ಕೃಪ-ಕೃತವರ್ಮಾಶ್ವತ್ಥಾಮರು ಸರೋವರದ ಸಮೀಪಕ್ಕೆ ಹೋಗಿ ಯುದ್ಧದ ವಿಷಯದಲ್ಲಿ ದುರ್ಯೋಧನನೊಡನೆ ಸಮಾಲೋಚನೆ ನಡೆಸಿದುದು : ಯುಧಿಷ್ಠಿರನು ವ್ಯಾಧರ ಮೂಲಕವಾಗಿ ದುರ್ಯೋಧನನಿರುವ ಸ್ಥಳವನ್ನು ಗುರುತಿಸಿ ಸೈನ್ಯಸಹಿತನಾಗಿ ಸರೋವರದ ಬಳಿಗೆ ಬಂದುದು : ಅಶ್ವತ್ಥಾಮಾದಿಗಳು ಯುಧಿಷ್ಠಿರನು ಬಂದುದನ್ನು ನೋಡಿ ದೂರಸರಿದುದು
ಸಾರಸ್ವತತೀರ್ಥದ ಮಹಿಮಾಪ್ರಸಂಗದಲ್ಲಿ ದಧೀಚ ಮತ್ತು ಸಾರಸ್ವತಮುನಿಗಳ ಚರಿತ್ರೆ
ವೃದ್ಧಕನ್ಯೆಯ ಚರಿತ್ರೆ : ಶೃಂಗವಂತನೊಡನೆ ಅವಳ ವಿವಾಹ ಮತ್ತು ಸ್ವರ್ಗಾರೋಹಣ : ಆ ತೀರ್ಥದ ಮಹಿಮೆ
ಋಷಿಗಳ ಕುರುಕ್ಷೇತ್ರದ ಎಲ್ಲೆ ಮತ್ತು ಮಹಿಮೆಗಳನ್ನು ವರ್ಣಿಸಿದುದು
ಪ್ಲಕ್ಷಪ್ರಸ್ರವಣತೀರ್ಥಗಳ ಮತ್ತು ಸರಸ್ವತಿಯ ಮಹಿಮೆ : ನಾರದರು ಕೌರವರ ವಿನಾಶವನ್ನೂ, ದುರ್ಯೋಧನ-ಭೀಮಸೇನರ ಯುದ್ಧಪ್ರಸಂಗವನ್ನೂ ಬಲರಾಮನಿಗೆ ತಿಳಿಸಿದುದು : ಯುದ್ಧವನ್ನು ನೋಡುವ ಸಲುವಾಗಿ ಬಲರಾಮನು ತೆರಳಿದುದು
ದುರ್ಯೋಧನನ ದುರವಸ್ಥೆಯನ್ನು ಕಂಡು ಅಶ್ವತ್ಥಾಮನು ವಿಷಾದಿಸಿದುದು : ಪಾಂಡವರನ್ನು ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದುದು : ದುರ್ಯೋಧನನು ಅಶ್ವತ್ಥಾಮನನ್ನು ಸೇನಾಪತಿಯ ಸ್ಥಾನದಲ್ಲಿ ಅಭಿಷೇಕಮಾಡಿದುದು
ಸೌಪ್ತಿಕಪರ್ವ
ಮೂವರು ಕೌರವಮಹಾರಥರೂ ವನವೊಂದರಲ್ಲಿ ವಿಶ್ರಮಿಸಿಕೊಂಡುದು : ವೃಕ್ಷದ ಮೇಲೆ ಮಲಗಿದ್ದ ಕಾಗೆಗಳ ಮೇಲೆ ಗೂಬೆಯು ಆಕ್ರಮಣನಡೆಸಿದುದನ್ನು ಕಂಡು ಅಶ್ವತ್ಥಾಮನ ಮನಸ್ಸಿನಲ್ಲಿ ಕ್ರೂರವಾದ ಸಂಕಲ್ಪವು ಅಂಕುರಿಸಿದುದು : ಆ ವಿಷಯದಲ್ಲಿ ಮಿತ್ರರ ಸಲಹೆಯನ್ನು ಕೇಳಿದುದು
ಕೃಪರು ಅಶ್ವತ್ಥಾಮನಿಗೆ ದೈವದ ಪ್ರಾಬಲ್ಯವನ್ನು ವಿವರಿಸಿ ಹೇಳುತ್ತಾ ಮುಂದಿನ ಕರ್ತವ್ಯದ ವಿಷಯದಲ್ಲಿ ಸತ್ಪುರುಷರ ಸಲಹೆಯನ್ನು ಪಡೆಯುವಂತೆ ಪ್ರೇರಿಸಿದುದು
ಅಶ್ವತ್ಥಾಮನು ಕೃಪ-ಕೃತವರ್ಮರಿಗೆ ಉತ್ತರ ಹೇಳಿ ತನ್ನ ನಿರ್ಧಾರವನ್ನು ತಿಳಿಸಿದುದು
ಕೃಪರು ಬೆಳಗಾದ ಮೇಲೆ ಯುದ್ಧಮಾಡಲು ಅಶ್ವತ್ಥಾಮನಿಗೆ ಸಲಹೆ ನೀಡಿದುದು : ಅಶ್ವತ್ಥಾಮನು ಮಲಗಿರುವವರನ್ನೇ ಸಂಹರಿಸಲು ಆಗ್ರಹಪಡಿಸಿದುದು
ಕೃಪಾಶ್ವತ್ಥಾಮರ ಸಂವಾದ : ಮೂವರೂ ಪಾಂಡವರ ಶಿಬಿರದ ಕಡೆಗೆ ತೆರಳಿದುದು
ಅಶ್ವತ್ಥಾಮನು ಶಿಬಿರದ ಹೆಬ್ಬಾಗಿಲಿನಲ್ಲಿ ಅದ್ಭುತಾಕಾರನಾದ ಪುರುಷನನ್ನು ಕಂಡು ಅವನ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಿದುದು : ಅಸ್ತ್ರಗಳೆಲ್ಲಾ ಮುಗಿದು ಹೋಗಲಾಗಿ ವ್ಯಾಕುಲಗೊಂಡು ಶಿವನನ್ನು ಶರಣುಹೊಂದಿದುದು
ಅಶ್ವತ್ಥಾಮನು ಶಿವನನ್ನು ಸ್ತೋತ್ರಮಾಡಿದುದು : ಅಶ್ವತ್ಥಾಮನ ಮುಂದೆ ಅಗ್ನಿವೇದೀ ಮತ್ತು ಭೂತಗಣಗಳು ಕಾಣಿಸಿಕೊಂಡುದು : ಅಶ್ವತ್ಥಾಮನು ಆ ಅಗ್ನಿವೇದಿಯಲ್ಲಿ ಆತ್ಮಸಮರ್ಪಣಮಾಡಿ ಸುಪ್ರೀತನಾದ ಈಶ್ವರನಿಂದ ಖಡ್ಗವನ್ನು ಪಡೆದುದು
ಅಶ್ವತ್ಥಾಮನು ಮಲಗಿ ನಿದ್ರಿಸುತ್ತಿದ್ದ ಪಾಂಚಾಲರೇ ಮೊದಲಾದ ಸಮಸ್ತ ಯೋಧರನ್ನೂ ಸಂಹರಿಸಿದುದು : ತಪ್ಪಿಸಿಕೊಂಡು ಶಿಬಿರದಿಂದ ಹೊರಕ್ಕೆ ಓಡಿಹೋಗುತ್ತಿದ್ದ ಸೈನಿಕರನ್ನು ಕೃಪ-ಕೃತವರ್ಮರು ಸಂಹಾರಮಾಡಿದುದು
ದುರ್ಯೋಧನನ ಸ್ಥಿತಿಯನ್ನು ನೋಡಿ ಕೃಪಾಶ್ವತ್ಥಾಮರು ವಿಲಪಿಸಿದುದು : ಪಾಂಚಾಲರ ವಧೆಯ ವೃತ್ತಾಂತವನ್ನು ಅಶ್ವತ್ಥಾಮನಿಂದಲೇ ಕೇಳಿದನಂತರ ದುರ್ಯೋಧನನು ಪ್ರಸನ್ನಚಿತ್ತನಾಗಿ ಪ್ರಾಣತ್ಯಾಗಮಾಡಿದುದು
ಐಷೀಕಪರ್ವ
ಮಕ್ಕಳೂ ಮತ್ತು ಎಲ್ಲ ಪಾಂಚಾಲರೂ ಹತರಾದುದನ್ನು ಧೃಷ್ಟದ್ಯುಮ್ನನ ಸಾರಥಿಯಿಂದ ಕೇಳಿದ ಯುಧಿಷ್ಠಿರನು ವಿಲಪಿಸಿದುದು : ದ್ರೌಪದಿಯನ್ನು ಕರೆತರಲು ನಕುಲನನ್ನು ಕಳುಹಿಸಿದುದು : ಧರ್ಮರಾಜನು ಸುಹೃದರೊಡನೆ ಶಿಬಿರಕ್ಕೆ ಹೋಗಿ ಹತರಾಗಿದ್ದ ಪುತ್ರರನ್ನು ಕಂಡು ಶೋಕಾಕುಲನಾದುದು
ಶ್ರೀಕೃಷ್ಣನು ಅಶ್ವತ್ಥಾಮನ ಚಪಲತೆಯನ್ನೂ ಕ್ರೌರ್ಯವನ್ನೂ ಹೇಳುವ ಸಂದರ್ಭದಲ್ಲಿ ಸುದರ್ಶನಚಕ್ರವನ್ನು ಕೇಳಿದ ಪ್ರಸಂಗವನ್ನು ವಿವರಿಸಿ ಹೇಳಿದುದು : ಭೀಮಸೇನನನ್ನು ರಕ್ಷಿಸುವಂತೆ ಪಾಂಡವರಿಗೆ ಸಲಹೆ ನೀಡಿದುದು
ಕೃಷ್ಣಾರ್ಜುನ-ಯುಧಿಷ್ಠಿರರು ಭೀಮಸೇನನ ಹಿಂದೆ ಹೊರಟುದು : ಗಂಗಾತೀರಕ್ಕೆ ಹೋದೊಡನೆಯೇ ಭೀಮಸೇನನು ಅಶ್ವತ್ಥಾಮನನ್ನು ಯುದ್ಧಕ್ಕೆ ಆಹ್ವಾನಿಸಿದುದು : ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು
ಅಶ್ವತ್ಥಾಮನು ಬಿಟ್ಟ ಮಹಾಸ್ತ್ರದ ಪ್ರಭಾವವನ್ನು ನಿವಾರಿಸಲು ಅರ್ಜುನನೂ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು : ಆ ಸಮಯದಲ್ಲಿ ವ್ಯಾಸರೂ ಮತ್ತು ನಾರದರೂ ಅಲ್ಲಿ ಕಾಣಿಸಿಕೊಂಡುದು
ವ್ಯಾಸರ ಆಜ್ಞಾನುಸಾರವಾಗಿ ಅರ್ಜುನನು ತನ್ನ ಅಸ್ತ್ರವನ್ನು ಉಪಸಂಹಾರಗೊಳಿಸಿದುದು : ಅಶ್ವತ್ಥಾಮನು ತನ್ನ ತಲೆಯಲ್ಲಿದ್ದ ಮಣಿಯನ್ನು ಪಾಂಡವರಿಗೆ ಕೊಟ್ಟು ಪಾಂಡವರ (ಉತ್ತರೆಯ) ಗರ್ಭದ ಮೇಲೆ ದಿವ್ಯಾಸ್ತ್ರವನ್ನು ಪ್ರಯೋಗಿಸಿದುದು
ವ್ಯಾಸರು ಅನುಗ್ರಹಿಸಿದ ದಿವ್ಯದೃಷ್ಟಿಯಿಂದ ರಣರಂಗದಲ್ಲಿ ಸತ್ತು ಬಿದ್ದಿದ್ದ ಯೋಧರನ್ನೂ-ರೋದನಮಾಡುತ್ತಿದ್ದ ತನ್ನ ಸೊಸೆಯನ್ನೂ ನೋಡಿ ಗಾಂಧಾರೀದೇವಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
ದುರ್ಯೋಧನನನ್ನೂ–ಅವನ ಸುತ್ತಲೂ ಕುಳಿತು ಅಳುತ್ತಿದ್ದ ಅವನ ಪತ್ನಿಯರನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
ತನ್ನ ಬೇರೆಯ ಮಕ್ಕಳನ್ನೂ ಮತ್ತು ದುಃಶಾಸನನನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
ವಿಕರ್ಣ, ದುರ್ಮುಖ, ಚಿತ್ರಸೇನ, ವಿವಿಂಶತಿ ಮತ್ತು ದುಃಸಹರನ್ನು ರಣರಂಗದಲ್ಲಿ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
ಉತ್ತರೆಯ ಮತ್ತು ವಿರಾಟಕುಲದ ಸ್ತ್ರೀಯರ ಶೋಕವನ್ನು ಗಾಂಧಾರಿಯು ಶ್ರೀಕೃಷ್ಣನಿಗೆ ವಿವರಿಸಿದುದು
ಗಾಂಧಾರಿಯು ಕರ್ಣನನ್ನು ನೋಡಿ ಅವನ ಶೌರ್ಯವನ್ನೂ ಅವನ ಪತ್ನಿಯರ ವಿಲಾಪವನ್ನೂ ಶ್ರೀಕೃಷ್ಣನಿಗೆ ಹೇಳಿದುದು
ಅವಂತೀದೇಶದ ರಾಜನನ್ನೂ ಮತ್ತು ಜಯದ್ರಥನನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಮುಂದೆ ವಿಲಪಿಸಿದುದು
ಶಲ್ಯ, ಭಗದತ್ತ, ಭೀಷ್ಮ , ಮತ್ತು ದ್ರೋಣರನ್ನು ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
ಭೂರಿಶ್ರವಸನ ಸುತ್ತಲೂ ಕುಳಿತು ವಿಲಪಿಸುತ್ತಿರುವ ಅವನ ಪತ್ನಿಯರನ್ನೂ ಮತ್ತು ಶಕುನಿಯನ್ನೂ ನೋಡಿ ಗಾಂಧಾರಿಯು ಶ್ರೀಕೃಷ್ಣನ ಸಮ್ಮುಖದಲ್ಲಿ ವಿಲಪಿಸಿದುದು
ಇನ್ನೂ ಅನೇಕ ವೀರರು ಹತರಾಗುವುದನ್ನು ಕಂಡು ವಿಲಪಿಸುತ್ತಾ ; ಶೋಕಾತುರಳಾದ ಗಾಂಧಾರಿಯು ಕುಪಿತಳಾಗಿ ಶ್ರೀಕೃಷ್ಣನನ್ನು ಶಪಿಸಿದುದು
ಅನುಸ್ಮೃತಿವಿದ್ಯೆಯಿಂದಲೂ ಮತ್ತು ದಿವ್ಯದೃಷ್ಟಿಯಿಂದಲೂ ಯುಧಿಷ್ಠಿರನು ಮಹಾಭಾರತಯುದ್ಧದಲ್ಲಿ ಮಡಿದವರ ಸಂಖ್ಯಾ-ಗತಿಗಳನ್ನು ವರ್ಣಿಸಿದುದು : ಯುಧಿಷ್ಠಿರನ ಆಜ್ಞೆಯಂತೆ ಎಲ್ಲರಿಗೂ ದಹನಸಂಸ್ಕಾರಗಳನ್ನು ಮಾಡಿದುದು
ಎಲ್ಲ ಸ್ತ್ರೀ-ಪುರುಷರೂ ತಮ್ಮ ತಮ್ಮ ಸಂಬಂಧಿಗಳಿಗೆ ಜಲಾಂಜಲಿಗಳನ್ನು ಕೊಟ್ಟುದು : ಕುಂತಿಯು ತನ್ನ ಗರ್ಭದಲ್ಲಿಯೇ ಕರ್ಣನು ಹುಟ್ಟಿದ ರಹಸ್ಯವನ್ನು ಪ್ರಕಟಿಸಿದುದು : ಯುಧಿಷ್ಠಿರನು ಕರ್ಣನಿಗಾಗಿ ಶೋಕಿಸಿ, ಪ್ರೇತಕೃತ್ಯಗಳನ್ನು ಮಾಡಿದುದು : ಸ್ತ್ರೀಯರ ಮನಸ್ಸಿನಲ್ಲಿ ರಹಸ್ಯವಿಷಯಗಳು ಉಳಿಯದಂತೆ ಧರ್ಮರಾಜನು ಶಾಪವಿತ್ತುದು
ಯುದ್ಧ ವಿಶ್ಲೇಷಣೆ
Other Books in this COllection
Volume 1: Adi Parva
Volume 2: Adi Parva
Volume 3: Adi Parva and Sabha Parva
Volume 4: Sabha Parva
Volume 5: Vanaparva
Volume 6: Vanaparva
Volume 7: Vanaparva
Volume 8: Vanaparva-Virataparva
Volume 9: Virata Parva
Volume 10: Udyoga Parva
Volume 11: Udyoga Parva
Volume 12: Bhishma Parva
Volume 13: Bhishma Parva
Volume 14: Bhishma Parva
Volume 15: Bhishma Parva
Volume 16: Drona Parva
Volume 17: Drona Parva
Volume 18: Drona Parva
Volume 19: Karnaparva
Volume 21: Shanti Parva
Volume 22: Shanti Parva
Volume 23: Shanti Parva
Volume 24: Shanti Parva
Volume 25: Shanti Parva
Volume 26: Shanti Parva
Volume 27: Anushasana Parva
Volume 28: Anushasana Parva
Volume 29: Anushasana Parva
Volume 30: Anushasana Parva
Volume 31: Ashvamedhika Parva- Ashramavasika Parva