Volume 7

ಸುಂದರಕಾಂಡ

  • ಹನುಮಂತನಿಂದ ಸಮುದ್ರೋಲ್ಲಂಘನ : ಮಾರ್ಗಮಧ್ಯದಲ್ಲಿ ಮೈನಾಕನಿಂದ ಸ್ವಾಗತ : ಸುರಸೆಯ ಪರಾಜಯ : ಸಿಂಹಿಕೆಯ ವಧೆ : ಲಂಕೆಯ ಸೌಂದರ್ಯದ ವೀಕ್ಷಣೆ
  • ಲಂಕಾಪಟ್ಟಣದ ವರ್ಣನೆ : ಪಟ್ಟಣವನ್ನು ಪ್ರವೇಶಿಸಲು ಹನುಮಂತನು ಯೋಚಿಸಿದುದು : ಸೂಕ್ಷ್ಮರೂಪವನ್ನು ಧರಿಸಿ ಪಟ್ಟಣಕ್ಕೆ ಪ್ರವೇಶ : ಚಂದ್ರೋದಯದ ವರ್ಣನೆ
  • ಲಂಕಾಪಟ್ಟಣವನ್ನು ನೋಡಿ ಹನುಮಂತನು ವಿಸ್ಮಿತನಾದುದು : ಲಂಕೆಯನ್ನು ಪ್ರವೇಶಿಸುತ್ತಿದ್ದಾಗ ಲಂಕೆಯ ಅಧಿದೇವತೆಯು ಹನುಮಂತನನ್ನು ತಡೆದುದು : ಹನುಮಂತನಿಂದ ಪೆಟ್ಟುತಿಂದು ಅವನು ಲಂಕೆಯನ್ನು ಪ್ರವೇಶಿಸಲು ಅನುಮತಿಸಿದುದು
  • ಹನುಮಂತನು ಲಂಕಾಪಟ್ಟಣವನ್ನು ಪ್ರವೇಶಿಸಿ ರಾವಣನ ಅಂತಃಪುರಕ್ಕೂ ಹೋದುದು
  • ಹನುಮಂತನು ರಾವಣನ ಅಂತಃಪುರದ ಪ್ರತಿಯೊಂದು ಕಡೆಯಲ್ಲಿಯೂ ಸೀತೆಯನ್ನು ಹುಡುಕಿ ಅವಳು ಸಿಕ್ಕದ ಕಾರಣ ದುಃಖಿತನಾದುದು
  • ಹನುಮಂತನು ರಾವಣನ ಅರಮನೆಯಲ್ಲಿಯೂ ಇತರ ರಾಕ್ಷಸರ ಮನೆಗಳಲ್ಲಿಯೂ ಸೀತಾದೇವಿಯನ್ನು ಹುಡುಕಿದುದು
  • ರಾವಣನ ಅರಮನೆಯ ಮತ್ತು ಪುಷ್ಪಕವಿಮಾನದ ವರ್ಣನೆ
  • ಹನುಮಂತನು ಪುನಃ ಪುಷ್ಪಕವಿಮಾನವನ್ನು ಸಂದರ್ಶಿಸಿದುದು
  • ಹನುಮಂತನು ರಾವಣನ ಶ್ರೇಷ್ಠವಾದ ಅರಮನೆಯನ್ನೂ ಪುಷ್ಪಕವಿಮಾನವನ್ನೂ ನೋಡಿದ ಬಳಿಕ ರಾವಣನ ಅಂತಃಪುರದಲ್ಲಿ ಮಲಗಿದ್ದ ಸ್ತ್ರೀಯರನ್ನು ನೋಡಿದುದು
  • ಹನುಮಂತನು ಅಂತಃಪುರದಲ್ಲಿ ಮಲಗಿದ್ದ ರಾವಣನನ್ನೂ ಮತ್ತು ಅವನ ಪತ್ನಿಯರನ್ನೂ ನೋಡಿದುದು : ಮಂಡೋದರಿಯನ್ನು ಸೀತೆಯೆಂದು ಭಾವಿಸಿ ಹೃಷ್ಟನಾದುದು
  • ಮಲಗಿರುವವಳು ಸೀತೆಯಲ್ಲವೆಂಬುದನ್ನು ನಿಶ್ಚಯಿಸಿದ ಹನುಮಂತನು ಅಂತಃಪುರದಲ್ಲಿ ಮತ್ತು ಪಾನಗೃಹದಲ್ಲಿ ಸೀತೆಯನ್ನು ಹುಡುಕಲು ಪುನಃ ತೊಡಗಿದುದು : ಅಂತಃಪುರದರ್ಶನದಿಂದ ಸಂಭವಿಸುವ ಧರ್ಮಲೋಪದ ವ್ಯಾಕುಲತೆಯನ್ನು ತಾನೇ ಪರಿಹರಿಸಿಕೊಂಡುದು
  • ಸೀತಾದೇವಿಯು ಮರಣಹೊಂದಿರಬಹುದೆಂದು ಶಂಕಿಸಿದ ಹನುಮಂತನು ದುಃಖಿತನಾದುದು : ಪುನಃ ಉತ್ಸಾಹವನ್ನಾಶ್ರಯಿಸಿ ಹುಡುಕಲು ಹೊರಟುದು : ಎಷ್ಟು ಹುಡುಕಿದರೂ ಸೀತೆಯು ಸಿಕ್ಕದಿರಲು ಪುನಃ ಚಿಂತಾಮಗ್ನನಾದುದು
  • ಸೀತಾದೇವಿಯು ವಿನಾಶಹೊಂದಿರಬಹುದೆಂದು ಹನುಮಂತನು ಪುನಃ ಶಂಕಿಸಿದುದು : ಶ್ರೀರಾಮನಿಗೆ ಸೀತೆಯು ಸಿಕ್ಕಲಿಲ್ಲವೆಂಬ ವಾರ್ತೆಯನ್ನು ತಿಳಿಸುವುದರಿಂದ ಉಂಟಾಗಬಹುದಾದ ಅನರ್ಥವನ್ನು ನೆನೆದು ಕಿಷ್ಕಿಂಧೆಗೆ ಹಿಂದಿರುಗದಿರಲು ನಿಶ್ಚಯಿಸಿ ಅಶೋಕವನದಲ್ಲಿ ಸೀತೆಯನ್ನು ಹುಡುಕಲು ಹೊರಟುದು
  • ಹನುಮಂತನು ಅಶೋಕವನವನ್ನು ಪ್ರವೇಶಿಸಿ ಅದರ ಸೊಬಗನ್ನು ನೋಡಿದುದು : ಅಶೋಕವೃಕ್ಷವೊಂದರ ಮೇಲೆ ಕುಳಿತು ಸೀತೆಯಿರುವ ಸ್ಥಳವನ್ನು ಹುಡುಕಿದುದು
  • ವನಸಿರಿಯನ್ನು ನೋಡುತ್ತಿದ್ದ ಹನುಮಂತನು ಚೈತ್ಯಪ್ರಾಸಾದದ ಬಳಿಯಲ್ಲಿ ದಯನೀಯಸ್ಥಿತಿಯಲ್ಲಿದ್ದ ಸೀತಾದೇವಿಯನ್ನು ಕಂಡುದು
  • ಹನುಮಂತನು ಸೀತಾದೇವಿಯ ಶೀಲ-ಸೌಂದರ್ಯಗಳನ್ನು ಮನಸ್ಸಿನಲ್ಲಿಯೇ ಶ್ಲಾಘಿಸುತ್ತಾ ಅವಳ ಕಷ್ಟಕೋಟಲೆಗಳಿಗೆ ಮರುಗಿದುದು
  • ಹನುಮಂತನು ಘೋರರೂಪಿಣಿಯರಾದ ರಾಕ್ಷಸಿಯರ ಮಧ್ಯೆ ಸೀತಾದೇವಿಯನ್ನು ನೋಡಿ ಪ್ರಸನ್ನನಾದುದು
  • ರಾವಣನು ಅಂತಃಪುರದ ಸ್ತ್ರೀಯರಿಂದ ಪರಿವೃತನಾಗಿ ಅಶೋಕವನಕ್ಕೆ ಬಂದುದು
  • ರಾವಣನನ್ನು ನೋಡಿ ದುಃಖ-ಭಯ ಮತ್ತು ಚಿಂತೆಗಳಲ್ಲಿ ಮಗ್ನಳಾದ ಸೀತಾದೇವಿಯ ಸ್ವರೂಪವರ್ಣನೆ
  • ರಾವಣನು ಸೀತಾದೇವಿಯನ್ನು ಪ್ರಲೋಭನಗೊಳಿಸಲು ಪ್ರಯತ್ನಿಸಿದುದು
  • ಸೀತಾದೇವಿಯು ರಾವಣನನ್ನು ತಿರಸ್ಕರಿಸಿದುದು
  • ರಾವಣನು ಸೀತೆಗೆ ವಶಳಾಗಲು ಎರಡು ತಿಂಗಳ ಅವಧಿಯನ್ನು ಕೊಟ್ಟುದು : ಸೀತೆಯ ತಿರಸ್ಕಾರ : ರಾವಣನು ಸೀತೆಯನ್ನು ರಾಕ್ಷಸಿಯರ ವಶಕ್ಕೊಪ್ಪಿಸಿ ಅರಮನೆಯನ್ನು ಸೇರಿದುದು
  • ರಾಕ್ಷಸಿಯರು ಸೀತೆಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದುದು
  • ಸೀತಾದೇವಿಯು ರಾಕ್ಷಸಿಯರ ಮಾತನ್ನು ತಿರಸ್ಕರಿಸಿದುದು : ರಾಕ್ಷಸಿಯರು ಅವಳನ್ನು ಕೊಲ್ಲುವುದಾಗಿ ಹೆದರಿಸಿದುದು
  • ರಾಕ್ಷಸಿಯರ ಮಾತನ್ನು ತಿರಸ್ಕರಿಸುತ್ತಾ ಸೀತಾದೇವಿಯು ಶೋಕಸಂತಪ್ತಳಾಗಿ ವಿಲಪಿಸಿದುದು
  • ಸೀತೆಯ ವಿಲಾಪ : ಪ್ರಾಣಪರಿತ್ಯಾಗಮಾಡಲು ನಿಶ್ಚಯ
  • ತ್ರಿಜಟೆಯ ಸ್ವಪ್ನವೃತ್ತಾಂತ
  • ಸೀತಾದೇವಿಯು ಪ್ರಾಣತೊರೆಯಲು ಸಿದ್ಧಳಾದುದು
  • ಸೀತಾದೇವಿಗಾದ ಶುಭಶಕುನಗಳು
  • ಸೀತೆಯೊಡನೆ ಹೇಗೆ ಮಾತನಾಡಬೇಕೆಂಬುದರ ಬಗೆಗೆ ಹನುಮಂತನ ವಿವೇಚನೆ
  • ಹನುಮಂತನು ಸೀತಾದೇವಿಯು ಕೇಳುವಂತೆ ರಾಮಕಥೆಯನ್ನು ಸುಮಧುರವಾಗಿ ಹಾಡಿದುದು
  • ಸೀತಾದೇವಿಯ ತರ್ಕ-ವಿತರ್ಕಗಳು
  • ಸೀತೆಯು ಹನುಮಂತನಿಗೆ ತನ್ನ ಪರಿಚಯವನ್ನು ಮಾಡಿಕೊಡುತ್ತಾ ರಾವಣನು ಅಪಹರಿಸಿಕೊಂಡು ಬಂದ ವೃತ್ತಾಂತವನ್ನು ತಿಳಿಸಿದುದು
  • ಸೀತಾದೇವಿಯು ಹನುಮಂತನನ್ನು ಸಂದೇಹಿಸಿದುದು : ಹನುಮಂತನು ಸಮಾಧಾನಪಡಿಸುತ್ತಾ ಶ್ರೀರಾಮನ ಗುಣಗಳನ್ನು ವರ್ಣಿಸಿದುದು
  • ಸೀತಾದೇವಿಯ ಪ್ರಶ್ನೆಗಳಿಗೆ ಶ್ರೀರಾಮನ ಶರೀರದಲ್ಲಿದ್ದ ಶುಭಲಕ್ಷಣಗಳನ್ನು ಹನುಮಂತನು ವಿವರಿಸಿ ಹೇಳಿದುದು : ನರ-ವಾನರರ ಮೈತ್ರಿಯ ಪ್ರಸಂಗವನ್ನು ಕೇಳಿದನಂತರ ಸೀತಾದೇವಿಗೆ ಹನುಮಂತನ ಮಾತುಗಳಲ್ಲಿ ವಿಶ್ವಾಸವು ಹುಟ್ಟಿದುದು
  • ಹನುಮಂತನು ಸೀತಾದೇವಿಗೆ ಮುದ್ರೆಯುಂಗುರವನ್ನು ಕೊಟ್ಟುದು : ಶ್ರೀರಾಮನು ಯಾವಾಗ ತನ್ನನ್ನು ಉದ್ಧರಿಸುವನೆಂದು ಸೀತೆಯ ಉದ್ಗಾರ : ಶ್ರೀರಾಮನಿಗೆ ಸೀತೆಯಲ್ಲಿರುವ ಅನುರಾಗವನ್ನು ವರ್ಣಿಸಿ ಹೇಳಿ ಹನುಮಂತನು ಆಕೆಯನ್ನು ಸಮಾಧಾನಗೊಳಿಸಿದುದು
  • ಸೀತೆಯು ಹನುಮಂತನಿಗೆ ಶ್ರೀರಾಮನನ್ನು ಶೀಘ್ರವಾಗಿ ಕರೆತರಲು ಹೇಳಿದುದು : ಹನುಮಂತನು ಸೀತೆಯನ್ನು ತನ್ನ ಜೊತೆಯಲ್ಲೇ ಬರಲು ಹೇಳಿದುದು : ಸೀತೆಯ ಅಸಮ್ಮತಿ
  • ಸೀತಾದೇವಿಯು ಹನುಮಂತನಿಗೆ ಗುರುತಿಗಾಗಿ ಕಾಕಾಸುರನ ವೃತ್ತಾಂತವನ್ನು ಹೇಳಿ ಚೂಡಾಮಣಿಯನ್ನು ಕೊಟ್ಟುದು
  • ಚೂಡಾಮಣಿಯನ್ನು ಪಡೆದು ಹೊರಟ ಹನುಮಂತನಿಗೆ ಸೀತಾದೇವಿಯು ರಾಮ-ಲಕ್ಷ್ಮಣರೇ ಮೊದಲಾದವರು ತನ್ನ ಬಿಡುಗಡೆಗಾಗಿ ತೊಡಗಲು ಪ್ರೋತ್ಸಾಹಿಸುವಂತೆ ಹೇಳಿದುದು : ಸಮುದ್ರವನ್ನು ದಾಟಿಕೊಂಡು ಬರುವುದರಲ್ಲಿ ಸಂದೇಹಿಸಿದ ಸೀತಾದೇವಿಗೆ ಹನುಮಂತನು ವಾನರನಾಯಕರ ಪರಾಕ್ರಮವನ್ನು ವಿವರಿಸಿ ಹೇಳಿದುದು
  • ಸೀತಾದೇವಿಯು ಶ್ರೀರಾಮನಿಗೆ ಪುನಃ ಸಂದೇಶವನ್ನು ನೀಡಿದುದು : ಹನುಮಂತನು ಅವಳಿಗೆ ಆಶ್ವಾಸನೆಯನ್ನಿತ್ತು ಉತ್ತರದಿಕ್ಕಿನ ಕಡೆಗೆ ಪ್ರಯಾಣಮಾಡಿದುದು
  • ಹನುಮಂತನು ಪ್ರಮದಾವನವನ್ನು ಧ್ವಂಸಮಾಡಿದುದು
  • ರಾಕ್ಷಸಿಯರು ಪ್ರಮದಾವನದ ನಾಶವನ್ನು ರಾವಣನಿಗೆ ತಿಳಿಸಿದುದು : ಒಡನೆಯೇ ರಾವಣನು ಕಿಂಕರರೆಂಬ ರಾಕ್ಷಸರನ್ನು ಕಳುಹಿಸಿಕೊಟ್ಟುದು : ಮಾರುತಿಯಿಂದ ಅವರ ಸಂಹಾರ
  • ಹನುಮಂತನು ಚೈತ್ಯಪ್ರಾಸಾದವನ್ನು ವಿನಾಶಗೊಳಿಸಿ ಅಲ್ಲಿದ್ದ ರಾಕ್ಷಸರನ್ನು ಸಂಹರಿಸಿದುದು
  • ಪ್ರಹಸ್ತನ ಮಗ ಜಂಬುಮಾಲಿಯ ಸಂಹಾರ
  • ಅಮಾತ್ಯಪುತ್ರರ ಸಂಹಾರ
  • ರಾವಣನ ಐವರ ಸೇನಾಪತಿಗಳ ಸಂಹಾರ
  • ರಾವಣನ ಮಗನಾದ ಅಕ್ಷಕುಮಾರನ ಪರಾಕ್ರಮ ವರ್ಣನೆ : ಹನುಮಂತನಿಂದ ಅವನ ಸಂಹಾರ
  • ಇಂದ್ರಜಿತು-ಹನುಮಂತರ ಯುದ್ಧ : ಇಂದ್ರಜಿತುವು ಮಾರುತಿಯನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿ ರಾವಣನ ಬಳಿಗೆ ಒಯ್ದುದು
  • ರಾವಣನ ಪ್ರಭೆಯಿಂದ ಕೂಡಿದ ಮುಖವನ್ನು ನೋಡಿ ಹನುಮಂತನು ನಾನಾಪ್ರಕಾರವಾಗಿ ಯೋಚಿಸಿದುದು
  • ರಾವಣನು ಪ್ರಹಸ್ತನ ಮೂಲಕ ಹನುಮಂತನು ಲಂಕೆಗೆ ಬಂದುದರ ಕಾರಣವನ್ನು ಪ್ರಶ್ನಿಸಿದುದು : ತಾನು ಶ್ರೀರಾಮನ ದೂತನೆಂದು ಹನುಮಂತನು ಹೇಳಿದುದು
  • ಹನುಮಂತನು ಶ್ರೀರಾಮನ ಪ್ರಭಾವವನ್ನು ವರ್ಣಿಸುತ್ತಾ ರಾವಣನಿಗೆ ಹಿತೋಪದೇಶವನ್ನು ಮಾಡಿದುದು
  • ವಿಭೀಷಣನು ದೂತನ ವಧೆಯು ನಿಷಿದ್ಧವೆಂದೂ ಬೇರೆ ಯಾವುದಾದರೂ ಶಿಕ್ಷೆಯನ್ನು ಕೊಡಬಹುದೆಂದೂ ರಾವಣನಿಗೆ ಸಲಹೆಮಾಡಿದುದು : ರಾವಣನ ಅನುಮೋದನೆ
  • ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿಯನ್ನು ಹಚ್ಚಿ ನಗರದಲ್ಲಿ ಮೆರವಣಿಗೆ ಮಾಡಿದುದು
  • ಲಂಕಾಪುರಿಯ ದಹನ : ರಾಕ್ಷಸರ ವಿಲಾಪ
  • ಹನುಮಂತನು ಸೀತಾದೇವಿಯ ವಿಷಯವಾಗಿ ಚಿಂತಿಸಿದುದು : ಚಿಂತೆಯ ಪರಿಹಾರ
  • ಹನುಮಂತನು ಸೀತೆಯನ್ನು ಸಂದರ್ಶಿಸಿ ಕಿಷ್ಕಿಂಧೆಗೆ ಹಿಂದಿರುಗಿದುದು
  • ಸಮುದ್ರವನ್ನು ದಾಟಿಬಂದ ಹನುಮಂತನು ಜಾಂಬವಾದಿಗಳೊಡನೆ ಸೇರಿದುದು
  • ಜಾಂಬವಂತನ ಪ್ರಶ್ನೆಗಳಿಗೆ ಹನುಮಂತನು ಲಂಕೆಯ ಯಾತ್ರೆಯನ್ನು ಸಮಗ್ರವಾಗಿ ವರ್ಣಿಸಿದುದು
  • ಹನುಮಂತನು ಸೀತೆಯ ದುರವಸ್ಥೆಯನ್ನು ತಿಳಿಸುತ್ತಾ ಲಂಕೆಯ ಆಕ್ರಮಣಕ್ಕಾಗಿ ವಾನರರನ್ನು ಉತ್ತೇಜಿಸಿದುದು
  • ಲಂಕೆಯನ್ನು ಜಯಿಸಿ ಸೀತೆಯನ್ನು ಕರೆತರುವುದರಲ್ಲಿ ಅಂಗದನ ಉತ್ಸಾಹ : ಜಾಂಬವಂತನ ಅಸಮ್ಮತಿ
  • ವಾನರರೆಲ್ಲರೂ ಮಧುವನಕ್ಕೆ ಹೋಗಿ ಯಥೇಚ್ಛವಾಗಿ ಮಧುಪಾನಮಾಡಿ ಫಲಗಳನ್ನು ಭಕ್ಷಿಸಿದುದು : ವನದ ರಕ್ಷಕರಿಂದ ತಡೆ
  • ವಾನರಶ್ರೇಷ್ಠರು ಮಧುವನದ ರಕ್ಷಕರನ್ನೂ ದಧಿಮುಖನನ್ನೂ ಪರಾಭವಗೊಳಿಸಿದುದು : ದಧಿಮುಖನು ಸೇವಕರೊಡನೆ ದೂರುಕೊಡಲು ಸುಗ್ರೀವನ ಬಳಿಗೆ ಹೋದುದು
  • ಅಂಗದಾದಿಗಳು ಮಧುವನವನ್ನು ಧ್ವಂಸಮಾಡಿದ ವಾರ್ತೆಯನ್ನು ದಧಿಮುಖನು ಸುಗ್ರೀವನಿಗೆ ಹೇಳಿದುದು : ಅದರಿಂದ ಅಂಗದಾದಿಗಳು ಕೃತಕೃತ್ಯರಾಗಿ ಬಂದಿರುವರೆಂದು ಸುಗ್ರೀವನು ಊಹಿಸಿದುದು
  • ದಧಿಮುಖನು ಸುಗ್ರೀವನ ಸಂದೇಶವನ್ನು ತಿಳಿಸಿ ಅಂಗದನೇ ಮುಂತಾದವರನ್ನು ಕಿಷ್ಕಿಂಧೆಗೆ ಕಳುಹಿಸಿಕೊಟ್ಟುದು : ಹನುಮಂತನು ಶ್ರೀರಾಮನಿಗೆ ಪ್ರಣಾಮ ಮಾಡಿ ಸೀತಾದರ್ಶನದ ಸಮಾಚಾರವನ್ನು ತಿಳಿಸಿದುದು
  • ಹನುಮಂತನು ಶ್ರೀರಾಮನಿಗೆ ಸೀತೆಯ ಸಮಾಚಾರವನ್ನು ತಿಳಿಸಿದುದು
  • ಚೂಡಾಮಣಿಯನ್ನು ನೋಡಿ ಮತ್ತು ಸೀತೆಯ ಮಾತನ್ನು ಕೇಳಿ ಶ್ರೀರಾಮನು ವಿಲಪಿಸಿದುದು
  • ಪುನಃ ಹನುಮಂತನು ಸೀತೆಯ ಸಂದೇಶವನ್ನು ಶ್ರೀರಾಮನಿಗೆ ಹೇಳಿದುದು
  • ಸೀತೆಯ ಸಂದೇಹವನ್ನು ನಿವಾರಿಸಿದ ಬಗೆಯನ್ನು ಹನುಮಂತನು ಶ್ರೀರಾಮನಿಗೆ ಹೇಳಿದುದು

ಯುದ್ಧಕಾಂಡ

  • ಶ್ರೀರಾಮನಿಂದ ಹನುಮಂತನ ಪ್ರಶಂಸೆ : ಶ್ರೀರಾಮನು ಪ್ರೀತಿಯಿಂದ ಹನುಮಂತನನ್ನು ಆಲಿಂಗಿಸಿಕೊಂಡುದು : ಸಮುದ್ರವನ್ನು ದಾಟುವ ವಿಷಯದಲ್ಲಿ ಶ್ರೀರಾಮನ ಚಿಂತೆ
  • ಸುಗ್ರೀವನು ಶ್ರೀರಾಮನನ್ನು ಪ್ರೋತ್ಸಾಹಿಸಿದುದು
  • ಹನುಮಂತನು ಲಂಕೆಯಲ್ಲಿರುವ ದುರ್ಗಗಳು, ಹೆಬ್ಬಾಗಿಲುಗಳು, ಸೇನಾವಿಭಾಗಗಳು ಮುಂತಾದುವನ್ನು ವರ್ಣಿಸಿ ಹೇಳಿದುದು : ಸೈನಿಕರು ಪ್ರಯಾಣಕ್ಕೆ ಸಿದ್ಧರಾಗಲು ಆಜ್ಞಾಪಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು
  • ಶ್ರೀರಾಮನೊಡನೆ ವಾನರಸೈನ್ಯದ ಪ್ರಸ್ಥಾನ : ಸಮುದ್ರತೀರದಲ್ಲಿ ನಿವಾಸ
  • ಶ್ರೀರಾಮನು ಸೀತೆಯ ಸಲುವಾಗಿ ದುಃಖಿಸಿದುದು
  • ರಾವಣನು ತನ್ನ ಕರ್ತವ್ಯವೇನೆಂಬುದನ್ನು ನಿರ್ಣಯಿಸಲು ಸಲಹೆನೀಡುವಂತೆ ತನ್ನ ಮಂತ್ರಿಗಳಿಗೆ ಆದೇಶವನ್ನಿತ್ತುದು
  • ರಾಕ್ಷಸಮಂತ್ರಿಗಳು ರಾವಣನ ಮತ್ತು ಇಂದ್ರಜಿತುವಿನ ಪರಾಕ್ರಮವನ್ನು ವರ್ಣಿಸುತ್ತಾ ರಾಮನನ್ನು ಜಯಿಸುವ ವಿಶ್ವಾಸವನ್ನು ರಾವಣನಲ್ಲಿ ಹುಟ್ಟಿಸಿದುದು
  • ಪ್ರಹಸ್ತ-ದುರ್ಮುಖ-ವಜ್ರದಂಷ್ಟ್ರ-ನಿಕುಂಭ-ವಜ್ರಹನು–ಇವರು ರಾವಣನ ಮುಂದೆ ಶತ್ರುಸೈನ್ಯವನ್ನು ಸಂಹರಿಸಲು ಉತ್ಸಾಹವನ್ನು ತೋರಿದುದು
  • ವಿಭೀಷಣನು ಶ್ರೀರಾಮನ ಅಜೇಯತ್ವವನ್ನು ಹೇಳುತ್ತಾ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸುವಂತೆ ರಾವಣನಿಗೆ ಹೇಳಿದುದು
  • ವಿಭೀಷಣನು ರಾವಣನ ಅರಮನೆಗೆ ಹೋಗಿ ನಗರದಲ್ಲಾಗುತ್ತಿರುವ ಅಪಶಕುನಗಳನ್ನು ವರ್ಣಿಸಿ ಹೇಳುತ್ತಾ ಸೀತೆಯನ್ನು ಶ್ರೀರಾಮನ ಬಳಿಗೆ ಕಳುಹಿಸಲು ಪುನಃ ಸಲಹೆಯಿತ್ತುದು : ರಾವಣನ ತಿರಸ್ಕಾರ
  • ರಾವಣನೂ ಮತ್ತು ಅವನ ಸಭಾಸದರೂ ಮುಂದಿನ ಕಾರ್ಯಕ್ಕಾಗಿ ಸಭಾಸದನದಲ್ಲಿ ಸೇರಿದುದು
  • ರಾವಣನು ನಗರದ ರಕ್ಷಣೆಗಾಗಿ ಸೈನಿಕರನ್ನು ನಿಯಮಿಸಿದುದು : ಸೀತೆಯ ವಿಷಯದಲ್ಲಿ ತನಗಿರುವ ಆಸಕ್ತಿಯನ್ನೂ ಮತ್ತು ಅವಳನ್ನು ಅಪಹರಿಸಿದ ಪ್ರಸಂಗವನ್ನೂ ತಿಳಿಸಿ ಮುಂದಿನ ಕಾರ್ಯಕ್ಕೆ ಸಭಾಸದರ ಸಮ್ಮತಿಯನ್ನು ಬಯಸಿದುದು : ಕುಂಭಕರ್ಣನಿಂದ ರಾವಣನ ನಿಂದನೆ : ಬಳಿಕ ಸಮಸ್ತಶತ್ರುಗಳನ್ನೂ ಸಂಹರಿಸುವ ಭಾರವನ್ನು ತಾನೇ ವಹಿಸಿಕೊಂಡುದು
  • ಮಹಾಪಾರ್ಶ್ವನು ಬಲಾತ್ಕಾರಪೂರ್ವಕವಾಗಿ ಸೀತೆಯನ್ನು ಉಪಭೋಗಿಸಲು ಸಲಹೆ ನೀಡಿದುದು : ಶಾಪದ ಕಾರಣದಿಂದಾಗಿ ಹಾಗೆ ಮಾಡಲು ತನ್ನ ಅಸಾಮರ್ಥ್ಯವನ್ನು ರಾವಣನು ಪ್ರಕಟಿಸಿದುದು
  • ವಿಭೀಷಣನು ಶ್ರೀರಾಮನ ಅಜೇಯತ್ವವನ್ನು ಪ್ರತಿಪಾದಿಸುತ್ತಾ ಸೀತೆಯನ್ನು ರಾಮನಿಗೆ ಒಪ್ಪಿಸಲು ಸಲಹೆಯಿತ್ತುದು
  • ಇಂದ್ರಜಿತುವು ವಿಭೀಷಣನನ್ನು ಹಾಸ್ಯ ಮಾಡಿದುದು : ವಿಭೀಷಣನು ಅವನನ್ನು ನಿಂದಿಸುತ್ತಾ ತನ್ನ ಅಭಿಪ್ರಾಯವನ್ನು ಪುನಃ ಪ್ರತಿಪಾದಿಸಿದುದು
  • ರಾವಣನು ವಿಭೀಷಣನ ಸಲಹೆಯನ್ನು ತಿರಸ್ಕರಿಸಿ ಅವಮಾನಿಸಿದುದು : ವಿಭೀಷಣನೂ ರಾವಣನನ್ನು ನಿಂದಿಸಿ ಸಭೆಯಿಂದ ಹೊರಟುಹೋದುದು
  • ವಿಭೀಷಣನ ಶರಣಾಗತಿ : ಶ್ರೀರಾಮನು ವಿಭೀಷಣನಿಗೆ ಆಶ್ರಯಕೊಡುವ ವಿಷಯದಲ್ಲಿ ಸಾಧಕ-ಬಾಧಕಗಳನ್ನು ತನ್ನ ಮಂತ್ರಿಗಳೊಡನೆ ಚರ್ಚಿಸಿದುದು
  • ಶ್ರೀರಾಮನು ಶರಣಾಗತರಕ್ಷಣೆಯ ಮಹತ್ತ್ವವನ್ನೂ ಮತ್ತು ತನ್ನ ವ್ರತವನ್ನೂ ವಿವರಿಸಿ ಹೇಳಿದುದು : ವಿಭೀಷಣಸಮಾಗಮ
  • ಪರಿಶಿಷ್ಟ

Other Books in this COllection

ಸಂಪುಟ ೧

Volume 2

Volume 3

Volume 4

Volume 5

Volume 6

Volume 8

Volume 9

Volume 10

Volume 11