Volume 31: Ashvamedhika Parva- Ashramavasika Parva

ಪರಿವಿಡಿ:

ಅನುಗೀತಾಪರ್ವ – ಆಶ್ರಮವಾಸಿಕಪರ್ವ : ಆಶ್ರಮವಾಸಪರ್ವ – ಪುತ್ರದರ್ಶನಪರ್ವ

ಅನುಗೀತಾಪರ್ವ

  • ವ್ಯಾಸರ ಆಜ್ಞಾನುಸಾರವಾಗಿ ಯುಧಿಷ್ಠಿರನು ಕುದುರೆಯ ರಕ್ಷಣೆಗೆ ಅರ್ಜುನನನ್ನೂ, ರಾಜ್ಯ ಮತ್ತು ನಗರಗಳ ರಕ್ಷಣೆಗೆ ಭೀಮಸೇನ-ನಕುಲರನ್ನೂ, ಕುಟುಂಬಪಾಲನೆಗೆ ಸಹದೇವನನ್ನೂ ನಿಯಮಿಸಿದುದು
  • ಅರ್ಜುನನು ಸೇನೆಯೊಡನೆ ಯಜ್ಞಾಶ್ವವನ್ನು ಅನುಸರಿಸಿ ಹೋದುದು
  • ಅರ್ಜುನನಿಂದ ತ್ರಿಗರ್ತರ ಪರಾಜಯ
  • ಪ್ರಾಗ್ಜ್ಯೋತಿಷಪುರದ ರಾಜನಾದ ವಜ್ರದತ್ತನೊಡನೆ ಅರ್ಜುನನ ಯುದ್ಧ
  • ಅರ್ಜುನನಿಂದ ವಜ್ರದತ್ತನ ಪರಾಜಯ
  • ಸೈಂಧವರೊಡನೆ ಅರ್ಜುನನ ಯುದ್ಧ
  • ಅರ್ಜುನ-ಸೈಂಧವರ ಯುದ್ಧ : ದುಃಶಲೆಯ ಕೋರಿಕೆಯಂತೆ ಯುದ್ಧದ ಪರಿಸಮಾಪ್ತಿ
  • ಅರ್ಜುನ-ಬಭ್ರುವಾಹನರ ಯುದ್ಧ : ಅರ್ಜುನನ ಮರಣ
  • ಚಿತ್ರಾಂಗದೆಯ ವಿಲಾಪ : ಮೂರ್ಛೆಯಿಂದ ಎಚ್ಚರಗೊಂಡ ಬಭ್ರುವಾಹನನ ಶೋಕ : ಉಲೂಪಿಯ ಪ್ರಯತ್ನದಿಂದ ಸಂಜೀವನಮಣಿಯ ಮೂಲಕವಾಗಿ ಅರ್ಜುನನು ಬದುಕಿದುದು
  • ಅರ್ಜುನನ ಕೇಳಿಕೆಗೆ ಉಲೂಪಿಯು ತಾನು ರಣಾಂಗಣಕ್ಕೆ ಬಂದುದರ ಕಾರಣವನ್ನೂ ಅರ್ಜುನನ ಪರಾಜಯದ ರಹಸ್ಯವನ್ನೂ ಹೇಳಿದುದು : ಮಗನ ಮತ್ತು ಪತ್ನಿಯರ ಅನುಮತಿಯನ್ನು ಪಡೆದು ಅರ್ಜುನನು ಪುನಃ ಕುದುರೆಯ ಹಿಂದೆ ಹೊರಟುದು
  • ಮಗಧರಾಜನಾದ ಮೇಘಸಂಧಿಯ ಪರಾಜಯ
  • ಕುದುರೆಯು ದಕ್ಷಿಣ ಮತ್ತು ಪಶ್ಚಿಮಸಮುದ್ರಗಳ ತೀರಗಳಲ್ಲಿ ಸಂಚರಿಸುತ್ತಾ ದ್ವಾರಕಾ, ಪಂಚನದ ಮತ್ತು ಗಾಂಧಾರದೇಶಗಳನ್ನು ಪ್ರವೇಶಿಸಿದುದು
  • ಶಕುನಿಯ ಮಗನ ಪರಾಜಯ
  • ಯಜ್ಞಭೂಮಿಯ ಸಿದ್ಧತೆ
  • ಯುಧಿಷ್ಠಿರನು ಭೀಮಸೇನನಿಗೆ ರಾಜರನ್ನು ಸತ್ಕರಿಸಲು ಆದೇಶವನ್ನಿತ್ತುದು
  • ಅರ್ಜುನನ ವಿಷಯವಾಗಿ ಯುಧಿಷ್ಠಿರ-ಕೃಷ್ಣರ ಸಂಭಾಷಣೆ : ಹಸ್ತಿನಾಪುರಕ್ಕೆ ಅರ್ಜುನನ ಆಗಮನ : ಉಲೂಪೀ-ಚಿತ್ರಾಂಗದೆಯರೊಡನೆ ಬಭ್ರುವಾಹನನ ಆಗಮನ
  • ಉಲೂಪೀ-ಚಿತ್ರಾಂಗದೆಯರೊಡನಿದ್ದ ಬಭ್ರುವಾಹನನಿಗೆ ಪುರಸ್ಕಾರ : ಅಶ್ವಮೇಧಾರಂಭ
  • ಯುಧಿಷ್ಠಿರನು ಬ್ರಾಹ್ಮಣರಿಗೆ ದಕ್ಷಿಣೆಯನ್ನೂ-ರಾಜರಿಗೆ ಪಾರಿತೋಷಿಕಗಳನ್ನೂ ಕೊಟ್ಟು ಕಳುಹಿಸಿದುದು
  • ಮುಂಗುಸಿಯ ಕಥೆ
  • ಹಿಂಸೆಯಿಂದ ಯುಕ್ತವಾದ ಧರ್ಮದ ಮತ್ತು ಯಜ್ಞದ ನಿಂದನೆ
  • ಅಗಸ್ತ್ಯ ಮಹರ್ಷಿಗಳ ಯಜ್ಞದ ಕಥೆ
  • ವೈಷ್ಣವಧರ್ಮ

ಆಶ್ರಮವಾಸಿಕಪರ್ವ : ಆಶ್ರಮವಾಸಪರ್ವ

  • ಸಹೋದರರಿಂದ ಕೂಡಿದ ಯುಧಿಷ್ಠಿರನು ಕುಂತಿಯೇ ಮೊದಲಾದವರೊಡನೆ ಧೃತರಾಷ್ಟ್ರ-ಗಾಂಧಾರಿಯರ ಶುಶ್ರೂಷೆಯಲ್ಲಿ ನಿರತನಾದುದು
  • ಪಾಂಡವರು ಧೃತರಾಷ್ಟ್ರ-ಗಾಂಧಾರಿಯರ ವಿಷಯದಲ್ಲಿ ಅನುಕೂಲವಾಗಿ ವ್ಯವಹರಿಸುತ್ತಿದ್ದುದು
  • ಗಾಂಧಾರಿಯೊಡನೆ ಅರಣ್ಯಕ್ಕೆ ಹೋಗಲು ಧೃತರಾಷ್ಟ್ರನ ನಿಶ್ಚಯ : ಕುಂತೀ-ಯುಧಿಷ್ಠಿರರ ದುಃಖ
  • ವ್ಯಾಸರು ಸಮಾಧಾನ ಹೇಳಿದನಂತರ ಯುಧಿಷ್ಠಿರನು ಅರಣ್ಯಕ್ಕೆ ಹೋಗಲು ಧೃತರಾಷ್ಟ್ರನಿಗೆ ಅನುಮತಿಯನ್ನಿತ್ತುದು
  • ಧೃತರಾಷ್ಟ್ರನಿಂದ ಯುಧಿಷ್ಠಿರನಿಗೆ ರಾಜನೀತಿಯ ಉಪದೇಶ
  • ಧೃತರಾಷ್ಟ್ರನಿಂದ ರಾಜನೀತಿಯ ಉಪದೇಶ (೨)
  • ಧೃತರಾಷ್ಟ್ರನಿಂದ ರಾಜನೀತಿಯ ಉಪದೇಶ (೩)
  • ಧೃತರಾಷ್ಟ್ರನು ಅರಣ್ಯವಾಸಕ್ಕೆ ಹೊರಡಲು ಕುರುಜಾಂಗಲದೇಶದ ಪ್ರಜೆಗಳ ಅನುಮತಿಯನ್ನು ಕೇಳಿದುದು
  • ಪ್ರಜಾಜನರಲ್ಲಿ ಧೃತರಾಷ್ಟ್ರನ ಕ್ಷಮಾಯಾಚನೆ
  • ಸಾಂಬನೆಂಬ ಬ್ರಾಹ್ಮಣನು ಧೃತರಾಷ್ಟ್ರನನ್ನು ಸಂತೈಸಿದುದು
  • ಧೃತರಾಷ್ಟ್ರನು ವಿದುರನ ಮೂಲಕ ಶ್ರಾದ್ಧಕ್ರಿಯೆಗಾಗಿ ಯುಧಿಷ್ಠಿರನಿಂದ ಧನವನ್ನು ಅಪೇಕ್ಷಿಸಿದುದು : ಧನ ಕೊಡಲು ಅರ್ಜುನನ ಸಮ್ಮತಿ : ಭೀಮಸೇನನ ವಿರೋಧ
  • ಅರ್ಜುನನಿಂದ ಭೀಮನ ಸಮಾಧಾನ : ಧೃತರಾಷ್ಟ್ರನಿಗೆ ಯಥೇಷ್ಟವಾದ ಹಣಕೊಡಲು ಯುಧಿಷ್ಠಿರನ ಒಪ್ಪಿಗೆ
  • ವಿದುರನು ಧೃತರಾಷ್ಟ್ರನಿಗೆ ಯುಧಿಷ್ಠಿರನ ಉದಾರತೆಯ ಉತ್ತರವನ್ನು ತಿಳಿಸಿದುದು
  • ಧೃತರಾಷ್ಟ್ರನು ಮೃತರಿಗೆ ಶ್ರಾದ್ಧಾದಿಗಳನ್ನೂ-ಮಹಾದಾನಗಳನ್ನೂ ಮಾಡಿದುದು
  • ಗಾಂಧಾರಿಯೊಡನೆ ಧೃತರಾಷ್ಟ್ರನ ವನಪ್ರಸ್ಥಾನ
  • ಧೃತರಾಷ್ಟ್ರನು ಪುರವಾಸಿಗಳನ್ನು ಹಿಂದಕ್ಕೆ ಕಳುಹಿಸಿದುದು : ಪಾಂಡವರು ತಡೆದರೂ ಕುಂತಿಯೂ ಅರಣ್ಯಕ್ಕೆ ಹೊರಟುದು
  • ಪಾಂಡವರ ಪ್ರಶ್ನೆಗಳಿಗೆ ಕುಂತಿಯ ಉತ್ತರ
  • ಪಾಂಡವರು ನಿರಾಶರಾಗಿ ಹಸ್ತಿನಾಪಟ್ಟಣಕ್ಕೆ ಹಿಂದಿರುಗಿದುದು : ಧೃತರಾಷ್ಟ್ರನು ಪರಿವಾರದೊಡನೆ ಗಂಗಾನದಿಯ ತೀರದಲ್ಲಿ ನಿವಾಸಮಾಡಿದುದು
  • ಧೃತರಾಷ್ಟ್ರಾದಿಗಳು ಗಂಗಾತೀರದಲ್ಲಿ ಸ್ವಲ್ಪ ದಿವಸಗಳಿದ್ದು ಕುರುಕ್ಷೇತ್ರಕ್ಕೆ ಹೋಗಿ ಶತಯೂಪರಾಜರ್ಷಿಯ ಆಶ್ರಮದಲ್ಲಿ ನಿವಾಸಮಾಡಿದುದು
  • ನಾರದರು ಧೃತರಾಷ್ಟ್ರನಿಗೆ ಪ್ರಾಚೀನರಾಜರ ತಪಸ್ಸಿದ್ಧಿಯ ದೃಷ್ಟಾಂತಗಳನ್ನು ಹೇಳಿ ಅವನಿಗೆ ತಪಸ್ಸಿನಲ್ಲಿ ಶ್ರದ್ಧೆಯನ್ನು ಹೆಚ್ಚಿಸಿದುದು : ಶತಯೂಪನ ಪ್ರಶ್ನೆಗೆ ಉತ್ತರವಾಗಿ ಧೃತರಾಷ್ಟ್ರನಿಗೆ ಪ್ರಾಪ್ತವಾಗುವ ಗತಿಯನ್ನು ಹೇಳಿದುದು
  • ಧೃತರಾಷ್ಟ್ರನ ವಿಷಯವಾಗಿ ಪಾಂಡವರ ಮತ್ತು ಪುರವಾಸಿಗಳ ಚಿಂತೆ
  • ತಾಯಿಯ ವಿಷಯವಾಗಿ ಪಾಂಡವರ ಚಿಂತೆ : ಅರಣ್ಯಕ್ಕೆ ಹೋಗಲು ಯುಧಿಷ್ಠಿರನ ಅಪೇಕ್ಷೆ : ಸೇನಾಸಹಿತನಾಗಿ ಅರಣ್ಯಕ್ಕೆ ಯುಧಿಷ್ಠಿರನ ಪ್ರಯಾಣ
  • ಪಾಂಡವರು ಸೇನೆಯೊಡನೆ ಯಾತ್ರೆಹೊರಟು ಕುರುಕ್ಷೇತ್ರವನ್ನು ಸೇರಿದುದು
  • ಪಾಂಡವರೂ ಮತ್ತು ಪೌರರೂ ಕುಂತೀ-ಗಾಂಧಾರೀ-ಧೃತರಾಷ್ಟ್ರರನ್ನು ಸಂದರ್ಶಿಸಿದುದು
  • ಸಂಜಯನು ಪಾಂಡವರನ್ನೂ ಅವರ ಪತ್ನಿಯರನ್ನೂ ಮತ್ತು ಇತರ ಸ್ತ್ರೀಯರನ್ನೂ ಆಶ್ರಮವಾಸಿಗಳಾದ ಋಷಿಗಳಿಗೆ ಪರಿಚಯಮಾಡಿಕೊಟ್ಟುದು
  • ಧೃತರಾಷ್ಟ್ರ-ಪಾಂಡವರ ಸಂಭಾಷಣೆ : ಯುಧಿಷ್ಠಿರನ ಶರೀರದಲ್ಲಿ ವಿದುರನ ಪ್ರವೇಶ
  • ಯುಧಿಷ್ಠಿರಾದಿಗಳಿಂದ ಋಷಿಗಳ ಆಶ್ರಮಗಳ ದರ್ಶನ : ಕಲಶಗಳೇ ಮೊದಲಾದುವುಗಳ ಪ್ರದಾನ : ವ್ಯಾಸರ ಆಗಮನ
  • ವ್ಯಾಸಮಹರ್ಷಿಗಳಿಂದ ಧೃತರಾಷ್ಟ್ರನ ಕುಶಲಪ್ರಶ್ನೆ : ವಿದುರ-ಯುಧಿಷ್ಠಿರರ ಧರ್ಮರೂಪದ ಪ್ರತಿಪಾದನೆ : ಧೃತರಾಷ್ಟ್ರನಿಗೆ ವ್ಯಾಸರಿಂದ ವರಪ್ರದಾನ

ಪುತ್ರದರ್ಶನಪರ್ವ

  • ಮೃತರಾದ ಪುತ್ರ-ಮಿತ್ರ-ಬಂಧುಗಳ ವಿಷಯವಾಗಿ ಧೃತರಾಷ್ಟ್ರನ ಶೋಕ : ತಮ್ಮ ಹತಪುತ್ರರನ್ನು ಕಾಣಲು ಗಾಂಧಾರೀ-ಕುಂತಿಯರ ಅಪೇಕ್ಷೆ : ವ್ಯಾಸರಲ್ಲಿ ಪ್ರಾರ್ಥನೆ
  • ಕುಂತಿಯಿಂದ ಕರ್ಣನ ಜನ್ಮದ ರಹಸ್ಯಕಥನ : ವ್ಯಾಸರಿಂದ ಸಮಾಧಾನ
  • ವ್ಯಾಸರಿಂದ ಧೃತರಾಷ್ಟ್ರಾದಿಗಳ ಪೂರ್ವಜನ್ಮದ ಪರಿಚಯ : ಅವರ ಮಾತಿನಂತೆ ಗಂಗಾತೀರಕ್ಕೆ ಎಲ್ಲರ ಪ್ರಯಾಣ
  • ಕುರುಕ್ಷೇತ್ರಯುದ್ಧದಲ್ಲಿ ಮರಣಹೊಂದಿದ್ದವರೆಲ್ಲರೂ ವ್ಯಾಸರ ತಪಃಪ್ರಭಾವದಿಂದ ಗಂಗಾನದಿಯ ನೀರಿನಲ್ಲಿ ಕಾಣಿಸಿಕೊಂಡುದು
  • ಪರಲೋಕದಿಂದ ಆಗಮಿಸಿದ ವ್ಯಕ್ತಿಗಳು ದ್ವೇಷಾಸೂಯೆಗಳಿಲ್ಲದೇ ಪರಸ್ಪರವಾಗಿ ಸಂಧಿಸಿದುದು : ರಾತ್ರಿಯು ಕಳೆದೊಡನೆಯೇ ಎಲ್ಲರೂ ಅದೃಶ್ಯರಾದುದು : ವ್ಯಾಸ ಮುನಿಗಳ ಆಜ್ಞೆಯಂತೆ ವಿಧವೆಯಾದ ರಾಜಕುಮಾರಿಯರು ಗಂಗೆಯಲ್ಲಿ ಮುಳುಗಿ ತಮ್ಮ ಪತಿಗಳ ಲೋಕಗಳನ್ನು ಸೇರಿದುದು : ಈ ಪರ್ವಶ್ರವಣದ ಫಲ
  • ಜನಮೇಜಯನ ಸಂದೇಹಕ್ಕೆ ವೈಶಂಪಾಯನರ ಸಮಾಧಾನ
  • ವ್ಯಾಸರ ಕೃಪೆಯಿಂದ ಜನಮೇಜಯನಿಗೆ ತಂದೆಯ ದರ್ಶನ
  • ವ್ಯಾಸರ ಆಜ್ಞೆಯಂತೆ ಧೃತರಾಷ್ಟ್ರನೇ ಮೊದಲಾದವರು ಪಾಂಡವರನ್ನು ಅರಣ್ಯದಿಂದ ಬೀಳ್ಕೊಟ್ಟುದು : ಯುಧಿಷ್ಠಿರನು ಪರಿವಾರದೊಡನೆ ಹಸ್ತಿನೆಗೆ ಹಿಂದಿರುಗಿದುದು
  • ಧೃತರಾಷ್ಟ್ರಾದಿಗಳು ಕಾಳ್ಗಿಚ್ಚಿಗೆ ಸಿಕ್ಕಿ ಸುಟ್ಟುಹೋದ ವಾರ್ತೆಯನ್ನು ನಾರದರಿಂದ ಕೇಳಿ ಪಾಂಡವರ ದುಃಖ
  • ಧೃತರಾಷ್ಟ್ರಾದಿಗಳು ಲೌಕಿಕಾಗ್ನಿಯಲ್ಲಿ ದಗ್ಧರಾದುದನ್ನೇ ಹೇಳಿಕೊಂಡು ನಾರದರಲ್ಲಿ ಯುಧಿಷ್ಠಿರನ ಪರಿತಾಪ
  • ಗಂಗಾನದಿಯಲ್ಲಿ ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಅಸ್ಥಿಗಳ ವಿಸರ್ಜನೆ : ಯುಧಿಷ್ಠಿರನಿಂದ ಪ್ರತ್ಯೇಕವಾಗಿ ಶ್ರಾದ್ಧಕರ್ಮಾಚರಣೆ
  • ಪರಿಶಿಷ್ಟ : ಉಮಾ-ಮಹೇಶ್ವರಸಂವಾದ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 32: Mausala Parva