Volume 2

ಅಯೋಧ್ಯಾಕಾಂಡ

  • ಶ್ರೀರಾಮನ ಸದ್ಗುಣಗಳ ವರ್ಣನೆ : ದಶರಥನು ಶ್ರೀರಾಮನಿಗೆ ಯೌವರಾಜ್ಯಪಟ್ಟಾಭಿಷೇಕವನ್ನು ಮಾಡಲು ಯೋಚಿಸಿದುದು : ಆ ವಿಷಯವಾಗಿ ಚರ್ಚಿಸಲು ಸಾಮಂತರಾಜರಿಗೂ ನಾಗರಿಕರಿಗೂ ರಾಜಸಭೆಗೆ ಬರಲು ಆಹ್ವಾನವನ್ನಿತ್ತುದು
  • ತುಂಬಿದ ಮಹಾಸಭೆಯಲ್ಲಿ ದಶರಥನು ಶ್ರೀರಾಮನಿಗೆ ಯೌವರಾಜ್ಯಾಭಿಷೇಕಮಾಡುವ ವಿಷಯವನ್ನು ಪ್ರಸ್ತಾಪಿಸಿದುದು : ಸಭಾಸದರು ಶ್ರೀರಾಮನ ಗುಣಗಳನ್ನು ವರ್ಣಿಸಿ ದಶರಥನ ಅಭಿಪ್ರಾಯವನ್ನು ಅನುಮೋದಿಸಿದುದು
  • ದಶರಥರಾಜನು ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆಯನ್ನು ಮಾಡುವಂತೆ ವಸಿಷ್ಠ-ವಾಮದೇವರನ್ನು ಪ್ರಾರ್ಥಿಸಿದುದು : ರಾಜನು ಸುಮಂತ್ರನ ಮೂಲಕವಾಗಿ ಶ್ರೀರಾಮನನ್ನು ಕರೆಸಿಕೊಂಡು ರಾಜನೀತಿಯ ವಿಷಯಗಳನ್ನು ಹೇಳಿದುದು
  • ಶ್ರೀರಾಮನಿಗೆ ಯುವರಾಜಪಟ್ಟಗಟ್ಟಲು ನಿಶ್ಚಯಿಸಿದ ದಶರಥನು ಪುನಃ ಸುಮಂತ್ರನ ಮೂಲಕವಾಗಿ ಶ್ರೀರಾಮನನ್ನು ಕರೆಯಿಸಿ ಅವನಿಗೆ ಅವಶ್ಯಕವಾದ ಮಾತುಗಳನ್ನು ಹೇಳಿದುದು : ಶ್ರೀರಾಮನು ತಾಯಿಯಾದ ಕೌಸಲ್ಯಾದೇವಿಯ ಅಂತಃಪುರಕ್ಕೆ ಹೋಗಿ ಪಟ್ಟಾಭಿಷೇಕದ ಶುಭವಾರ್ತೆಯನ್ನು ಅರುಹಿದುದು : ಕೌಸಲ್ಯೆಯ ಆಶೀರ್ವಾದ : ಶ್ರೀರಾಮನು ಲಕ್ಷ್ಮಣನೊಡನೆ ಪ್ರೇಮಪೂರ್ವಕವಾಗಿ ಮಾತನಾಡುತ್ತಾ ತನ್ನ ಅರಮನೆಗೆ ತೆರಳಿದುದು
  • ದಶರಥನ ಸಲಹೆಯಂತೆ ವಸಿಷ್ಠರು ಸೀತಾ-ರಾಮರಿಗೆ ಉಪವಾಸವ್ರತವನ್ನು ಕೈಗೊಳ್ಳಲು ಸಂಕಲ್ಪ ಮಾಡಿಸಿದುದು : ಸೀತಾ-ರಾಮರು ಉಪವಾಸವ್ರತವನ್ನು ಕೈಗೊಂಡರೆಂಬ ವಾರ್ತೆಯನ್ನು ವಸಿಷ್ಠರು ದಶರಥನಿಗೆ ತಿಳಿಯಪಡಿಸಿದುದು
  • ಸೀತಾಸಹಿತನಾಗಿ ಶ್ರೀರಾಮನು ನಿಯಮವ್ರತವನ್ನು ಕೈಗೊಂಡುದು : ಹರ್ಷಭರಿತರಾದ ಪುರವಾಸಿಗಳು ನಗರವನ್ನು ಸಿಂಗರಿಸಿದುದು : ಶ್ರೀರಾಮನ ಪಟ್ಟಾಭಿಷೇಕಕ್ಕೆ ಆಜ್ಞಾಪಿಸಿದ ದಶರಥರಾಜನಿಗೆ ಅಯೋಧ್ಯಾಪುರವಾಸಿಗಳ ಕೃತಜ್ಞತೆ
  • ಶ್ರೀರಾಮನ ಅಭಿಷೇಕದ ಸಮಾಚಾರವನ್ನು ಕೇಳಿ ಖಿನ್ನಳಾದ ಮಂಥರೆಯು ಶ್ರೀರಾಮನಿಗೆ ಪಟ್ಟಾಭಿಷೇಕವಾಗದಂತೆ ತಡೆಯಲು ಕೈಕೇಯಿಯನ್ನು ಹುರಿದುಂಬಿಸಿದುದು : ಕೈಕೇಯಿಯು ಶ್ರೀರಾಮನ ಪಟ್ಟಾಭಿಷೇಕವಾರ್ತೆಯನ್ನು ಮಂಥರೆಯಿಂದ ಕೇಳಿ ಸಂತುಷ್ಟಳಾಗಿ ಅವಳಿಗೆ ಪಾರಿತೋಷಿಕವನ್ನು ನೀಡಲು ಹೋದುದು : ಮಂಥರೆಯು ಕುಟಿಲೋಪಾಯದಿಂದ ಕೈಕೇಯಿಯ ಮನಸ್ಸನ್ನು ತಿರುಗಿಸಿ ದಶರಥನಿಂದ ಎರಡು ವರಗಳನ್ನು ಕೇಳುವಂತೆ ಪ್ರೇರಿಸಿದುದು
  • ಮಂಥರೆಯು ಕೈಕೇಯಿಗೆ ರಾಮನಿಗೆ ಪಟ್ಟಗಟ್ಟುವುದು ಅನಿಷ್ಟಕಾರಿ ಎಂಬುದನ್ನು ಮನದಟ್ಟಾಗುವಂತೆ ಹೇಳಿದುದು : ಕೈಕೇಯಿಯು ಶ್ರೀರಾಮನ ಗುಣಗಳನ್ನು ವರ್ಣನೆಮಾಡಿ ಅವನಿಗೆ ಪಟ್ಟಗಟ್ಟುವುದು ಉಚಿತವಾಗಿರುವುದೆಂದು ಸಮರ್ಥಿಸಿದುದು : ಪುನಃ ಮಂಥರೆಯು ರಾಮನಿಗೆ ಪಟ್ಟಗಟ್ಟುವುದುರಿಂದ ಭರತನಿಗೆ ಅನಿಷ್ಟವುಂಟಾಗುವುದೆಂದು ಹೇಳಿದುದು
  • ಮಂಥರೆಯ ದುರ್ಬೋಧನೆಯಿಂದ ಪ್ರಭಾವಿತಳಾದ ಕೈಕೇಯಿಯು ದಶರಥನನ್ನು ವಿಮೋಹಗೊಳಿಸಲು ಕೋಪಭವನವನ್ನು ಪ್ರವೇಶಿಸಿದುದು
  • ದಶರಥನು ಕೈಕೇಯಿಯ ಅಂತಃಪುರಕ್ಕೆ ಹೋದಾಗ ಅವಳು ಅಲ್ಲಿಲ್ಲದೇ ಕ್ರೋಧಾಗಾರಕ್ಕೆ ಹೋಗಿರುವುದನ್ನು ತಿಳಿದು ದುಃಖಿಸಿದುದು : ಅಲ್ಲಿಗೆ ತಾನೂ ಹೋಗಿ ಪತ್ನಿಯನ್ನು ಪರಿ-ಪರಿಯಾಗಿ ಸಾಂತ್ವನಗೊಳಿಸಿದುದು
  • ಕೈಕೇಯಿಯು ರಾಜನನ್ನು ಪ್ರತಿಜ್ಞೆಗೆ ಬದ್ಧನಾಗುವಂತೆ ಮಾಡಿ ಹಿಂದೆ ಕೊಟ್ಟಿದ್ದ ಎರಡು ವರಗಳನ್ನು ಅವನ ಸ್ಮರಣೆಗೆ ತಂದು ಭರತನಿಗೆ ಪಟ್ಟಾಭಿಷೇಕವನ್ನೂ- ರಾಮನಿಗೆ ವನವಾಸವನ್ನೂ ಪ್ರಾರ್ಥಿಸಿದುದು
  • ದಶರಥನ ಚಿಂತೆ : ವಿಲಾಪ : ಕೈಕೇಯಿಯನ್ನು ನಿಂದಿಸಿದುದು : ಅವಳನ್ನು ಬಗೆ-ಬಗೆಯಾಗಿ ಸಮಾಧಾನಗೊಳಿಸಿ ಇಂತಹ ಘೋರವಾದ ವರವನ್ನು ಕೇಳದಂತೆ ಯಾಚಿಸಿದುದು
  • ದಶರಥನ ವಿಲಾಪ
  • ಕೈಕೇಯಿಯು ರಾಜನಿಗೆ ಸತ್ಯನಿಷ್ಠೆಯಲ್ಲಿ ದೃಢವಾಗಿರಲು ಹೇಳಿ ವರಗಳನ್ನು ಕೊಡುವಂತೆ ಆಗ್ರಹಪಡಿಸಿದುದು : ವಸಿಷ್ಠರ ಆಗಮನವನ್ನು ತಿಳಿಸಲು ಅಂತಃಪುರಕ್ಕೆ ಹೋದ ಸುಮಂತ್ರನು ರಾಜನ ಆಜ್ಞಾನುಸಾರವಾಗಿ ಶ್ರೀರಾಮನನ್ನು ಕರೆತರಲು ಹೋದುದು
  • ಸುಮಂತ್ರನು ರಾಜಾಜ್ಞೆಯಂತೆ ಶ್ರೀರಾಮನನ್ನು ಕರೆತರಲು ರಾಮಭವನಕ್ಕೆ ಹೋದುದು
  • ಸುಮಂತ್ರನು ರಾಜನ ಸಂದೇಶವನ್ನು ರಾಮನಿಗೆ ತಿಳಿಸಿದುದು : ಶ್ರೀರಾಮನು ಸೀತಾದೇವಿಯ ಅನುಮತಿಯನ್ನು ಪಡೆದು ಲಕ್ಷ್ಮಣನೊಡನೆ ದಶರಥರಾಜನ ಅರಮನೆಗೆ ಹೊರಟುದು
  • ಶ್ರೀರಾಮನು ರಾಜಮಾರ್ಗದ ಸೊಬಗನ್ನು ನೋಡುತ್ತಾ ಸುಹೃದರ ಪ್ರಿಯೋಕ್ತಿಗಳನ್ನು ಕೇಳುತ್ತಾ ತಂದೆಯ ಮನೆಗೆ ಹೋದುದು
  • ಶ್ರೀರಾಮನು ವ್ಯಸನಾಕ್ರಾಂತನಾಗಿದ್ದ ತಂದೆಯ ಚಿಂತೆಗೆ ಕಾರಣವೇನೆಂದು ಕೈಕೇಯಿಯನ್ನು ಕೇಳಿದುದು : ಕೈಕೇಯಿಯು ತಾನು ಕೇಳಿರುವ ವರಗಳ ವಿಷಯವನ್ನು ಹೇಳಿ ಶ್ರೀರಾಮನಿಗೆ ಅರಣ್ಯಕ್ಕೆ ಹೋಗಲು ಹೇಳಿದುದು
  • ಶ್ರೀರಾಮನು ಅರಣ್ಯಕ್ಕೆ ಹೋಗುವುದಾಗಿ ಕೈಕೇಯಿಗೆ ಹೇಳಿದುದು : ತಾಯಿಯಿಂದ ಅನುಜ್ಞೆಯನ್ನು ಪಡೆಯಲು ಕೌಸಲ್ಯೆಯ ಬಳಿಗೆ ಹೋದುದು
  • ದಶರಥರಾಜನ ಇತರ ಪತ್ನಿಯರ ವಿಲಾಪ : ಶ್ರೀರಾಮನು ಕೌಸಲ್ಯೆಯ ಮನೆಗೆ ಹೋಗಿ ವನವಾಸದ ವಿಷಯವನ್ನು ಹೇಳಿದುದು : ಕೌಸಲ್ಯೆಯ ಮೂರ್ಛೆ : ಶ್ರೀರಾಮನ ಶೈತ್ಯೋಪಚಾರದಿಂದ ಮೂರ್ಛೆತಳೆದ ಕೌಸಲ್ಯೆಯ ವಿಲಾಪ
  • ಲಕ್ಷ್ಮಣನ ಕೋಪ : ರಾಜ್ಯಾಧಿಕಾರವನ್ನು ತಂದೆಯಿಂದ ಬಲಾತ್ಕಾರಪೂರ್ವಕವಾಗಿ ಪಡೆದುಕೊಳ್ಳಲು ಸಲಹೆ ನೀಡಿದುದು : ಶ್ರೀರಾಮನು ಪಿತೃವಾಕ್ಯಪರಿಪಾಲನೆಯೇ ಪರಮಧರ್ಮವೆಂದು ಪ್ರತಿಪಾದಿಸಿ ಕೌಸಲ್ಯಯನ್ನೂ-ಲಕ್ಷ್ಮಣನನ್ನೂ ಸಮಾಧಾನ ಗೊಳಿಸಿದುದುೆ
  • ಶ್ರೀರಾಮನು ಲಕ್ಷ್ಮಣನನ್ನು ಸಮಾಧಾನಗೊಳಿಸುತ್ತಾ ತನ್ನ ವನವಾಸಕ್ಕೆ ದೈವವೇ ಕಾರಣವೆಂದು ಪ್ರತಿಪಾದಿಸಿದುದು : ಅಭಿಷೇಕದ ಸಾಮಗ್ರಿಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಆದೇಶ ನೀಡಿದುದು
  • ಲಕ್ಷ್ಮಣನ ಗಡುಸಾದ ಮಾತುಗಳು : ದೈವದ ಖಂಡನೆ : ಪುರುಷಪ್ರಯತ್ನದ ಪ್ರಶಂಸೆ : ವಿರೋಧಿಗಳೊಡನೆ ಯುದ್ಧಮಾಡಲು ಕತ್ತಿಯನ್ನು ಹಿಡಿದು ಹೊರಡಲು ಉದ್ಯಕ್ತನಾದುದು
  • ವಿಲಪಿಸುತ್ತಿದ್ದ ಕೌಸಲ್ಯೆಯು ತನ್ನನ್ನೂ ಜೊತೆಯಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗುವಂತೆ ಆಗ್ರಹ ಪಡಿಸಿದುದು : ಪತಿಸೇವೆಯೇ ಹೆಂಗಸಿನ ಧರ್ಮವೆಂದು ಶ್ರೀರಾಮನು ಪ್ರತಿಪಾದಿಸಿದುದು : ಅರಣ್ಯಕ್ಕೆ ಹೋಗಲು ತಾಯಿಯ ಅನುಮತಿ
  • ಕೌಸಲ್ಯಾದೇವಿಯು ಮಂಗಳಕರವಾದ ಶುಭಾಶಂಸನೆಗಳನ್ನು ಮಾಡಿದುದು : ಶ್ರೀರಾಮನು ತಾಯಿಗೆ ನಮಸ್ಕರಿಸಿ ಸೀತಾದೇವಿಯ ಅಂತಃಪುರಕ್ಕೆ ಹೋದುದು
  • ಶ್ರೀರಾಮನ ವಿಮನಸ್ಕತೆಗೆ ಕಾರಣವನ್ನು ಸೀತೆಯು ಪ್ರಶ್ನಿಸಿದುದು : ಶ್ರೀರಾಮನು ತಾನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ಹೊರಟಿರುವುದಾಗಿಯೂ ಸೀತಾದೇವಿಯು ಅರಮನೆಯಲ್ಲಿಯೇ ಇದ್ದು ಗುರು ಜನರನ್ನು ಸೇವಿಸುತ್ತಾ ಭರತನಿಗೆ ವಿಧೇಯಳಾಗಿ ಇರುವಂತೆಯೂ ಹಿತೋಪದೇಶಮಾಡಿದುದು
  • ತನ್ನನ್ನೂ ಕಾಡಿಗೆ ಕರೆದೊಯ್ಯುವಂತೆ ಸೀತಾದೇವಿಯು ಶ್ರೀರಾಮನನ್ನು ಪ್ರಾರ್ಥಿಸಿದುದು
  • ಶ್ರೀರಾಮನು ವನವಾಸದ ಕಷ್ಟಗಳನ್ನು ವರ್ಣಿಸಿ ಕಾಡಿಗೆ ಬಾರದಿರುವಂತೆ ಸೀತೆಗೆ ಸಲಹೆಮಾಡಿದುದು
  • ಸೀತಾದೇವಿಯು ತನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಔಚಿತ್ಯವನ್ನು ಶ್ರೀರಾಮನಿಗೆ ವಿವರಿಸಿ ಹೇಳಿದುದು
  • ಸೀತಾದೇವಿಯು ಶ್ರೀರಾಮನನ್ನು ಆಕ್ಷೇಪಣೆಯೊಡನೆ ಕಾಡಿಗೆ ಕರೆದುಕೊಂಡು ಹೋಗಲು ಆಗ್ರಹಪಡಿಸಿದುದು : ಅವಳ ವಿಲಾಪವನ್ನು ನೋಡಿ ಶ್ರೀರಾಮನು ತನ್ನೊಡನೆ ಅರಣ್ಯಕ್ಕೆ ಬರಲು ಒಪ್ಪಿಗೆಯನ್ನಿತ್ತುದು : ಮಾತಾ-ಪಿತೃಗಳ ಮತ್ತು ಗುರುಜನರ ಸೇವೆಯ ಮಹತ್ತ್ವವನ್ನು ಹೇಳಿದುದು : ಅರಣ್ಯಪ್ರಯಾಣಕ್ಕೆ ಪೂರ್ವಭಾವಿಯಾಗಿ ತನ್ನಲ್ಲಿರುವ ವಸ್ತುಗಳೆಲ್ಲವನ್ನೂ ದಾನಮಾಡಿಬಿಡುವಂತೆ ಶ್ರೀರಾಮನು ಸೀತಾದೇವಿಗೆ ಹೇಳಿದುದು
  • ರಾಮ-ಲಕ್ಷ್ಮಣರ ಸಂವಾದ : ಶ್ರೀರಾಮನ ಆಜ್ಞೆಯಂತೆ ಲಕ್ಷ್ಮ ಣನು ದಿವ್ಯಾಯುಧಗಳನ್ನು ತೆಗೆದುಕೊಂಡು ಅರಣ್ಯಪ್ರಯಾಣಕ್ಕೆ ಸಿದ್ಧನಾದುದು : ಶ್ರೀರಾಮನು ಬ್ರಾಹ್ಮಣರಿಗೆ ತನ್ನ ಐಶ್ವರ್ಯವೆಲ್ಲವನ್ನೂ ದಾನಮಾಡಲು ಲಕ್ಷ್ಮಣನಿಗೆ ಹೇಳಿದುದು
  • ಸೀತಾಸಹಿತನಾದ ಶ್ರೀರಾಮನು ವಸಿಷ್ಠಪುತ್ರನಾದ ಸುಯಜ್ಞನನ್ನು ಕರೆಸಿ ಅವನಿಗೂ ಅವನ ಪತ್ನಿಗೂ ಬಹುಮೂಲ್ಯವಾದ ಆಭರಣಗಳನ್ನೂ, ರತ್ನಗಳನ್ನೂ, ಧನವನ್ನೂ ದಾನಮಾಡಿದುದು : ಲಕ್ಷ್ಮಣಸಹಿತನಾಗಿ ಬ್ರಾಹ್ಮಣರಿಗೂ, ಬ್ರಹ್ಮಚಾರಿಗಳಿಗೂ, ಸೇವಕರಿಗೂ, ತ್ರಿಜಟಬ್ರಾಹ್ಮಣನಿಗೂ ಮತ್ತು ಸುಹೃದರಿಗೂ ತನ್ನ ಐಶ್ವರ್ಯವೆಲ್ಲವನ್ನೂ ಹಂಚಿಕೊಟ್ಟುದು
  • ಸೀತಾ-ರಾಮ-ಲಕ್ಷ್ಮಣರು ಶೋಕಾಕುಲರಾದ ನಗರವಾಸಿಗಳ ನಾನಾಪ್ರಕಾರವಾದ ಸಂಭಾಷಣೆಗಳನ್ನು ಕೇಳುತ್ತಾ ದಶರಥನನ್ನು ನೋಡಲು ಕೈಕೇಯಿಯ ಅಂತಃಪುರಕ್ಕೆ ಹೋದುದು
  • ಶ್ರೀರಾಮನು ಲಕ್ಷ್ಮಣಸಮೇತನಾಗಿ ರಾಜನ ಬಳಿಗೆ ಹೋಗಿ ಅರಣ್ಯಕ್ಕೆ ಹೊರಡಲು ಅನುಮತಿಯನ್ನು ಬೇಡಿದುದು : ರಾಜನ ಶೋಕ ಮತ್ತು ಮೂರ್ಛೆ : ಶ್ರೀರಾಮನ ಸಾಂತ್ವನ : ರಾಜನು ಶ್ರೀರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡು ಪುನಃ ಮೂರ್ಛೆಹೋದುದು
  • ಸುಮಂತ್ರನಿಂದ ಕೈಕೇಯಿಯ ನಿಂದನೆ : ಕೈಕೇಯಿಯ ತಿರಸ್ಕಾರ
  • ದಶರಥರಾಜನು ಶ್ರೀರಾಮನೊಡನೆ ಸೈನ್ಯವನ್ನೂ ಭಂಡಾರವನ್ನೂ ಕಳುಹಿಸಲು ಸುಮಂತ್ರನಿಗೆ ಆದೇಶವಿತ್ತುದು : ಕೈಕೇಯಿಯ ವಿರೋಧ : ಸಿದ್ಧಾರ್ಥನು ಕೈಕೇಯಿಯನ್ನು ಸಮಾಧಾನಗೊಳಿಸಿದುದು : ದಶರಥನು ಶ್ರೀರಾಮನೊಡನೆ ತಾನೂ ಹೋಗುವ ಇಚ್ಫೆಯನ್ನು ವ್ಯಕ್ತಪಡಿಸಿದುದು
  • ಸೀತಾ-ರಾಮ-ಲಕ್ಷ್ಮಣರು ನಾರುಮಡಿಯನ್ನುಟ್ಟುದು : ಸೀತೆಯು ನಾರುಮಡಿಯನ್ನುಟ್ಟಿದ್ದಕ್ಕೆ ರಾಣೀವಾಸದವರ ದುಃಖ : ವಸಿಷ್ಠರು ಕೈಕೇಯಿಯನ್ನು ನಿಂದಿಸುತ್ತಾ ಸೀತಾದೇವಿಯು ನಾರುಮಡಿಯನ್ನುಡುವುದು ಅನುಚಿತವೆಂದು ಹೇಳಿದುದು
  • ಸೀತೆಯು ನಾರುಮಡಿಯನ್ನುಡುವುದು ಅನುಚಿತವೆಂದು ದಶರಥನೂ ಹೇಳಿ ಕೈಕೇಯಿಯನ್ನು ನಿಂದಿಸಿದುದು : ಕೌಸಲ್ಯೆಯ ಮೇಲೆ ಕೃಪಾದೃಷ್ಟಿಯನ್ನಿಡುವಂತೆ ಶ್ರೀರಾಮನು ತಂದೆಯನ್ನು ಕೇಳಿಕೊಂಡುದು
  • ದಶರಥನ ವಿಲಾಪ : ರಾಜನ ಆಜ್ಞೆಯಂತೆ ಸುಮಂತ್ರನು ರಥವನ್ನು ಸಜ್ಜುಗೊಳಿಸಿದುದು : ಕೋಶಾಧ್ಯಕ್ಷನು ಬಹುಮೂಲ್ಯವಾದ ಆಭರಣಗಳನ್ನು ಸೀತೆಗೆ ಕೊಟ್ಟುದು : ಪತಿಯ ಸೇವೆಮಾಡಿಕೊಂಡಿರುವಂತೆ ಸೀತೆಗೆ ಕೌಸಲ್ಯೆಯಿಂದ ಉಪದೇಶ : ಸೀತೆಯ ಸಮ್ಮತಿ : ತಂದೆಯ ವಿಷಯದಲ್ಲಿ ದೋಷವೆಣಿಸಬಾರದೆಂದು ರಾಮನಿಂದ ತಾಯಿಗೆ ಹಿತೋಕ್ತಿ : ಶ್ರೀರಾಮನು ಇತರ ಮಾತೆಯರಿಂದಲೂ ವನವಾಸಕ್ಕೆ ಅನುಮತಿಯನ್ನು ಬೇಡಿದುದು
  • ಸೀತಾ-ರಾಮ-ಲಕ್ಷ್ಮ ಣರು ದಶರಥನಿಗೆ ಪ್ರದಕ್ಷಿಣೆ ಮಾಡಿ ಕೌಸಲ್ಯೆಯೇ ಮೊದಲಾದ ತಾಯಂದಿರಿಗೆ ಪ್ರಣಾಮಮಾಡಿದುದು : ಲಕ್ಷ್ಮಣನಿಗೆ ಸುಮಿತ್ರೆಯ ಉಪದೇಶ : ಸೀತಾಸಮೇತರಾಗಿ ರಾಮ-ಲಕ್ಷ್ಮ ಣರು ರಥದಲ್ಲಿ ಕುಳಿತು ಅರಣ್ಯಕ್ಕೆ ಪ್ರಯಾಣಹೊರಟುದು : ಪುರಜನರ, ರಾಣೀವಾಸದವರ ಮತ್ತು ದಶರಥನ ಶೋಕಾಕುಲತೆ
  • ಶ್ರೀರಾಮನ ವನಗಮನದಿಂದ ರಾಣೀವಾಸದವರು ದುಃಖಪಟ್ಟುದು : ನಗರವಾಸಿಗಳ ಶೋಕಾಕುಲತೆ
  • ದಶರಥರಾಜನು ಮೂರ್ಛಿತನಾಗಿ ಬಿದ್ದುದು : ಶ್ರೀರಾಮನಿಗಾಗಿ ವಿಲಪಿಸಿದುದು : ಕೈಕೇಯಿಯನ್ನು ತನ್ನ ಬಳಿಗೆ ಬರಲು ವಿರೋಧಿಸಿದುದು : ಕೌಸಲ್ಯೆಯ ಸಹಾಯದಿಂದ ಅವಳ ಅಂತಃಪುರಕ್ಕೆ ಹೋದುದು : ಅಲ್ಲಿಯೂ ಶ್ರೀರಾಮನ ಸಲುವಾಗಿ ದುಃಖಿಸಿದುದು
  • ಕೌಸಲ್ಯಾದೇವಿಯ ವಿಲಾಪ
  • ಸುಮಿತ್ರೆಯು ಕೌಸಲ್ಯೆಗೆ ಸಮಾಧಾನ ಹೇಳಿದುದು
  • ದಶರಥ-ಭರತರ ವಿಷಯದಲ್ಲಿ ಪ್ರೇಮಭಾವದಿಂದಿರುವಂತೆ ಶ್ರೀರಾಮನು ತನ್ನನ್ನನುಸರಿಸಿ ಬರುತ್ತಿದ್ದ ಪ್ರಜೆಗಳಿಗೆ ಹೇಳಿ ಅಯೋಧ್ಯೆಗೆ ಹಿಂದಿರುಗುವಂತೆ ಹೇಳಿದುದು : ವೃದ್ಧಬ್ರಾಹ್ಮಣರು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗುವಂತೆ ಆಗ್ರಹಪಡಿಸಿದುದು : ಅವರೆಲ್ಲರೊಡನೆ ಶ್ರೀರಾಮನು ತಮಸಾನದಿಯ ತೀರಕ್ಕೆ ಹೋದುದು
  • ಸೀತಾ-ಲಕ್ಷ್ಮಣರೊಡನೆ ಶ್ರೀರಾಮನು ತಮಸಾ ನದಿಯ ತೀರದಲ್ಲಿ ಬಿಡಾರಮಾಡಿದುದು : ತಂದೆ-ತಾಯಿಗಳ ಮತ್ತು ಅಯೋಧ್ಯೆಯ ವಿಷಯವಾಗಿ ಚಿಂತಿಸಿದುದು : ಅಯೋಧ್ಯಾ ವಾಸಿಗಳು ಮಲಗಿರುವಾಗ ಅವರನ್ನು ಬಿಟ್ಟು ಕಾಡಿಗೆ ಪ್ರಯಾಣಮಾಡಿದುದು
  • ಬೆಳಗಾದೊಡನೆಯೇ ಪಟ್ಟಣಿಗರು ಎಚ್ಚರಗೊಂಡು ಶ್ರೀರಾಮನಿಲ್ಲದುದಕ್ಕಾಗಿ ವಿಲಪಿಸಿದುದು : ಎಲ್ಲೂ ಶ್ರೀರಾಮನನ್ನು ಕಾಣದೇ ನಿರಾಶರಾಗಿ ಪಟ್ಟಣಕ್ಕೆ ಹಿಂದಿರುಗಿದುದು
  • ನಗರವಾಸಿಯರಾದ ಸ್ತ್ರೀಯರ ವಿಲಾಪ
  • ಶ್ರೀರಾಮನು ಕೋಸಲದೇಶವನ್ನು ದಾಟಿ ಮುಂದೆ ವೇದಶ್ರುತಿ, ಗೋಮತಿ ಮತ್ತು ಸ್ಯಂದಿಕಾನದಿಗಳನ್ನು ದಾಟಿದುದು
  • ಮಾರ್ಗದಲ್ಲಿ ಶ್ರೀರಾಮನು ಅರಣ್ಯವಾಸಕ್ಕೆ ಅನುಮತಿಗಾಗಿ ಅಯೋದ್ಯಾಪಟ್ಟಣದ ಅಧಿದೇವತೆ ಯನ್ನು ಪ್ರಾರ್ಥಿಸಿದುದು : ಶೃಂಗಬೇರಪುರದ ಸಮೀಪದಲ್ಲಿದ್ದ ಗಂಗಾನದಿಯ ತೀರದಲ್ಲಿ ಇಳಿದು ಕೊಂಡುದು : ನಿಷಾದರಾಜನ ಸತ್ಕಾರ
  • ಗುಹನೊಡನೆ ಲಕ್ಷ್ಮಣನ ವಿಲಾಪ ಪರಿಶಿಷ್ಟ
  • ಪರಿಶಿಷ್ಟ

Other Books in this COllection

Volume 1

Volume 3

Volume 4

Volume 5

Volume 6

Volume 7

Volume 8

Volume 9

Volume 10

Volume 11