ಶ್ರೀರಾಮನ ಸದ್ಗುಣಗಳ ವರ್ಣನೆ : ದಶರಥನು ಶ್ರೀರಾಮನಿಗೆ ಯೌವರಾಜ್ಯಪಟ್ಟಾಭಿಷೇಕವನ್ನು ಮಾಡಲು ಯೋಚಿಸಿದುದು : ಆ ವಿಷಯವಾಗಿ ಚರ್ಚಿಸಲು ಸಾಮಂತರಾಜರಿಗೂ ನಾಗರಿಕರಿಗೂ ರಾಜಸಭೆಗೆ ಬರಲು ಆಹ್ವಾನವನ್ನಿತ್ತುದು
ತುಂಬಿದ ಮಹಾಸಭೆಯಲ್ಲಿ ದಶರಥನು ಶ್ರೀರಾಮನಿಗೆ ಯೌವರಾಜ್ಯಾಭಿಷೇಕಮಾಡುವ ವಿಷಯವನ್ನು ಪ್ರಸ್ತಾಪಿಸಿದುದು : ಸಭಾಸದರು ಶ್ರೀರಾಮನ ಗುಣಗಳನ್ನು ವರ್ಣಿಸಿ ದಶರಥನ ಅಭಿಪ್ರಾಯವನ್ನು ಅನುಮೋದಿಸಿದುದು
ದಶರಥರಾಜನು ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆಯನ್ನು ಮಾಡುವಂತೆ ವಸಿಷ್ಠ-ವಾಮದೇವರನ್ನು ಪ್ರಾರ್ಥಿಸಿದುದು : ರಾಜನು ಸುಮಂತ್ರನ ಮೂಲಕವಾಗಿ ಶ್ರೀರಾಮನನ್ನು ಕರೆಸಿಕೊಂಡು ರಾಜನೀತಿಯ ವಿಷಯಗಳನ್ನು ಹೇಳಿದುದು
ಶ್ರೀರಾಮನಿಗೆ ಯುವರಾಜಪಟ್ಟಗಟ್ಟಲು ನಿಶ್ಚಯಿಸಿದ ದಶರಥನು ಪುನಃ ಸುಮಂತ್ರನ ಮೂಲಕವಾಗಿ ಶ್ರೀರಾಮನನ್ನು ಕರೆಯಿಸಿ ಅವನಿಗೆ ಅವಶ್ಯಕವಾದ ಮಾತುಗಳನ್ನು ಹೇಳಿದುದು : ಶ್ರೀರಾಮನು ತಾಯಿಯಾದ ಕೌಸಲ್ಯಾದೇವಿಯ ಅಂತಃಪುರಕ್ಕೆ ಹೋಗಿ ಪಟ್ಟಾಭಿಷೇಕದ ಶುಭವಾರ್ತೆಯನ್ನು ಅರುಹಿದುದು : ಕೌಸಲ್ಯೆಯ ಆಶೀರ್ವಾದ : ಶ್ರೀರಾಮನು ಲಕ್ಷ್ಮಣನೊಡನೆ ಪ್ರೇಮಪೂರ್ವಕವಾಗಿ ಮಾತನಾಡುತ್ತಾ ತನ್ನ ಅರಮನೆಗೆ ತೆರಳಿದುದು
ಶ್ರೀರಾಮನ ಅಭಿಷೇಕದ ಸಮಾಚಾರವನ್ನು ಕೇಳಿ ಖಿನ್ನಳಾದ ಮಂಥರೆಯು ಶ್ರೀರಾಮನಿಗೆ ಪಟ್ಟಾಭಿಷೇಕವಾಗದಂತೆ ತಡೆಯಲು ಕೈಕೇಯಿಯನ್ನು ಹುರಿದುಂಬಿಸಿದುದು : ಕೈಕೇಯಿಯು ಶ್ರೀರಾಮನ ಪಟ್ಟಾಭಿಷೇಕವಾರ್ತೆಯನ್ನು ಮಂಥರೆಯಿಂದ ಕೇಳಿ ಸಂತುಷ್ಟಳಾಗಿ ಅವಳಿಗೆ ಪಾರಿತೋಷಿಕವನ್ನು ನೀಡಲು ಹೋದುದು : ಮಂಥರೆಯು ಕುಟಿಲೋಪಾಯದಿಂದ ಕೈಕೇಯಿಯ ಮನಸ್ಸನ್ನು ತಿರುಗಿಸಿ ದಶರಥನಿಂದ ಎರಡು ವರಗಳನ್ನು ಕೇಳುವಂತೆ ಪ್ರೇರಿಸಿದುದು
ಮಂಥರೆಯು ಕೈಕೇಯಿಗೆ ರಾಮನಿಗೆ ಪಟ್ಟಗಟ್ಟುವುದು ಅನಿಷ್ಟಕಾರಿ ಎಂಬುದನ್ನು ಮನದಟ್ಟಾಗುವಂತೆ ಹೇಳಿದುದು : ಕೈಕೇಯಿಯು ಶ್ರೀರಾಮನ ಗುಣಗಳನ್ನು ವರ್ಣನೆಮಾಡಿ ಅವನಿಗೆ ಪಟ್ಟಗಟ್ಟುವುದು ಉಚಿತವಾಗಿರುವುದೆಂದು ಸಮರ್ಥಿಸಿದುದು : ಪುನಃ ಮಂಥರೆಯು ರಾಮನಿಗೆ ಪಟ್ಟಗಟ್ಟುವುದುರಿಂದ ಭರತನಿಗೆ ಅನಿಷ್ಟವುಂಟಾಗುವುದೆಂದು ಹೇಳಿದುದು
ದಶರಥನು ಕೈಕೇಯಿಯ ಅಂತಃಪುರಕ್ಕೆ ಹೋದಾಗ ಅವಳು ಅಲ್ಲಿಲ್ಲದೇ ಕ್ರೋಧಾಗಾರಕ್ಕೆ ಹೋಗಿರುವುದನ್ನು ತಿಳಿದು ದುಃಖಿಸಿದುದು : ಅಲ್ಲಿಗೆ ತಾನೂ ಹೋಗಿ ಪತ್ನಿಯನ್ನು ಪರಿ-ಪರಿಯಾಗಿ ಸಾಂತ್ವನಗೊಳಿಸಿದುದು
ಕೈಕೇಯಿಯು ರಾಜನನ್ನು ಪ್ರತಿಜ್ಞೆಗೆ ಬದ್ಧನಾಗುವಂತೆ ಮಾಡಿ ಹಿಂದೆ ಕೊಟ್ಟಿದ್ದ ಎರಡು ವರಗಳನ್ನು ಅವನ ಸ್ಮರಣೆಗೆ ತಂದು ಭರತನಿಗೆ ಪಟ್ಟಾಭಿಷೇಕವನ್ನೂ- ರಾಮನಿಗೆ ವನವಾಸವನ್ನೂ ಪ್ರಾರ್ಥಿಸಿದುದು
ದಶರಥನ ಚಿಂತೆ : ವಿಲಾಪ : ಕೈಕೇಯಿಯನ್ನು ನಿಂದಿಸಿದುದು : ಅವಳನ್ನು ಬಗೆ-ಬಗೆಯಾಗಿ ಸಮಾಧಾನಗೊಳಿಸಿ ಇಂತಹ ಘೋರವಾದ ವರವನ್ನು ಕೇಳದಂತೆ ಯಾಚಿಸಿದುದು
ದಶರಥನ ವಿಲಾಪ
ಕೈಕೇಯಿಯು ರಾಜನಿಗೆ ಸತ್ಯನಿಷ್ಠೆಯಲ್ಲಿ ದೃಢವಾಗಿರಲು ಹೇಳಿ ವರಗಳನ್ನು ಕೊಡುವಂತೆ ಆಗ್ರಹಪಡಿಸಿದುದು : ವಸಿಷ್ಠರ ಆಗಮನವನ್ನು ತಿಳಿಸಲು ಅಂತಃಪುರಕ್ಕೆ ಹೋದ ಸುಮಂತ್ರನು ರಾಜನ ಆಜ್ಞಾನುಸಾರವಾಗಿ ಶ್ರೀರಾಮನನ್ನು ಕರೆತರಲು ಹೋದುದು
ಸುಮಂತ್ರನು ರಾಜನ ಸಂದೇಶವನ್ನು ರಾಮನಿಗೆ ತಿಳಿಸಿದುದು : ಶ್ರೀರಾಮನು ಸೀತಾದೇವಿಯ ಅನುಮತಿಯನ್ನು ಪಡೆದು ಲಕ್ಷ್ಮಣನೊಡನೆ ದಶರಥರಾಜನ ಅರಮನೆಗೆ ಹೊರಟುದು
ಶ್ರೀರಾಮನು ರಾಜಮಾರ್ಗದ ಸೊಬಗನ್ನು ನೋಡುತ್ತಾ ಸುಹೃದರ ಪ್ರಿಯೋಕ್ತಿಗಳನ್ನು ಕೇಳುತ್ತಾ ತಂದೆಯ ಮನೆಗೆ ಹೋದುದು
ಶ್ರೀರಾಮನು ವ್ಯಸನಾಕ್ರಾಂತನಾಗಿದ್ದ ತಂದೆಯ ಚಿಂತೆಗೆ ಕಾರಣವೇನೆಂದು ಕೈಕೇಯಿಯನ್ನು ಕೇಳಿದುದು : ಕೈಕೇಯಿಯು ತಾನು ಕೇಳಿರುವ ವರಗಳ ವಿಷಯವನ್ನು ಹೇಳಿ ಶ್ರೀರಾಮನಿಗೆ ಅರಣ್ಯಕ್ಕೆ ಹೋಗಲು ಹೇಳಿದುದು
ದಶರಥರಾಜನ ಇತರ ಪತ್ನಿಯರ ವಿಲಾಪ : ಶ್ರೀರಾಮನು ಕೌಸಲ್ಯೆಯ ಮನೆಗೆ ಹೋಗಿ ವನವಾಸದ ವಿಷಯವನ್ನು ಹೇಳಿದುದು : ಕೌಸಲ್ಯೆಯ ಮೂರ್ಛೆ : ಶ್ರೀರಾಮನ ಶೈತ್ಯೋಪಚಾರದಿಂದ ಮೂರ್ಛೆತಳೆದ ಕೌಸಲ್ಯೆಯ ವಿಲಾಪ
ಲಕ್ಷ್ಮಣನ ಕೋಪ : ರಾಜ್ಯಾಧಿಕಾರವನ್ನು ತಂದೆಯಿಂದ ಬಲಾತ್ಕಾರಪೂರ್ವಕವಾಗಿ ಪಡೆದುಕೊಳ್ಳಲು ಸಲಹೆ ನೀಡಿದುದು : ಶ್ರೀರಾಮನು ಪಿತೃವಾಕ್ಯಪರಿಪಾಲನೆಯೇ ಪರಮಧರ್ಮವೆಂದು ಪ್ರತಿಪಾದಿಸಿ ಕೌಸಲ್ಯಯನ್ನೂ-ಲಕ್ಷ್ಮಣನನ್ನೂ ಸಮಾಧಾನ ಗೊಳಿಸಿದುದುೆ
ಶ್ರೀರಾಮನು ಲಕ್ಷ್ಮಣನನ್ನು ಸಮಾಧಾನಗೊಳಿಸುತ್ತಾ ತನ್ನ ವನವಾಸಕ್ಕೆ ದೈವವೇ ಕಾರಣವೆಂದು ಪ್ರತಿಪಾದಿಸಿದುದು : ಅಭಿಷೇಕದ ಸಾಮಗ್ರಿಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಆದೇಶ ನೀಡಿದುದು
ವಿಲಪಿಸುತ್ತಿದ್ದ ಕೌಸಲ್ಯೆಯು ತನ್ನನ್ನೂ ಜೊತೆಯಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗುವಂತೆ ಆಗ್ರಹ ಪಡಿಸಿದುದು : ಪತಿಸೇವೆಯೇ ಹೆಂಗಸಿನ ಧರ್ಮವೆಂದು ಶ್ರೀರಾಮನು ಪ್ರತಿಪಾದಿಸಿದುದು : ಅರಣ್ಯಕ್ಕೆ ಹೋಗಲು ತಾಯಿಯ ಅನುಮತಿ
ಶ್ರೀರಾಮನ ವಿಮನಸ್ಕತೆಗೆ ಕಾರಣವನ್ನು ಸೀತೆಯು ಪ್ರಶ್ನಿಸಿದುದು : ಶ್ರೀರಾಮನು ತಾನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ಹೊರಟಿರುವುದಾಗಿಯೂ ಸೀತಾದೇವಿಯು ಅರಮನೆಯಲ್ಲಿಯೇ ಇದ್ದು ಗುರು ಜನರನ್ನು ಸೇವಿಸುತ್ತಾ ಭರತನಿಗೆ ವಿಧೇಯಳಾಗಿ ಇರುವಂತೆಯೂ ಹಿತೋಪದೇಶಮಾಡಿದುದು
ಸೀತಾದೇವಿಯು ತನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಔಚಿತ್ಯವನ್ನು ಶ್ರೀರಾಮನಿಗೆ ವಿವರಿಸಿ ಹೇಳಿದುದು
ಸೀತಾದೇವಿಯು ಶ್ರೀರಾಮನನ್ನು ಆಕ್ಷೇಪಣೆಯೊಡನೆ ಕಾಡಿಗೆ ಕರೆದುಕೊಂಡು ಹೋಗಲು ಆಗ್ರಹಪಡಿಸಿದುದು : ಅವಳ ವಿಲಾಪವನ್ನು ನೋಡಿ ಶ್ರೀರಾಮನು ತನ್ನೊಡನೆ ಅರಣ್ಯಕ್ಕೆ ಬರಲು ಒಪ್ಪಿಗೆಯನ್ನಿತ್ತುದು : ಮಾತಾ-ಪಿತೃಗಳ ಮತ್ತು ಗುರುಜನರ ಸೇವೆಯ ಮಹತ್ತ್ವವನ್ನು ಹೇಳಿದುದು : ಅರಣ್ಯಪ್ರಯಾಣಕ್ಕೆ ಪೂರ್ವಭಾವಿಯಾಗಿ ತನ್ನಲ್ಲಿರುವ ವಸ್ತುಗಳೆಲ್ಲವನ್ನೂ ದಾನಮಾಡಿಬಿಡುವಂತೆ ಶ್ರೀರಾಮನು ಸೀತಾದೇವಿಗೆ ಹೇಳಿದುದು
ರಾಮ-ಲಕ್ಷ್ಮಣರ ಸಂವಾದ : ಶ್ರೀರಾಮನ ಆಜ್ಞೆಯಂತೆ ಲಕ್ಷ್ಮ ಣನು ದಿವ್ಯಾಯುಧಗಳನ್ನು ತೆಗೆದುಕೊಂಡು ಅರಣ್ಯಪ್ರಯಾಣಕ್ಕೆ ಸಿದ್ಧನಾದುದು : ಶ್ರೀರಾಮನು ಬ್ರಾಹ್ಮಣರಿಗೆ ತನ್ನ ಐಶ್ವರ್ಯವೆಲ್ಲವನ್ನೂ ದಾನಮಾಡಲು ಲಕ್ಷ್ಮಣನಿಗೆ ಹೇಳಿದುದು
ಸೀತಾಸಹಿತನಾದ ಶ್ರೀರಾಮನು ವಸಿಷ್ಠಪುತ್ರನಾದ ಸುಯಜ್ಞನನ್ನು ಕರೆಸಿ ಅವನಿಗೂ ಅವನ ಪತ್ನಿಗೂ ಬಹುಮೂಲ್ಯವಾದ ಆಭರಣಗಳನ್ನೂ, ರತ್ನಗಳನ್ನೂ, ಧನವನ್ನೂ ದಾನಮಾಡಿದುದು : ಲಕ್ಷ್ಮಣಸಹಿತನಾಗಿ ಬ್ರಾಹ್ಮಣರಿಗೂ, ಬ್ರಹ್ಮಚಾರಿಗಳಿಗೂ, ಸೇವಕರಿಗೂ, ತ್ರಿಜಟಬ್ರಾಹ್ಮಣನಿಗೂ ಮತ್ತು ಸುಹೃದರಿಗೂ ತನ್ನ ಐಶ್ವರ್ಯವೆಲ್ಲವನ್ನೂ ಹಂಚಿಕೊಟ್ಟುದು
ಶ್ರೀರಾಮನು ಲಕ್ಷ್ಮಣಸಮೇತನಾಗಿ ರಾಜನ ಬಳಿಗೆ ಹೋಗಿ ಅರಣ್ಯಕ್ಕೆ ಹೊರಡಲು ಅನುಮತಿಯನ್ನು ಬೇಡಿದುದು : ರಾಜನ ಶೋಕ ಮತ್ತು ಮೂರ್ಛೆ : ಶ್ರೀರಾಮನ ಸಾಂತ್ವನ : ರಾಜನು ಶ್ರೀರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡು ಪುನಃ ಮೂರ್ಛೆಹೋದುದು
ದಶರಥರಾಜನು ಮೂರ್ಛಿತನಾಗಿ ಬಿದ್ದುದು : ಶ್ರೀರಾಮನಿಗಾಗಿ ವಿಲಪಿಸಿದುದು : ಕೈಕೇಯಿಯನ್ನು ತನ್ನ ಬಳಿಗೆ ಬರಲು ವಿರೋಧಿಸಿದುದು : ಕೌಸಲ್ಯೆಯ ಸಹಾಯದಿಂದ ಅವಳ ಅಂತಃಪುರಕ್ಕೆ ಹೋದುದು : ಅಲ್ಲಿಯೂ ಶ್ರೀರಾಮನ ಸಲುವಾಗಿ ದುಃಖಿಸಿದುದು
ಸೀತಾ-ಲಕ್ಷ್ಮಣರೊಡನೆ ಶ್ರೀರಾಮನು ತಮಸಾ ನದಿಯ ತೀರದಲ್ಲಿ ಬಿಡಾರಮಾಡಿದುದು : ತಂದೆ-ತಾಯಿಗಳ ಮತ್ತು ಅಯೋಧ್ಯೆಯ ವಿಷಯವಾಗಿ ಚಿಂತಿಸಿದುದು : ಅಯೋಧ್ಯಾ ವಾಸಿಗಳು ಮಲಗಿರುವಾಗ ಅವರನ್ನು ಬಿಟ್ಟು ಕಾಡಿಗೆ ಪ್ರಯಾಣಮಾಡಿದುದು