ಸಂಪುಟ ೧

ಸ್ಕಾಂದಪುರಾಣ-ಉತ್ತರಖಂಡ

  • ಕಲಿಯುಗದ ಸ್ಥಿತಿ : ಕಲಿಯುಗದಲ್ಲಿ ಮಾನವನ ಉದ್ಧಾರದ ಉಪಾಯ : ರಾಮಾಯಣ ಪಾರಾಯಣದ ಮಹಿಮೆ : ರಾಮಾಯಣಶ್ರವಣಕ್ಕೆ ಪ್ರಶಸ್ತವಾದ ಕಾಲ
  • ನಾರದ-ಸನತ್ಕುಮಾರರ ಸಂವಾದ : ಸೋಮ ದತ್ತನೆಂಬ ಬ್ರಾಹ್ಮಣನಿಗೆ ರಾಕ್ಷಸತ್ವದ ಪ್ರಾಪ್ತಿ : ರಾಮಾಯಣಕಥಾಶ್ರವಣದ ಮೂಲಕ ಅವನ ಉದ್ಧಾರ
  • ಮಾಘಮಾಸದಲ್ಲಿ ರಾಮಾಯಣವನ್ನು ಪಾರಾಯಣ ಮಾಡುವುದರ ಫಲ : ಸುಮತಿ ಮತ್ತು ಸತ್ಯವತಿಯರ ಪೂರ್ವಜನ್ಮೇತಿಹಾಸ
  • ಚೈತ್ರಮಾಸದಲ್ಲಿ ರಾಮಾಯಣಪಠನ-ಶ್ರವಣಗಳ ಮಹಿಮೆ : ಕಲಿಕೋತ್ತಂಕರ ಕಥೆ
  • ರಾಮಾಯಣದ ನವಾಹಶ್ರವಣದ ವಿಧಿ, ಮಹಿಮೆ ಮತ್ತು ಫಲವರ್ಣನೆ

ಬಾಲಕಾಂಡ

  • ನಾರದರು ವಾಲ್ಮೀಕಿಮಹರ್ಷಿಗಳಿಗೆ ಶ್ರೀರಾಮನ ಕಥೆಯನ್ನು ಸಂಕ್ಷೇಪವಾಗಿ ವಿವರಿಸಿದುದು
  • ತಮಸಾನದಿಯ ತೀರದಲ್ಲಿ ಕ್ರೌಂಚವಧೆಯಿಂದ ಸಂತಪ್ತರಾದ ವಾಲ್ಮೀಕಿಮಹರ್ಷಿಗಳ ಶೋಕದ ಮಾತು ಶ್ಲೋಕರೂಪವಾದುದು : ರಾಮಾಯಣ ಕಾವ್ಯವನ್ನು ರಚಿಸಲು ಬ್ರಹ್ಮನಿಂದ ವಾಲ್ಮೀಕಿಗಳಿಗೆ ಆದೇಶ : ರಾಮಾಯಣಕಾವ್ಯದ ಉಪಕ್ರಮ
  • ವಾಲ್ಮೀಕಿಮಹರ್ಷಿಗಳಿಂದ ರಚಿಸಲ್ಪಟ್ಟ ರಾಮಾಯಣಕಾವ್ಯದ ಸಂಕ್ಷೇಪ ನಿರೂಪಣೆ
  • ವಾಲ್ಮೀಕಿಮಹರ್ಷಿಗಳು ಇಪ್ಪತ್ತುನಾಲ್ಕು ಸಾವಿರ ಶ್ಲೋಕಗಳಲ್ಲಿ ರಾಮಾಯಣವನ್ನು ರಚಿಸಿ ಅದನ್ನು ಲವ-ಕುಶರಿಗೆ ಉಪದೇಶಿಸಿದುದು : ಮುನಿಗಳ ಸಮೂಹದಲ್ಲಿ ಲವ-ಕುಶರು ರಾಮಾಯಣವನ್ನು ತಾಳ-ಲಯಬದ್ಧವಾಗಿ ಹಾಡಿ ಎಲ್ಲರ ಪ್ರಶಂಸೆಗೂ ಪಾತ್ರರಾದುದು : ಶ್ರೀರಾಮನಿಂದಲೂ ಸಮ್ಮಾನಿತರಾಗಿ ಶ್ರೀರಾಮನ ಆಸ್ಥಾನದಲ್ಲಿ ರಾಮಾಯಣವನ್ನು ಹಾಡಿದುದು
  • ದಶರಥರಾಜನಿಂದ ಆಳಲ್ಪಡುತ್ತಿದ್ದ ಅಯೋಧ್ಯೆಯ ವರ್ಣನೆ
  • ದಶರಥರಾಜನ ರಾಜ್ಯಭಾರ ಮತ್ತು ಜನಜೀವನ
  • ಅಮಾತ್ಯರ ಗುಣ-ನೀತಿಗಳ ವರ್ಣನೆ
  • ದಶರಥನು ಮಕ್ಕಳನ್ನು ಪಡೆಯಲು ಅಶ್ವಮೇಧ ಯಾಗ ಮಾಡುವ ಪ್ರಸ್ತಾಪಮಾಡಿದುದು : ಮಂತ್ರಿಗಳ ಮತ್ತು ಬ್ರಾಹ್ಮಣರ ಅನುಮೋದನೆ
  • ಸುಮಂತ್ರನು ದಶರಥನಿಗೆ ಋಷ್ಯಶೃಂಗನನ್ನು ಕರೆತರಲು ಸಲಹೆ ನೀಡಿದುದು : ಋಷ್ಯಶೃಂಗನೊಡನೆ ಶಾಂತಾದೇವಿಯ ವಿವಾಹಪ್ರಸಂಗವನ್ನೂ ವಿವರಿಸಿ ಹೇಳಿದುದು
  • ಅಂಗದೇಶಕ್ಕೆ ಋಷ್ಯಶೃಂಗನ ಆಗಮನ : ಶಾಂತಾದೇವಿಯೊಡನೆ ವಿವಾಹ
  • ಸುಮಂತ್ರನಿಂದ ಋಷ್ಯಶೃಂಗನ ಮಹಿಮೆಯನ್ನು ಕೇಳಿ ದಶರಥನು ಸಪರಿವಾರನಾಗಿ ಅಂಗದೇಶಕ್ಕೆ ಹೋಗಿ ಅವನನ್ನು ಕರೆತಂದುದು
  • ದಶರಥನು ಋಷಿಗಳೊಡನೆ ಯಜ್ಞಮಾಡುವ ಪ್ರಸ್ತಾಪವನ್ನೆತ್ತಿದುದು : ಋಷಿಗಳು ರಾಜನಿಗೂ ರಾಜನು ಮಂತ್ರಿಗಳಿಗೂ ಯಜ್ಞದ ಸಿದ್ಧತೆಯನ್ನು ಮಾಡುವಂತೆ ನಿರ್ದೇಶಿಸಿದುದು
  • ಯಜ್ಞವನ್ನು ಮಾಡಿಸುವಂತೆ ದಶರಥನು ವಸಿಷ್ಠರನ್ನು ಪ್ರಾರ್ಥಿಸಿದುದು : ವಸಿಷ್ಠರು ಪರಿವಾರದವರಿಗೆ ಯಜ್ಞದ ಸಿದ್ಧತೆಗಳನ್ನು ಮಾಡುವಂತೆ ಆದೇಶವಿತ್ತುದು : ಸುಮಂತ್ರನು ಎಲ್ಲ ರಾಜರಿಗೂ ಯಜ್ಞಕ್ಕಾಗಿ ಆಹ್ವಾನವಿತ್ತುದು : ಆಗಮಿಸಿದ ರಾಜರಿಗೆ ಸತ್ಕಾರ : ಪತ್ನಿಯರೊಡನೆ ದಶರಥನ ಯಜ್ಞದೀಕ್ಷೆ
  • ದಶರಥಮಹಾರಾಜನು ಅಶ್ವಮೇಧಯಾಗವನ್ನು ಸಾಂಗೋಪಾಂಗವಾಗಿ ನೆರವೇರಿಸಿದುದು
  • ಋಷ್ಯಶೃಂಗನು ದಶರಥನಿಂದ ಪುತ್ರಕಾಮೇಷ್ಟಿಯನ್ನು ಮಾಡಿಸಿದುದು : ದೇವತೆಗಳ ಪ್ರಾರ್ಥನೆಯಂತೆ ಬ್ರಹ್ಮನು ರಾವಣನ ವಧೋಪಾಯವನ್ನು ಹೇಳಿದುದು : ಮಹಾವಿಷ್ಣುವು ದೇವತೆಗಳಿಗೆ ಆಶ್ವಾಸನೆಯನ್ನಿತ್ತುದು
  • ರಾವಣನನ್ನು ಸಂಹರಿಸಲು ಮಾನವನಾಗಿ ಅವತರಿಸುವುದಾಗಿ ದೇವತೆಗಳಿಗೆ ಶ್ರೀಹರಿಯ ಆಶ್ವಾಸನೆ : ಪುತ್ರಕಾಮೇಷ್ಟಿಯಜ್ಞದ ಅಗ್ನಿಕುಂಡದಿಂದ ಪ್ರಾಜಾಪತ್ಯಪುರುಷನು ಪ್ರಕಟವಾಗಿ ಪಾಯಸವನ್ನು ಕೊಟ್ಟುದು : ಅದನ್ನು ಹಂಚಿಕೊಂಡು ಕುಡಿದ ರಾಣಿಯರು ಗರ್ಭವತಿಯರಾದುದು
  • ಬ್ರಹ್ಮನ ಆದೇಶದಂತೆ ದೇವತೆಗಳು ತಮ್ಮ ಅಂಶಗಳಿಂದ ಕಪಿನಾಯಕರನ್ನು ಸೃಷ್ಟಿಸಿದುದು
  • ಋಷ್ಯಶೃಂಗನೂ ರಾಜರೂ ತಮ್ಮ-ತಮ್ಮ ದೇಶಗಳಿಗೆ ಪ್ರಯಾಣಮಾಡಿದುದು : ಅಯೋಧ್ಯೆಗೆ ರಾಣಿಯರೊಡನೆ ದಶರಥನ ಪ್ರತ್ಯಾಗಮನ : ರಾಮ-ಲಕ್ಷ್ಮ ಣ-ಭರತ-ಶತ್ರುಘ್ನರ ಜನನ : ಮಕ್ಕಳ ಶೀಲ-ಸ್ವಭಾವಗಳು ಮತ್ತು ಗುಣಗಳ ವರ್ಣನೆ : ದಶರಥನ ಸಭೆಗೆ ವಿಶ್ವಾಮಿತ್ರರ ಆಗಮನ
  • ವಿಶ್ವಾಮಿತ್ರರು ಶ್ರೀರಾಮ-ಲಕ್ಷ್ಮಣರನ್ನು ಕಳುಹಿಸಿಕೊಡುವಂತೆ ಕೇಳಿದುದು : ದಶರಥನ ದುಃಖ
  • ಶ್ರೀರಾಮನನ್ನು ಕಳುಹಿಸಿಕೊಡಲು ದಶರಥನ ಅಸಮ್ಮತಿ : ವಿಶ್ವಾಮಿತ್ರರ ಕೋಪ
  • ವಿಶ್ವಾಮಿತ್ರರ ರೋಷದ ಮಾತುಗಳು : ವಸಿಷ್ಠರು ದಶರಥನನ್ನು ಸಂತೈಸಿದುದು
  • ದಶರಥನಿಂದ ರಾಮ-ಲಕ್ಷ್ಮಣರ ಬೀಳ್ಕೊಡುಗೆ : ಮಾರ್ಗದಲ್ಲಿ ವಿಶ್ವಾಮಿತ್ರರಿಂದ ಬಲಾ-ಅತಿಬಲಾ ಎಂಬ ವಿದ್ಯೆಗಳ ಉಪದೇಶ
  • ವಿಶ್ವಾಮಿತ್ರ-ರಾಮ-ಲಕ್ಷ್ಮಣರು ಸರಯೂ-ಗಂಗಾ ನದಿಗಳ ಸಮೀಪದಲ್ಲಿದ್ದ ಆಶ್ರಮದಲ್ಲಿ ರಾತ್ರಿ ತಂಗಿದುದು
  • ಗಂಗೆಯನ್ನು ದಾಟುತ್ತಿದ್ದಾಗ ನೀರಿನಿಂದ ಹೊರ ಬರುತ್ತಿದ್ದ ಶಬ್ದದ ವಿಷಯವಾಗಿ ರಾಮ-ಲಕ್ಷ್ಮಣರ ಪ್ರಶ್ನೆ : ವಿಶ್ವಾಮಿತ್ರರಿಂದ ವಿವರಣೆ : ಮಲದ-ಕರೂಷ ಮತ್ತು ತಾಟಕಾವನಗಳ ಪರಿಯಚಮಾಡಿಕೊಡುತ್ತಾ ತಾಟಕಿಯನ್ನು ಸಂಹರಿಸುವಂತೆ ವಿಶ್ವಾಮಿತ್ರರು ಶ್ರೀರಾಮನಿಗೆ ಆಜ್ಞಾಪಿಸಿದುದು
  • ವಿಶ್ವಾಮಿತ್ರ-ರಾಮರ ಸಂಭಾಷಣೆ : ತಾಟಕಾ-ಮಾರೀಚರ ಜನ್ಮವೃತ್ತಾಂತಕಥನ : ತಾಟಕಿಯ ವಧೆಗೆ ವಿಶ್ವಾಮಿತ್ರರ ಪ್ರೋತ್ಸಾಹ
  • ಶ್ರೀರಾಮನಿಂದ ತಾಟಕಿಯ ಸಂಹಾರ
  • ವಿಶ್ವಾಮಿತ್ರರಿಂದ ಶ್ರೀರಾಮನಿಗೆ ದಿವ್ಯಾಸ್ತ್ರಗಳ ಉಪದೇಶ
  • ವಿಶ್ವಾಮಿತ್ರರು ರಾಮನಿಗೆ ಪ್ರತ್ಯಸ್ತ್ರಸಂಹಾರಗಳನ್ನೂ ಇನ್ನೂ ಇತರ ಅಸ್ತ್ರಗಳನ್ನೂ ಉಪದೇಶಿಸಿದುದು : ಹಾದಿಯಲ್ಲಿ ಸಿಕ್ಕಿದ ಆಶ್ರಮದ ವಿಷಯವಾಗಿ ಶ್ರೀರಾಮನು ವಿಶ್ವಾಮಿತ್ರರನ್ನು ಪ್ರಶ್ನಿಸಿದುದು
  • ವಾಮನರೂಪಿಯಾದ ಮಹಾವಿಷ್ಣುವಿನ ಸಿದ್ಧಾಶ್ರಮದರ್ಶನ : ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಉಪಾಖ್ಯಾನಕಥನ
  • ಶ್ರೀರಾಮನಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ : ರಾಕ್ಷಸರ ಸಂಹಾರ
  • ಋಷಿಗಳೊಡನೆ ರಾಮ-ಲಕ್ಷ್ಮಣ-ವಿಶ್ವಾಮಿತ್ರರು ಮಿಥಿಲಾಪಟ್ಟಣದ ಕಡೆಗೆ ಪ್ರಯಾಣಮಾಡಿದುದು : ಮಾರ್ಗದಲ್ಲಿ ಶೋಣಾನದಿಯ ತೀರದಲ್ಲಿ ವಿಶ್ರಾಂತಿ
  • ಬ್ರಹ್ಮಪುತ್ರನಾದ ಕುಶನ ನಾಲ್ಕು ಮಕ್ಕಳ ವಿಚಾರ : ಶೋಣಾನದಿಯ ತೀರಪ್ರದೇಶಕ್ಕೆ ವಸುವಿನ ಭೂಮಿ ಎಂದು ಹೆಸರು ಬರಲು ಕಾರಣ : ವಾಯುವಿನ ಕೋಪದಿಂದ ಕುಶನಾಭನ ನೂರು ಕನ್ಯೆಯರೂ ಕುಬ್ಜೆಯರಾದುದು
  • ಕುಶನಾಭನು ಕನ್ಯೆಯರಿಗೆ ಧೈರ್ಯಹೇಳಿದುದು : ಕ್ಷಮಾಗುಣದ ಪ್ರಶಂಸೆ : ಬ್ರಹ್ಮದತ್ತನ ಜನ್ಮ : ಅವನೊಡನೆ ಕುಶನಾಭಕನ್ಯೆಯರ ವಿವಾಹ
  • ಗಾಧಿ-ವಿಶ್ವಾಮಿತ್ರ-ಸತ್ಯವತಿಯರ ಜನ್ಮವೃತ್ತಾಂತ
  • ರಾಮ-ವಿಶ್ವಾಮಿತ್ರರ ಸಂವಾದ : ಗಂಗೆಯ ಜನ್ಮವೃತ್ತಾಂತವನ್ನು ತಿಳಿಯಲು ರಾಮನ ಕುತೂಹಲ : ವಿಶ್ವಾಮಿತ್ರರಿಂದ ಗಂಗಾ-ಉಮೆಯರ ಜನ್ಮಕಥನ
  • ದೇವತೆಗಳು ಶಿವ-ಪಾರ್ವತಿಯರನ್ನು ಸುರತಕ್ರೀಡೆಯಿಂದ ವಿಮುಖರನ್ನಾಗಿ ಮಾಡಿದುದು : ದೇವತೆಗಳಿಗೂ ಮತ್ತು ಭೂದೇವಿಗೂ ಉಮಾದೇವಿಯ ಶಾಪ
  • ಗಂಗೆಯಿಂದ ಕಾರ್ತಿಕೇಯನ ಉತ್ಪತ್ತಿ ಪ್ರಸಂಗ
  • ಸಗರನ ಮಕ್ಕಳ ಜನನ : ಯಜ್ಞದ ಸಿದ್ಧತೆ
  • ಸರಗನ ಅಶ್ವಮೇಧಾಶ್ವದ ಅಪಹರಣ : ಸರಗನ ಮಕ್ಕಳು ಕುದುರೆಯನ್ನು ಹುಡುಕಲು ಪೃಥ್ವಿಯನ್ನೇ ಭೇದಿಸಿದುದು : ಸಂಭ್ರಾಂತರಾದ ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದುದು
  • ಸಗರಪುತ್ರರು ವಿನಾಶಹೊಂದುವರೆಂಬುದನ್ನು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು : ಸಗರನ ಮಕ್ಕಳು ಭೂಮಿಯನ್ನು ಅಗೆಯುತ್ತಾ ಕಪಿಲಮಹರ್ಷಿಗಳ ಬಳಿಗೆ ಹೋದುದು : ಕಪಿಲರು ಕುಪಿತರಾಗಿ ಸಗರನ ಮಕ್ಕಳನ್ನು ದಹಿಸಿದುದು
  • ಸಗರನ ಆಜ್ಞೆಯಂತೆ ಅಂಶುಮಂತನು ರಸಾತಲಕ್ಕೆ ಹೋಗಿ ಕುದುರೆಯನ್ನು ತಂದುದು : ಮಕ್ಕಳ ನಿಧನವಾರ್ತೆಯನ್ನು ತಿಳಿದು ಸಗರನು ಶೋಕಾಕುಲನಾಗಿ ಯಜ್ಞವನ್ನು ಪೂರ್ತಿಮಾಡಿದುದು
  • ಗಂಗೆಯನ್ನು ತರುವ ಸಲುವಾಗಿ ಅಂಶುಮಂತನ ಪ್ರಯತ್ನ : ಭಗೀರಥನ ತಪಸ್ಸಿನಿಂದ ಸುಪ್ರೀತನಾದ ಬ್ರಹ್ಮನು ವರವನ್ನಿತ್ತು ಗಂಗೆಯನ್ನು ಧರಿಸಲು ಈಶ್ವರನನ್ನು ಪ್ರಾರ್ಥಿಸುವಂತೆ ಸಲಹೆಯನ್ನಿತ್ತುದು
  • ಶ್ರೀ ಶಂಕರನು ಗಂಗೆಯನ್ನು ಧರಿಸುವುದಾಗಿ ಆಶ್ವಾಸನೆಯನ್ನಿತ್ತುದು : ಜಹ್ನುಮಹರ್ಷಿಯ ಕಿವಿಯಿಂದ ಹೊರಬಂದ ಗಂಗಾನದಿಯು ಏಳು ಪ್ರಕಾರವಾಗಿ ಹರಿದು ಭಗೀರಥನೊಡನೆ ಪಾತಾಳಕ್ಕೆ ಹೋಗಿ ಅವನ ಪ್ರಪಿತಾಮಹರನ್ನು ಉದ್ಧರಿಸಿದುದು
  • ಬ್ರಹ್ಮನು ಭಗೀರಥನನ್ನು ಪ್ರಶಂಸಿಸಿ ಗಂಗಾಜಲದಿಂದ ಪಿತೃಗಳಿಗೆ ತರ್ಪಣವನ್ನೀಯಲು ಅನುಜ್ಞೆಯನ್ನಿತ್ತುದು : ಭಗೀರಥನು ಎಲ್ಲ ಪಿತೃಕಾರ್ಯಗಳನ್ನೂ ಮುಗಿಸಿ ನಗರಪ್ರವೇಶ ಮಾಡಿದುದು : ಗಂಗಾವತರಣೋಪಾಖ್ಯಾನದ ಮಹಿಮೆ
  • ದೇವ-ದಾನವರು ಸಮುದ್ರವನ್ನು ಕಡೆದುದು : ರುದ್ರನಿಂದ ಹಾಲಹಲವಿಷದ ಪಾನ : ಮಹಾವಿಷ್ಣುವಿನ ಸಹಾಯದಿಂದ ಮಂದರ ಪರ್ವತವನ್ನು ಮೇಲಕ್ಕೆತ್ತಿದುದು : ಧನ್ವಂತರಿಯೇ ಮೊದಲಾದವರ ಉತ್ಪತ್ತಿ : ದೇವಾಸುರಯುದ್ಧದಲ್ಲಿ ದೈತ್ಯರ ಸಂಹಾರ
  • ಮಕ್ಕಳ ಮರಣದಿಂದ ದುಃಖಿತಳಾದ ದಿತಿಯು ಇಂದ್ರನನ್ನು ಸಂಹರಿಸಲು ಸಮರ್ಥನಾದ ಪುತ್ರನನ್ನು ಪಡೆಯಲು ತಪಸ್ಸನ್ನು ಮಾಡಿದುದು : ಇಂದ್ರನ ಉಪಚಾರ : ದಿತಿಯು ಅಶುಚಿಯಾಗಿದ್ದ ಸಮಯದಲ್ಲಿ ಇಂದ್ರನು ಗರ್ಭವನ್ನು ಛೇದಿಸಿದುದು
  • ದಿತಿಯ ಕೋರಿಕೆಯಂತೆ ಗರ್ಭದ ಏಳು ಭಾಗಗಳೂ ವಾತಸ್ಕಂಧಾಭಿಮಾನಿದೇವತೆಗಳಾಗಲು ಇಂದ್ರನ ಅಂಗೀಕಾರ : ವಿಶಾಲೋತ್ಪತ್ತಿ ಕಥನ : ಸುಮತಿ-ಕೌಶಿಕರ ಸಮಾಗಮ
  • ಸುಮತಿರಾಜನಿಂದ ಸತ್ಕೃತರಾದ ಕೌಶಿಕ-ರಾಮ-ಲಕ್ಷ್ಮಣರ ಮಿಥಿಲಾಪ್ರಯಾಣ : ಗೌತಮಾಶ್ರಮದ ವಿವರಣೆ : ಇಂದ್ರನ ಅತ್ಯಾಚಾರ : ಇಂದ್ರ-ಅಹಲ್ಯೆಯರಿಗೆ ಗೌತಮರ ಶಾಪ
  • ಪಿತೃದೇವತೆಗಳಿಂದ ಇಂದ್ರನಿಗೆ ಮೇಷವೃಷಣಗಳ ಸಂಯೋಜನೆ : ಶ್ರೀರಾಮನಿಂದ ಅಹಲ್ಯಾ ಶಾಪವಿಮೋಚನೆ : ಅಹಲ್ಯಾ-ಗೌತಮರಿಂದ ಶ್ರೀರಾಮನಿಗೆ ಸತ್ಕಾರ
  • ಮಿಥಿಲಾಪಟ್ಟಣಕ್ಕೆ ವಿಶ್ವಾಮಿತ್ರರೊಡನೆ ರಾಮ-ಲಕ್ಷ್ಮಣರ ಪ್ರಯಾಣ : ಜನಕನ ಸತ್ಕಾರ : ರಾಜನಿಗೆ ವಿಶ್ವಾಮಿತ್ರರಿಂದ ರಾಜಪುತ್ರರ ಪರಿಚಯ
  • ಶತಾನಂದನ ಪ್ರಶ್ನೆ : ಶ್ರೀರಾಮನಿಂದಾದ ಅಹಲ್ಯೋದ್ಧಾರವನ್ನು ವಿಶ್ವಾಮಿತ್ರರು ತಿಳಿಸಿದುದು : ಶತಾನಂದನಿಂದ ವಿಶ್ವಾಮಿತ್ರಚರಿತ್ರೆಯ ಕಥನ
  • ವಸಿಷ್ಠ-ವಿಶ್ವಾಮಿತ್ರರ ಕುಶಲಪ್ರಶ್ನೆಗಳು : ಸೈನ್ಯದೊಡನೆ ಬಂದಿರುವ ವಿಶ್ವಾಮಿತ್ರರ ಆತಿಥ್ಯಕ್ಕಾಗಿ ಸಕಲಸಂಭಾರಗಳನ್ನೂ ಸಿದ್ಧಪಡಿಸುವಂತೆ ಶಬಲಾಧೇನುವಿಗೆ ವಸಿಷ್ಠರ ಆದೇಶ
  • ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರರನ್ನೂ ಅವರ ಪರಿವಾರದವರನ್ನೂ ಯಥೋಚಿತವಾಗಿ ಸತ್ಕರಿಸಿದುದು : ವಿಶ್ವಾಮಿತ್ರರು ಕಾಮಧೇನುವನ್ನು ಅಪೇಕ್ಷಿಸಿದುದು : ವಸಿಷ್ಠರ ಅಸಮ್ಮತಿ
  • ಶಬಲೆಯನ್ನು ಬಲಾತ್ಕಾರಪೂರ್ವಕವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರರ ಪ್ರಯತ್ನ : ವಸಿಷ್ಠರಲ್ಲಿ ಶಬಲೆಯ ಪ್ರಲಾಪ : ಅವರ ಆಜ್ಞೆಯಂತೆ ಶಬಲೆಯಿಂದ ಶಕ-ಯವನಾದಿಗಳ ಸೃಷ್ಟಿ ಮತ್ತು ವಿಶ್ವಾಮಿತ್ರರ ಸೈನ್ಯದ ಸಂಹಾರ
  • ತನ್ನ ನೂರು ಮಕ್ಕಳೂ ಮತ್ತು ಅಪಾರ ಸೈನ್ಯವೂ ವಿನಾಶವಾಗಲಾಗಿ ವಿಶ್ವಾಮಿತ್ರರು ತಪಸ್ಸುಮಾಡಿ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು : ಆಶ್ರಮವಾಸಿಗಳಿಗೆ ಉಪದ್ರವ
  • ವಿಶ್ವಾಮಿತ್ರರಿಂದ ವಸಿಷ್ಠರ ಮೇಲೆ ನಾನಾವಿಧವಾದ ದಿವ್ಯಾಸ್ತ್ರಗಳ ಪ್ರಯೋಗ : ವಸಿಷ್ಠರ ಬ್ರಹ್ಮದಂಡದಿಂದ ಎಲ್ಲ ಮಹಾಸ್ತ್ರಗಳ ಉಪಶಮನ
  • ವಿಶ್ವಾಮಿತ್ರರ ತಪಸ್ಸು : ತ್ರಿಶಂಕುವು ಯಜ್ಞ ಮಾಡಿಸಲು ವಸಿಷ್ಠರನ್ನು ಪ್ರಾರ್ಥಿಸಿದುದು : ಅವರ ಅಸಮ್ಮತಿ : ತ್ರಿಶಂಕುವು ವಸಿಷ್ಠರ ಪುತ್ರರನ್ನು ಶರಣುಹೊಂದಿದುದು
  • ವಸಿಷ್ಠಪುತ್ರರ ಶಾಪದಿಂದ ತ್ರಿಶಂಕುವಿಗೆ ಚಂಡಾಲತ್ವಪ್ರಾಪ್ತಿ : ವಿಶ್ವಾಮಿತ್ರರನ್ನು ಶರಣುಹೊಂದಿ ಯಾಗವನ್ನು ಮಾಡಿಸುವಂತೆ ತ್ರಿಶಂಕುವಿನ ಪ್ರಾರ್ಥನೆ
  • ತ್ರಿಶಂಕುವಿಗೆ ಯಜ್ಞಮಾಡಿಸಲು ವಿಶ್ವಾಮಿತ್ರರ ಅಂಗೀಕಾರ : ಋಷಿ-ಮುನಿಗಳಿಗೆ ಆರ್ತ್ವಿಜ್ಯಕ್ಕಾಗಿ ಆಹ್ವಾನ : ಆಹ್ವಾನವನ್ನು ತಿರಸ್ಕರಿಸಿದ ಮಹೋದಯನಿಗೂ-ವಸಿಷ್ಠರ ಮಕ್ಕಳಿಗೂ ವಿಶ್ವಾಮಿತ್ರರಿಂದ ಶಾಪಪ್ರದಾನ
  • ಹವಿರ್ಭಾಗಗಳನ್ನು ಸ್ವೀಕರಿಸಲು ದೇವತೆಗಳು ಬರದಿರಲು ವಿಶ್ವಾಮಿತ್ರರು ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದುದು : ಇಂದ್ರನು ತ್ರಿಶಂಕುವನ್ನು ಸ್ವರ್ಗದಿಂದ ನೂಕಿದುದು : ಕ್ರುದ್ಧರಾದ ವಿಶ್ವಾಮಿತ್ರರು ನೂತನ ಸ್ವರ್ಗವನ್ನೇ ನಿರ್ಮಿಸಲು ಪ್ರಯತ್ನಿಸಿದುದು : ದೇವತೆಗಳ ಪ್ರಾರ್ಥನೆಯಂತೆ ನಿಲ್ಲಿಸಿದುದು
  • ಪುಷ್ಕರತೀರ್ಥದ ಸಮೀಪದಲ್ಲಿ ವಿಶ್ವಾಮಿತ್ರರ ತಪಸ್ಸು : ಋಚೀಕನ ನಡುಮಗನಾದ ಶುನಃಶೇಪನನ್ನು ಅಂಬರೀಷನು ಯಜ್ಞಪಶುವಾಗಿ ಕ್ರಯಕ್ಕೆ ಪಡೆದುದು
  • ವಿಶ್ವಾಮಿತ್ರರಲ್ಲಿ ಶುನಃಶೇಪನ ಶರಣಾಗತಿ : ಮಧುಷ್ಯಂದಾದಿ ಮಕ್ಕಳಿಗೆ ವಿಶ್ವಾಮಿತ್ರರಿಂದ ಶಾಪಪ್ರದಾನ : ಅಂಬರೀಷನ ಯಜ್ಞಸಮಾಪ್ತಿ : ಶುನಃಶೇಪನಿಗೆ ಇಂದ್ರನಿಂದ ದೀರ್ಘಾಯುಷ್ಯ ಪ್ರದಾನ
  • ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ : ಮೇನಕೆಯ ಮೂಲಕ ವಿಶ್ವಾಮಿತ್ರರ ತಪೋಭಂಗ : ಬ್ರಹ್ಮರ್ಷಿಗಳಾಗಲು ಘೋರವಾದ ತಪಶ್ಚರಣೆ
  • ವಿಶ್ವಾಮಿತ್ರರು ರಂಭೆಗೆ ಶಾಪಕೊಟ್ಟು ಪುನಃ ತಪಸ್ಸಿನಲ್ಲಿ ತೊಡಗಿದುದು
  • ವಿಶ್ವಾಮಿತ್ರರ ಘೋರತಪಸ್ಸು : ಬ್ರಹ್ಮರ್ಷಿತ್ವ ಪ್ರಾಪ್ತಿ : ಜನಕನಿಂದ ವಿಶ್ವಾಮಿತ್ರರ ಪ್ರಶಂಸೆ
  • ಜನಕರಾಜನು ವಿಶ್ವಾಮಿತ್ರರನ್ನೂ ರಾಮ-ಲಕ್ಷ್ಮಣರನ್ನೂ ಸತ್ಕರಿಸಿ ಅವರಿಗೆ ತನ್ನ ಅರಮನೆಯಲ್ಲಿದ್ದ ಧನುಸ್ಸಿನ ಇತಿಹಾಸವನ್ನೂ ಸೀತಾಪ್ರಾಪ್ತಿಯ ವಿಷಯವನ್ನೂ ತಿಳಿಸಿ, ರಾಮನು ಧನುಸ್ಸಿನ ಶಿಂಜಿನಿಯನ್ನು ಸೆಳೆದು ಕಟ್ಟಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿದುದು
  • ಶ್ರೀರಾಮನು ಶಿವಧನುಸ್ಸನ್ನು ಮುರಿದುದು : ಜನಕನು ವಿಶ್ವಾಮಿತ್ರರ ಆಜ್ಞೆಯಂತೆ ದಶರಥನನ್ನು ಕರೆತರಲು ಅಮಾತ್ಯರನ್ನು ಅಯೋದ್ಯೆಗೆ ಕಳುಹಿಸಿದುದು
  • ಮಂತ್ರಿಗಳು ದಶರಥನಿಗೆ ಜನಕನ ಸಂದೇಶವನ್ನು ತಿಳಿಸಿದುದು : ವಸಿಷ್ಠ-ವಾಮದೇವರ ಸಲಹೆಯಂತೆ ದಶರಥನ ಪ್ರಯಾಣಸನ್ನಾಹ
  • ಚತುರಂಗಬಲದೊಡನೆ ಮಿಥಿಲೆಗೆ ದಶರಥನ ಪ್ರಯಾಣ : ಜನಕನಿಂದ ಆದರದ ಸ್ವಾಗತ
  • ಜನಕರಾಜನು ಸಾಂಕಾಶ್ಯಾನಗರಿಯಿಂದ ತನ್ನ ತಮ್ಮನನ್ನು ಕರೆಸಿದುದು : ವಸಿಷ್ಠರು ಸೂರ್ಯವಂಶದವರ ಪರಿಚಯವನ್ನು ಮಾಡಿ ಕೊಟ್ಟುದು : ಸೀತೆಯನ್ನು ರಾಮನಿಗೂ ಊರ್ಮಿಳೆಯನ್ನು ಲಕ್ಷ್ಮಣನಿಗೂ ವಸಿಷ್ಠರು ವರಣಮಾಡಿದುದು
  • ಜನಕನು ತನ್ನ ವಂಶವನ್ನು ಪರಿಚಯಮಾಡಿ ಕೊಟ್ಟುದು : ಶ್ರೀರಾಮನಿಗೆ ಸೀತೆಯನ್ನೂ, ಲಕ್ಷ್ಮಣನಿಗೆ ಊರ್ಮಿಳೆಯನ್ನೂ ಮದುವೆ ಮಾಡಿಕೊಡುವುದಾಗಿ ಮಾತುಕೊಟ್ಟುದು
  • ವಿಶ್ವಾಮಿತ್ರರು ಭರತ-ಶತ್ರುಘ್ನರಿಗೆ ಕನ್ಯೆಯರನ್ನು ವರಣಮಾಡಿದುದು : ಜನಕನ ಸಮ್ಮತಿ : ದಶರಥನು ತನ್ನ ಮಕ್ಕಳ ಕಲ್ಯಾಣಕ್ಕಾಗಿ ನಾಂದೀಶ್ರಾದ್ಧ-ಸಮಾವರ್ತನೆ ಮುಂತಾದ ಕರ್ಮಗಳನ್ನು ಮಾಡಿದುದು
  • ಶ್ರೀರಾಮ-ಲಕ್ಷ್ಮಣ-ಭರತ-ಶತ್ರುಘ್ನರ ವಿವಾಹ
  • ವಿಶ್ವಾಮಿತ್ರರು ಆಶ್ರಮಕ್ಕೆ ತೆರಳಿದುದು : ಜನಕನು ಹೆಣ್ಣುಮಕ್ಕಳಿಗೆ ಅಪಾರವಾದ ಬಳುವಳಿಗಳನ್ನು ಕೊಟ್ಟು ದಶರಥನೊಡನೆ ಕಳುಹಿಸಿಕೊಟ್ಟುದು : ಮಾರ್ಗದಲ್ಲಿ ಶುಭಾಶುಭ ಶಕುನಗಳು : ಪರಶುರಾಮನ ಆಗಮನ
  • ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು
  • ಶ್ರೀರಾಮನು ವೈಷ್ಣವಧನುಸ್ಸಿಗೆ ಹೆದೆಯೇರಿಸಿ ಬಾಣವನ್ನು ಅನುಸಂಧಾನಮಾಡಿ ಪರಶುರಾಮನ ತಪಃಫಲವನ್ನು ಲಕ್ಷ್ಯವಾಗಿಟ್ಟು ವಿನಾಶಗೊಳಿಸಿದುದು : ಪರಶುರಾಮನು ಮಹೇಂದ್ರಪರ್ವತಕ್ಕೆ ಹಿಂದಿರುಗಿದುದು
  • ದಶರಥರಾಜನು ಮಕ್ಕಳೊಡನೆಯೂ, ವಧುಗಳೊಡನೆಯೂ ಅಯೋಧ್ಯಾಪಟ್ಟಣವನ್ನು ಸೇರಿದುದು : ಭರತನು ಶತ್ರುಘ್ನನೊಡನೆ ತನ್ನ ಸೋದರಮಾವನ ಊರಿಗೆ ಪ್ರಯಾಣ ಮಾಡಿದುದು : ಶ್ರೀರಾಮನ ಸದ್ವ್ಯವಹಾರಗಳಿಂದ ನಾಗರಿಕರ ಸಂತೋಷ : ಸೀತಾ-ರಾಮರ ಪರಸ್ಪರಪ್ರೇಮ
  • ಪರಿಶಿಷ್ಟ

Other Books in this COllection

Volume 2

Volume 3

Volume 4

Volume 5

Volume 6

Volume 7

Volume 8

Volume 9

Volume 10

Volume 11