ಸಂಪುಟ ೧ : ಆದಿಪರ್ವ

ಪರಿವಿಡಿ:
ಅನುಕ್ರಮಣಿಕಾಪರ್ವ - ಪರ್ವಸಂಗ್ರಹಪರ್ವ - ಪೌಷ್ಯಪರ್ವ - ಪೌಲೋಮಪರ್ವ - ಆಸ್ತೀಕಪರ್ವ - ಅಂಶಾವತರಣಪರ್ವ - ಸಂಭವಪರ್ವ


ಅನುಕ್ರಮಣಿಕಾಪರ್ವ

  • ಗ್ರಂಥದ ಉಪಕ್ರಮ:
    ಗ್ರಂಥದಲ್ಲಿ ಬರುವ ವಿಷಯಗಳ ಸಂಕ್ಷೇಪಸೂಚೀ ಮತ್ತು ಮಹಾಭಾರತದ ಮಹಿಮೆ

ಪರ್ವಸಂಗ್ರಹಪರ್ವ

  • ಸಮಂತಪಂಚಕಕ್ಷೇತ್ರವರ್ಣನೆ : ಅಕ್ಷೌಹಿಣೀಸೇನೆಯ ಪ್ರಮಾಣ : ಮಹಾಭಾರತದಲ್ಲಿ ವರ್ಣಿತವಾಗಿರುವ ಪರ್ವಗಳಲ್ಲಿನ ಸಂಕ್ಷಿಪ್ತವಿಷಯ : ಮಹಾಭಾರತದ ಶ್ರವಣ-ಪಠನಗಳ ಫಲ

ಪೌಷ್ಯಪರ್ವ

  • ಜನಮೇಜಯನಿಗೆ ಸರಮೆಯ ಶಾಪ : ಜನಮೇಜಯನು ಸೋಮಶ್ರವರನ್ನು ಪುರೋಹಿತರನ್ನಾಗಿ ಆರಿಸಿಕೊಂಡುದು : ಆರುಣಿ, ಉಪಮನ್ಯು, ವೇದ ಮತ್ತು ಉತ್ತಂಕ–ಇವರ ಗುರುಭಕ್ತಿ : ಉತ್ತಂಕನು ಸರ್ಪಯಾಗಮಾಡಲು ಜನಮೇಜಯನನ್ನು ಪ್ರೋತ್ಸಾಹಿಸಿದುದು

ಪೌಲೋಮಪರ್ವ

  • ಕಥಾಪ್ರವೇಶ
  • ಭೃಗುಮಹರ್ಷಿಯ ಆಶ್ರಮಕ್ಕೆ ಪುಲೋಮರಾಕ್ಷಸನ ಆಗಮನ ಮತ್ತು ಅಗ್ನಿಯೊಡನೆ ಅವನ ಸಂಭಾಷಣೆ
  • ಚ್ಯವನನ ಜನ್ಮ : ಅವನ ತೇಜಸ್ಸಿನಿಂದ ರಾಕ್ಷಸನು ಭಸ್ಮವಾದುದು : ಭೃಗುಮಹರ್ಷಿಯು ಅಗ್ನಿದೇವನಿಗೆ ಶಾಪವಿತ್ತುದು
  • ಭೃಗುಮಹರ್ಷಿಯ ಶಾಪದಿಂದ ಕುಪಿತನಾದ ಅಗ್ನಿಯು ಅದೃಶ್ಯನಾದುದು : ಬ್ರಹ್ಮನು ಅಗ್ನಿಯ ಶಾಪವನ್ನು ಸಂಕೋಚಗೊಳಿಸಿ ಸಮಾಧಾನಪಡಿಸಿದುದು
  • ಪ್ರಮದ್ವರೆಯ ಜನ್ಮ : ರುರುವಿನೊಡನೆ ಅವಳ ವಿವಾಹದ ಪ್ರಯತ್ನ : ವಿವಾಹಕ್ಕೆ ಮೊದಲೇ ಸರ್ಪದಂಶನದಿಂದ ಪ್ರಮದ್ವರೆಯ ಮರಣ
  • ರುರುವಿನ ಅರ್ಧಾಯುಷ್ಯದಿಂದ ಪ್ರಮದ್ವರೆಯು ಜೀವಿಸಿದುದು : ರುರುವಿನೊಡನೆ ಪ್ರಮದ್ವರೆಯ ವಿವಾಹ : ಸರ್ಪಗಳ ನಾಶಕ್ಕೆ ರುರುವಿನ ನಿಶ್ಚಯ : ಡುಂಡುಭನೊಡನೆ ಸಮಾಗಮ
  • ರುರು-ಡುಂಡುಭರ ಸಂಭಾಷಣೆ
  • ಡುಂಡುಭನ ಆತ್ಮಕಥೆ : ಡುಂಡುಭನಿಂದ ರುರುವಿಗೆ ಅಹಿಂಸೋಪದೇಶ
  • ಜನಮೇಜಯರಾಜನ ಸರ್ಪಸತ್ರದ ವಿಷಯದಲ್ಲಿ ರುರುವಿನ ಜಿಜ್ಞಾಸೆ

ಆಸ್ತೀಕಪರ್ವ

  • ಜರತ್ಕಾರುವು ಪಿತೃದೇವತೆಗಳ ಅನುರೋಧದಂತೆ ವಿವಾಹವಾಗಲು ಒಪ್ಪಿದುದು
  • ವಾಸುಕಿಯ ತಂಗಿಯಾದ ಜರತ್ಕಾರುವಿನೊಡನೆ ಮಹರ್ಷಿಯಾದ ಜರತ್ಕಾರುವಿನ ವಿವಾಹ
  • ಆಸ್ತೀಕನ ಜನ್ಮ ಮತ್ತು ಸರ್ಪಯಾಗದಲ್ಲಿ ಹತರಾಗುತ್ತಿದ್ದ ಸರ್ಪಗಳ ರಕ್ಷಣೆ
  • ಕದ್ರೂ ಮತ್ತು ವಿನತೆಯರಿಗೆ ಕಶ್ಯಪರಿಂದ ವರದಾನ ಮತ್ತು ಅವರಿಂದ ಪುತ್ರಪ್ರಾಪ್ತಿಯಾದುದು
  • ಮೇರುಪರ್ವತದ ಮೇಲೆ ಅಮೃತಪ್ರಾಪ್ತಿಗಾಗಿ ಸಮಾಲೋಚಿಸುತ್ತಿದ್ದ ದೇವತೆಗಳಿಗೆ ಶ್ರೀಮನ್ನಾರಾಯಣನು ಸಮುದ್ರಮಥನಮಾಡಲು ಸಲಹೆ ನೀಡಿದುದು
  • ದೇವತೆಗಳು ಮತ್ತು ದೈತ್ಯರು ಸೇರಿ ಅಮೃತಕ್ಕಾಗಿ ಸಮುದ್ರವನ್ನು ಕಡೆದುದು : ಅನೇಕರತ್ನಗಳೊಡನೆ ಅಮೃತದ ಉತ್ಪತ್ತಿ : ಶ್ರೀಮಹಾವಿಷ್ಣುವು ಮೋಹಿನೀ ರೂಪವನ್ನು ಧರಿಸಿ ಅಮೃತವನ್ನು ಅಪಹರಿಸಿದುದು
  • ದೇವತೆಗಳು ಅಮೃತಪಾನಮಾಡಿದುದು : ದೇವಾಸುರರ ಯುದ್ಧ : ದೇವತೆಗಳ ವಿಜಯ
  • ಕದ್ರೂ ಮತ್ತು ವಿನತೆಯರ ಪಂದ್ಯ : ಕದ್ರುವು ತನ್ನ ಮಕ್ಕಳಿಗೆ ಶಾಪಕೊಟ್ಟುದು : ಅದಕ್ಕೆ ಬ್ರಹ್ಮನ ಅನುಮೋದನೆ
  • ಸಮುದ್ರದ ವಿಸ್ತಾರವರ್ಣನೆ
  • ಸರ್ಪಗಳು ಕುದುರೆಯ ಬಾಲವನ್ನು ಕಪ್ಪಾಗಿ ಮಾಡಿದುದು
  • ಪರಾಜಿತಳಾದ ವಿನತೆಯು ಕದ್ರುವಿಗೆ ದಾಸಿಯಾದುದು : ಗರುಡನ ಜನನ : ದೇವತೆಗಳಿಂದ ಗರುಡನ ಸ್ತತಿ ....
  • ಗರುಡನು ತನ್ನ ಶರೀರವನ್ನೂ, ತೀಕ್ಷ್ಣವಾದ ತೇಜಸ್ಸನ್ನೂ ಉಪಸಂಹರಿಸಿದುದು : ಕೋಪದಿಂದುಂಟಾದ ಸೂರ್ಯನ ತೀಕ್ಷ್ಣತೇಜಸ್ಸನ್ನು ಶಾಂತಗೊಳಿಸಲು ಅರುಣನು ಸೂರ್ಯನ ಸಾರಥ್ಯ ವಹಿಸಿದುದು
  • ಸೂರ್ಯನ ತಾಪಕ್ಕೆ ಸಿಕ್ಕಿ ಮೂರ್ಛೆಹೊಂದಿದ ಮಕ್ಕಳ ರಕ್ಷಣೆಗಾಗಿ ಕದ್ರುವು ಇಂದ್ರನನ್ನು ಸ್ತುತಿಸಿದುದು
  • ಇಂದ್ರನ ವರಪ್ರದಾನ : ಮಳೆಯಿಂದ ಸರ್ಪಗಳ ಪ್ರಸನ್ನತೆ
  • ರಾಮಣೀಯಕದ್ವೀಪದ ವನವರ್ಣನೆ : ತಾಯಿಯನ್ನು ದಾಸ್ಯಜೀವನದಿಂದ ವಿಮೋಚಿಸಲು ಸರ್ಪಗಳೊಡನೆ ಗರುಡನ ಸಮಾಲೋಚನೆ
  • ಅಮೃತವನ್ನು ತರಲು ಗರುಡನ ಪ್ರಯಾಣ : ತಾಯಿಯ ನಿರ್ದೇಶನದಂತೆ ನಿಷಾದರನ್ನು ಭಕ್ಷಿಸಿದುದು
  • ಕಶ್ಯಪರು ಗರುಡನಿಗೆ ಆನೆ ಮತ್ತು ಆಮೆಗಳ ಪೂರ್ವಜನ್ಮದ ವೃತ್ತಾಂತವನ್ನು ಹೇಳಿದುದು : ಗರುಡನು ಆನೆ ಮತ್ತು ಆಮೆಗಳನ್ನೆತ್ತಿಕೊಂಡು ವಟವೃಕ್ಷದ ಮೇಲೆ ಕುಳಿತಾಗ ವಟವೃಕ್ಷದ ರೆಂಬೆಯು ಮುರಿದುಹೋದುದು
  • ಗರುಡನು ಕಶ್ಯಪರನ್ನು ಪುನಃ ಸಂದರ್ಶಿಸಿದುದು : ಕಶ್ಯಪರ ಪ್ರಾರ್ಥನೆಯಂತೆ ಗರುಡನು ಕಚ್ಚಿಕೊಂಡಿದ್ದ ರೆಂಬೆಯನ್ನು ವಾಲಖಿಲ್ಯರು ಬಿಟ್ಟುಹೋದುದು : ಗರುಡನು ನಿರ್ಜನವಾದ ಪರ್ವತದ ಮೇಲೆ ರೆಂಬೆಯನ್ನು ಹಾಕಿದುದು
  • ಇಂದ್ರನು ವಾಲಖಿಲ್ಯರಿಗೆ ಅಪಮಾನಮಾಡಿದುದು : ವಾಲಖಿಲ್ಯರ ತಪಃಪ್ರಭಾವದಿಂದ ಅರುಣ ಮತ್ತು ಗರುಡರ ಉತ್ಪತ್ತಿ
  • ಗರುಡನು ದೇವತೆಗಳೊಡನೆ ಯುದ್ಧಮಾಡಿದುದು : ದೇವತೆಗಳ ಪರಾಜಯ
  • ಗರುಡನು ಅಮೃತವನ್ನು ತೆಗೆದುಕೊಂಡು ಪಲಾಯನ ಮಾಡಿದುದು : ಮಾರ್ಗದಲ್ಲಿ ವಿಷ್ಣುವಿನಿಂದ ಗರುಡನು ವರವನ್ನು ಪಡೆದುದು : ಇಂದ್ರನು ಗರುಡನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದುದು
  • ಇಂದ್ರ ಮತ್ತು ಗರುಡರ ಮೈತ್ರಿ : ಗರುಡನು ಅಮೃತವನ್ನು ತೆಗೆದುಕೊಂಡು ಸರ್ಪಗಳ ಸಮೀಪಕ್ಕೆ ಹೋದುದು : ದಾಸ್ಯಭಾವದಿಂದ ವಿನತೆಯ ವಿಮೋಚನೆ : ಇಂದ್ರನು ಅಮೃತವನ್ನು ಅಪಹರಿಸಿಕೊಂಡು ಸ್ವರ್ಗಕ್ಕೆ ಹಿಂದಿರುಗಿದುದು
  • ಸರ್ಪಪ್ರಮುಖರ ನಾಮಧೇಯಗಳು
  • ಆದಿಶೇಷನ ತಪಸ್ಸು : ಬ್ರಹ್ಮನ ಆದೇಶದಂತೆ ಭೂಧಾರಣೆ
  • ಶಾಪದಿಂದ ಪಾರಾಗಲು ಸರ್ಪಗಳ ಪರಸ್ಪರ ಪರಾಮರ್ಶೆ
  • ವಾಸುಕಿಯ ತಂಗಿಯಾದ ಜರತ್ಕಾರುವನ್ನು ಜರತ್ಕಾರುಮಹರ್ಷಿಗೆ ಮದುವೆಮಾಡಿಕೊಡಲು ನಿಶ್ಚಯಿಸಿದುದು
  • ವಾಸುಕಿಗೆ ಬ್ರಹ್ಮನ ಆಶ್ವಾಸನೆ
  • ಜರತ್ಕಾರುವಿನ ತಪಸ್ಸು : ಪರೀಕ್ಷಿತನ ಉಪಾಖ್ಯಾನ : ಪರೀಕ್ಷಿತನು ಋಷಿಯ ಕೊರಳಿಗೆ ಹಾವನ್ನು ಹಾಕಿದುದು : ಶೃಂಗಿಯ ಕೋಪ
  • ಶೃಂಗಿಯು ಪರೀಕ್ಷಿತನಿಗೆ ಶಾಪವನ್ನಿತ್ತುದು : ಶೃಂಗಿಯ ಅನುಚಿತಕಾರ್ಯಕ್ಕಾಗಿ ಶಮೀಕನ ಖಂಡನೆ
  • ಶಮೀಕನು ಮಗನಿಗೆ ಸಮಾಧಾನ ಹೇಳಿದುದು : ಗೌರಮುಖನ ಮೂಲಕ ಪರೀಕ್ಷಿತನಿಗೆ ಶಾಪದ ವಾರ್ತೆಯನ್ನು ಹೇಳಿಕಳುಹಿಸಿದುದು : ರಾಜನಿಂದ ಆತ್ಮರಕ್ಷಣೆಯ ವ್ಯವಸ್ಥೆ : ತಕ್ಷಕ ಮತ್ತು ಕಶ್ಯಪರ ಸಂಭಾಷಣೆ
  • ತಕ್ಷಕನು ಕಾಶ್ಯಪನ ವಿದ್ಯೆಯನ್ನು ಪರೀಕ್ಷಿಸಿದುದು : ಕಾಶ್ಯಪನ ವಿದ್ಯಾಸತ್ತ್ವಕ್ಕೆ ಮೆಚ್ಚಿ ಅವನಿಗೆ ಅಪಾರವಾದ ಧನಕೊಟ್ಟು ತಕ್ಷಕನು ಅವನನ್ನು ಹಿಂದಕ್ಕೆ ಕಳುಹಿಸಿದುದು : ತಕ್ಷಕನು ವೇಷಮರೆಸಿ ರಾಜನ ಸಮೀಪಕ್ಕೆ ಹೋಗಿ ಅವನನ್ನು ಕಚ್ಚಿದುದು
  • ಜನಮೇಜಯನ ರಾಜ್ಯಾಭಿಷೇಕ ಮತ್ತು ವಿವಾಹ
  • ವೀರಣಸ್ತಂಭದಲ್ಲಿ ಜೋತಾಡುತ್ತಿರುವ ಪಿತೃದೇವತೆಗಳೊಡನೆ ಜರತ್ಕಾರುವಿನ ಸಂಭಾಷಣೆ
  • ಮದುವೆಯಾಗಲು ಜರತ್ಕಾರುವಿನ ನಿರ್ಧಾರ
  • ನಾಗಕನ್ಯೆಯೊಡನೆ ಜರತ್ಕಾರುವಿನ ವಿವಾಹ : ನಾಗಕನ್ಯೆಯು ಪತಿಸೇವೆಮಾಡುತ್ತಿದ್ದುದು : ಸಲ್ಲದ ನೆಪಮಾಡಿ ಜರತ್ಕಾರುವು ಪತ್ನಿಯನ್ನು ತ್ಯಾಗಮಾಡಿದುದು
  • ವಾಸುಕಿಯ ಚಿಂತೆ : ಜರತ್ಕಾರುವು ವಾಸುಕಿಯನ್ನು ಸಮಾಧಾನಪಡಿಸಿದುದು : ಆಸ್ತೀಕನ ಜನನ ಮತ್ತು ವಿದ್ಯಾಭ್ಯಾಸ
  • ಪರೀಕ್ಷಿದ್ರಾಜನ ಧಾರ್ಮಿಕತೆಯ ಮತ್ತು ಉತ್ತಮಗುಣಗಳ ವರ್ಣನೆ : ರಾಜನು ಬೇಟೆಯಾಡಲು ಹೋದುದು ಮತ್ತು ಅರಣ್ಯದಲ್ಲಿ ಶಮೀಕಮಹರ್ಷಿಗೆ ಅವಮಾನ ಪಡಿಸಿದುದು
  • ಶೃಂಗಿಯು ಪರೀಕ್ಷಿತನಿಗೆ ಶಾಪಕೊಟ್ಟುದು : ತಕ್ಷಕನು ಚಿಕಿತ್ಸೆಮಾಡಲು ಬರುತ್ತಿದ್ದ ಕಾಶ್ಯಪನನ್ನು ಹಿಂದಕ್ಕೆ ಕಳುಹಿಸಿದುದು : ಸರ್ಪದಂಶನದಿಂದ ಪರೀಕ್ಷಿತನ ಮರಣ : ತಕ್ಷಕನಿಗೆ ಪ್ರತೀಕಾರಮಾಡಲು ಜನಮೇಜಯನ ಪ್ರತಿಜ್ಞೆ
  • ಜನಮೇಜಯನಿಂದ ಸರ್ಪಯಾಗೋಪಕ್ರಮ
  • ಸರ್ಪಯಾಗದ ಆರಂಭ ಮತ್ತು ಸರ್ಪಗಳ ವಿನಾಶ
  • ಸರ್ಪಯಾಗದಲ್ಲಿ ಭಾಗವಹಿಸಿದ್ದ ಋತ್ವಿಜರ ನಾಮಾವಳಿ : ಭಯಂಕರವಾದ ರೀತಿಯಲ್ಲಿ ಸರ್ಪಗಳ ವಿನಾಶ: ತಕ್ಷಕನು ಇಂದ್ರನನ್ನು ಆಶ್ರಯಿಸಿದುದು : ವಾಸುಕಿಯು ತನ್ನ ತಂಗಿಗೆ ಆಸ್ತೀಕನನ್ನು ಯಾಗಪ್ರತಿಬಂಧಕ್ಕಾಗಿ ಕಳುಹಿಸಿಕೊಡುವಂತೆ ಹೇಳಿದುದು
  • ವಾಸುಕಿಗೆ ಆಸ್ತೀಕನ ಆಶ್ವಾಸನೆ ಮತ್ತು ಆಸ್ತೀಕನು ಸರ್ಪಯಜ್ಞಕ್ಕೆ ಹೋದುದು
  • ಆಸ್ತೀಕನು ಯಜ್ಞದ ಯಜಮಾನನನ್ನೂ, ಯಜ್ಞವನ್ನೂ, ಋತ್ವಿಜರನ್ನೂ, ಸದಸ್ಯರನ್ನೂ ಮತ್ತು ಅಗ್ನಿದೇವನನ್ನೂ ಸ್ತುತಿಸಿದುದು
  • ಜನಮೇಜಯರಾಜನು ಆಸ್ತೀಕನಿಗೆ ವರನೀಡಲು ಸಿದ್ಧನಾದುದು : ತಕ್ಷಕನ ವ್ಯಾಕುಲತೆ : ಸರ್ಪಯಾಗವನ್ನು ನಿಲ್ಲಿಸುವಂತೆ ಆಸ್ತೀಕನು ವರವನ್ನು ಕೇಳಿದುದು
  • ಅಗ್ನಿಕುಂಡದಲ್ಲಿ ದಗ್ಧವಾಗಿಹೋದ ಪ್ರಮುಖ ಸರ್ಪಗಳು
  • ಯಜ್ಞದ ಪರಿಸಮಾಪ್ತಿ : ಆಸ್ತೀಕನಿಗೆ ಸರ್ಪಗಳಿಂದ ವರಪ್ರದಾನ

ಅಂಶಾವತರಣಪರ್ವ

  • ಮಹಾಭಾರತದ ಉಪಕ್ರಮ
  • ಜನಮೇಜಯನ ಯಾಗಕ್ಕೆ ವ್ಯಾಸರ ಆಗಮನ : ಅವರಿಗೆ ಸತ್ಕಾರ : ವ್ಯಾಸರ ನಿರ್ದೇಶನದಂತೆ ವೈಶಂಪಾಯನರು ಮಹಾಭಾರತದ ಕಥೆಯನ್ನು ಹೇಳಲು ಉಪಕ್ರಮಿಸಿದುದು
  • ಸಮಗ್ರಮಹಾಭಾರತದ ಸೂಕ್ಷ್ಮಪರಿಚಯ
  • ಮಹಾಭಾರತದ ಮಹಿಮೆ
  • ಉಪರಿಚರನ ಚರಿತ್ರೆ : ಸತ್ಯವತೀ, ವ್ಯಾಸ ಇವರೇ ಮೊದಲಾದವರ ಸಂಕ್ಷೇಪ ಜನ್ಮಕಥೆ
  • ಬ್ರಾಹ್ಮಣರಿಂದ ಕ್ಷತ್ರಿಯವಂಶದ ಉತ್ಪತ್ತಿ : ಆ ಕಾಲದ ಧರ್ಮರಾಜ್ಯದ ವರ್ಣನೆ : ಅಸುರರ ಉತ್ಪತ್ತಿ : ಭೂಭಾರದಿಂದಾಗಿ ಪೀಡಿತಳಾದ ಭೂದೇವಿಯು ಬ್ರಹ್ಮನನ್ನು ಶರಣುಹೋದುದು : ಬ್ರಹ್ಮನು ದೇವತೆಗಳನ್ನು ತಮ್ಮ-ತಮ್ಮ ಅಂಶಗಳಿಂದ ಪೃಥ್ವಿಯಲ್ಲಿ ಅವತರಿಸುವಂತೆ ನಿರ್ದೇಶಿಸಿದುದು

ಸಂಭವಪರ್ವ

  • Description of the lineage of sages such as Marichi and Daksha’s daughters including Aditi.
  • ಮರೀಚ್ಯಾದಿ ಮಹರ್ಷಿಗಳ ಮತ್ತು ಅದಿತಿಯೇ ಮೊದಲಾದ ದಕ್ಷಕನ್ಯೆಯರ ವಂಶ ವಿವರಣೆ
  • ದೇವ-ದಾನವರ ಅಂಶಾವತಾರದಿಗ್ದರ್ಶನ
  • ದುಷ್ಯಂತನ ರಾಜ್ಯಾಡಳಿತ
  • ದುಷ್ಯಂತನ ಮೃಗಯಾವಿಹಾರ
  • ಕಣ್ವಾಶ್ರಮದ ವರ್ಣನೆ : ದುಷ್ಯಂತನ ಪ್ರವೇಶ
  • ದುಷ್ಯಂತ-ಶಕುಂತಲೆಯರ ಸಂಭಾಷಣೆ : ಶಕುಂತಲೆಯು ತನ್ನ ಜನ್ಮವೃತ್ತಾಂತವನ್ನು ದುಷ್ಯಂತನಿಗೆ ಹೇಳಿದುದು : ವಿಶ್ವಾಮಿತ್ರರ ತಪೋಭಂಗಕ್ಕಾಗಿ ಇಂದ್ರನು ಮೇನಕೆಯನ್ನು ಕಳುಹಿಸಿದುದು
  • ಮೇನಕಾ-ವಿಶ್ವಾಮಿತ್ರರ ಸಮಾಗಮ : ಕನ್ಯೋತ್ಪತ್ತಿ : ಪಕ್ಷಿಗಳಿಂದ ಶಿಶುವಿನ ರಕ್ಷಣೆ : ಕಣ್ವರು ಆ ಶಿಶುವನ್ನು ಕರೆತಂದು ಶಕುಂತಲಾ ಎಂದು ನಾಮಕರಣ ಮಾಡಿದುದು
  • ಶಕುಂತಲಾ-ದುಷ್ಯಂತರ ಗಾಂಧರ್ವವಿವಾಹ : ಕಣ್ವರಿಂದ ಅನುಮೋದನೆ
  • ಶಕುಂತಲೆಗೆ ಪುತ್ರಜನನ : ದುಷ್ಯಂತನ ಅರಮನೆಗೆ ಪುತ್ರಸಹಿತಳಾದ ಶಕುಂತಲೆಯ ಆಗಮನ : ದುಷ್ಯಂತ- ಶಕುಂತಲೆಯರ ಸಂವಾದ : ಅಶರೀರವಾಣಿಯಂತೆ ದುಷ್ಯಂತನು ಶಕುಂತಲೆಯನ್ನು ಪರಿಗ್ರಹಿಸಿ ಭರತನಿಗೆ ಯೌವರಾಜ್ಯಾಭಿಷೇಕ ಮಾಡಿದುದು
  • ಭರತಕುಲೋತ್ಪನ್ನರ ಸಂಕ್ಷೇಪ ಇತಿಹಾಸ

  • ಶುಕ್ರಾಚಾರ್ಯರಲ್ಲಿ ಕಚನ ಶಿಷ್ಯವೃತ್ತಿ : ರಾಕ್ಷಸರಿಂದ ಉಪಟಳ : ಕಡೆಗೆ ಶುಕ್ರಾಚಾರ್ಯರಿಂದ ಮೃತಸಂಜೀವಿನೀ ವಿದ್ಯೆಯ ಉಪದೇಶ
  • ಕಚನನ್ನು ವರಿಸಲು ದೇವಯಾನಿಯ ಪ್ರಯತ್ನ: ಕಚನ ಅಸಮ್ಮತಿ : ಪರಸ್ಪರ ಶಾಪಪ್ರದಾನ
  • ದೇವಯಾನೀ-ಶರ್ಮಿಷ್ಠೆಯರ ಕಲಹ : ಬಾವಿಯಲ್ಲಿ ಬಿದ್ದಿದ್ದ ದೇವಯಾನಿಯನ್ನು ಯಯಾತಿಯು ಮೇಲಕ್ಕೆ ತಂದುದು : ಶುಕ್ರಾಚಾರ್ಯರೊಡನೆ ದೇವಯಾನಿಯ ಸಂಭಾಷಣೆ
  • ದೇವಯಾನಿಗೆ ಶುಕ್ರರ ಉಪದೇಶ : ದೇವಯಾನಿಯ ಅಸಮ್ಮತಿ
  • ಶುಕ್ರಾಚಾರ್ಯರನ್ನು ರಾಕ್ಷಸರಾಜ್ಯದಲ್ಲಿಯೇ ಉಳಿಸಿಕೊಳ್ಳಲು ವೃಷಪರ್ವನ ಅನುರೋಧ : ವೃಷಪರ್ವನ ಅಪ್ಪಣೆಯ ಪ್ರಕಾರ ಶರ್ಮಿಷ್ಠೆಯು ದೇವಯಾನಿಗೆ ದಾಸಿಯಾದುದು
  • ದೇವಯಾನೀ-ಶರ್ಮಿಷ್ಠೆಯರ ವನವಿಹಾರ: ರಾಜಾ ಯಯಾತಿಯ ಆಗಮನ : ಯಯಾತಿಯೊಡನೆ ದೇವಯಾನಿಯ ಸಂಭಾಷಣೆ : ಯಯಾತಿ-ದೇವಯಾನಿಯರ ವಿವಾಹ
  • ದೇವಯಾನಿಗೆ ಯಯಾತಿಯಿಂದ ಸಂತಾನಪ್ರಾಪ್ತಿ : ಶರ್ಮಿಷ್ಠಾ-ಯಯಾತಿಯರ ರಹಸ್ಯಪ್ರಣಯ : ಪುತ್ರಜನನ
  • ದೇವಯಾನೀ-ಶರ್ಮಿಷ್ಠೆಯರ ಸಂವಾದ : ಶುಕ್ರರ ಶಾಪ : ಯಯಾತಿಗೆ ಅಕಾಲಿಕ ವೃದ್ಧಾಪ್ಯ
  • ಮುಪ್ಪನ್ನು ಸ್ವೀಕರಿಸಿ ಯೌವನವನ್ನು ಕೊಡುವಂತೆ ಯಯಾತಿಯು ಮಕ್ಕಳನ್ನು ಕೇಳಿದುದು : ನಾಲ್ಕು ಜನ ಮಕ್ಕಳ ಅಸಮ್ಮತಿ : ಅವರಿಗೆ ಶಾಪಪ್ರದಾನ : ಪೂರುವಿನ ಸಮ್ಮತಿ : ರಾಜನು ಅವನನ್ನು ಅನುಗ್ರಹಿಸಿ ಯೌವನವನ್ನು ಪಡೆದುದು
  • ರಾಜಾ ಯಯಾತಿಯ ವಿಷಯಸೇವನೆ : ವೈರಾಗ್ಯ : ಪೂರುವಿಗೆ ಪಟ್ಟಗಟ್ಟಿ ವನಪ್ರಸ್ಥಾನ
  • ಯಯಾತಿಯ ತಪಸ್ಸು : ಸ್ವರ್ಗಪ್ರಾಪ್ತಿ
  • ಇಂದ್ರನ ಅಪೇಕ್ಷೆಯಂತೆ ಯಯಾತಿಯು ಪೂರುವಿಗೆ ಮಾಡಿದ ಉಪದೇಶದ ವಿವರಣೆ
  • ಸ್ವರ್ಗದಿಂದ ಯಯಾತಿಯ ಪತನ : ಅಷ್ಟಕನೊಡನೆ ಸಂಭಾಷಣೆ
  • ಯಯಾತಿ ಮತ್ತು ಅಷ್ಟಕರ ಸಂವಾದ
  • ಪರಿಶಿಷ್ಟ

Other Books in this COllection

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva