Volume 8: Vanaparva-Virataparva
ಪರಿವಿಡಿ:
ಕುಂಡಲಾಹರಣಪರ್ವ – ಆರಣೀಯಪರ್ವ – ವಿರಾಟಪರ್ವ : ಪಾಣ್ಡವಪ್ರವೇಶಪರ್ವ – ಸಮಯಪಾಲನಪರ್ವ – ಕೀಚಕವಧಪರ್ವ – ಗೋಹರಣಪರ್ವ
ಕುಂಡಲಾಹರಣಪರ್ವ
- ಸ್ವಪ್ನದಲ್ಲಿ ಸೂರ್ಯನು ಕರ್ಣನಿಗೆ ದರ್ಶನವನ್ನಿತ್ತುದು : ಇಂದ್ರನಿಗೆ ಕರ್ಣಕುಂಡಲಗಳನ್ನೂ, ಕವಚವನ್ನೂ ಕೊಡದಂತೆ ಕರ್ಣನನ್ನು ಸೂರ್ಯನು ಪ್ರೇರಿಸಿದುದು : ಕರ್ಣನು ದಾನಕೇಳಿದ ಇಂದ್ರನಿಗೆ ಕವಚವನ್ನೂ, ಕರ್ಣ ಕುಂಡಲಗಳನ್ನೂ ಕೊಡಲು ನಿರ್ಧಾರಮಾಡಿದುದು
- ಇಂದ್ರನಿಗೆ ಕರ್ಣಕುಂಡಲಗಳನ್ನು ಕೊಡದಿರುವಂತೆ ಸೂರ್ಯನಿಂದ ಕರ್ಣನಿಗೆ ಆದೇಶ
- ಕರ್ಣ-ಸೂರ್ಯರ ಸಂವಾದ : ಸೂರ್ಯನ ಆಜ್ಞಾನುಸಾರವಾಗಿ ಕರ್ಣಕುಂಡಲ-ಕವಚಗಳನ್ನು ಶಕ್ತ್ಯಾಯುಧದ ವಿನಿಮಯದಿಂದ ಕೊಡುವುದಾಗಿ ಕರ್ಣನು ನಿಶ್ಚಯಿಸಿದುದು
- ಕುಂತಿಭೋಜನ ಮನೆಗೆ ದುರ್ವಾಸರು ಆಗಮಿಸಿದುದು : ರಾಜನು ಅವರ ಸೇವೆಗಾಗಿ ಕುಂತಿಯನ್ನು ನಿಯಮಿಸಿದುದು
- ಕುಂತೀ ಮತ್ತು ಕುಂತಿಭೋಜರ ಮಾತುಕತೆ : ಕುಂತಿಯು ಮಹರ್ಷಿಗಳ ಸೇವೆಮಾಡಲೊಪ್ಪಿದುದು
- ಕುಂತಿಯ ಸೇವೆಯಿಂದ ಸಂತುಷ್ಟರಾದ ದುರ್ವಾಸ ಮಹರ್ಷಿಗಳು ಅವಳಿಗೆ ಮಂತ್ರೋಪದೇಶಮಾಡಿದುದು
- ಕುಂತಿಯು ಮಂತ್ರಪುನಶ್ಚರಣೆ ಮಾಡಿ ಸೂರ್ಯನನ್ನು ಆಹ್ವಾನಿಸಿದುದು : ಸೂರ್ಯ-ಕುಂತಿಯರ ಸಂವಾದ
- ಸೂರ್ಯ-ಕುಂತಿಯರ ಸಮಾಗಮ : ಕುಂತಿಯು ಗರ್ಭವತಿಯಾದುದು
- ಕರ್ಣನ ಜನ್ಮ : ಕುಂತಿಯು ಮಗುವನ್ನು ಪೆಟ್ಟಿಗೆ ಯಲ್ಲಿಟ್ಟು ತೇಲಿಬಿಟ್ಟುದು : ಕುಂತಿಯ ದುಃಖ
- ಅಧಿರಥನಿಗೆ ಪೆಟ್ಟಿಗೆಯು ಸಿಕ್ಕಿದುದು : ರಾಧೆಯು ಕರ್ಣನನ್ನು ಪಾಲಿಸಿ-ಪೋಷಿಸಿದುದು : ಹಸ್ತಿನಾಪಟ್ಟಣದಲ್ಲಿ ಕರ್ಣನ ವಿದ್ಯಾಭ್ಯಾಸ : ಕರ್ಣನ ಬಳಿಗೆ ಇಂದ್ರನ ಆಗಮನ
- ಇಂದ್ರನು ಕರ್ಣನಿಗೆ ಶಕ್ತ್ಯಾಯುಧವನ್ನು ಕೊಟ್ಟು ಕವಚ-ಕುಂಡಲಗಳನ್ನು ವಿನಿಮಯರೂಪವಾಗಿ ಪಡೆದುದು
ಆರಣೀಯಪರ್ವ
- ಬ್ರಾಹ್ಮಣನ ಅರಣಿ ಮತ್ತು ಮಂಥನದಂಡಗಳನ್ನು ತಂದು ಕೊಡಲು ಪಾಂಡವರು ಜಿಂಕೆಯನ್ನು ಬೆನ್ನಟ್ಟಿದುದು
- ಕುಡಿಯಲು ನೀರುತರಲು ಹೋದ ನಕುಲ-ಸಹದೇವ-ಭೀಮಾರ್ಜುನರು ಸರೋವರದ ಸಮೀಪದಲ್ಲಿ ನಿಶ್ಚೇಷ್ಟರಾಗಿ ಬಿದ್ದುದು
- ಯಕ್ಷನ ಪ್ರಶ್ನೆಗಳಿಗೆ ಯುಧಿಷ್ಠಿರನ ಉತ್ತರ: ಧರ್ಮಜನ ಉತ್ತರದಿಂದ ತೃಪ್ತನಾದ ಯಕ್ಷನು ಭೀಮಾದಿಗಳನ್ನು ಬದುಕಿಸಿದುದು
- ಭೀಮನೇ ಮೊದಲಾದ ನಾಲ್ವರನ್ನೂ ಯಕ್ಷನು ಬದುಕಿಸಿದುದು : ಧರ್ಮಮೂರ್ತಿಯಾದ ಯಕ್ಷನಿಂದ ಯುಧಿಷ್ಠಿರನಿಗೆ ವರಪ್ರದಾನ
- ಅಜ್ಞಾತವಾಸಕ್ಕೆ ಅನುಮತಿಪಡೆಯುವ ಸಮಯದಲ್ಲಿ ಶೋಕಾಕುಲನಾದ ಯುಧಿಷ್ಠಿರನನ್ನು ಧೌಮ್ಯರು ಸಮಾಧಾನಪಡಿಸಿದುದು : ಅಜ್ಞಾತವಾಸವನ್ನು ಹೇಗೆ ಕಳೆಯಬೇಕೆಂಬ ವಿಷಯವಾಗಿ ಪರಸ್ಪರ ಸಮಾಲೋಚನೆ
ವಿರಾಟಪರ್ವ : ಪಾಣ್ಡವಪ್ರವೇಶಪರ್ವ
- ವಿರಾಟನಗರದಲ್ಲಿ ಅಜ್ಞಾತವಾಸದ ಒಂದು ವರ್ಷವನ್ನು ಕಳೆಯಲು ಪಾಂಡವರು ಪರಸ್ಪರ ಸಮಾಲೋಚನೆ : ಧರ್ಮ ಜನು ತನ್ನ ಕಾರ್ಯಕ್ರಮವನ್ನು ವಿವರಿಸಿದುದು
- ಭೀಮಾರ್ಜುನರು ವಿರಾಟನಗರದಲ್ಲಿ ತಾವು ಕೈಗೊಳ್ಳಲ್ಲಿರುವ ಕಾರ್ಯದ ವಿಷಯವಾಗಿ ಹೇಳಿದುದು
- ನಕುಲ-ಸಹದೇವ-ದ್ರೌಪದಿಯರು ತಮ್ಮ ತಮ್ಮ ಕರ್ತವ್ಯಗಳ ವಿಷಯವಾಗಿ ಹೇಳಿದುದು
- ಪಾಂಡವರಿಗೆ ಧೌಮ್ಯರ ಹಿತವಚನಗಳು : ವಿರಾಟನಗರಕ್ಕೆ ಪಾಂಡವರ ಪ್ರಯಾಣ
- ಪಾಂಡವರು ವಿರಾಟನಗರದ ಸಮೀಪಕ್ಕೆ ಹೋಗಿ ಶ್ಮಶಾನದಲ್ಲಿದ್ದ ಶಮೀವೃಕ್ಷದಲ್ಲಿ ತಮ್ಮ ಆಯುಧಗಳನ್ನಿಟ್ಟುದು
- ಯುಧಿಷ್ಠಿರನು ದುರ್ಗಾದೇವಿಯನ್ನು ಸ್ತೋತ್ರ ಮಾಡಿದುದು : ದೇವಿಯು ಪ್ರತ್ಯಕ್ಷಳಾಗಿ ವರಗಳನ್ನು ಕೊಟ್ಟುದು
- ಯುಧಿಷ್ಠಿರನು ರಾಜಸಭೆಯನ್ನು ಪ್ರವೇಶಿಸಿ ವಿರಾಟನಿಂದ ಸಮ್ಮಾನಿತನಾದುದು
- ಭೀಮಸೇನನು ವಿರಾಟರಾಜನ ಸಭಾಮಂದಿರವನ್ನು ಪ್ರವೇಶಿಸಿದುದು : ವಿರಾಟನು ಅವನಿಗೂ ಆಶ್ವಾಸನೆಯನ್ನಿತ್ತುದು
- ದ್ರೌಪದಿಯು ಸೈರಂಧ್ರಿಯ ವೇಷವನ್ನು ಧರಿಸಿ ಅರಮನೆಯ ಸಮೀಪಕ್ಕೆ ಹೋದುದು : ಸುದೇಷ್ಣೆಯೊಡನೆ ದ್ರೌಪದಿಯ ಸಂಭಾಷಣೆ
- ಸಹದೇವನು ವಿರಾಟರಾಜನೊಡನೆ ಮಾತನಾಡಿದುದು : ವಿರಾಟನು ಸಹದೇವನನ್ನು ಗೋಶಾಲೆಯ ಅಧ್ಯಕ್ಷನನ್ನಾಗಿ ನಿಯಮಿಸಿದುದು
- ಅರ್ಜುನನು ಬೃಹನ್ನಳೆಯ ವೇಷವನ್ನು ಧರಿಸಿ ರಾಜನನ್ನು ಸಂಧಿಸಿದುದು : ವಿರಾಟನು ತನ್ನ ಹೆಣ್ಣು ಮಕ್ಕಳಿಗೆ ನೃತ್ಯ-ಗಾಯನಗಳನ್ನು ಹೇಳಿಕೊಡಲು ಅವನನ್ನು ನಿಯಮಿಸಿಕೊಂಡುದು
- ನಕುಲನು ಅಶ್ವಶಾಲೆಯ ಅಧ್ಯಕ್ಷನಾದುದು
ಸಮಯಪಾಲನಪರ್ವ
- ಭೀಮಸೇನನು ವಿಶ್ವವಿಖ್ಯಾತನಾಗಿದ್ದ ಜೀಮೂತನೆಂಬ ಮಲ್ಲನನ್ನು ವಧಿಸಿದುದು
ಕೀಚಕವಧಪರ್ವ
- ಕೀಚಕನು ದ್ರೌಪದಿಯನ್ನು ಮೋಹಿಸಿ ಅವಳಿಂದ ತಿರಸ್ಕೃತನಾದುದು
- ರಾಣಿ ಸುದೇಷ್ಣೆಯು ದ್ರೌಪದಿಯನ್ನು ಕೀಚಕನ ಮನೆಗೆ ಕಳುಹಿಸಿದುದು
- ಕೀಚಕನು ದ್ರೌಪದಿಗೆ ಅವಮಾನಮಾಡಿದುದು
- ದ್ರೌಪದಿಯು ಕಾರ್ಯಸಿದ್ಧಿಗಾಗಿ ಭೀಮಸೇನನ ಬಳಿಗೆ ಹೋದುದು
- ಭೀಮನು ಮುಂದೆ ದ್ರೌಪದಿಯ ದುಃಖೋದ್ಗಾರ
- ಪಾಂಡವರ ಕಷ್ಟಗಳನ್ನು ನೋಡಿ ದುಃಖಿತಳಾದ ದ್ರೌಪದಿಯು ಭೀಮಸೇನನ ಮುಂದೆ ಗೋಳಿಟ್ಟುದು
- ದ್ರೌಪದಿಯು ಭೀಮಸೇನನಿಗೆ ತನ್ನ ದುಃಖವನ್ನು ವಿವರಿಸಿ ಹೇಳಿದುದು
- ಭೀಮಸೇನ ಮತ್ತು ದ್ರೌಪದಿಯರ ಸಂವಾದ
- ಭೀಮ-ಕೀಚಕರ ಯುದ್ಧ ಮತ್ತು ಕೀಚಕನ ವಧೆ
- ಉಪಕೀಚಕರು ಸೈರಂದ್ರಿಯನ್ನು ಬಂಧಿಸಿ ಅಣ್ಣನೊಡನೆ ಸುಟ್ಟುಹಾಕಲು ಶ್ಮಶಾನಕ್ಕೆ ಹೊತ್ತುಕೊಂಡು ಹೋದುದು ; ಭೀಮಸೇನನು ಅವರೆಲ್ಲರನ್ನೂ ಸಂಹರಿಸಿ ಸೈರಂಧ್ರಿಯನ್ನು ಬಿಡುಗಡೆಮಾಡಿದುದು
- ಸೈರಂಧ್ರಿಯು ಅರಮನೆಗೆ ಹಿಂದಿರುಗಿದುದು : ಸೈರಂಧ್ರಿ ಮತ್ತು ಸುದೇಷ್ಣೆಯರ ಮಾತುಕತೆ
ಗೋಹರಣಪರ್ವ
- ಅಜ್ಞಾತವಾಸಿಗಳಾದ ಪಾಂಡವರನ್ನು ಹುಡುಕಲು ದುರ್ಯೋಧನನ ಪ್ರಯತ್ನ
- ಅಜ್ಞಾತರಾಗಿರುವ ಪಾಂಡವರನ್ನು ಹುಡುಕಲು ಪುನಃ ಪ್ರಯತ್ನ
- ಪುನಃ ಗೂಢಚಾರರನ್ನು ಕಳುಹಿಸಲು ದ್ರೋಣರ ಸಮ್ಮತಿ
- ಯುಧಿಷ್ಠಿರನ ಮಹಿಮೆಯನ್ನು ವರ್ಣಿಸಿದ ಭೀಷ್ಮನೂ ಪಾಂಡವರ ಅನ್ವೇಷಣೆಗೆ ಸಮ್ಮತಿಸಿದುದು
- ಗೂಢಚಾರರನ್ನು ಕಳುಹಿಸಲು ಕೃಪರು ಸಮ್ಮತಿಸಿದುದು
- ಸುಶರ್ಮನ ಸಲಹೆಯಂತೆ ತ್ರಿಗರ್ತರೂ ಮತ್ತು ಕೌರವರೂ ಮತ್ಸ್ಯದೇಶಕ್ಕೆ ಹೋಗಿ ಗೋವುಗಳನ್ನು ತಡೆದುದು
- ನಾಲ್ವರು ಪಾಂಡವರೊಡಗೂಡಿ ವಿರಾಟನು ಯುದ್ಧಕ್ಕೆ ಸಜ್ಜಾದುದು
- ಮತ್ಸ್ಯ-ತ್ರಿಗರ್ತರ ಯುದ್ಧ
- ಸುಶರ್ಮನು ವಿರಾಟನನ್ನು ಸೆರೆಹಿಡಿದುದು : ಸುಶರ್ಮ-ಭೀಮಸೇನರ ಯುದ್ಧ : ಭೀಮನು ವಿರಾಟನನ್ನು ಸೆರೆಯಿಂದ ಬಿಡಿಸಿ ಸುಶರ್ಮನನ್ನು ಬಂಧಿಸಿದುದು : ಧರ್ಮರಾಜನಿಂದ ಸುಶರ್ಮನ ಬಂಧವಿಮೋಚನೆ
- ವಿರಾಟನಿಂದ ಪಾಂಡವರಿಗೆ ಸಮ್ಮಾನ : ನಗರದಲ್ಲಿ ವಿಜಯಘೋಷಣೆ
- ಕೌರವರಿಂದ ಉತ್ತರದಿಕ್ಕಿನಲ್ಲಿದ್ದ ಗೋವುಗಳ ಅಪಹರಣ : ಗೋಪಾಧ್ಯಕ್ಷನು ಉತ್ತರಕುಮಾರನನ್ನು ಯುದ್ಧಕ್ಕೆ ಹೋಗಲು ಪ್ರೋತ್ಸಾಹಿಸಿದುದು
- ಉತ್ತರನ ಪೌರುಷ : ಬೃಹನ್ನಳೆಯನ್ನು ಸಾರಥಿಯನ್ನಾಗಿ ನಿಯಮಿಸಿಕೊಳ್ಳುವಂತೆ ದ್ರೌಪದಿಯು ಉತ್ತರನನ್ನು ಪ್ರಚೋದಿಸಿದುದು
- ಸಾರಥ್ಯಕ್ಕೆ ಬೃಹನ್ನಳೆಯ ಅಂಗೀಕಾರ : ಉತ್ತರ ಕುಮಾರನು ಯುದ್ಧಕ್ಕೆ ಹೊರಟುದು
- ಭಯಪಟ್ಟು ರಥದಿಂದ ಧುಮುಕಿ ಓಡಿಹೋಗುತ್ತಿದ್ದ ಉತ್ತರನನ್ನು ಅರ್ಜುನನು ಸಮಾಧಾನಪಡಿಸಿ ರಥಕ್ಕೆ ಕರೆತಂದುದು
- ಕರೆತಂದುದು ದ್ರೋಣರಿಂದ ಅರ್ಜುನನ ಪ್ರಶಂಸೆ
- ಶಮೀವೃಕ್ಷದಿಂದ ಅಸ್ತ್ರಗಳನ್ನು ಕೆಳಗಿಳಿಸುವಂತೆ ಉತ್ತರನಿಗೆ ಅರ್ಜುನನ ಆದೇಶ
- ಅರ್ಜುನನ ಆದೇಶದಂತೆ ಉತ್ತರನು ವೃಕ್ಷದ ಮೇಲಿದ್ದ ಅಸ್ತ್ರ-ಶಸ್ತ್ರಗಳನ್ನಿಳಿಸಿದುದು
- ಮರದ ಮೇಲಿದ್ದ ಅಸ್ತ್ರ-ಶಸ್ತ್ರಗಳ ವಿಷಯವಾಗಿ ಉತ್ತರನು ಬೃಹನ್ನಳೆಯನ್ನು ಪ್ರಶ್ನಿಸಿದುದು
- ಬೃಹನ್ನಳೆಯು ಉತ್ತರನಿಗೆ ಪಾಂಡವರ ಶಸ್ತ್ರಾಸ್ತ್ರಗಳ ಪರಿಚಯ ಮಾಡಿಕೊಟ್ಟುದು
- ಅರ್ಜುನನು ಉತ್ತರಕುಮಾರನಿಗೆ ತನ್ನ ಸೋದರರ ಮತ್ತು ದ್ರೌಪದಿಯ ನಿಜಸ್ವರೂಪಗಳನ್ನು ತಿಳಿಸಿದುದು
- ಅರ್ಜುನನ ಯುದ್ಧಸಿದ್ಧತೆ : ಅಸ್ತ್ರ-ಶಸ್ತ್ರಗಳನ್ನು ಸ್ಮರಿಸಿ ಆವಾಹಿಸಿಕೊಂಡುದು : ಉತ್ತರನ ಭಯದ ನಿವಾರಣೆ
- ಉತ್ತರನ ರಥದ ಮೇಲೆ ಅರ್ಜುನನ ಕಪಿಧ್ವಜವು ಉಪಸ್ಥಿತವಾದುದು : ಅರ್ಜುನನು ಶಂಖನಾದ ಮಾಡಿದುದು : ದ್ರೋಣರು ಆ ಸಮಯದಲ್ಲಾದ ಅಪಶಕುನಗಳನ್ನು ವಿವರಿಸಿದುದು
- ದುರ್ಯೋಧನನ ಯುದ್ಧಸಿದ್ಧತೆ : ಕರ್ಣನ ಆತ್ಮಪ್ರಶಂಸೆ
- ಕರ್ಣನ ಅಹಂಕಾರೋಕ್ತಿ
- ಕರ್ಣ-ದುರ್ಯೋಧನರಿಗೆ ಕೃಪಾಚಾರ್ಯರ ಹಿತೋಕ್ತಿ
- ಕರ್ಣನ ಮಾತಿಗೆ ಅಶ್ವತ್ಥಾಮನ ಪ್ರತಿಭಟನೆ
- ಭೀಷ್ಮರ ಸಮಾಧಾನೋಕ್ತಿ
- ಭೀಷ್ಮರ ಸಮಯೋಚಿತವಾದ ಸಲಹೆ
- ಅರ್ಜುನನು ದುರ್ಯೋಧನನ ಸೈನ್ಯವನ್ನು ಆಕ್ರಮಿಸಿ ಗೋವುಗಳನ್ನು ಹಿಂದಿರುಗಿಸಿದುದು
- ಕರ್ಣಾರ್ಜುನರ ಯುದ್ಧ : ಅರ್ಜುನನ ವಿಜಯ
- ಅರ್ಜುನನಿಂದ ಕೌರವಸೈನ್ಯಕ್ಕಾದ ಅಪಾರಹಾನಿ