ಶ್ರೀಕೃಷ್ಣನು ಭೀಷ್ಮ-ದ್ರೋಣರ ಪರಾಕ್ರಮವರ್ಣನೆಯನ್ನು ಮಾಡುವುದರ ಮೂಲಕ ಅರ್ಜುನನ ಬಲದ ಪ್ರಶಂಸೆಯನ್ನು ಮಾಡುತ್ತಾ ದುರ್ಯೋಧನನು ಮಾಡಿದ ಅನ್ಯಾಯಗಳನ್ನು ಸ್ಮರಣೆಗೆ ತಂದುದು : ಕರ್ಣನ ವಧೆಮಾಡಲು ಅರ್ಜುನನನ್ನು ಉತ್ತೇಜಿಸಿದುದು
ಅರ್ಜುನನ ವೀರೋಚಿತವಾದ ಮಾತುಗಳು
ಎರಡು ಪಕ್ಷಗಳ ಸೈನ್ಯಗಳ ನಡುವೆ ದ್ವಂದ್ವಯುದ್ಧ : ಸುಷೇಣನ ವಧೆ
ಭೀಮಸೇನನಿಗೂ ಮತ್ತು ಸಾರಥಿಯಾದ ವಿಶೋಕನಿಗೂ ನಡೆದ ಸಂಭಾಷಣೆ
ಭೀಮಾರ್ಜುನರಿಬ್ಬರೂ ಕೌರವರ ಸೈನ್ಯವನ್ನು ಸಂಹರಿಸಿದುದು : ಭೀಮನು ಶಕುನಿಯನ್ನು ಪರಾಜಯಗೊಳಿಸಿದುದು ದುರ್ಯೋಧನನೇ ಮೊದಲಾದ ಧೃತರಾಷ್ಟ್ರನ ಮಕ್ಕಳು ಸೇನಾಸಹಿತರಾಗಿ ಪಲಾಯನ ಮಾಡಿ ಕರ್ಣನ ಆಶ್ರಯವನ್ನು ಪಡೆದುದು
ಕರ್ಣನು ಪಾಂಡವರ ಸೈನ್ಯವನ್ನು ಸಂಹಾರಮಾಡಿದುದು : ಅಳಿದುಳಿದವರ ಪಲಾಯನ
ಅರ್ಜುನನು ಕೌರವಸೈನಿಕರನ್ನು ಸಂಹರಿಸಿ ರಕ್ತದ ನದಿಯನ್ನೇ ಹರಿಸಿದುದು : ರಥವನ್ನು ಕರ್ಣನ ಬಳಿಗೆ ಒಯ್ಯುವಂತೆ ಶ್ರೀಕೃಷ್ಣನಿಗೆ ಹೇಳಿದುದು : ಕೃಷ್ಣಾರ್ಜುನರು ತಮ್ಮ ಸಮೀಪಕ್ಕೆ ಬರುತ್ತಿರುವುದನ್ನು ನೋಡಿದ ಕರ್ಣ-ಶಲ್ಯರ ಸಂಭಾಷಣೆ : ಅರ್ಜುನನು ಕೌರವರ ಸೈನ್ಯವನ್ನು ಧ್ವಂಸ ಮಾಡಿದುದು
ಅರ್ಜುನನು ಕೌರವರ ಸೈನ್ಯವನ್ನು ನಾಶಗೊಳಿಸಿ ಮುನ್ನುಗ್ಗಿದುದು
ಧೃತರಾಷ್ಟ್ರನ ಹತ್ತು ಮಕ್ಕಳ ವಧೆ : ಕರ್ಣನ ಭಯ : ಶಲ್ಯನು ಸಮಾಧಾನಹೇಳಿದುದು : ನಕುಲ-ವೃಷಸೇನರ ಯುದ್ಧ
ಕೌರವಯೋಧರು ಕುಲಿಂದರಾಜನ ಮಕ್ಕಳನ್ನು ಸಂಹರಿಸಿದುದು : ಅರ್ಜುನನು ವೃಷಸೇನನನ್ನು ಸಂಹರಿಸಿದುದು
ಕರ್ಣನೊಡನೆ ಯುದ್ಧಮಾಡುವ ವಿಷಯವಾಗಿ ಕೃಷ್ಣಾರ್ಜುನರ ಸಮಾಲೋಚನೆ : ಅರ್ಜುನನು ಕರ್ಣನನ್ನು ಎದುರಿಸಿದುದು
ಕರ್ಣಾರ್ಜುನರು ದ್ವೈರಥಯುದ್ಧಕ್ಕೆ ಸಜ್ಜಾಗಿ ನಿಂತುದು : ಅವರ ಜಯಾಪಜಯಗಳ ವಿಷಯದಲ್ಲಿ ಪ್ರಾಣಿಮಾತ್ರಕ್ಕೇ ಸಂಶಯವುಂಟಾದುದು : ಬ್ರಹ್ಮ ಮತ್ತು ಮಹೇಶ್ವರರಿಂದ ಅರ್ಜುನನ ವಿಜಯಘೋಷಣೆ : ಕರ್ಣ-ಶಲ್ಯರ ಮತ್ತು ಕೃಷ್ಣಾರ್ಜುನರ ಸಂಭಾಷಣೆ
ಧೃತರಾಷ್ಟ್ರರಾಜನ ವಿಲಾಪ : ಸಂಜಯನಿಂದ ಯುದ್ಧದ ವೃತ್ತಾಂತವನ್ನು ಕೇಳಿದುದು
ಕರ್ಣನ ವಧೆಯಾದನಂತರ ಕೌರವಸೈನ್ಯದ ಪಲಾಯನ : ಭೀಮಸೇನನು ಇಪ್ಪತ್ತೈದು ಸಾವಿರ ಪದಾತಿಸೈನಿಕರನ್ನು ಸಂಹರಿಸಿದುದು : ದುರ್ಯೋಧನನು ತನ್ನ ಸೈನಿಕರನ್ನು ಸಮಾಧಾನಗೊಳಿಸಿ ಪುನಃ ಅವರನ್ನು ಪಾಂಡವರೊಡನೆ ಯುದ್ಧದಲ್ಲಿ ತೊಡಗಿಸಿದುದು
ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ಕೃಪರು ದುರ್ಯೋಧನನಿಗೆ ಸಲಹೆ ನೀಡಿದುದು