ಹನುಮಂತನು ರಾವಣನ ಅಂತಃಪುರದ ಪ್ರತಿಯೊಂದು ಕಡೆಯಲ್ಲಿಯೂ ಸೀತೆಯನ್ನು ಹುಡುಕಿ ಅವಳು ಸಿಕ್ಕದ ಕಾರಣ ದುಃಖಿತನಾದುದು
ಹನುಮಂತನು ರಾವಣನ ಅರಮನೆಯಲ್ಲಿಯೂ ಇತರ ರಾಕ್ಷಸರ ಮನೆಗಳಲ್ಲಿಯೂ ಸೀತಾದೇವಿಯನ್ನು ಹುಡುಕಿದುದು
ರಾವಣನ ಅರಮನೆಯ ಮತ್ತು ಪುಷ್ಪಕವಿಮಾನದ ವರ್ಣನೆ
ಹನುಮಂತನು ಪುನಃ ಪುಷ್ಪಕವಿಮಾನವನ್ನು ಸಂದರ್ಶಿಸಿದುದು
ಹನುಮಂತನು ರಾವಣನ ಶ್ರೇಷ್ಠವಾದ ಅರಮನೆಯನ್ನೂ ಪುಷ್ಪಕವಿಮಾನವನ್ನೂ ನೋಡಿದ ಬಳಿಕ ರಾವಣನ ಅಂತಃಪುರದಲ್ಲಿ ಮಲಗಿದ್ದ ಸ್ತ್ರೀಯರನ್ನು ನೋಡಿದುದು
ಹನುಮಂತನು ಅಂತಃಪುರದಲ್ಲಿ ಮಲಗಿದ್ದ ರಾವಣನನ್ನೂ ಮತ್ತು ಅವನ ಪತ್ನಿಯರನ್ನೂ ನೋಡಿದುದು : ಮಂಡೋದರಿಯನ್ನು ಸೀತೆಯೆಂದು ಭಾವಿಸಿ ಹೃಷ್ಟನಾದುದು
ಮಲಗಿರುವವಳು ಸೀತೆಯಲ್ಲವೆಂಬುದನ್ನು ನಿಶ್ಚಯಿಸಿದ ಹನುಮಂತನು ಅಂತಃಪುರದಲ್ಲಿ ಮತ್ತು ಪಾನಗೃಹದಲ್ಲಿ ಸೀತೆಯನ್ನು ಹುಡುಕಲು ಪುನಃ ತೊಡಗಿದುದು : ಅಂತಃಪುರದರ್ಶನದಿಂದ ಸಂಭವಿಸುವ ಧರ್ಮಲೋಪದ ವ್ಯಾಕುಲತೆಯನ್ನು ತಾನೇ ಪರಿಹರಿಸಿಕೊಂಡುದು
ಸೀತಾದೇವಿಯು ಮರಣಹೊಂದಿರಬಹುದೆಂದು ಶಂಕಿಸಿದ ಹನುಮಂತನು ದುಃಖಿತನಾದುದು : ಪುನಃ ಉತ್ಸಾಹವನ್ನಾಶ್ರಯಿಸಿ ಹುಡುಕಲು ಹೊರಟುದು : ಎಷ್ಟು ಹುಡುಕಿದರೂ ಸೀತೆಯು ಸಿಕ್ಕದಿರಲು ಪುನಃ ಚಿಂತಾಮಗ್ನನಾದುದು
ಹನುಮಂತನು ಸೀತಾದೇವಿಗೆ ಮುದ್ರೆಯುಂಗುರವನ್ನು ಕೊಟ್ಟುದು : ಶ್ರೀರಾಮನು ಯಾವಾಗ ತನ್ನನ್ನು ಉದ್ಧರಿಸುವನೆಂದು ಸೀತೆಯ ಉದ್ಗಾರ : ಶ್ರೀರಾಮನಿಗೆ ಸೀತೆಯಲ್ಲಿರುವ ಅನುರಾಗವನ್ನು ವರ್ಣಿಸಿ ಹೇಳಿ ಹನುಮಂತನು ಆಕೆಯನ್ನು ಸಮಾಧಾನಗೊಳಿಸಿದುದು
ಸೀತೆಯು ಹನುಮಂತನಿಗೆ ಶ್ರೀರಾಮನನ್ನು ಶೀಘ್ರವಾಗಿ ಕರೆತರಲು ಹೇಳಿದುದು : ಹನುಮಂತನು ಸೀತೆಯನ್ನು ತನ್ನ ಜೊತೆಯಲ್ಲೇ ಬರಲು ಹೇಳಿದುದು : ಸೀತೆಯ ಅಸಮ್ಮತಿ
ಸೀತಾದೇವಿಯು ಹನುಮಂತನಿಗೆ ಗುರುತಿಗಾಗಿ ಕಾಕಾಸುರನ ವೃತ್ತಾಂತವನ್ನು ಹೇಳಿ ಚೂಡಾಮಣಿಯನ್ನು ಕೊಟ್ಟುದು
ಚೂಡಾಮಣಿಯನ್ನು ಪಡೆದು ಹೊರಟ ಹನುಮಂತನಿಗೆ ಸೀತಾದೇವಿಯು ರಾಮ-ಲಕ್ಷ್ಮಣರೇ ಮೊದಲಾದವರು ತನ್ನ ಬಿಡುಗಡೆಗಾಗಿ ತೊಡಗಲು ಪ್ರೋತ್ಸಾಹಿಸುವಂತೆ ಹೇಳಿದುದು : ಸಮುದ್ರವನ್ನು ದಾಟಿಕೊಂಡು ಬರುವುದರಲ್ಲಿ ಸಂದೇಹಿಸಿದ ಸೀತಾದೇವಿಗೆ ಹನುಮಂತನು ವಾನರನಾಯಕರ ಪರಾಕ್ರಮವನ್ನು ವಿವರಿಸಿ ಹೇಳಿದುದು
ಸೀತಾದೇವಿಯು ಶ್ರೀರಾಮನಿಗೆ ಪುನಃ ಸಂದೇಶವನ್ನು ನೀಡಿದುದು : ಹನುಮಂತನು ಅವಳಿಗೆ ಆಶ್ವಾಸನೆಯನ್ನಿತ್ತು ಉತ್ತರದಿಕ್ಕಿನ ಕಡೆಗೆ ಪ್ರಯಾಣಮಾಡಿದುದು
ವಿಭೀಷಣನು ರಾವಣನ ಅರಮನೆಗೆ ಹೋಗಿ ನಗರದಲ್ಲಾಗುತ್ತಿರುವ ಅಪಶಕುನಗಳನ್ನು ವರ್ಣಿಸಿ ಹೇಳುತ್ತಾ ಸೀತೆಯನ್ನು ಶ್ರೀರಾಮನ ಬಳಿಗೆ ಕಳುಹಿಸಲು ಪುನಃ ಸಲಹೆಯಿತ್ತುದು : ರಾವಣನ ತಿರಸ್ಕಾರ
ರಾವಣನೂ ಮತ್ತು ಅವನ ಸಭಾಸದರೂ ಮುಂದಿನ ಕಾರ್ಯಕ್ಕಾಗಿ ಸಭಾಸದನದಲ್ಲಿ ಸೇರಿದುದು
ರಾವಣನು ನಗರದ ರಕ್ಷಣೆಗಾಗಿ ಸೈನಿಕರನ್ನು ನಿಯಮಿಸಿದುದು : ಸೀತೆಯ ವಿಷಯದಲ್ಲಿ ತನಗಿರುವ ಆಸಕ್ತಿಯನ್ನೂ ಮತ್ತು ಅವಳನ್ನು ಅಪಹರಿಸಿದ ಪ್ರಸಂಗವನ್ನೂ ತಿಳಿಸಿ ಮುಂದಿನ ಕಾರ್ಯಕ್ಕೆ ಸಭಾಸದರ ಸಮ್ಮತಿಯನ್ನು ಬಯಸಿದುದು : ಕುಂಭಕರ್ಣನಿಂದ ರಾವಣನ ನಿಂದನೆ : ಬಳಿಕ ಸಮಸ್ತಶತ್ರುಗಳನ್ನೂ ಸಂಹರಿಸುವ ಭಾರವನ್ನು ತಾನೇ ವಹಿಸಿಕೊಂಡುದು
ಮಹಾಪಾರ್ಶ್ವನು ಬಲಾತ್ಕಾರಪೂರ್ವಕವಾಗಿ ಸೀತೆಯನ್ನು ಉಪಭೋಗಿಸಲು ಸಲಹೆ ನೀಡಿದುದು : ಶಾಪದ ಕಾರಣದಿಂದಾಗಿ ಹಾಗೆ ಮಾಡಲು ತನ್ನ ಅಸಾಮರ್ಥ್ಯವನ್ನು ರಾವಣನು ಪ್ರಕಟಿಸಿದುದು