ಗಾಲವ-ಗರುಡರು ಋಷಭಪರ್ವತಕ್ಕೆ ಹೋದುದು : ಅಲ್ಲಿ ತಪಸ್ವಿನಿಯಾದ ಶಾಂಡಿಲಿಯ ಸಂದರ್ಶನ : ಗಾಲವನು ಕೊಡಬೇಕಾಗಿದ್ದ ಗುರುದಕ್ಷಿಣೆಯ ವಿಷಯವಾಗಿ ಪರಸ್ಪರ ಸಂಭಾಷಣೆ
ಗರುಡ-ಗಾಲವರು ಯಯಾತಿರಾಜನ ಬಳಿಗೆ ಹೋಗಿ ಕಪ್ಪುಕಿವಿಗಳುಳ್ಳ ಕುದುರೆಗಳನ್ನು ಯಾಚಿಸಿದುದು
ಯಯಾತಿಯು ಗಾಲವನಿಗೆ ತನ್ನ ಮಗಳನ್ನೇ ಸಮರ್ಪಿಸಿದುದು : ಗಾಲವನು ಅವಳನ್ನು ಕರೆದುಕೊಂಡು ಅಯೋಧ್ಯೆಯ ರಾಜನ ಬಳಿಗೆ ಪ್ರಯಾಣಮಾಡಿದುದು
ಹರ್ಯಶ್ವನು ಎರಡು ನೂರು ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಟ್ಟು ಮಾಧವಿಯಲ್ಲಿ ವಸುಮನಸನನ್ನು ಪಡೆದು ಪುನಃ ಗಾಲವನಿಗೆ ಮಾಧವಿಯನ್ನು ಹಿಂದಿರುಗಿಸಿದುದು : ಮಾಧವಿಯೊಡನೆ ಗಾಲವನ ಪ್ರಯಾಣ
ದಿವೋದಾಸನು ಗಾಲವನಿಗೆ ಕನ್ಯಾಶುಲ್ಕವಾಗಿ ಎರಡು ನೂರು ಕುದುರೆಗಳನ್ನು ಕೊಟ್ಟು ಯಯಾತಿಯ ಮಗಳಾದ ಮಾಧವಿಯಲ್ಲಿ ಪ್ರತರ್ದನನೆಂಬ ಸುಪುತ್ರನನ್ನು ಪಡೆದುಕೊಂಡುದು
ಉಶೀನರನು ಕನ್ಯಾಶುಲ್ಕವನ್ನು ಕೊಟ್ಟು ಮಾಧವಿಯನ್ನು ಪರಿಗ್ರಹಿಸಿ ಶಿಬಿ ಎಂಬ ಪುತ್ರನನ್ನು ಪಡೆದುದು : ಗಾಲವನು ಮಾಧವಿಯೊಡನೆ ಹೋಗುತ್ತಿರಲಾಗಿ ಮಾರ್ಗದಲ್ಲಿ ಪುನಃ ಗರುಡನನ್ನು ಕಂಡುದು
ಗಾಲವನು ಆರುನೂರು ಕುದುರೆಗಳೊಡನೆ ಮಾಧವಿಯನ್ನೂ ವಿಶ್ವಾಮಿತ್ರನಿಗರ್ಪಿಸಿದುದು : ವಿಶ್ವಾಮಿತ್ರನು ಅವಳಲ್ಲಿ ಅಷ್ಟಕನೆಂಬ ಪುತ್ರನನ್ನು ಪಡೆದುದು : ಅನಂತರದಲ್ಲಿ ಮಾಧವಿಯು ಪುನಃ ಕನ್ಯಾವಸ್ಥೆಯನ್ನು ಹೊಂದಿ ಯಯಾತಿಯ ಬಳಿಗೆ ಸಾರಿದುದು
ಮಾಧವಿಯು ಅರಣ್ಯಕ್ಕೆ ಹೋಗಿ ತಪಸ್ಸು ಮಾಡಿದುದು : ಯಯಾತಿಯು ಕಾಲಾನಂತರದಲ್ಲಿ ಸ್ವರ್ಗಕ್ಕೆ ಹೋಗಿ ಅಲ್ಲಿ ಅನೇಕವರ್ಷಗಳವರೆಗೆ ಸುಖೋಪಭೋಗಗಳನ್ನನುಭವಿಸುತ್ತಿದ್ದು ಒಮ್ಮೆ ಮೋಹವಶನಾಗಿ ತೇಜೋಹೀನನಾದುದು
ಯಯಾತಿಯು ಸ್ವರ್ಗದಿಂದ ಕೆಳಕ್ಕೆ ಬಿದ್ದುದು : ಅವನ ದೌಹಿತ್ರರು, ಮಗಳು ಮಾಧವೀ ಮತ್ತು ಗಾಲವ-ಎಲ್ಲರೂ ತಮ್ಮ ತಮ್ಮ ಪುಣ್ಯಗಳನ್ನು ಧಾರೆಯೆರೆದುಕೊಡಲು ಒಪ್ಪಿದುದು
ಸತ್ಸಂಗದಿಂದಲೂ, ದೌಹಿತ್ರರು ಮಾಡಿದ ಪುಣ್ಯದ ದಾನದಿಂದಲೂ ಯಯಾತಿಯು ಪುನಃ ಸ್ವರ್ಗಾರೋಹಣ ಮಾಡಿದುದು
ಶ್ರೀಕೃಷ್ಣನು ಕೌರವರ ವಿಷಯದಲ್ಲಿ ಸಾಮ-ದಾನ-ಭೇದೋಪಾಯಗಳು ಸಲ್ಲವೆಂದೂ–ದಂಡೋಪಾಯವೊಂದೇ ಉಚಿತವೆಂದೂ ಪಾಂಡವರಿಗೆ ಸಲಹೆ ನೀಡಿದುದು
ಸೈನ್ಯನಿರ್ಯಾಣಪರ್ವ
ಪಾಂಡವರು ತಮ್ಮ ಕಡೆಯ ಅಕ್ಷೌಹಿಣೀಪತಿಗಳನ್ನೂ ಪ್ರಧಾನಸೇನಾಪತಿಯನ್ನೂ ಚುನಾಯಿಸಿದುದು : ಪಾಂಡವರ ಸೇನೆಯು ಕುರುಕ್ಷೇತ್ರವನ್ನು ಪ್ರವೇಶಿಸಿದುದು
ಕುರುಕ್ಷೇತ್ರದಲ್ಲಿ ಪಾಂಡವರ ಶಿಬಿರಗಳ ನಿರ್ಮಾಣ
ದುರ್ಯೋಧನನು ಸೇನೆಯನ್ನು ಸಜ್ಜುಗೊಳಿಸಿದುದು : ಶಿಬಿರನಿರ್ಮಾಣಕ್ಕೆ ಆಜ್ಞೆ ನೀಡಿದುದು : ರಣಯಾತ್ರೆಗಾಗಿ ಸೈನಿಕರ ಸಿದ್ಧತೆ
ಸಮಯೋಚಿತವಾದ ಕರ್ತವ್ಯದ ವಿಷಯವಾಗಿ ಪ್ರಶ್ನಿಸಿದ ಯುಧಿಷ್ಠಿರನಿಗೆ ಶ್ರೀಕೃಷ್ಣನು ಯುದ್ಧಮಾಡುವುದೇ ಪ್ರಕೃತ ಮುಖ್ಯಕರ್ತವ್ಯವೆಂದು ಹೇಳಿದುದು : ಯುದ್ಧದ ವಿಷಯದಲ್ಲಿ ಯುಧಿಷ್ಠಿರನ ಸಂತಾಪ : ಅರ್ಜುನನು ಶ್ರೀಕೃಷ್ಣನ ಮಾತನ್ನು ಸಮರ್ಥಿಸಿದುದು
ದುರ್ಯೋಧನನು ತನ್ನ ಸೈನ್ಯದ ವಿಭಜನೆ ಮಾಡಿದುದು : ಒಂದೊಂದು ಅಕ್ಷೌಹಿಣಿಗೂ ಸೇನಾಮುಖ್ಯರನ್ನು ಆರಿಸಿ ಅವರಿಗೆ ಪಟ್ಟಗಟ್ಟಿದುದು
ದುರ್ಯೋಧನನು ಭೀಷ್ಮನನ್ನು ಅಖಿಲಸೇನೆಯ ದಂಡನಾಯಕನನ್ನಾಗಿ ಮಾಡಿಕೊಂಡುದು : ಅನಂತರ ಕುರುಕ್ಷೇತ್ರಕ್ಕೆ ಹೋಗಿ ಶಿಬಿರಗಳನ್ನು ನಿರ್ಮಾಣಮಾಡಿದುದು
ಯುಧಿಷ್ಠಿರನೂ ಏಳು ಅಕ್ಷೌಹಿಣೀ ಸೈನ್ಯಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ದಳಪತಿಗಳನ್ನು ನಿಯಮಿಸಿ ಅವರಿಗೆ ಪಟ್ಟಾಭಿಷೇಕ ಮಾಡಿದುದು : ಬಲರಾಮನ ಆಗಮನ : ಬಲರಾಮನು ಪಾಂಡವರನ್ನು ಹರಸಿ ತೀರ್ಥಯಾತ್ರೆಗೆ ಪ್ರಯಾಣ ಮಾಡಿದುದು
ಭೀಷ್ಮ-ಪರಶುರಾಮರ ಘೋರಯುದ್ಧ : ಶಕ್ತಿ–ಬ್ರಹ್ಮಾಸ್ತ್ರಗಳ ಪ್ರಯೋಗ
ದೇವತೆಗಳು ಪ್ರಸ್ವಾಪನಾಸ್ತ್ರಪ್ರಯೋಗವನ್ನು ತಡೆದುದು : ದೇವ-ಪಿತೃಗಳ ಮತ್ತು ಗಂಗಾದೇವಿಯ ನಿರ್ದೇಶದಂತೆ ಪರಶುರಾಮ-ಭೀಷ್ಮರ ಯುದ್ಧಸಮಾಪ್ತಿ
ಅಂಬೆಯ ಕಠೋರತಪಸ್ಸು
ಅಂಬೆಯು ತನ್ನ ಎರಡನೆಯ ಜನ್ಮದಲ್ಲಿಯೂ ಭೀಷ್ಮನಾಶಕವಾದ ತಪಸ್ಸನ್ನು ಮುಂದುವರಿಸಿದುದು : ಮಹೇಶ್ವರನಿಂದ ವರಪ್ರದಾನ : ಅಂಬೆಯ ಚಿತಾಗ್ನಿಪ್ರವೇಶ
ಅಂಬೆಯು ದ್ರುಪದನ ಮಗಳಾಗಿ ಹುಟ್ಟಿದುದು : ಪುತ್ರಾಪೇಕ್ಷಿಗಳಾಗಿದ್ದ ತಂದೆ-ತಾಯಿಗಳು ಹುಟ್ಟಿದ ಮಗಳನ್ನು ಮಗನೆಂದೇ ಪ್ರಸಿದ್ಧಪಡಿಸಿ ಶಿಖಂಡೀ ಎಂದು ನಾಮಕರಣ ಮಾಡಿದುದು
ಶಿಖಂಡಿಯ ವಿವಾಹ : ಶಿಖಂಡಿಯು ಹೆಣ್ಣೆಂಬ ಸಮಾಚಾರವನ್ನು ತಿಳಿದ ಮಾವನಾದ ದಶಾರ್ಣರಾಜನು ಕೋಪಗೊಂಡುದು
ಹಿರಣ್ಯವರ್ಮನ ಆಕ್ರಮಣದ ಭಯದಿಂದ ವಿಹ್ವಲನಾದ ದ್ರುಪದನು ಪತ್ನಿಯೊಡನೆ ನಿವಾರಣೋಪಾಯವನ್ನು ಸಮಾಲೋಚಿಸಿದುದು
ದ್ರುಪದನ ಪ್ರಶ್ನೆಗೆ ದ್ರುಪದಪತ್ನಿಯ ಉತ್ತರ : ದ್ರುಪದನಿಂದ ನಗರದ ರಕ್ಷಣಾವ್ಯವಸ್ಥೆ : ದೇವತಾಪ್ರಾರ್ಥನೆ : ಶಿಖಂಡಿನಿಯು ಅರಣ್ಯಕ್ಕೆ ಹೋಗಿ ಯಕ್ಷನೊಡನೆ ತನ್ನ ದುಃಖವನ್ನು ತೋಡಿಕೊಂಡುದು