ವಿಭೀಷಣನ ಶರಣಾಗತಿ : ವಿಭೀಷಣನಿಂದ ರಾವಣನ ಶಕ್ತಿಯ ಪರಿಚಯ : ರಾವಣನ ವಧೆಗೆ ಶ್ರೀರಾಮನಿಂದ ಪ್ರತಿಜ್ಞೆ : ವಿಭೀಷಣನಿಗೆ ಲಂಕಾರಾಜ್ಯದ ಅಭಿಷೇಕ : ಸಮುದ್ರ ತೀರದಲ್ಲಿ ಶ್ರೀರಾಮನ ಪ್ರಾಯೋಪವೇಶ
ಗುಪ್ತಚಾರನಾದ ಶಾರ್ದೂಲನು ಸಮುದ್ರದ ಉತ್ತರತೀರದಲ್ಲಿ ನಡೆಯುತ್ತಿರುವ ಸೇನಾಸನ್ನಾಹವನ್ನು ತಿಳಿಸಿದಾಗ-ರಾವಣನು ಶುಕನನ್ನು ಸಂಧಾನಕ್ಕಾಗಿ ಸುಗ್ರೀವನ ಬಳಿಗೆ ಕಳುಹಿಸಿಕೊಟ್ಟುದು : ಅದನ್ನು ತಿಳಿದ ವಾನರರು ಶುಕನನ್ನು ಹಿಂಸಿಸಿದುದು : ಶ್ರೀರಾಮನ ಕೃಪೆಯಿಂದ ಶುಕನ ಬಿಡುಗಡೆ : ಸುಗ್ರೀವನು ಶುಕನ ಮೂಲಕವಾಗಿ ರಾವಣನಿಗೆ ಉತ್ತರವನ್ನು ಹೇಳಿಕಳುಹಿಸಿದುದು
ಸಮುದ್ರತೀರದಲ್ಲಿ ಶ್ರೀರಾಮನ ಪ್ರಾಯೋಪವೇಶ : ಸಮುದ್ರರಾಜನು ಬಾರದಿರಲು ಕುಪಿತನಾಗಿ ಸಮುದ್ರನ ಮೇಲೆ ಬಾಣಪ್ರಯೋಗ
ಸಮುದ್ರರಾಜನ ಸಲಹೆಯಂತೆ ನಲನಿಂದ ಸಮುದ್ರದ ಮೇಲೆ ನೂರು ಯೋಜನಗಳ ಉದ್ದದ ಸೇತುವೆಯ ನಿರ್ಮಾಣ : ಅದರ ಮೂಲಕವಾಗಿ ಶ್ರೀರಾಮನೇ ಮೊದಲಾದವರು ಸಮುದ್ರವನ್ನು ದಾಟಿ ಆಚೆಯ ದಡದಲ್ಲಿ ಬೀಡುಬಿಟ್ಟುದು
ಶ್ರೀರಾಮನು ಲಕ್ಷ್ಮಣನಿಗೆ ಉತ್ಪಾತಸೂಚಕವಾದ ಲಕ್ಷಣಗಳನ್ನು ವಿವರಿಸಿ ಹೇಳಿದುದು : ಲಂಕೆಯ ಆಕ್ರಮಣ
ಶ್ರೀರಾಮನಿಂದ ಲಂಕಾಪಟ್ಟಣದ ವರ್ಣನೆ : ವ್ಯೂಹಕ್ರಮದಲ್ಲಿ ನಿಲ್ಲಲು ಸೈನ್ಯಕ್ಕೆ ಆದೇಶ : ಶ್ರೀರಾಮನಿಂದ ಬಿಡುಗಡೆಹೊಂದಿದ ಶುಕನು ರಾವಣನ ಬಳಿಗೆ ಹೋಗಿ ಶ್ರೀರಾಮನ ಸೈನ್ಯ ಶಕ್ತಿಯನ್ನು ವಿವರಿಸಿ ಹೇಳಿದುದು : ರಾವಣನಿಂದ ತನ್ನ ಬಲದ ಬಗೆಗೆ ಪ್ರಶಂಸೆ
ರಾವಣನು ಪುನಃ ಶುಕ-ಸಾರಣರನ್ನು ಗುಟ್ಟಿನಲ್ಲಿ ವಾನರರ ಸೈನ್ಯಸಮೂಹಕ್ಕೆ ಕಳುಹಿಸಿದುದು : ವಿಭೀಷಣನು ಅವರನ್ನು ಗುರುತಿಸಿದುದು : ಶ್ರೀರಾಮನ ಕೃಪೆಯಿಂದ ಅವರು ಪುನಃ ಬಿಡುಗಡೆಹೊಂದಿ ಸಂದೇಶವನ್ನು ಹೊತ್ತು ಲಂಕೆಗೆ ಹಿಂದಿರುಗಿ ರಾವಣನಿಗೆ ಸಮಾಧಾನಹೇಳಿದುದು
ರಾವಣನು ಮಾಲ್ಯವಂತನನ್ನು ಆಕ್ಷೇಪಿಸಿ ನಗರರಕ್ಷಣೆಯ ವ್ಯವಸ್ಥೆಯನ್ನು ಏರ್ಪಡಿಸಿ ಅಂತಃಪುರಕ್ಕೆ ತೆರಳಿದುದು
ರಾವಣನು ಲಂಕೆಯ ರಕ್ಷಣೆಗಾಗಿ ಮಾಡಿರುವ ವ್ಯವಸ್ಥೆಯನ್ನು ವಿಭೀಷಣನು ಶ್ರೀರಾಮನಿಗೆ ವಿವರಿಸಿ ಹೇಳಿದುದು : ಶ್ರೀರಾಮನು ತನ್ನ ಕಡೆಯ ಸೇನಾನಾಯಕರಿಗೆ ನಾಲ್ಕು ದ್ವಾರಗಳನ್ನೂ ಆಕ್ರಮಿಸಲು ಆದೇಶವನ್ನಿತ್ತುದು
ಶ್ರೀರಾಮನು ಪ್ರಮುಖವಾನರರೊಡನೆ ಸುವೇಲಪರ್ವತವನ್ನು ಹತ್ತಿ ಅಲ್ಲಿಯೇ ಬಿಡಾರಮಾಡಿದುದು
ಶ್ರೀರಾಮನು ವಾನರನಾಯಕರೊಡನೆ ಸುವೇಲಪರ್ವತದಲ್ಲಿ ನಿಂತು ಲಂಕಾಪಟ್ಟಣವನ್ನು ನಿರೀಕ್ಷಿಸಿದುದು