ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡ ಶ್ರೀರಾಮನು ಸೀತೆಯು ಜೀವಿಸಿರುವ ಬಗೆಗೆ ಸಂದೇಹವನ್ನು ವ್ಯಕ್ತಪಡಿಸುತ್ತಾ ಆಶ್ರಮಕ್ಕೆ ಬಂದುದು : ಅಲ್ಲಿ ಸೀತೆಯನ್ನು ಕಾಣದೇ ಬಹಳವಾಗಿ ದುಃಖಿಸಿದುದು
ಲಕ್ಷ್ಮಣನು ಸೀತೆಯೊಬ್ಬಳನ್ನೇ ಬಿಟ್ಟು ಬಂದುದಕ್ಕೆ ರಾಮನ ನಿಂದನೆ
ಶ್ರೀರಾಮನ ವಿಲಾಪ : ಸೀತೆಯ ವಿಷಯವಾಗಿ ಮರ-ಗಿಡ-ಬಳ್ಳಿಗಳನ್ನು ಪ್ರಶ್ನಿಸಿದುದು : ಎಲ್ಲೆಡೆಗಳಲ್ಲೂ ಹುಡುಕಿದುದು
ರಾಮ-ಲಕ್ಷ್ಮಣರಿಂದ ಪುನಃ ಸೀತೆಯ ಅನ್ವೇಷಣೆ : ಶ್ರೀರಾಮನ ವಿಲಾಪ
ಶ್ರೀರಾಮನ ವಿಲಾಪ
ಸೀತೆಗಾಗಿ ಶ್ರೀರಾಮನ ಪರಿತಾಪ
ರಾಮ-ಲಕ್ಷ್ಮಣರಿಂದ ಸೀತೆಯ ಅನ್ವೇಷಣೆ : ಶ್ರೀರಾಮನ ಶೋಕೋದ್ಗಾರ : ಮೃಗಗಳ ಸಂಕೇತದಂತೆ ದಕ್ಷಿಣದಿಕ್ಕಿನೆಡೆಗೆ ಪ್ರಯಾಣ : ಪರ್ವತ ಮತ್ತು ನದಿಗಳ ಮೇಲೆ ರಾಮನ ಕೋಪ : ಕೆಳಗೆ ಬಿದ್ದಿದ್ದ ಸೀತೆಯ ಹೂಗಳನ್ನೂ ಆಭರಣಗಳನ್ನೂ ಕಂಡುದು : ದೇವತೆಗಳ ಮೇಲೆ ಶ್ರೀರಾಮನ ಕೋಪ
ಹನುಮಂತನು ರಾಮ-ಲಕ್ಷ್ಮಣರ ಬಳಿಗೆ ಹೋಗಿ ಅವರು ಅರಣ್ಯಕ್ಕೆ ಆಗಮಿಸಿರುವ ಕಾರಣವನ್ನು ಕೇಳಿದುದು : ತನ್ನನ್ನೂ ಮತ್ತು ಸುಗ್ರೀವನನ್ನೂ ಪರಿಚಯಿಸಿಕೊಂಡುದು : ಶ್ರೀರಾಮನು ಹನುಮಂತನ ಮಾತನ್ನು ಪ್ರಶಂಸಿಸುತ್ತಾ ಲಕ್ಷ್ಮಣನಿಗೆ ಹನುಮಂತನೊಡನೆ ಮಾತನಾಡಲು ಹೇಳಿದುದು : ಲಕ್ಷ್ಮಣನು ತನ್ನ ಪ್ರಾರ್ಥನೆಯನ್ನು ಅಂಗೀಕರಿಸಲು ಹನುಮಂತನು ಪ್ರಸನ್ನನಾದುದು
ತಾವು ಕಾಡಿಗೆ ಬಂದುದರ ಕಾರಣವನ್ನೂ ಮತ್ತು ಅರಣ್ಯದಲ್ಲಿ ಸೀತೆಯು ಅಪಹೃತ ಳಾದುದನ್ನೂ ಲಕ್ಷ್ಮಣನು ಹನುಮಂತನಿಗೆ ಹೇಳಿದುದು : ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರವನ್ನು ಅಪೇಕ್ಷಿಸಿದುದು : ಹನುಮಂತನು ಸೀತಾನ್ವೇಷಣೆಯ ವಿಷಯದಲ್ಲಿ ರಾಮ-ಲಕ್ಷ್ಮಣರಿಗೆ ಆಶ್ವಾಸನೆಯನ್ನಿತ್ತು ಅವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುದು
ಶರದೃತುವಿನ ವರ್ಣನೆ : ಶ್ರೀರಾಮನು ಲಕ್ಷ್ಮಣನಿಗೆ ಸುಗ್ರೀವನ ಬಳಿಗೆ ಹೋಗಲು ಆಜ್ಞೆಮಾಡಿದುದು
ಸುಗ್ರೀವನ ವಿಷಯದಲ್ಲಿ ಲಕ್ಷ್ಮಣನ ತೀವ್ರವಾದ ಕೋಪ : ಶ್ರೀರಾಮನಿಂದ ಸಮಾಧಾನ : ಕಿಷ್ಕಿಂಧಾಪಟ್ಟಣದ ಮಹಾದ್ವಾರಕ್ಕೆ ಬಂದ ಲಕ್ಷ್ಮಣನು ತನ್ನ ಆಗಮನವನ್ನು ಸುಗ್ರೀವನಿಗೆ ತಿಳಿಸುವಂತೆ ಅಂಗದನನ್ನು ಕಳುಹಿಸಿಕೊಟ್ಟುದು : ವಾನರರ ಭಯ : ಪ್ಲಕ್ಷ ಮತ್ತು ಪ್ರಭಾವ-ಎಂಬ ವಾನರರಿಂದ ಸುಗ್ರೀವನಿಗೆ ರಾಜನ ಕರ್ತವ್ಯದ ವಿಷಯವಾಗಿ ಉಪದೇಶ
ಸುಗ್ರೀವನು ತನ್ನ ಅಲ್ಪತನವನ್ನೂ ಶ್ರೀರಾಮನ ಮಹತ್ತ್ವವನ್ನೂ ಲಕ್ಷ್ಮಣನಿಗೆ ಹೇಳಿ ಕ್ಷಮೆ ಬೇಡಿದುದು : ಲಕ್ಷ್ಮಣನು ಸುಗ್ರೀವನನ್ನು ಪ್ರಶಂಸೆಮಾಡಿ ತನ್ನ ಜೊತೆಯಲ್ಲಿ ಬರುವಂತೆ ಹೇಳಿದುದು
ಸುಗ್ರೀವನು ಹನುಮಂತನಿಗೆ ವಾನರಸೈನ್ಯವೆಲ್ಲವನ್ನೂ ಶೀಘ್ರವಾಗಿ ಒಟ್ಟುಗೂಡಿಸಲು ಆಜ್ಞೆಮಾಡಿದುದು : ರಾಜನ ಆಜ್ಞೆಯನ್ನು ಕೇಳಿದೊಡನೆಯೇ ಎಲ್ಲ ವಾನರನಾಯಕರೂ ಕಿಷ್ಕಿಂಧೆಯ ಕಡೆಗೆ ಹೊರಟುದು : ವಾನರ ದೂತರು ಸುಗ್ರೀವನ ಬಳಿಗೆ ಬಂದು ವಾನರ ಸೈನ್ಯವು ಕಿಷ್ಕಿಂದೆಗೆ ಬರುತ್ತಿರುವ ಸಮಾಚಾರವನ್ನು ತಿಳಿಸಿದುದು
ಲಕ್ಷ್ಮಣನೊಡನೆ ಬಂದ ಸುಗ್ರೀವನನ್ನು ಶ್ರೀರಾಮನು ಸಮಾಧಾನಗೊಳಿಸಿದುದು : ಸೈನ್ಯಸಂಗ್ರಹಣೆಗಾಗಿ ಮಾಡಿರುವ ಅವನ ಪ್ರಯತ್ನವನ್ನು ಕೇಳಿ ಶ್ರೀರಾಮನು ಪ್ರಸನ್ನನಾದುದು