ಸುಗ್ರೀವನು ಕೆಲವು ವಾನರರಿಗೆ ದಕ್ಷಿಣದಿಕ್ಕಿನ ಪರಿಚಯವನ್ನು ಮಾಡಿಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿಕೊಟ್ಟುದು
ಸುಗ್ರೀವನು ಪಶ್ಚಿಮದಿಕ್ಕಿನ ಪ್ರದೇಶಗಳ ಪರಿಚಯಮಾಡಿಕೊಡುತ್ತಾ ಸುಷೇಣನೇ ಮೊದಲಾದ ವಾನರನಾಯಕರನ್ನು ಆ ದಿಕ್ಕಿಗೆ ಕಳುಹಿಸಿಕೊಟ್ಟುದು
ಸುಗ್ರೀವನು ಶತಬಲನೇ ಮೊದಲಾದ ವಾನರಶ್ರೇಷ್ಠರಿಗೆ ಉತ್ತರದಿಕ್ಕಿನ ಪರಿಚಯಮಾಡಿಕೊಟ್ಟು ಸೀತಾನ್ವೇಷಣೆಗೆ ಕಳುಹಿಸಿಕೊಟ್ಟುದು
ಶ್ರೀರಾಮನು ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟು ಕಳುಹಿಸಿದುದು
ನಾನಾದಿಕ್ಕುಗಳಿಗೆ ಹೋಗಲು ಸುಗ್ರೀವನಿಂದ ಆಜ್ಞಪ್ತರಾದ ವಾನರರ ಉತ್ಸಾಹಪೂರ್ಣವಾದ ವೀರೋಕ್ತಿಗಳು
ಸುಗ್ರೀವನು ಶ್ರೀರಾಮನಿಗೆ ತಾನು ಮಾಡಿದ ಭೂಮಂಡಲಪ್ರದಕ್ಷಿಣೆಯ ವೃತ್ತಾಂತವನ್ನು ತಿಳಿಸಿದುದು
ಪೂರ್ವ-ಪಶ್ಚಿಮ-ಉತ್ತರದಿಕ್ಕುಗಳಿಗೆ ಸೀತೆಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು
ದಕ್ಷಿಣದಿಕ್ಕಿಗೆ ಹೋದ ವಾನರರು ಸೀತಾನ್ವೇಷಣವನ್ನು ಉಪಕ್ರಮಿಸಿದುದು
ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು
ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು : ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು
ಹನುಮಂತನ ಪ್ರಶ್ನೆಗೆ ವೃದ್ಧತಾಪಸಿಯು ತನ್ನ ಮತ್ತು ಆ ದಿವ್ಯಗುಹೆಯ ಪರಿಚಯ ಮಾಡಿಕೊಟ್ಟುದು : ವಾನರರೆಲ್ಲರಿಗೂ ಊಟಮಾಡಲು ಹೇಳಿದುದು
ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲ ವಿಷಯಗಳನ್ನೂ ಹೇಳಿದುದು : ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು
ಅವಧಿಯು ಮುಗಿದುಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದನೇ ಮೊದಲಾದವರು ಪ್ರಾಯೋಪವೇಶಮಾಡಲು ನಿಶ್ಚಯಿಸಿದುದು
ಹನುಮಂತನು ಭೇದನೀತಿಯ ಮೂಲಕವಾಗಿ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಗೊಳಿಸಿದುದು
ಅಂಗದನೊಡನೆ ವಾನರರೆಲ್ಲರೂ ಪ್ರಾಯೋಪವೇಶಕ್ಕೆ ಕುಳಿತುದು
ಸಂಪಾತಿಯಿಂದ ವಾನರರಿಗೆ ಭಯ : ಜಟಾಯುವಿನ ಮರಣವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ : ಪರ್ವತದಿಂದ ಕೆಳಗೆ ಇಳಿಸಿಕೊಳ್ಳಲು ವಾನರರಿಗೆ ಸಂಪಾತಿಯ ಕೋರಿಕೆ
ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟು ಹೋದುದರ ಕಾರಣವನ್ನು ತಿಳಿಸಿ ಸೀತೆ ಮತ್ತು ರಾವಣರಿರುವ ಸ್ಥಳವನ್ನು ಹೇಳಿದುದು : ಕಪಿಗಳ ಸಹಾಯದಿಂದ ಸಮುದ್ರತೀರಕ್ಕೆ ಹೋಗಿ ಜಟಾಯುವಿಗೆ ಜಲಾಂಜಲಿಯನ್ನು ಕೊಟ್ಟುದು
ಸುಪಾರ್ಶ್ವನು ಸೀತಾ-ರಾವಣರನ್ನು ನೋಡಿದ ಘಟನೆಯನ್ನು ಸಂಪಾತಿಯು ವಾನರರಿಗೆ ವಿವರಿಸಿ ಹೇಳಿದುದು
ಸಂಪಾತಿಯ ಆತ್ಮಕಥೆ
ಸಂಪಾತಿಯು ನಿಶಾಕರಮುನಿಗೆ ರೆಕ್ಕೆಗಳು ಸುಟ್ಟುಹೋದುದಕ್ಕೆ ಕಾರಣವನ್ನು ತಿಳಿಸಿದುದು
ನಿಶಾಕರಮುನಿಯು ಸಂಪಾತಿಯನ್ನು ಸಂತೈಸುತ್ತಾ ಶ್ರೀರಾಮಕಾರ್ಯಕ್ಕೆ ಸಹಾಯ ಮಾಡಲು ಜೀವಿಸಿರುವಂತೆ ತಿಳಿಸಿದುದು
ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸಿಸುತ್ತಾ ಸಮುದ್ರದ ಲಂಘನೆಯಲ್ಲಿ ಯಾರಿಗೆ ಎಷ್ಟು ಯೋಜನಗಳನ್ನು ಹಾರಲು ಸಾಧ್ಯವೆಂಬುದನ್ನು ಪ್ರಶ್ನಿಸಿದುದು
ವಾನರವೀರರು ಹಾರುವ ವಿಷಯದಲ್ಲಿ ತಮಗಿರುವ ಶಕ್ತಿಯನ್ನು ವಿವರಿಸಿ ಹೇಳಿದುದು : ಅಂಗದ-ಜಾಂಬವಂತರ ಸಂಭಾಷಣೆ : ಜಾಂಬವಂತನು ಸಮುದ್ರೋಲ್ಲಂಘನೆಗೆ ಹನುಮಂತನನ್ನು ಹುರಿದುಂಬಿಸಲು ಅವನ ಬಳಿಗೆ ಹೋದುದು
ಜಾಂಬವಂತನು ಹನುಮಂತನಿಗೆ ಅವನ ಉತ್ಪತ್ತಿಯ ಕಥೆಯನ್ನು ವಿವರಿಸಿ ಹೇಳಿ ಸಮುದ್ರವನ್ನು ದಾಟಲು ಪ್ರೋತ್ಸಾಹಿಸಿದುದು
ಹನುಮಂತನು ಸಮುದ್ರವನ್ನು ದಾಟುವ ಉತ್ಸಾಹವನ್ನು ಪ್ರಕಟಿಸಿದುದು : ಜಾಂಬವಂತನ ಪ್ರಶಂಸೆ : ವೇಗವಾಗಿ ಹಾರುವ ಸಲುವಾಗಿ ಮಹೇಂದ್ರಪರ್ವತದ ಶಿಖರಕ್ಕೆ ಹತ್ತಿದುದು