ಶ್ರೀರಾಮನ ಆಜ್ಞೆಯಂತೆ ಗುಹನು ನಾವೆಯನ್ನು ಸಿದ್ಧಗೊಳಿಸಿದುದು : ಶ್ರೀರಾಮನು ಸುಮಂತ್ರನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹಿಂದಿರುಗಲು ಆಜ್ಞಾಪಿಸಿದುದು : ಸುಮಂತ್ರನೊಡನೆ ತಂದೆ-ತಾಯಿಗಳಿಗೆ ಶ್ರೀರಾಮನು ಸಂದೇಶವನ್ನು ಕಳುಹಿಸಿಕೊಟ್ಟುದು : ಅರಣ್ಯಕ್ಕೆ ಬರುವೆನೆಂದು ಹಠ ಹಿಡಿದ ಸುಮಂತ್ರನಿಗೆ ಯುಕ್ತಿಪೂರ್ವಕವಾಗಿ ಸಮಾಧಾನ ಹೇಳಿ ಅಯೋಧ್ಯೆಗೆ ಹಿಂದಿರುಗುವಂತೆ ಹೇಳಿದುದು : ಸೀತಾದೇವಿಯಿಂದ ಗಂಗೆಯ ಪ್ರಾರ್ಥನೆ : ನಾವೆಯಿಂದಿಳಿದು ಶ್ರೀರಾಮಾದಿಗಳು ವತ್ಸದೇಶಕ್ಕೆ ಪ್ರಯಾಣ ಮಾಡಿ ಸಾಯಂಕಾಲವಾಗುತ್ತಲೇ ವೃಕ್ಷವೊಂದರ ಕೆಳಗೆ ಬಿಡಾರಮಾಡಿದುದು
ಕೈಕೇಯಿಯಿಂದ ಕೌಸಲ್ಯೆಯೇ ಮೊದಲಾದವರಿಗೆ ತೊಂದರೆಯಾಗವುದೆಂದು ಹೇಳಿ ಶ್ರೀರಾಮನು ಲಕ್ಷ್ಮಣನನ್ನು ಅಯೋಧ್ಯೆಗೆ ಕಳುಹಿಸಲು ಪುನಃ ಪ್ರಯತ್ನಿಸಿದುದು : ಶ್ರೀರಾಮನಿಲ್ಲದೇ ತನ್ನ ಜೀವವೇ ಉಳಿಯಲಾರದೆಂದು ಹೇಳಿ ಲಕ್ಷ್ಮಣನು ಅಯೋಧ್ಯೆಗೆ ಹಿಂದಿರುಗಲು ನಿರಾಕರಿಸಿದುದು : ಶ್ರೀರಾಮನು ಲಕ್ಷ್ಮ ಣನಿಗೆ ತನ್ನ ಜೊತೆಯಲ್ಲಿಯೇ ಇರಲು ಹೇಳಿ ಸಮಾಧಾನಗೊಳಿಸಿದುದು
ಭರದ್ವಾಜಮಹರ್ಷಿಗಳು ಸೀತಾ-ರಾಮ-ಲಕ್ಷ್ಮಣರಿಗೆ ಸ್ವಸ್ತಿವಾಚನಮಾಡಿ ಚಿತ್ರಕೂಟ ಪರ್ವತದ ಮಾರ್ಗವನ್ನು ತೋರಿಸಿಕೊಟ್ಟುದು : ಎಲ್ಲರ ಅನುಮತಿಯನ್ನೂ ಪಡೆದು ಶ್ರೀರಾಮನು ದೋಣಿಯ ಮೂಲಕವಾಗಿ ಯಮುನಾನದಿಯನ್ನು ದಾಟಿದುದು : ಸೀತೆಯು ಯಮುನಾನದಿಯನ್ನು ಪ್ರಾರ್ಥಿಸಿದುದು : ಮೂವರೂ ಯಮುನಾನದಿಯ ತೀರದ ಮಾರ್ಗವನ್ನೇ ಹಿಡಿದು ಒಂದು ಕ್ರೋಶದವರೆಗೆ ಪ್ರಯಾಣಮಾಡಿ ಯಮುನಾನದಿಯ ತೀರಪ್ರದೇಶದಲ್ಲಿ ಸಮತಲವಿದ್ದ ಸ್ಥಳದಲ್ಲಿ ರಾತ್ರಿ ತಂಗಿದುದು
ದಶರಥನ ಶೋಕ : ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಕೌಸಲ್ಯೆಗೆ ಹೇಳಿದುದು
ದಶರಥನು ಕೌಸಲ್ಯೆಗೆ ಋಷಿಕುಮಾರನ ವಧೆಯಿಂದಾಗಿ ಅವನ ವೃದ್ಧರಾದ ತಂದೆ-ತಾಯಿಗಳಿಗೆ ಉಂಟಾದ ದುಃಖವನ್ನೂ ಅವರಿತ್ತ ಶಾಪವನ್ನೂ ವಿವರಿಸಿ ಹೇಳಿದುದು : ಕೌಸಲ್ಯೆಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನಹೊಂದಿದುದು
ಕೌಸಲ್ಯೆಯ ವಿಲಾಪ : ಕೈಕೇಯಿಯ ನಿಂದನೆ : ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟುದು : ನಾಗರಿಕರ ಶೋಕ
ಮಾರ್ಕಂಡೇಯರೇ ಮೊದಲಾದ ಮಹರ್ಷಿಗಳು ರಾಜನಿಲ್ಲದ ದೇಶದ ದುಃಸ್ಥಿತಿಯನ್ನು ವರ್ಣಿಸಿದುದು : ಕೂಡಲೇ ಯಾರನ್ನಾದರೂ ರಾಜನನ್ನಾಗಿ ಮಾಡುವಂತೆ ವಸಿಷ್ಠರಿಗೆ ಆದೇಶ ನೀಡಿದುದು
ವಸಿಷ್ಠರ ಆದೇಶದಂತೆ ರಾಜಗೃಹಕ್ಕೆ ಐವರು ರಾಜದೂತರ ಪ್ರಯಾಣ
ಭರತನ ಚಿಂತೆ : ಮಿತ್ರರಿಂದ ಸಾಂತ್ವನ : ಭರತನು ಮಿತ್ರರಿಗೆ ತಾನು ಕಂಡ ಭಯಂಕರ ಸ್ವಪ್ನವನ್ನು ವಿವರಿಸಿ ಹೇಳಿದುದು
ಅಯೋಧ್ಯೆಯ ದೂತರು ಭರತನಿಗೂ ಭರತನ ಸೋದರಮಾವನಿಗೂ ಅನರ್ಘವಾದ ವಸ್ತುಗಳನ್ನು ಅರ್ಪಿಸಿದುದು : ವಸಿಷ್ಠರ ಸಂದೇಶವನ್ನು ತಿಳಿಯಪಡಿಸಿದುದು : ಭರತನು ತಂದೆಯೇ ಮೊದಲಾದವರ ಕುಶಲವನ್ನು ಕೇಳಿ ತಾತನ ಅನುಮತಿಯನ್ನು ಪಡೆದು ಶತ್ರುಘ್ನನೊಡನೆ ಅಯೋದ್ಯೆಗೆ ಪ್ರಯಾಣಹೊರಟುದು
ಸೈನ್ಯದೊಡನೆ ಭರತನ ಪ್ರಯಾಣ : ನದೀ-ನದ-ಪರ್ವತಗಳನ್ನು ದಾಟಿ ಉಜ್ಜಹಾನಾನಗರದ ಉದ್ಯಾನವನದಲ್ಲಿ ಸೈನ್ಯಕ್ಕೆ ನಿಧಾನವಾಗಿ ಬರುವಂತೆ ಆಜ್ಞೆಮಾಡಿ ತೀವ್ರಗತಿಯಿಂದ ಅಯೋಧ್ಯೆಗೆ ಹೊರಟುದು : ಸಾಲವನವನ್ನು ದಾಟಿ ಅಯೋಧ್ಯೆಯ ಸಮೀಪಕ್ಕೆ ಬಂದು ಅಲ್ಲಿಯ ದುರವಸ್ಥೆಯನ್ನು ಗಮನಿಸಿದುದು : ಸಾರಥಿಯೊಡನೆ ದುಃಖವನ್ನು ತೋಡಿಕೊಳ್ಳುತ್ತಾ ರಾಜಭವನವನ್ನು ಪ್ರವೇಶಿಸಿದುದು
ಭರತನು ಕೈಕೇಯಿಯ ಅಂತಃಪುರದಲ್ಲಿ ದಶರಥನ ಮರಣವಾರ್ತೆಯನ್ನು ಕೇಳಿ ಬಹಳವಾಗಿ ವಿಲಪಿಸಿದುದು : ಶ್ರೀರಾಮನು ಅರಣ್ಯಕ್ಕೆ ಹೋದನೆಂಬ ವೃತ್ತಾಂತವನ್ನು ತಾಯಿಯಿಂದಲೇ ಕೇಳಿ ಭ್ರಾಂತನಾದುದು
ಭರತನಿಂದ ಕೈಕೇಯಿಯ ಧಿಕ್ಕಾರ : ಅವಳ ಮೇಲೆ ಕೋಪಗೊಂಡುದು
ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು
ಕೌಸಲ್ಯೆಯ ಮುಂದೆ ಭರತನ ಶಪಥ
ದಶರಥನ ಅಂತ್ಯೇಷ್ಟಿಸಂಸ್ಕಾರ
ಭರತನು ತಂದೆಯ ಶ್ರಾದ್ಧಕರ್ಮದಲ್ಲಿ ಬ್ರಾಹ್ಮಣರಿಗೆ ಧನ-ಕನಕ-ವಸ್ತುಗಳನ್ನು ದಾನಕೊಟ್ಟುದು : ಹದಿಮೂರನೆಯ ದಿವಸ ಅಸ್ಥಿಸಂಚಯನದ ಕರ್ಮವನ್ನು ಮಾಡಲು ಹೋದ ಭರತ-ಶತ್ರುಘ್ನರು ಚಿತಾಭೂಮಿಯ ಮೇಲೆ ನಿಂತು ರೋದನಮಾಡಿದುದು : ವಸಿಷ್ಠರೂ ಮತ್ತು ಮಂತ್ರಿಗಳೂ ಸಮಾಧಾನಗೊಳಿಸಿದುದು
ರಾಜ್ಯಭಾರವನ್ನು ವಹಿಸಿಕೊಳ್ಳುವಂತೆ ಮಂತ್ರಿಗಳಿಂದ ಭರತನಿಗೆ ಒತ್ತಾಯ : ಭರತನು ಅಭಿಷೇಕಸಾಮಗ್ರಿಗಳಿಗೆ ಪ್ರದಕ್ಷಿಣೆಮಾಡಿ ಜ್ಯೇಷ್ಠಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿ ಶ್ರೀರಾಮನನ್ನು ಕರೆತರಲು ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು
ಶಿಲ್ಪಿಗಳಿಂದ-ಅಯೋಧ್ಯೆಯಿಂದ ಗಂಗಾನದಿಯವರೆಗೂ-ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ
ಪ್ರಾತಃಕಾಲದಲ್ಲಿ ವಂದಿ-ಮಾಗಧರ ಮಂಗಳ ಘೋಷಗಳು : ದುಃಖಗೊಂಡ ಭರತನಿಂದ ತಡೆ : ಸಭಾಭವನದಲ್ಲಿ ಎಲ್ಲರೂ ಸೇರುವಂತೆ ವಸಿಷ್ಠರ ಆದೇಶ
ಪಟ್ಟಾಭಿಷಿಕ್ತನಾಗುವಂತೆ ಭರತನಿಗೆ ವಸಿಷ್ಠರ ಆದೇಶ : ಭರತನ ಅಸಮ್ಮತಿ : ಶ್ರೀರಾಮನನ್ನು ಅರಣ್ಯದಿಂದ ಕರೆತರಲು ಸಿದ್ಧವಾಗುವಂತೆ ಎಲ್ಲರಿಗೂ ಆದೇಶ
ಭರತನ ವನಯಾತ್ರೆ : ಶೃಂಗಬೇರಪುರದಲ್ಲಿ ಬಿಡಾರ
ನಿಷಾದರಾಜನಾದ ಗುಹನು ನದಿಯನ್ನು ರಕ್ಷಿಸುವ ನೆಪದಲ್ಲಿ ಯುದ್ಧಸನ್ನದ್ಧರಾಗಿರುವಂತೆ ತನ್ನ ಜ್ಞಾತಿಗಳಿಗೆ ಆದೇಶ ನೀಡಿ ಸತ್ಕಾರ ಸಾಮಗ್ರಿಗಳನ್ನು ತೆಗೆದುಕೊಂಡು ಭರತನನ್ನು ಸಂದರ್ಶಿಸಿದುದು
ಗುಹ-ಭರತರ ಸಂಭಾಷಣೆ : ಭರತನ ದುಃಖ
ಗುಹನು ಲಕ್ಷ್ಮಣನ ಸದ್ಭಾವನೆಯನ್ನೂ ಮತ್ತು ವಿಲಾಪವನ್ನೂ ಭರತನಿಗೆ ವಿವರಿಸಿ ಹೇಳಿದುದು
ಶ್ರೀರಾಮನ ವಿಷಯವನ್ನು ಕೇಳಿ ಭರತನ ಮೂರ್ಛೆ : ಶತ್ರುಘ್ನ-ಕೌಸಲ್ಯಾ-ಕೈಕೇಯೀ-ಸುಮಿತ್ರೆಯರ ವಿಲಾಪ : ಎಚ್ಚರಗೊಂಡನಂತರ ಭರತನ ಕೇಳಿಕೆಯಂತೆ ಶ್ರೀರಾಮನ ಭೋಜನ, ಶಯ್ಯೆ ಮುಂತಾದ ವಿಷಯವಾಗಿ ಗುಹನಿಂದ ವಿವರಣೆ
ಶ್ರೀರಾಮನ ದರ್ಭೆಯ ಹಾಸಿಗೆಯನ್ನು ನೋಡಿ ಶೋಕಾವಿಷ್ಟನಾದ ಭರತನ ಉದ್ಗಾರ : ತಾನೂ ಜಟಾವಲ್ಕಧರನಾಗಿ ಅರಣ್ಯದಲ್ಲೇ ಇರುವ ನಿರ್ಧಾರ
ಭರತನು ಸೇನೆಯೊಡನೆ ಗಂಗಾನದಿಯನ್ನು ದಾಟಿ ಭರದ್ವಾಜರ ಆಶ್ರಮಕ್ಕೆ ತೆರಳಿದುದು
ಭರತ-ಭರದ್ವಾಜರ ಸಂಭಾಷಣೆ : ಆಶ್ರಮದಲ್ಲೇ ತಂಗಲು ಭರದ್ವಾಜರಿಂದ ಭರತನಿಗೆ ಆದೇಶ
ಭರದ್ವಾಜಮುನಿಗಳಿಂದ ಭರತನಿಗೂ ಮತ್ತು ಅವನ ಅಪಾರವಾದ ಸೈನ್ಯಕ್ಕೂ ದೇವಯೋಗ್ಯವಾದ ಸತ್ಕಾರ
ಭರತನು ಶ್ರೀರಾಮನ ಬಳಿಗೆ ಹೋಗಲು ಭರದ್ವಾಜರ ಅನುಮತಿಯನ್ನು ಪಡೆದು ಮುನಿಗಳಿಗೆ ತನ್ನ ತಾಯಂದಿರ ಪರಿಚಯ ಮಾಡಿಕೊಟ್ಟುದು : ಸೈನ್ಯಸಮೇತನಾಗಿ ಚಿತ್ರಕೂಟಪರ್ವತಕ್ಕೆ ಭರತನ ಪ್ರಯಾಣ
ಶ್ರೀರಾಮನು ಸೀತೆಗೆ ಮಂದಾಕಿನೀ ನದಿಯನ್ನು ವರ್ಣಿಸಿ ಹೇಳಿದುದು
ಪ್ರಕ್ಷಿಪ್ತ ಸರ್ಗ : ಕಾಕಾಸುರನ ಕಥೆ
ವನ್ಯಮೃಗಗಳು ಭಯಗೊಂಡು ಓಡುತ್ತಿರುವುದನ್ನು ನೋಡಿ ಶ್ರೀರಾಮನು ಕಾರಣವನ್ನು ತಿಳಿಯಲು ಲಕ್ಷ್ಮಣನಿಗೆ ಹೇಳಿದುದು : ಲಕ್ಷ್ಮಣನು ಮರವನ್ನು ಹತ್ತಿ ಅಪಾರಸೈನ್ಯವನ್ನು ವೀಕ್ಷಿಸಿ ಭರತನು ತಮಗೆ ಕೇಡನ್ನು ಬಯಸಿಯೇ ಬಂದಿರುವನೆಂದು ಭಾವಿಸಿ ಕೋಪದಿಂದ ಉದ್ಗರಿಸಿದುದು
ಶ್ರೀರಾಮನು ಲಕ್ಷ್ಮಣನ ಕೋಪವನ್ನು ಶಾಂತಗೊಳಿಸುತ್ತಾ ಭರತನ ಸಾತ್ತ್ವಿಕತೆಯನ್ನು ವಿವರಿಸಿ ಹೇಳಿದುದು : ಪರ್ವತದ ಕೆಳಭಾಗದಲ್ಲಿ ಭರತನ ಸೈನ್ಯದ ಬಿಡಾರ
ಭರತನು ಶ್ರೀರಾಮನ ಪರ್ಣಶಾಲೆಯನ್ನು ಹುಡುಕಿದುದು : ಶ್ರೀರಾಮನ ದರ್ಶನ
ಕುಶಲಪ್ರಶ್ನೆಯ ರೂಪದಲ್ಲಿ ಶ್ರೀರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸಿದುದು
ಭರತನು ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸುತ್ತಾ ತಂದೆಯು ಸ್ವರ್ಗಸ್ಥನಾದ ಸಮಾಚಾರವನ್ನು ತಿಳಿಸಿದುದು
ತಂದೆಯ ಮರಣವಾರ್ತೆಯನ್ನು ಕೇಳಿ ರಾಮನೇ ಮೊದಲಾದವರ ದುಃಖ : ತಂದೆಗಾಗಿ ಜಲಾಂಜಲಿಯನ್ನಿತ್ತು ಪಿಂಡಪ್ರದಾನಮಾಡಿದುದು
ವಸಿಷ್ಠರ ಜೊತೆಯಲ್ಲಿ ಹೊರಟ ಕೌಸಲ್ಯೆಯು ಮಂದಾಕಿನೀನದಿಯ ತೀರದಲ್ಲಿ ಬಹಳವಾಗಿ ದುಃಖಿಸಿದುದು : ರಾಮ-ಲಕ್ಷ್ಮಣ-ಸೀತೆಯರು ಕೌಸಲ್ಯೆಯೇ ಮೊದಲಾದ ತಾಯಂದಿರಿಗೂ ವಸಿಷ್ಠರಿಗೂ ಅಭಿವಂದಿಸಿದುದು
ಶ್ರೀರಾಮನು ಭರತನನ್ನು ಅರಣ್ಯಕ್ಕೆ ಬಂದುದರ ಕಾರಣವನ್ನು ಕೇಳಿದುದು : ರಾಜ್ಯವನ್ನು ಸ್ವೀಕರಿಸುವಂತೆ ಭರತನ ಪ್ರಾರ್ಥನೆ : ಶ್ರೀರಾಮನ ಅಸಮ್ಮತಿ
ರಾಜ್ಯವನ್ನು ಸ್ವೀಕರಿಸುವಂತೆ ಪುನಃ ಭರತನ ಒತ್ತಾಯ : ಶ್ರೀರಾಮನು ಜೀವನದ ಅನಿತ್ಯತೆಯನ್ನು ಪ್ರತಿಪಾದಿಸುತ್ತಾ ತಂದೆಯ ಅವಸಾನಕ್ಕಾಗಿ ದುಃಖಪಡದಂತೆ ಸಮಾಧಾನವನ್ನು ಹೇಳಿ ತಂದೆಯ ಆಜ್ಞೆಯನ್ನು ಪರಿಪಾಲಿಸುವ ಸಲುವಾಗಿಯೇ ರಾಜ್ಯಾಧಿಕಾರವನ್ನು ವಹಿಸುವುದಿಲ್ಲವೆಂದೂ ಅರಣ್ಯದಲ್ಲಿಯೇ ಇರುವುದಾಗಿಯೂ ಭರತನಿಗೆ ದೃಢಪಡಿಸಿದುದು
ಭರತನು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗಲು ಮತ್ತು ರಾಜ್ಯವನ್ನು ಸ್ವೀಕರಿಸಲು ಪುನಃ ಪ್ರಾರ್ಥಿಸಿದುದು
ವಸಿಷ್ಠರು ಸೃಷ್ಟಿಯ ಕ್ರಮವನ್ನೂ ಇಕ್ಷ್ವಾಕು ವಂಶದ ಪರಂಪರೆಯನ್ನೂ ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನೂ ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು
ವಸಿಷ್ಠರು ಸಮಾಧಾನಗೊಳಿಸಿದರೂ ಶ್ರೀರಾಮನು ಅಯೋಧ್ಯೆಗೆ ಬರಲು ಒಪ್ಪದಿರಲು ಭರತನು ರಾಮನ ಮುಂದೆ ನಿರಾಹಾರನಾಗಿ ಮಲಗಿದುದು : ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹೋಗಲು ಆಜ್ಞಾಪಿಸಿದುದು
ಶ್ರೀರಾಮನ ಆಜ್ಞೆಯಂತೆ ಅಯೋಧ್ಯೆಗೆ ಹಿಂದಿರುಗಲು ಋಷಿಗಳೂ ಭರತನಿಗೆ ಸಲಹೆ ನೀಡಿದುದು : ಪುನಃ ಭರತನು ಶ್ರೀರಾಮನ ಪಾದಗಳಲ್ಲಿ ಬಿದ್ದು ಅಯೋಧ್ಯೆಗೆ ಹಿಂದಿರುಗುವಂತೆ ಬೇಡಿಕೊಂಡುದು : ಶ್ರೀರಾಮನು ತನ್ನ ಪಾದುಕೆಗಳನ್ನು ಕೊಟ್ಟು ಸಮಾಧಾನಗೊಳಿಸಿ ಎಲ್ಲರನ್ನೂ ಕಳುಹಿಸಿಕೊಟ್ಟುದು