ಹುಟ್ಟು-ಸಾವುಗಳನ್ನು ಅತಿಕ್ರಮಿಸುವ ವಿಷಯದಲ್ಲಿ ಜನಕರಾಜ ಮತ್ತು ಪಂಚಶಿಖರ ಸಂವಾದ
ಜನಕರಾಜನನ್ನು ಪರೀಕ್ಷಿಸುವ ಸಲುವಾಗಿ ಬಂದ ಸುಲಭೆಯು ಜನಕನ ಶರೀರದಲ್ಲಿ ಪ್ರವೇಶಿಸಿದುದು : ಜನಕರಾಜನು ಅವಳ ಮೇಲೆ ದೋಷಾರೋಪಣೆ ಮಾಡಿದುದು : ಸುಲಭೆಯು ಯುಕ್ತಿಯುಕ್ತವಾಗಿ ಜನಕನು ಮಾಡಿದ ಆಪಾದನೆಗಳನ್ನು ನಿರಾಕರಿಸುತ್ತಾ ಅವನನ್ನು ಅಜ್ಞಾನಿಯೆಂದು ಪ್ರತಿಪಾದಿಸಿದುದು
ಜನಕರಾಜನಿಂದ ಶುಕನಿಗೆ ಸತ್ಕಾರ : ಜನಕನು ಶುಕನ ಪ್ರಶ್ನೆಗೆ ಉತ್ತರಿಸುತ್ತಾ ಬ್ರಹ್ಮಚರ್ಯಾಶ್ರಮದಲ್ಲಿ ಪರಮಾತ್ಮಪ್ರಾಪ್ತಿಯಾದ ಬಳಿಕ ಉಳಿದ ಮೂರು ಆಶ್ರಮಗಳ ಅವಶ್ಯಕತೆಯಿಲ್ಲವೆಂದು ಪ್ರತಿಪಾದಿಸಿ ಮುಕ್ತಪುರುಷನ ಲಕ್ಷಣಗಳನ್ನು ತಿಳಿಸಿದುದು
ತಂದೆಯ ಬಳಿಗೆ ಶುಕದೇವನ ಪ್ರತ್ಯಾಗಮನ : ವ್ಯಾಸರಿಂದ ಶಿಷ್ಯರಿಗೆ ಸ್ವಾಧ್ಯಾಯದ ವಿಧಿಯ ಉಪದೇಶ
ಶಿಷ್ಯರೆಲ್ಲರೂ ಹೊರಟುಹೋದನಂತರ ವ್ಯಾಸರ ಆಶ್ರಮಕ್ಕೆ ನಾರದರ ಆಗಮನ : ವೇದಪಾರಾಯಣಕ್ಕಾಗಿ ನಾರದರಿಂದ ಪ್ರಚೋದನೆ : ವ್ಯಾಸರಿಂದ ಶುಕನಿಗೆ ಪ್ರವಹವೇ ಮೊದಲಾದ ಏಳು ವಾಯುಗಳ ಪರಿಚಯ
ನಾರದರಿಂದ ಶುಕನಿಗೆ ವೈರಾಗ್ಯದ ಮತ್ತು ಜ್ಞಾನದ ಉಪದೇಶ
ನಾರದರಿಂದ ಶುಕನಿಗೆ ಸದಾಚಾರ-ಅಧ್ಯಾತ್ಮವಿಷಯಗಳ ಉಪದೇಶ
ನಾರದರಿಂದ ಶುಕನಿಗೆ ಕರ್ಮಫಲಪ್ರಾಪ್ತಿಯಲ್ಲಿ ಅಸ್ವಾತಂತ್ರ್ಯದ ನಿರೂಪಣೆ : ಸೂರ್ಯಮಂಡಲದ ಮಾರ್ಗವಾಗಿ ಪರಮಪದಕ್ಕೆ ಹೋಗಲು ಶುಕನ ನಿರ್ಧಾರ
ನಾರದರಿಂದ ಶ್ವೇತದ್ವೀಪದ ದರ್ಶನ : ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ : ಉಪರಿಚರವಸುವಿನ ಚರಿತ್ರೆ : ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ
ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ : ಏಕತನೇ ಮೊದಲಾದ ಋಷಿಗಳು ಶ್ವೇತದ್ವೀಪದ ಮತ್ತು ಭಗವಂತನ ಮಹಿಮೆಯನ್ನು ಹೇಳಿ ಬೃಹಸ್ಪತಿಯನ್ನು ಸಮಾಧಾನಗೊಳಿಸಿದುದು
ಯಜ್ಞದಲ್ಲಿ ಹೋಮಕ್ಕಾಗಿ ಉಪಯೋಗಿಸಬೇಕಾದ ‘ಆಜ್ಯ’ ಶಬ್ದದ ಅರ್ಥ ‘ಧಾನ್ಯಬೀಜ’ ಎಂದೇ ಹೊರತು ಆಡಲ್ಲ–ಎಂಬ ವಿಷಯವು ತಿಳಿದಿದ್ದರೂ ಉಪರಿಚರವಸುವು ಪಕ್ಷಪಾತವನ್ನು ತೋರಿದನಾದ ಕಾರಣ ಸ್ವರ್ಗದಿಂದ ಭ್ರಷ್ಟನಾದುದು : ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು
ನಾರದಕೃತ ಭಗವನ್ನಾಮಸ್ತೋತ್ರ
ಶ್ವೇತದ್ವೀಪದಲ್ಲಿ ನಾರದರಿಗೆ ಭಗವಂತನ ದರ್ಶನ : ಭಗವಂತನಿಂದ ವಾಸುದೇವ-ಸಂಕರ್ಷಣಾದಿ ವ್ಯೂಹ ರೂಪಗಳ ಪರಿಚಯ : ಭವಿಷ್ಯದಲ್ಲಿ ಆಗುವ ಅವತಾರಗಳ ಸೂಚನೆ : ಕಥಾಶ್ರವಣದ ಮಹಿಮೆ
ಭಗವಂತನು ಬ್ರಹ್ಮಾದಿಗಳಿಗೆ ಉಪದೇಶಿಸಿದ ಪ್ರವೃತ್ತಿ ಮತ್ತು ನಿವೃತ್ತಿಧರ್ಮಗಳ ರಹಸ್ಯವನ್ನು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದುದು
ಶ್ರೀಕೃಷ್ಣನು ಅರ್ಜುನನೊಡನೆ ತನ್ನ ಪ್ರಭಾವವನ್ನು ತಿಳಿಸುತ್ತಾ ತನ್ನ ನಾಮಧೇಯಗಳ ವ್ಯುತ್ಪತ್ತಿಯನ್ನೂ ಮತ್ತು ಮಾಹಾತ್ಮ್ಯವನ್ನೂ ಹೇಳಿದುದು
ಶ್ರೀಕೃಷ್ಣನಿಂದ ಸೃಷ್ಟಿಯ ಪ್ರಾರಂಭದ ವರ್ಣನೆ : ಬ್ರಾಹ್ಮಣರ ಮಹಿಮಾರೂಪವಾದ ಅನೇಕ ಕಥೆಗಳ ಉಲ್ಲೇಖ : ರುದ್ರ-ನಾರಾಯಣರ ಯುದ್ಧದಲ್ಲಿ ನಾರಾಯಣನ ವಿಜಯ
ದೇವರ್ಷಿಗಳಾದ ನಾರದರು ಶ್ವೇತದ್ವೀಪಕ್ಕೆ ಹೋಗಿ ನರ-ನಾರಾಯಣರನ್ನು ಸಂಧಿಸಿದುದು : ಅಲ್ಲಿಯ ಮಹತ್ತ್ವ ಪೂರ್ಣದೃಶ್ಯಗಳ ವರ್ಣನೆ