Volume 11: Udyoga Parva

ಪರಿವಿಡಿ:

ಭಗವದ್ಯಾನಪರ್ವ – ಸೈನ್ಯನಿರ್ಯಾಣಪರ್ವ – ಉಲೂಕದೂತಾಗಮನಪರ್ವ – ರಥಾತಿರಥಸಂಖ್ಯಾನಪರ್ವ – ಅಮ್ಬೋಪಾಖ್ಯಾನಪರ್ವ

ಭಗವದ್ಯಾನಪರ್ವ

  • ಗಾಲವ-ಗರುಡರು ಋಷಭಪರ್ವತಕ್ಕೆ ಹೋದುದು : ಅಲ್ಲಿ ತಪಸ್ವಿನಿಯಾದ ಶಾಂಡಿಲಿಯ ಸಂದರ್ಶನ : ಗಾಲವನು ಕೊಡಬೇಕಾಗಿದ್ದ ಗುರುದಕ್ಷಿಣೆಯ ವಿಷಯವಾಗಿ ಪರಸ್ಪರ ಸಂಭಾಷಣೆ
  • ಗರುಡ-ಗಾಲವರು ಯಯಾತಿರಾಜನ ಬಳಿಗೆ ಹೋಗಿ ಕಪ್ಪುಕಿವಿಗಳುಳ್ಳ ಕುದುರೆಗಳನ್ನು ಯಾಚಿಸಿದುದು
  • ಯಯಾತಿಯು ಗಾಲವನಿಗೆ ತನ್ನ ಮಗಳನ್ನೇ ಸಮರ್ಪಿಸಿದುದು : ಗಾಲವನು ಅವಳನ್ನು ಕರೆದುಕೊಂಡು ಅಯೋಧ್ಯೆಯ ರಾಜನ ಬಳಿಗೆ ಪ್ರಯಾಣಮಾಡಿದುದು
  • ಹರ್ಯಶ್ವನು ಎರಡು ನೂರು ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಟ್ಟು ಮಾಧವಿಯಲ್ಲಿ ವಸುಮನಸನನ್ನು ಪಡೆದು ಪುನಃ ಗಾಲವನಿಗೆ ಮಾಧವಿಯನ್ನು ಹಿಂದಿರುಗಿಸಿದುದು : ಮಾಧವಿಯೊಡನೆ ಗಾಲವನ ಪ್ರಯಾಣ
  • ದಿವೋದಾಸನು ಗಾಲವನಿಗೆ ಕನ್ಯಾಶುಲ್ಕವಾಗಿ ಎರಡು ನೂರು ಕುದುರೆಗಳನ್ನು ಕೊಟ್ಟು ಯಯಾತಿಯ ಮಗಳಾದ ಮಾಧವಿಯಲ್ಲಿ ಪ್ರತರ್ದನನೆಂಬ ಸುಪುತ್ರನನ್ನು ಪಡೆದುಕೊಂಡುದು
  • ಉಶೀನರನು ಕನ್ಯಾಶುಲ್ಕವನ್ನು ಕೊಟ್ಟು ಮಾಧವಿಯನ್ನು ಪರಿಗ್ರಹಿಸಿ ಶಿಬಿ ಎಂಬ ಪುತ್ರನನ್ನು ಪಡೆದುದು : ಗಾಲವನು ಮಾಧವಿಯೊಡನೆ ಹೋಗುತ್ತಿರಲಾಗಿ ಮಾರ್ಗದಲ್ಲಿ ಪುನಃ ಗರುಡನನ್ನು ಕಂಡುದು
  • ಗಾಲವನು ಆರುನೂರು ಕುದುರೆಗಳೊಡನೆ ಮಾಧವಿಯನ್ನೂ ವಿಶ್ವಾಮಿತ್ರನಿಗರ್ಪಿಸಿದುದು : ವಿಶ್ವಾಮಿತ್ರನು ಅವಳಲ್ಲಿ ಅಷ್ಟಕನೆಂಬ ಪುತ್ರನನ್ನು ಪಡೆದುದು : ಅನಂತರದಲ್ಲಿ ಮಾಧವಿಯು ಪುನಃ ಕನ್ಯಾವಸ್ಥೆಯನ್ನು ಹೊಂದಿ ಯಯಾತಿಯ ಬಳಿಗೆ ಸಾರಿದುದು
  • ಮಾಧವಿಯು ಅರಣ್ಯಕ್ಕೆ ಹೋಗಿ ತಪಸ್ಸು ಮಾಡಿದುದು : ಯಯಾತಿಯು ಕಾಲಾನಂತರದಲ್ಲಿ ಸ್ವರ್ಗಕ್ಕೆ ಹೋಗಿ ಅಲ್ಲಿ ಅನೇಕವರ್ಷಗಳವರೆಗೆ ಸುಖೋಪಭೋಗಗಳನ್ನನುಭವಿಸುತ್ತಿದ್ದು ಒಮ್ಮೆ ಮೋಹವಶನಾಗಿ ತೇಜೋಹೀನನಾದುದು
  • ಯಯಾತಿಯು ಸ್ವರ್ಗದಿಂದ ಕೆಳಕ್ಕೆ ಬಿದ್ದುದು : ಅವನ ದೌಹಿತ್ರರು, ಮಗಳು ಮಾಧವೀ ಮತ್ತು ಗಾಲವ-ಎಲ್ಲರೂ ತಮ್ಮ ತಮ್ಮ ಪುಣ್ಯಗಳನ್ನು ಧಾರೆಯೆರೆದುಕೊಡಲು ಒಪ್ಪಿದುದು
  • ಸತ್ಸಂಗದಿಂದಲೂ, ದೌಹಿತ್ರರು ಮಾಡಿದ ಪುಣ್ಯದ ದಾನದಿಂದಲೂ ಯಯಾತಿಯು ಪುನಃ ಸ್ವರ್ಗಾರೋಹಣ ಮಾಡಿದುದು
  • ಸ್ವರ್ಗವಾಸಿಗಳಿಂದ ಯಯಾತಿಗೆ ಸ್ವಾಗತ : ಸ್ವಾಭಿಮಾನವೇ ಪತನಕ್ಕೆ ಕಾರಣವಾಯಿತೆಂದು ಬ್ರಹ್ಮನು ಯಯಾತಿಗೆ ಹೇಳಿದುದು : ಕಥೆಯನ್ನು ಮುಗಿಸಿ ನಾರದರು ದುರ್ಯೋಧನನಿಗೆ ಸಮಾಧಾನವನ್ನು ಹೇಳಿದುದು
  • ಧೃತರಾಷ್ಟ್ರನು ಅನುರೋಧದಿಂದ ಭಗವಾನ್‍ ಶ್ರೀಕೃಷ್ಣನು ದುರ್ಯೋಧನನಿಗೆ ವಿವೇಕವನ್ನು ಹೇಳಿದುದು
  • ಭೀಷ್ಮ-ದ್ರೋಣ-ವಿದುರ-ಧೃತರಾಷ್ಟ್ರರು ದುರ್ಯೋಧನನನ್ನು ಸಮಾಧಾನಪಡಿಸಿದುದು
  • ಭೀಷ್ಮ-ದ್ರೋಣರು ಪುನಃ ದುರ್ಯೋಧನನನ್ನು ಸಮಾಧಾನಗೊಳಿಸಲು ಯತ್ನಿಸಿದುದು
  • ಶ್ರೀಕೃಷ್ಣನಿಗೆ ದುರ್ಯೋಧನನ ಉತ್ತರ : ದುರ್ಯೋಧನನು ಪಾಂಡವರಿಗೆ ರಾಜ್ಯವನ್ನು ಕೊಡುವುದಿಲ್ಲವೆಂದು ನಿಶ್ಚಯಿಸಿದುದು
  • ಶ್ರೀಕೃಷ್ಣನು ದುರ್ಯೋಧನನನ್ನು ನಿಂದಿಸಿದುದು : ಅಸಹನಶೀಲನಾದ ದುರ್ಯೋಧನನ ಸಭಾತ್ಯಾಗ : ಶ್ರೀಕೃಷ್ಣನನ್ನು ಬಂಧಿಸುವ ಯೋಜನೆ
  • ಧೃತರಾಷ್ಟ್ರನು ಗಾಂಧಾರಿಗೆ ಹೇಳಿಕಳುಹಿಸಿದುದು : ಗಾಂಧಾರಿಯು ದುರ್ಯೋಧನನನ್ನು ಸನ್ಮಾರ್ಗಕ್ಕೆ ತರಲು ಯತ್ನಿಸಿದುದು
  • ದುರ್ಯೋಧನನ ಷಡ್ಯಂತ್ರವನ್ನು ಸಾತ್ಯಕಿಯು ಭೇದಿಸಿದುದು : ಶ್ರೀಕೃಷ್ಣನ ಸಿಂಹಗರ್ಜನೆ : ಧೃತರಾಷ್ಟ್ರ-ವಿದುರರು ಪುನಃ ದುರ್ಯೋಧನನನ್ನು ಸಮಾಧಾನಗೊಳಿಸಿದುದು
  • ಶ್ರೀಕೃಷ್ಣನು ವಿಶ್ವರೂಪದರ್ಶನವನ್ನು ತೋರಿಸಿ ಕೌರವರ ಸಭಾಭವನದಿಂದ ಹೊರಟುದು
  • ಕುಂತೀದೇವಿಯು ಶ್ರೀಕೃಷ್ಣನ ಮೂಲಕವಾಗಿ ಮಕ್ಕಳಿಗೆ ಕಳುಹಿಸಿಕೊಟ್ಟ ಸಂದೇಶ
  • ವಿದುಲೋಪಾಖ್ಯಾನ : ರಣಾಂಗಣದಿಂದ ಭಯಗೊಂಡು ಹಿಂದಿರುಗಿಬಂದ ಮಗನನ್ನು ವಿದುಲೆಯು ನಿಂದಿಸಿ ಪುನಃ ಯುದ್ಧಮಾಡಲು ಪ್ರೋತ್ಸಾಹಿಸಿದುದು
  • ವಿದುಲೆಯು ಮಗನನ್ನು ಯುದ್ಧಮಾಡಲು ಪ್ರೋತ್ಸಾಹಿಸಿದುದು
  • ವಿದುಲಾ-ಸಂಜಯರ ಸಂವಾದ : ವಿದುಲೆಯು ಕಾರ್ಯಸಿದ್ಧಿಯ ಮತ್ತು ಶತ್ರುನಿರ್ಮೂಲನದ ಉಪಾಯವನ್ನು ಸಂಜಯನಿಗೆ ಹೇಳಿದುದು
  • ವಿದುಲೆಯ ಉಪದೇಶದಿಂದ ಸಂಜಯನು ಯುದ್ಧಸನ್ನದ್ಧನಾದುದು
  • ಕುಂತಿಯು ಶ್ರೀಕೃಷ್ಣನ ಮೂಲಕ ಪಾಂಡವರಿಗೆ ಸಂದೇಶಗಳನ್ನು ಕಳುಹಿಸಿದುದು : ಉಪಪ್ಲಾವ್ಯಕ್ಕೆ ಶ್ರೀಕೃಷ್ಣನ ಪ್ರಯಾಣ
  • ಭೀಷ್ಮ-ದ್ರೋಣರು ಪುನಃ ದುರ್ಯೋಧನನನ್ನು ಸಮಾಧಾನಪಡಿಸಲು ಯತ್ನಿಸಿದುದು
  • ಭೀಷ್ಮನು ದುರ್ಯೋಧನನಿಗೆ ಸಮಾಧಾನವನ್ನು ಹೇಳುತ್ತಿದ್ದಂತೆಯೇ ದ್ರೋಣರೂ ಪಾಂಡವರೊಡನೆ ಸಂಧಾನ ಮಾಡಿಕೊಳ್ಳುವಂತೆ ಹೇಳಿದುದು
  • ಶ್ರೀಕೃಷ್ಣನು ಕರ್ಣನನ್ನು ಪಾಂಡವರ ಪಕ್ಷಕ್ಕೆ ಸೇರುವಂತೆ ಪ್ರೋತ್ಸಾಹಿಸಿದುದು
  • ಕರ್ಣನು ದುರ್ಯೋಧನನ ಪಕ್ಷದಲ್ಲಿಯೇ ಇರಲು ನಿಶ್ಚಯಿಸಿದುದು : ಮುಂಬರುವ ಯುದ್ಧದ ವರ್ಣನೆ
  • ಶ್ರೀಕೃಷ್ಣನು ಪಾಂಡವರಿಗೆ ವಿಜಯವಾಗುವುದೆಂಬ ವಿಷಯವನ್ನು ಸಮರ್ಥಿಸಿದುದು
  • ಕರ್ಣನು ಪಾಂಡವರಿಗೆ ಸಂಭವಿಸುತ್ತಿರುವ ವಿಜಯಸೂಚಕವಾದ ಶಕುನಗಳನ್ನೂ ಕೌರವರಿಗಾಗುತ್ತಿರುವ ದುರ್ನಿಮಿತ್ತಗಳನ್ನೂ ಮತ್ತು ತನಗಾದ ಕನಸನ್ನೂ ವಾಸುದೇವನಿಗೆ ವಿವರಿಸಿ ಹೇಳಿದುದು
  • ವಿದುರನ ಮಾತನ್ನು ಕೇಳಿದ ಕುಂತಿಯು ಯುದ್ಧದ ದುಷ್ಪರಿಣಾಮಗಳನ್ನು ನೆನೆದು ವಿಹ್ವಲಳಾಗಿ ಬಹುವಾಗಿ ಯೋಚಿಸಿ ಅನಂತರದಲ್ಲಿ ಕರ್ಣನ ಸಮೀಪಕ್ಕೆ ಹೋದುದು
  • ಕುಂತಿಯು ಕರ್ಣನ ಜನ್ಮರಹಸ್ಯವನ್ನು ತಿಳಿಸಿ ಪಾಂಡವರ ಕಡೆಗೆ ಸೇರಿಕೊಳ್ಳುವಂತೆ ಅವನನ್ನು ಬಲಾತ್ಕರಿಸಿದುದು
  • ಕರ್ಣನು ಕುಂತಿಗೆ ಯಥೋಚಿತವಾಗಿ ಉತ್ತರಿಸಿದುದು : ಅರ್ಜುನನೊಬ್ಬನನ್ನು ಬಿಟ್ಟು ಉಳಿದ ಪಾಂಡವರನ್ನು ಕೊಲ್ಲುವುದಿಲ್ಲವೆಂದು ಕರ್ಣನು ಕುಂತಿಗೆ ಆಶ್ವಾಸನೆಯನ್ನಿತ್ತುದು
  • ಯುಧಿಷ್ಠಿರನಿಗೆ ಶ್ರೀಕೃಷ್ಣನು ಕೌರವಸಭೆಯಲ್ಲಾದ ಸಂಗತಿಗಳನ್ನು ವಿವರಿಸಿ ಹೇಳಿದುದು
  • ದ್ರೋಣರೂ, ವಿದುರನೂ ಮತ್ತು ಗಾಂಧಾರಿಯೂ ದುರ್ಯೋಧನನಿಗೆ ಹೇಳಿದ ಯುಕ್ತಿಯುಕ್ತವಾದ ಮಾತುಗಳನ್ನು ಶ್ರೀಕೃಷ್ಣನು ಯುಧಿಷ್ಠಿರನಿಗೆ ತಿಳಿಸಿದುದು
  • ಧೃತರಾಷ್ಟ್ರನ ಯುಕ್ತಿಯುಕ್ತವಾದ ಮಾತುಗಳನ್ನು ದುರ್ಯೋಧನನಿಗೆ ಹೇಳಿದುದು : ಪಾಂಡವರಿಗೆ ಅರ್ಧರಾಜ್ಯವನ್ನು ಕೊಡುವಂತೆ ಆದೇಶ ನೀಡಿದುದು
  • ಶ್ರೀಕೃಷ್ಣನು ಕೌರವರ ವಿಷಯದಲ್ಲಿ ಸಾಮ-ದಾನ-ಭೇದೋಪಾಯಗಳು ಸಲ್ಲವೆಂದೂ–ದಂಡೋಪಾಯವೊಂದೇ ಉಚಿತವೆಂದೂ ಪಾಂಡವರಿಗೆ ಸಲಹೆ ನೀಡಿದುದು

ಸೈನ್ಯನಿರ್ಯಾಣಪರ್ವ

  • ಪಾಂಡವರು ತಮ್ಮ ಕಡೆಯ ಅಕ್ಷೌಹಿಣೀಪತಿಗಳನ್ನೂ ಪ್ರಧಾನಸೇನಾಪತಿಯನ್ನೂ ಚುನಾಯಿಸಿದುದು : ಪಾಂಡವರ ಸೇನೆಯು ಕುರುಕ್ಷೇತ್ರವನ್ನು ಪ್ರವೇಶಿಸಿದುದು
  • ಕುರುಕ್ಷೇತ್ರದಲ್ಲಿ ಪಾಂಡವರ ಶಿಬಿರಗಳ ನಿರ್ಮಾಣ
  • ದುರ್ಯೋಧನನು ಸೇನೆಯನ್ನು ಸಜ್ಜುಗೊಳಿಸಿದುದು : ಶಿಬಿರನಿರ್ಮಾಣಕ್ಕೆ ಆಜ್ಞೆ ನೀಡಿದುದು : ರಣಯಾತ್ರೆಗಾಗಿ ಸೈನಿಕರ ಸಿದ್ಧತೆ
  • ಸಮಯೋಚಿತವಾದ ಕರ್ತವ್ಯದ ವಿಷಯವಾಗಿ ಪ್ರಶ್ನಿಸಿದ ಯುಧಿಷ್ಠಿರನಿಗೆ ಶ್ರೀಕೃಷ್ಣನು ಯುದ್ಧಮಾಡುವುದೇ ಪ್ರಕೃತ ಮುಖ್ಯಕರ್ತವ್ಯವೆಂದು ಹೇಳಿದುದು : ಯುದ್ಧದ ವಿಷಯದಲ್ಲಿ ಯುಧಿಷ್ಠಿರನ ಸಂತಾಪ : ಅರ್ಜುನನು ಶ್ರೀಕೃಷ್ಣನ ಮಾತನ್ನು ಸಮರ್ಥಿಸಿದುದು
  • ದುರ್ಯೋಧನನು ತನ್ನ ಸೈನ್ಯದ ವಿಭಜನೆ ಮಾಡಿದುದು : ಒಂದೊಂದು ಅಕ್ಷೌಹಿಣಿಗೂ ಸೇನಾಮುಖ್ಯರನ್ನು ಆರಿಸಿ ಅವರಿಗೆ ಪಟ್ಟಗಟ್ಟಿದುದು
  • ದುರ್ಯೋಧನನು ಭೀಷ್ಮನನ್ನು ಅಖಿಲಸೇನೆಯ ದಂಡನಾಯಕನನ್ನಾಗಿ ಮಾಡಿಕೊಂಡುದು : ಅನಂತರ ಕುರುಕ್ಷೇತ್ರಕ್ಕೆ ಹೋಗಿ ಶಿಬಿರಗಳನ್ನು ನಿರ್ಮಾಣಮಾಡಿದುದು
  • ಯುಧಿಷ್ಠಿರನೂ ಏಳು ಅಕ್ಷೌಹಿಣೀ ಸೈನ್ಯಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ದಳಪತಿಗಳನ್ನು ನಿಯಮಿಸಿ ಅವರಿಗೆ ಪಟ್ಟಾಭಿಷೇಕ ಮಾಡಿದುದು : ಬಲರಾಮನ ಆಗಮನ : ಬಲರಾಮನು ಪಾಂಡವರನ್ನು ಹರಸಿ ತೀರ್ಥಯಾತ್ರೆಗೆ ಪ್ರಯಾಣ ಮಾಡಿದುದು
  • ರುಕ್ಮಿಯು ಪಾಂಡವರಿಗೆ ಸಹಾಯಮಾಡುವ ಆಶಯದಿಂದ ಸೈನ್ಯಸಮೇತನಾಗಿ ಬಂದುದು : ಪಾಂಡವ-ಕೌರವರಿಬ್ಬರಿಂದಲೂ ಪುರಸ್ಕಾರವು ಸಿಕ್ಕದೇ ಹಿಂದಿರುಗಿದುದು
  • ಧೃತರಾಷ್ಟ್ರ-ಸಂಜಯರ ಸಂವಾದ

ಉಲೂಕದೂತಾಗಮನಪರ್ವ

  • ದುರ್ಯೋಧನನು ಉಲೂಕನನ್ನು ಪಾಂಡವರಲ್ಲಿಗೆ ದೂತನನ್ನಾಗಿ ಕಳುಹಿಸಿದುದು
  • ಉಲೂಕನು ಪಾಂಡವರ ಶಿಬಿರಕ್ಕೆ ಹೋಗಿ ದುರ್ಯೋಧನನ ಸಂದೇಶವನ್ನು ತಿಳಿಯಪಡಿಸಿದುದು
  • ಪಾಂಡವರು ದುರ್ಯೋಧನನ ಸಂದೇಶಕ್ಕೆ ಉತ್ತರವನ್ನು ಉಲೂಕನ ಮೂಲಕ ಹೇಳಿಕಳುಹಿಸಿದುದು
  • ಪಂಚಪಾಂಡವರು, ವಿರಾಟ, ದ್ರುಪದ, ಶಿಖಂಡೀ ಮತ್ತು ಧೃಷ್ಟದ್ಯುಮ್ನ–ಇವರೆಲ್ಲರ ಸಂದೇಶಗಳನ್ನೂ ಹೊತ್ತು ಉಲೂಕನು ಹಿಂದಿರುಗಿದುದು : ದುರ್ಯೋಧನನು ಯುದ್ಧಕ್ಕೆ ಸಿದ್ಧರಾಗುವಂತೆ ಸೈನಿಕರಿಗೆ ಆಜ್ಞೆಯಿತ್ತುದು
  • ಪಾಂಡವರ ಸೈನ್ಯವು ಯುದ್ಧಭೂಮಿಗೆ ಆಗಮಿಸಿದುದು : ತಮ್ಮ-ತಮ್ಮ ಯೋಗ್ಯರಾದ ಪ್ರತಿಪಕ್ಷಿಗಳನ್ನಾರಿಸಿಕೊಳ್ಳುವಂತೆ ಧೃಷ್ಟದ್ಯುಮ್ನನು ತನ್ನ ಕಡೆಯವರಿಗೆ ನಿರ್ದೇಶಿಸಿದುದು

ರಥಾತಿರಥಸಂಖ್ಯಾನಪರ್ವ

  • ಭೀಷ್ಮನು ದುರ್ಯೋಧನನ ಅಪೇಕ್ಷೆಯಂತೆ ಕೌರವಪಕ್ಷದಲ್ಲಿದ್ದ ರಥರ ಮತ್ತು ಅತಿರಥರ ಪರಿಚಯವನ್ನು ಮಾಡಿಕೊಟ್ಟುದು
  • ಭೀಷ್ಮನು-ಕೌರವರ ಪಕ್ಷದ ರಥಾತಿರಥರನ್ನು ದುರ್ಯೋಧನನಿಗೆ ವಿವರಿಸಿ ಹೇಳಿದುದು
  • ಕೌರವಪಕ್ಷದ ರಥಾತಿರಥ-ಮಹಾರಥರ ವರ್ಣನೆ
  • ಕೌರವಪಕ್ಷದ ರಥಾತಿರಥರ ವರ್ಣನೆ : ಕರ್ಣ ಮತ್ತು ಭೀಷ್ಮರ ರೋಷಪೂರ್ವಕವಾದ ಸಂವಾದ ದುರ್ಯೋಧನನು ಇಬ್ಬರನ್ನೂ ಸಮಾಧಾನಪಡಿಸಿದುದು
  • ಪಾಂಡವಪಕ್ಷದ ರಥಾತಿರಥರನ್ನು ಭೀಷ್ಮನು ಹೆಸರಿಸಿದುದು
  • ಭೀಷ್ಮನಿಂದ ಪಾಂಡವಪಕ್ಷದ ರಥಾತಿರಥರ ಕಥನ ಮತ್ತು ವಿರಾಟ ಮತ್ತು ದ್ರುಪದರ ಪ್ರಶಂಸೆ
  • ಪಾಂಡವರ ಪಕ್ಷದ ರಥಾತಿರಥ-ಮಹಾರಥರ ವಿವರಣೆ
  • ಭೀಷ್ಮನು ಪಾಂಡವಪಕ್ಷದ ರಥಾತಿರಥ-ಮಹಾರಥರನ್ನು ವಿವರಿಸಿದುದು : ಪಾಂಡವರನ್ನೂ ಮತ್ತು ಶಿಖಂಡಿಯನ್ನೂ ಸಂಹರಿಸುವುದಿಲ್ಲವೆಂದು ದುರ್ಯೋಧನನಿಗೆ ಸ್ಪಷ್ಟಪಡಿಸಿದುದು

ಅಮ್ಬೋಪಾಖ್ಯಾನಪರ್ವ

  • ಭೀಷ್ಮನು ಶಿಖಂಡಿಯನ್ನು ಕೊಲ್ಲದಿರಲು ಕಾರಣವನ್ನು ತಿಳಿಸಿದುದು : ಕಾಶಿರಾಜನ ಮೂವರು ಕನ್ಯೆಯರನ್ನು ಬಲಪೂರ್ವಕವಾಗಿ ಅಪಹರಿಸಿದುದು
  • ಅಂಬೆಯು ತಾನು ಶಾಲ್ವನನ್ನು ಪ್ರೀತಿಸಿರುವುದಾಗಿ ಹೇಳಿ ಅವನಲ್ಲಿಗೆ ಹೋಗಲು ಭೀಷ್ಮನ ಅನುಮತಿಯನ್ನು ಪ್ರಾರ್ಥಿಸಿದುದು
  • ಅಂಬೆಯು ಶಾಲ್ವನ ಬಳಿಗೆ ಹೋದುದು : ಶಾಲ್ವನು ಅವಳನ್ನು ಪರಿಗ್ರಹಿಸದೇ ತಿರಸ್ಕರಿಸಿದುದು : ಅನಂತರ ಅಂಬೆಯು ತಪಸ್ವಿಗಳ ಆಶ್ರಮಕ್ಕೆ ಹೋದುದು : ಶೈಖಾವತ್ಯ ಮತ್ತು ಅಂಬೆಯರ ಸಂವಾದ
  • ತಪಸ್ವಿಗಳ ಆಶ್ರಮಕ್ಕೆ ರಾಜರ್ಷಿಗಳಾದ ಹೋತ್ರವಾಹನ ಮತ್ತು ಆಕೃತವ್ರಣರು ಆಗಮಿಸಿದುದು : ಅವರೊಡನೆ ಅಂಬೆಯ ಮಾತುಕತೆ
  • ಅಕೃತವ್ರಣ-ಪರಶುರಾಮರು ಅಂಬೆಯೊಡನೆ ಮಾತನಾಡಿದುದು
  • ಅಂಬಾ-ಪರಶುರಾಮರ ಸಂಭಾಷಣೆ : ಅಕೃತವ್ರಣನ ಸಲಹೆ : ಪರಶುರಾಮ ಮತ್ತು ಭೀಷ್ಮರ ಸಂವಾದ : ಯುದ್ಧಕ್ಕಾಗಿ ಕುರುಕ್ಷೇತ್ರಕ್ಕೆ ಭೀಷ್ಮ-ಪರಶುರಾಮರ ಪ್ರಯಾಣ
  • ಪರಶುರಾಮನ ಸಂಕಲ್ಪದಿಂದಲೇ ಸಿದ್ಧವಾದ ರಥದಲ್ಲಿ ಕುಳಿತು ಭೀಷ್ಮನೊಡನೆ ಯುದ್ಧವನ್ನಾರಂಭಿಸಿದುದು
  • ಭೀಷ್ಮ-ಪರಶುರಾಮರ ಘೋರಯುದ್ಧ
  • ಭೀಷ್ಮ-ಪರಶುರಾಮರ ಭಯಂಕರಯುದ್ಧ
  • ಭೀಷ್ಮ-ಪರಶುರಾಮರ ಯುದ್ಧ
  • ಅಷ್ಟವಸುಗಳಿಂದ ಭೀಷ್ಮನು ಪ್ರಸ್ವಾಪನಾಸ್ತ್ರವನ್ನು ಪಡೆದುಕೊಂಡುದು
  • ಭೀಷ್ಮ-ಪರಶುರಾಮರ ಘೋರಯುದ್ಧ : ಶಕ್ತಿ–ಬ್ರಹ್ಮಾಸ್ತ್ರಗಳ ಪ್ರಯೋಗ
  • ದೇವತೆಗಳು ಪ್ರಸ್ವಾಪನಾಸ್ತ್ರಪ್ರಯೋಗವನ್ನು ತಡೆದುದು : ದೇವ-ಪಿತೃಗಳ ಮತ್ತು ಗಂಗಾದೇವಿಯ ನಿರ್ದೇಶದಂತೆ ಪರಶುರಾಮ-ಭೀಷ್ಮರ ಯುದ್ಧಸಮಾಪ್ತಿ
  • ಅಂಬೆಯ ಕಠೋರತಪಸ್ಸು
  • ಅಂಬೆಯು ತನ್ನ ಎರಡನೆಯ ಜನ್ಮದಲ್ಲಿಯೂ ಭೀಷ್ಮನಾಶಕವಾದ ತಪಸ್ಸನ್ನು ಮುಂದುವರಿಸಿದುದು : ಮಹೇಶ್ವರನಿಂದ ವರಪ್ರದಾನ : ಅಂಬೆಯ ಚಿತಾಗ್ನಿಪ್ರವೇಶ
  • ಅಂಬೆಯು ದ್ರುಪದನ ಮಗಳಾಗಿ ಹುಟ್ಟಿದುದು : ಪುತ್ರಾಪೇಕ್ಷಿಗಳಾಗಿದ್ದ ತಂದೆ-ತಾಯಿಗಳು ಹುಟ್ಟಿದ ಮಗಳನ್ನು ಮಗನೆಂದೇ ಪ್ರಸಿದ್ಧಪಡಿಸಿ ಶಿಖಂಡೀ ಎಂದು ನಾಮಕರಣ ಮಾಡಿದುದು
  • ಶಿಖಂಡಿಯ ವಿವಾಹ : ಶಿಖಂಡಿಯು ಹೆಣ್ಣೆಂಬ ಸಮಾಚಾರವನ್ನು ತಿಳಿದ ಮಾವನಾದ ದಶಾರ್ಣರಾಜನು ಕೋಪಗೊಂಡುದು
  • ಹಿರಣ್ಯವರ್ಮನ ಆಕ್ರಮಣದ ಭಯದಿಂದ ವಿಹ್ವಲನಾದ ದ್ರುಪದನು ಪತ್ನಿಯೊಡನೆ ನಿವಾರಣೋಪಾಯವನ್ನು ಸಮಾಲೋಚಿಸಿದುದು
  • ದ್ರುಪದನ ಪ್ರಶ್ನೆಗೆ ದ್ರುಪದಪತ್ನಿಯ ಉತ್ತರ : ದ್ರುಪದನಿಂದ ನಗರದ ರಕ್ಷಣಾವ್ಯವಸ್ಥೆ : ದೇವತಾಪ್ರಾರ್ಥನೆ : ಶಿಖಂಡಿನಿಯು ಅರಣ್ಯಕ್ಕೆ ಹೋಗಿ ಯಕ್ಷನೊಡನೆ ತನ್ನ ದುಃಖವನ್ನು ತೋಡಿಕೊಂಡುದು
  • ಶಿಖಂಡಿನಿಗೆ ಪುರುಷತ್ವಪ್ರಾಪ್ತಿ : ದ್ರುಪದ ಮತ್ತು ಹಿರಣ್ಯವರ್ಮರು ಪ್ರಸನ್ನರಾದುದು : ಸ್ಥೂಣಾಕರ್ಣನಿಗೆ ಕುಬೇರನ ಶಾಪ : ಭೀಷ್ಮನು ಶಿಖಂಡಿಯನ್ನು ಸಂಹರಿಸುವುದಿಲ್ಲವೆಂದು ಪ್ರತಿಜ್ಞೆಮಾಡಿದುದು
  • ದುರ್ಯೋಧನನು ಪ್ರಶ್ನಿಸಲಾಗಿ ಭೀಷ್ಮಾದಿಗಳು ತಮ್ಮ-ತಮ್ಮ ಶಕ್ತಿ-ಸಾಮರ್ಥ್ಯಗಳನ್ನು ವರ್ಣಿಸಿದುದು
  • ಅರ್ಜುನನ ಮೂಲಕವಾಗಿ ತನ್ನ ಕಡೆಯವರ ಶಕ್ತಿಯ ಪರಿಮಿತಿಯೆಷ್ಟೆಂಬುದನ್ನು ಯುಧಿಷ್ಠಿರನು ತಿಳಿದುಕೊಂಡುದು
  • ಕೌರವಸೇನೆಯ ರಣಪ್ರಸ್ಥಾನ
  • ಪಾಂಡವಸೇನೆಯ ಯುದ್ಧಪ್ರಸ್ಥಾನ
  • ಫಲಶ್ರುತಿ
  • ಪರಿಶಿಷ್ಟ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva