ಶತ್ರುಘ್ನನು ದೇವತೆಗಳಿಂದ ವರವನ್ನು ಪಡೆದು ಮಧುಪುರದಲ್ಲಿ ರಾಜ್ಯಭಾರವನ್ನಾರಂಭಿಸಿದುದು : ಹನ್ನೆರಡು ವರ್ಷಗಳನಂತರ ಶ್ರೀರಾಮನ ಬಳಿಗೆ ಹೋಗಲು ಶತ್ರುಘ್ನನು ಯೋಚಿಸಿದುದು
ಅಲ್ಪಸಂಖ್ಯೆಯ ಸೈನಿಕರೊಡನೆ ಶತ್ರುಘ್ನನು ಶ್ರೀರಾಮನ ಸಂದರ್ಶನಕ್ಕಾಗಿ ಅಯೋಧ್ಯೆಗೆ ಹೊರಟುದು : ಅಯೋಧ್ಯೆಗೆ ಬರುತ್ತಿದ್ದಾಗ ಹಾದಿಯಲ್ಲಿದ್ದ ವಾಲ್ಮೀಕಿಮಹರ್ಷಿಗಳ ಆಶ್ರಮದಲ್ಲಿ ನಡೆಯುತ್ತಿದ್ದ ರಾಮಕಥಾ ಗಾಯನವನ್ನು ಕೇಳಿ ಶತ್ರುಘ್ನನೇ ಮೊದಲಾದವರ ವಿಸ್ಮಯ
ವಾಲ್ಮೀಕಿಮಹರ್ಷಿಗಳ ಅನುಮತಿಯನ್ನು ಪಡೆದು ಶತ್ರುಘ್ನನು ಅಯೋಧ್ಯೆಗೆ ಹೋಗಿ ಶ್ರೀರಾಮನೇ ಮೊದಲಾದವರನ್ನು ಸಂದರ್ಶಿಸಿದುದು : ಏಳು ದಿವಸಗಳವರೆಗೆ ಅಲ್ಲಿ ತಂಗಿದ್ದು ಪುನಃ ಮಧುಪುರಿಗೆ ಹಿಂದಿರುಗಿದುದು
ಬ್ರಾಹ್ಮಣನೊಬ್ಬನು ತನ್ನ ಬಾಲಕನ ಶವವನ್ನು ರಾಜದ್ವಾರದಲ್ಲಿರಿಸಿ ತನ್ನ ಮಗನ ಮರಣಕ್ಕೆ ರಾಜನೇ ಕಾರಣನೆಂದು ದೂಷಿಸಿದುದು
ಶೂದ್ರತಪಸ್ವಿಯು ಅಧರ್ಮಾಚರಣೆಯನ್ನು ಮಾಡುತ್ತಿರುವುದೇ ಬ್ರಾಹ್ಮಣಬಾಲಕನ ಅಕಾಲಮರಣಕ್ಕೆ ಕಾರಣವೆಂದು ನಾರದರು ಶ್ರೀರಾಮನಿಗೆ ಹೇಳಿದುದು
ದುಷ್ಕರ್ಮಿಗಳನ್ನು ಹುಡುಕಲು ಪುಷ್ಪಕ ವಿಮಾನದಲ್ಲಿ ಕುಳಿತು ರಾಜ್ಯದ ಎಲ್ಲೆಡೆಗಳಲ್ಲಿಯೂ ಶ್ರೀರಾಮನ ಸಂಚಾರ : ಎಲ್ಲೆಲ್ಲಿಯೂ ಸತ್ಕರ್ಮಿಗಳನ್ನೇ ಕಂಡ ಶ್ರೀರಾಮನು ದಕ್ಷಿಣದಿಕ್ಕಿನಲ್ಲಿ ಪ್ರಯಾಣ ಮಾಡುತ್ತಾ ಶೂದ್ರ ತಪಸ್ವಿಯೊಬ್ಬನ ಬಳಿಗೆ ಧಾವಿಸಿದುದು
ಶಂಬೂಕನ ವಧೆ : ದೇವತೆಗಳ ಪ್ರಶಂಸೆ : ಅಗಸ್ತ್ಯರ ಸತ್ಕಾರ ಮತ್ತು ಆಭರಣಗಳ ಪ್ರದಾನ
ಭರತನಿಂದ ಗಂಧರ್ವರ ಆಕ್ರಮಣ : ಅವನು ಗಂಧರ್ವರನ್ನು ಸಂಹರಿಸಿ ಎರಡು ಸುಂದರ ನಗರಿಗಳನ್ನು ನಿರ್ಮಿಸುವುದು : ಇಬ್ಬರು ಮಕ್ಕಳನ್ನೂ ಆ ಎರಡು ರಾಜ್ಯಗಳಲ್ಲಿರಿಸಿ ಭರತನು ಅಯೋದ್ಯೆಗೆ ಹಿಂದಿರುಗುವುದು
ಶ್ರೀರಾಮನ ಆಜ್ಞೆಯಂತೆ ಭರತ-ಲಕ್ಷ್ಮಣರು ಕುಮಾರರಾದ ಅಂಗದ ಮತ್ತು ಚಂದ್ರಕೇತುಗಳನ್ನು ಕಾರುಪಥದೇಶಕ್ಕೆ ರಾಜರನ್ನಾಗಿ ಮಾಡುವುದು
ಶ್ರೀರಾಮನ ಅರಮನೆಗೆ ಕಾಲಪುರುಷನು ಆಗಮಿಸುವುದು
ಕಾಲಪುರುಷನು ಬ್ರಹ್ಮನ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವುದು : ಶ್ರೀರಾಮನ ಅಂಗೀಕಾರ
ದುರ್ವಾಸರ ಶಾಪದ ಭಯದಿಂದಾಗಿ ಲಕ್ಷ್ಮಣನು ಅವರು ಆಗಮಿಸಿರುವ ಸಮಾಚಾರವನ್ನು ಹೇಳಲು ಶ್ರೀರಾಮನ ಆಜ್ಞೆಗೆ ವಿರುದ್ಧವಾಗಿ ಶ್ರೀರಾಮನ ಬಳಿಗೆ ಹೋಗುವುದು : ಶ್ರೀರಾಮನು ದುರ್ವಾಸರಿಗೆ ಭೋಜನಮಾಡಿಸುವುದು : ಅವರು ಹೊರಟುಹೋದನಂತರ ಲಕ್ಷ್ಮಣನ ಸಲುವಾಗಿ ಶ್ರೀರಾಮನು ಚಿಂತಿಸುವುದು
ವಶಿಷ್ಠರ ಸಲಹೆಯಂತೆ ಶ್ರೀರಾಮನು ಪುರವಾಸಿಗಳನ್ನು ಕರೆದೊಯ್ಯಲು ವಿಚಾರ ಮಾಡುವುದು : ಕುಶ-ಲವರ ಪಟ್ಟಾಭಿಷೇಕ
ಶ್ರೀರಾಮನ ಜೊತೆಯಲ್ಲಿ ಅವನ ಅನುಜರೂ ಸುಗ್ರೀವನೇ ಮೊದಲಾದ ಋಕ್ಷ-ವಾರರರೂ ಪರಂಧಾಮಕ್ಕೆ ಹೋಗಲು ನಿಶ್ಚಯಿಸುವುದು : ವಿಭೀಷಣ, ಹನುಮಂತ, ಜಾಂಬವಂತ ಮತ್ತು ಮೈಂದ-ದ್ವಿವಿದರಿಗೆ ಭೋಲೋಕದಲ್ಲಿಯೇ ಇರಲು ಶ್ರೀರಾಮನು ಆದೇಶವನ್ನೀಯುವುದು
ಪರಮಧಾಮಕ್ಕೆ ಹೋಗಲು ಹೊರಡುವ ಶ್ರೀರಾಮನ ಜೊತೆಯಲ್ಲಿ ಅಯೋಧ್ಯಾವಾಸಿಗಳೆಲ್ಲರೂ ಹೊರಡುವುದು