರಮಿಸಿಕೊಂಡುದು : ವೃಕ್ಷದ ಮೇಲೆ ಮಲಗಿದ್ದ ಕಾಗೆಗಳ ಮೇಲೆ ಗೂಬೆಯು ಆಕ್ರಮಣನಡೆಸಿದುದನ್ನು ಕಂಡು ಅಶ್ವತ್ಥಾಮನ ಮನಸ್ಸಿನಲ್ಲಿ ಕ್ರೂರವಾದ ಸಂಕಲ್ಪವು ಅಂಕುರಿಸಿದುದು : ಆ ವಿಷಯದಲ್ಲಿ ಮಿತ್ರರ ಸಲಹೆಯನ್ನು ಕೇಳಿದುದು
  • ಕೃಪರು ಅಶ್ವತ್ಥಾಮನಿಗೆ ದೈವದ ಪ್ರಾಬಲ್ಯವನ್ನು ವಿವರಿಸಿ ಹೇಳುತ್ತಾ ಮುಂದಿನ ಕರ್ತವ್ಯದ ವಿಷಯದಲ್ಲಿ ಸತ್ಪುರುಷರ ಸಲಹೆಯನ್ನು ಪಡೆಯುವಂತೆ ಪ್ರೇರಿಸಿದುದು
  • ಅಶ್ವತ್ಥಾಮನು ಕೃಪ-ಕೃತವರ್ಮರಿಗೆ ಉತ್ತರ ಹೇಳಿ ತನ್ನ ನಿರ್ಧಾರವನ್ನು ತಿಳಿಸಿದುದು
  • ಕೃಪರು ಬೆಳಗಾದ ಮೇಲೆ ಯುದ್ಧಮಾಡಲು ಅಶ್ವತ್ಥಾಮನಿಗೆ ಸಲಹೆ ನೀಡಿದುದು : ಅಶ್ವತ್ಥಾಮನು ಮಲಗಿರುವವರನ್ನೇ ಸಂಹರಿಸಲು ಆಗ್ರಹಪಡಿಸಿದುದು
  • ಕೃಪಾಶ್ವತ್ಥಾಮರ ಸಂವಾದ : ಮೂವರೂ ಪಾಂಡವರ ಶಿಬಿರದ ಕಡೆಗೆ ತೆರಳಿದುದು
  • ಅಶ್ವತ್ಥಾಮನು ಶಿಬಿರದ ಹೆಬ್ಬಾಗಿಲಿನಲ್ಲಿ ಅದ್ಭುತಾಕಾರನಾದ ಪುರುಷನನ್ನು ಕಂಡು ಅವನ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಿದುದು : ಅಸ್ತ್ರಗಳೆಲ್ಲಾ ಮುಗಿದು ಹೋಗಲಾಗಿ ವ್ಯಾಕುಲಗೊಂಡು ಶಿವನನ್ನು ಶರಣುಹೊಂದಿದುದು
  • ಅಶ್ವತ್ಥಾಮನು ಶಿವನನ್ನು ಸ್ತೋತ್ರಮಾಡಿದುದು : ಅಶ್ವತ್ಥಾಮನ ಮುಂದೆ ಅಗ್ನಿವೇದೀ ಮತ್ತು ಭೂತಗಣಗಳು ಕಾಣಿಸಿಕೊಂಡುದು : ಅಶ್ವತ್ಥಾಮನು ಆ ಅಗ್ನಿವೇದಿಯಲ್ಲಿ ಆತ್ಮಸಮರ್ಪಣಮಾಡಿ ಸುಪ್ರೀತನಾದ ಈಶ್ವರನಿಂದ ಖಡ್ಗವನ್ನು ಪಡೆದುದು
  • ಅಶ್ವತ್ಥಾಮನು ಮಲಗಿ ನಿದ್ರಿಸುತ್ತಿದ್ದ ಪಾಂಚಾಲರೇ ಮೊದಲಾದ ಸಮಸ್ತ ಯೋಧರನ್ನೂ ಸಂಹರಿಸಿದುದು : ತಪ್ಪಿಸಿಕೊಂಡು ಶಿಬಿರದಿಂದ ಹೊರಕ್ಕೆ ಓಡಿಹೋಗುತ್ತಿದ್ದ ಸೈನಿಕರನ್ನು ಕೃಪ-ಕೃತವರ್ಮರು ಸಂಹಾರಮಾಡಿದುದು
  • ದುರ್ಯೋಧನನ ಸ್ಥಿತಿಯನ್ನು ನೋಡಿ ಕೃಪಾಶ್ವತ್ಥಾಮರು ವಿಲಪಿಸಿದುದು : ಪಾಂಚಾಲರ ವಧೆಯ ವೃತ್ತಾಂತವನ್ನು ಅಶ್ವತ್ಥಾಮನಿಂದಲೇ ಕೇಳಿದನಂತರ ದುರ್ಯೋಧನನು ಪ್ರಸನ್ನಚಿತ್ತನಾಗಿ ಪ್ರಾಣತ್ಯಾಗಮಾಡಿದುದು

ಐಷೀಕಪರ್ವ

  • ಮಕ್ಕಳೂ ಮತ್ತು ಎಲ್ಲ ಪಾಂಚಾಲರೂ ಹತರಾದುದನ್ನು ಧೃಷ್ಟದ್ಯುಮ್ನನ ಸಾರಥಿಯಿಂದ ಕೇಳಿದ ಯುಧಿಷ್ಠಿರನು ವಿಲಪಿಸಿದುದು : ದ್ರೌಪದಿಯನ್ನು ಕರೆತರಲು ನಕುಲನನ್ನು ಕಳುಹಿಸಿದುದು : ಧರ್ಮರಾಜನು ಸುಹೃದರೊಡನೆ ಶಿಬಿರಕ್ಕೆ ಹೋಗಿ ಹತರಾಗಿದ್ದ ಪುತ್ರರನ್ನು ಕಂಡು ಶೋಕಾಕುಲನಾದುದು
  • ಯುಧಿಷ್ಠಿರನು ಶೋಕದಿಂದ ವ್ಯಾಕುಲನಾದುದು : ದ್ರೌಪದಿಯು ವಿಲಪಿಸುತ್ತಾ ಅಶ್ವತ್ಥಾಮನನ್ನು ಸಂಹರಿಸಬೇಕೆಂದು ಆಗ್ರಹಪಡಿಸಿದುದು : ಭೀಮಸೇನನು ಅಶ್ವತ್ಥಾಮನನ್ನು ಸಂಹರಿಸಲು ಹೊರಟುದು
  • ಶ್ರೀಕೃಷ್ಣನು ಅಶ್ವತ್ಥಾಮನ ಚಪಲತೆಯನ್ನೂ ಕ್ರೌರ್ಯವನ್ನೂ ಹೇಳುವ ಸಂದರ್ಭದಲ್ಲಿ ಸುದರ್ಶನಚಕ್ರವನ್ನು ಕೇಳಿದ ಪ್ರಸಂಗವನ್ನು ವಿವರಿಸಿ ಹೇಳಿದುದು : ಭೀಮಸೇನನನ್ನು ರಕ್ಷಿಸುವಂತೆ ಪಾಂಡವರಿಗೆ ಸಲಹೆ ನೀಡಿದುದು
  • ಕೃಷ್ಣಾರ್ಜುನ-ಯುಧಿಷ್ಠಿರರು ಭೀಮಸೇನನ ಹಿಂದೆ ಹೊರಟುದು : ಗಂಗಾತೀರಕ್ಕೆ ಹೋದೊಡನೆಯೇ ಭೀಮಸೇನನು ಅಶ್ವತ್ಥಾಮನನ್ನು ಯುದ್ಧಕ್ಕೆ ಆಹ್ವಾನಿಸಿದುದು : ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು
  • ಅಶ್ವತ್ಥಾಮನು ಬಿಟ್ಟ ಮಹಾಸ್ತ್ರದ ಪ್ರಭಾವವನ್ನು ನಿವಾರಿಸಲು ಅರ್ಜುನನೂ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು : ಆ ಸಮಯದಲ್ಲಿ ವ್ಯಾಸರೂ ಮತ್ತು ನಾರದರೂ ಅಲ್ಲಿ ಕಾಣಿಸಿಕೊಂಡುದು
  • ವ್ಯಾಸರ ಆಜ್ಞಾನುಸಾರವಾಗಿ ಅರ್ಜುನನು ತನ್ನ ಅಸ್ತ್ರವನ್ನು ಉಪಸಂಹಾರಗೊಳಿಸಿದುದು : ಅಶ್ವತ್ಥಾಮನು ತನ್ನ ತಲೆಯಲ್ಲಿದ್ದ ಮಣಿಯನ್ನು ಪಾಂಡವರಿಗೆ ಕೊಟ್ಟು ಪಾಂಡವರ (ಉತ್ತರೆಯ) ಗರ್ಭದ ಮೇಲೆ ದಿವ್ಯಾಸ್ತ್ರವನ್ನು ಪ್ರಯೋಗಿಸಿದುದು
  • ಅಶ್ವತ್ಥಾಮನು ಶ್ರೀಕೃಷ್ಣನಿಂದ ಶಾಪಗ್ರಸ್ತನಾಗಿ ಅರಣ್ಯಕ್ಕೆ ಹೊರಟುಹೋದುದು : ಪಾಂಡವರು ಮಣಿಯನ್ನು ಕೊಂಡೊಯ್ದು ದ್ರೌಪದಿಯನ್ನು ಸಮಾಧಾನಗೊಳಿಸಿದುದು
  • ಯುಧಿಷ್ಠಿರನು ಎಲ್ಲ ಮಕ್ಕಳೂ ಮತ್ತು ಸೈನಿಕರೂ ಒಂದೇ ರಾತ್ರಿಯಲ್ಲಿ ಮರಣಹೊಂದಿದುಕ್ಕೆ ಕಾರಣವನ್ನು ಪ್ರಶ್ನಿಸಿದುದು : ಶ್ರೀಕೃಷ್ಣನು ಮಹಾದೇವನ ಮಹಿಮೆಯನ್ನು ಪ್ರತಿಪಾದಿಸಿದುದು
  • ಮಹಾದೇವನ ರೋಷದಿಂದ ದೇವತೆಗಳು, ಯಜ್ಞ ಮತ್ತು ಜಗತ್ತುಗಳು ಅಸ್ತವ್ಯಸ್ತಗೊಂಡುದು : ಅವನ ಪ್ರಸಾದದಿಂದಾಗಿ ಎಲ್ಲವೂ ಸುವ್ಯವಸ್ಥಿತವಾದುದು

ಸ್ತ್ರೀಪರ್ವ : ಜಲಪ್ರದಾನಿಕಪರ್ವ

  • ಧೃತರಾಷ್ಟ್ರನ ವಿಲಾಪ : ಸಂಜಯನು ಸಮಾಧಾನ ಪಡಿಸಿದುದು
  • ವಿದುರನು ಧೃತರಾಷ್ಟ್ರನಿಗೆ ಸಮಾಧಾನ ಹೇಳುತ್ತಾ ಶೋಕವನ್ನು ಪರಿತ್ಯಜಿಸಲು ಸಲಹೆಮಾಡಿದುದು
  • ವಿದುರನು ಶರೀರದ ಅನಿತ್ಯತ್ವವನ್ನು ಪ್ರತಿಪಾದಿಸುತ್ತಾ ಶೋಕದಿಂದ ವಿಮುಕ್ತನಾಗುವಂತೆ ಧೃತರಾಷ್ಟ್ರನಿಗೆ ಸಲಹೆನೀಡಿದುದು
  • ದುಃಖಮಯವಾದ ಸಂಸಾರಗಹನದ ವರ್ಣನೆ ಮತ್ತು ಸಂಸಾರದಿಂದ ಪಾರಾಗುವ ಉಪಾಯ ಕಥನ
  • ವಿದುರನು ಗಹನವಾದ ಅರಣ್ಯದ ದೃಷ್ಟಾಂತದ ಮೂಲಕ ಸಂಸಾರವನ್ನು ವರ್ಣಿಸಿದುದು
  • ಸಂಸಾರರೂಪವಾದ ಅರಣ್ಯರೂಪಕದ ಸ್ಪಷ್ಟೀಕರಣ
  • ಸಂಸಾರಚಕ್ರದ ವರ್ಣನೆ : ರಥದ ರೂಪಕದಿಂದ ಸಂಯಮ, ಜ್ಞಾನ ಮೊದಲಾದ ಮುಕ್ತಿಯ ಉಪಾಯಗಳ ಕಥನ
  • ವ್ಯಾಸರು ಸಂಹಾರಕಾರ್ಯವು ಅನಿವಾರ್ಯವಾಗಿತ್ತೆಂದು ಹೇಳಿ ಧೃತರಾಷ್ಟ್ರನನ್ನು ಸಮಾಧಾನಗೊಳಿಸಿದುದು
  • ಧೃತರಾಷ್ಟ್ರನು ಪುನಃ ಶೋಕಾಕುಲನಾದುದು : ಅವನ ಶೋಕನಿವಾರಣೆಗಾಗಿ ವಿದುರನ ಉಪದೇಶ
  • ಪ್ರಜೆಗಳು ಮತ್ತು ಸ್ತ್ರೀಯರ ಸಮೇತನಾಗಿ ಧೃತರಾಷ್ಟ್ರನು ಯುದ್ಧಭೂಮಿಗೆ ಹೊರಟುದು
  • ಧೃತರಾಷ್ಟ್ರರಾಜನು ಕೃಪಾಶ್ವತ್ಥಾಮ-ಕೃತವರ್ಮರನ್ನು ಸಂಧಿಸಿದುದು : ಕೃಪರು ಕೌರವ-ಪಾಂಡವಸೈನ್ಯವು ಸಂಪೂರ್ಣವಾಗಿ ವಿನಾಶವಾದುದನ್ನು ತಿಳಿಸಿದುದು
  • ಪಾಂಡವರು ಧೃತರಾಷ್ಟ್ರನನ್ನು ಸಂಧಿಸಿದುದು : ಧೃತರಾಷ್ಟ್ರನು ಭೀಮನ ಲೋಹಪ್ರತಿಮೆಯನ್ನು ಭಗ್ನಗೊಳಿಸಿದುದು : ಶ್ರೀಕೃಷ್ಣನು ಅವನನ್ನು ಸಮಾಧಾನಗೊಳಿಸಿದುದು
  • ಶ್ರೀಕೃಷ್ಣನು ಧೃತರಾಷ್ಟ್ರನನ್ನು ಶಾಂತಗೊಳಿಸಿದುದು : ಧೃತರಾಷ್ಟ್ರನು ಪಾಂಡವರನ್ನು ಆದರಪೂರ್ವಕವಾಗಿ ಆಲಿಂಗಿಸಿಕೊಂಡುದು
  • ಪಾಂಡವರಿಗೆ ಶಾಪಕೊಡಲು ಉದ್ಯುಕ್ತಳಾಗಿದ್ದ ಗಾಂಧಾರಿಯನ್ನು ವ್ಯಾಸರು ಸಮಾಧಾನಗೊಳಿಸಿದುದು
  • ಭೀಮಸೇನನು ಗಾಂಧಾರಿಯಿಂದ ಕ್ಷಮೆಯನ್ನು ಯಾಚಿಸಿದುದು : ಯುಧಿಷ್ಠಿರನು ತಾನು ಅಪರಾಧಿಯೆಂಬುದನ್ನು ಒಪ್ಪಿಕೊಂಡುದು : ಗಾಂಧಾರಿಯ ದೃಷ್ಟಿಪಾತದಿಂದ ಯುಧಿಷ್ಠಿರನ ಉಗುರುಗಳು ಕಪ್ಪಾದುದು : ಅರ್ಜುನನು ಹೆದರಿ ಶ್ರೀಕೃಷ್ಣನ ಹಿಂಬದಿಯಲ್ಲಿ ಅಡಗಿಕೊಂಡುದು : ಪಾಂಡವರು ಕುಂತಿಯನ್ನು ಸಂಧಿಸಿದುದು : ದ್ರೌಪದಿಯ ವಿಲಾಪ : ಕುಂತಿಯ ಆಶ್ವಾಸನೆ : ಗಾಂಧಾರಿಯು ಕುಂತೀ-ದ್ರೌಪದಿಯರಿಗೆ ಧೈರ್ಯಹೇಳಿದುದು :

ಸ್ತ್ರೀವಿಲಾಪಪರ್ವ

  • ವ್ಯಾಸರು ಅನುಗ್ರಹಿಸಿದ ದಿವ್ಯದೃಷ್ಟಿಯಿಂದ ರಣರಂಗದಲ್ಲಿ ಸತ್ತು ಬಿದ್ದಿದ್ದ ಯೋಧರನ್ನೂ-ರೋದನಮಾಡುತ್ತಿದ್ದ ತನ್ನ ಸೊಸೆಯನ್ನೂ ನೋಡಿ ಗಾಂಧಾರೀದೇವಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
  • ದುರ್ಯೋಧನನನ್ನೂ–ಅವನ ಸುತ್ತಲೂ ಕುಳಿತು ಅಳುತ್ತಿದ್ದ ಅವನ ಪತ್ನಿಯರನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
  • ತನ್ನ ಬೇರೆಯ ಮಕ್ಕಳನ್ನೂ ಮತ್ತು ದುಃಶಾಸನನನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
  • ವಿಕರ್ಣ, ದುರ್ಮುಖ, ಚಿತ್ರಸೇನ, ವಿವಿಂಶತಿ ಮತ್ತು ದುಃಸಹರನ್ನು ರಣರಂಗದಲ್ಲಿ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
  • ಉತ್ತರೆಯ ಮತ್ತು ವಿರಾಟಕುಲದ ಸ್ತ್ರೀಯರ ಶೋಕವನ್ನು ಗಾಂಧಾರಿಯು ಶ್ರೀಕೃಷ್ಣನಿಗೆ ವಿವರಿಸಿದುದು
  • ಗಾಂಧಾರಿಯು ಕರ್ಣನನ್ನು ನೋಡಿ ಅವನ ಶೌರ್ಯವನ್ನೂ ಅವನ ಪತ್ನಿಯರ ವಿಲಾಪವನ್ನೂ ಶ್ರೀಕೃಷ್ಣನಿಗೆ ಹೇಳಿದುದು
  • ಅವಂತೀದೇಶದ ರಾಜನನ್ನೂ ಮತ್ತು ಜಯದ್ರಥನನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
  • ಶಲ್ಯ, ಭಗದತ್ತ, ಭೀಷ್ಮ , ಮತ್ತು ದ್ರೋಣರನ್ನು ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
  • ಭೂರಿಶ್ರವಸನ ಸುತ್ತಲೂ ಕುಳಿತು ವಿಲಪಿಸುತ್ತಿರುವ ಅವನ ಪತ್ನಿಯರನ್ನೂ ಮತ್ತು ಶಕುನಿಯನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
  • ಇನ್ನೂ ಅನೇಕ ವೀರರು ಹತರಾಗುವುದನ್ನು ಕಂಡು ವಿಲಪಿಸುತ್ತಾ ; ಶೋಕಾತುರಳಾದ ಗಾಂಧಾರಿಯು ಕುಪಿತಳಾಗಿ ಶ್ರೀಕೃಷ್ಣನನ್ನು ಶಪಿಸಿದುದು
  • ಅನುಸ್ಮೃತಿವಿದ್ಯೆಯಿಂದಲೂ ಮತ್ತು ದಿವ್ಯದೃಷ್ಟಿಯಿಂದಲೂ ಯುಧಿಷ್ಠಿರನು ಮಹಾಭಾರತಯುದ್ಧದಲ್ಲಿ ಮಡಿದವರ ಸಂಖ್ಯಾ-ಗತಿಗಳನ್ನು ವರ್ಣಿಸಿದುದು : ಯುಧಿಷ್ಠಿರನ ಆಜ್ಞೆಯಂತೆ ಎಲ್ಲರಿಗೂ ದಹನಸಂಸ್ಕಾರಗಳನ್ನು ಮಾಡಿದುದು
  • ಎಲ್ಲ ಸ್ತ್ರೀ-ಪುರುಷರೂ ತಮ್ಮ ತಮ್ಮ ಸಂಬಂಧಿಗಳಿಗೆ ಜಲಾಂಜಲಿಗಳನ್ನು ಕೊಟ್ಟುದು : ಕುಂತಿಯು ತನ್ನ ಗರ್ಭದಲ್ಲಿಯೇ ಕರ್ಣನು ಹುಟ್ಟಿದ ರಹಸ್ಯವನ್ನು ಪ್ರಕಟಿಸಿದುದು : ಯುಧಿಷ್ಠಿರನು ಕರ್ಣನಿಗಾಗಿ ಶೋಕಿಸಿ, ಪ್ರೇತಕೃತ್ಯಗಳನ್ನು ಮಾಡಿದುದು : ಸ್ತ್ರೀಯರ ಮನಸ್ಸಿನಲ್ಲಿ ರಹಸ್ಯವಿಷಯಗಳು ಉಳಿಯದಂತೆ ಧರ್ಮರಾಜನು ಶಾಪವಿತ್ತುದು
  • ಯುದ್ಧ ವಿಶ್ಲೇಷಣೆ

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva