ಕಲಿಯುಗದ ಸ್ಥಿತಿ : ಕಲಿಯುಗದಲ್ಲಿ ಮಾನವನ ಉದ್ಧಾರದ ಉಪಾಯ : ರಾಮಾಯಣ ಪಾರಾಯಣದ ಮಹಿಮೆ : ರಾಮಾಯಣಶ್ರವಣಕ್ಕೆ ಪ್ರಶಸ್ತವಾದ ಕಾಲ
ನಾರದ-ಸನತ್ಕುಮಾರರ ಸಂವಾದ : ಸೋಮ ದತ್ತನೆಂಬ ಬ್ರಾಹ್ಮಣನಿಗೆ ರಾಕ್ಷಸತ್ವದ ಪ್ರಾಪ್ತಿ : ರಾಮಾಯಣಕಥಾಶ್ರವಣದ ಮೂಲಕ ಅವನ ಉದ್ಧಾರ
ಮಾಘಮಾಸದಲ್ಲಿ ರಾಮಾಯಣವನ್ನು ಪಾರಾಯಣ ಮಾಡುವುದರ ಫಲ : ಸುಮತಿ ಮತ್ತು ಸತ್ಯವತಿಯರ ಪೂರ್ವಜನ್ಮೇತಿಹಾಸ
ಚೈತ್ರಮಾಸದಲ್ಲಿ ರಾಮಾಯಣಪಠನ-ಶ್ರವಣಗಳ ಮಹಿಮೆ : ಕಲಿಕೋತ್ತಂಕರ ಕಥೆ
ರಾಮಾಯಣದ ನವಾಹಶ್ರವಣದ ವಿಧಿ, ಮಹಿಮೆ ಮತ್ತು ಫಲವರ್ಣನೆ
ಬಾಲಕಾಂಡ
ನಾರದರು ವಾಲ್ಮೀಕಿಮಹರ್ಷಿಗಳಿಗೆ ಶ್ರೀರಾಮನ ಕಥೆಯನ್ನು ಸಂಕ್ಷೇಪವಾಗಿ ವಿವರಿಸಿದುದು
ತಮಸಾನದಿಯ ತೀರದಲ್ಲಿ ಕ್ರೌಂಚವಧೆಯಿಂದ ಸಂತಪ್ತರಾದ ವಾಲ್ಮೀಕಿಮಹರ್ಷಿಗಳ ಶೋಕದ ಮಾತು ಶ್ಲೋಕರೂಪವಾದುದು : ರಾಮಾಯಣ ಕಾವ್ಯವನ್ನು ರಚಿಸಲು ಬ್ರಹ್ಮನಿಂದ ವಾಲ್ಮೀಕಿಗಳಿಗೆ ಆದೇಶ : ರಾಮಾಯಣಕಾವ್ಯದ ಉಪಕ್ರಮ
ದಶರಥನಿಂದ ರಾಮ-ಲಕ್ಷ್ಮಣರ ಬೀಳ್ಕೊಡುಗೆ : ಮಾರ್ಗದಲ್ಲಿ ವಿಶ್ವಾಮಿತ್ರರಿಂದ ಬಲಾ-ಅತಿಬಲಾ ಎಂಬ ವಿದ್ಯೆಗಳ ಉಪದೇಶ
ವಿಶ್ವಾಮಿತ್ರ-ರಾಮ-ಲಕ್ಷ್ಮಣರು ಸರಯೂ-ಗಂಗಾ ನದಿಗಳ ಸಮೀಪದಲ್ಲಿದ್ದ ಆಶ್ರಮದಲ್ಲಿ ರಾತ್ರಿ ತಂಗಿದುದು
ಗಂಗೆಯನ್ನು ದಾಟುತ್ತಿದ್ದಾಗ ನೀರಿನಿಂದ ಹೊರ ಬರುತ್ತಿದ್ದ ಶಬ್ದದ ವಿಷಯವಾಗಿ ರಾಮ-ಲಕ್ಷ್ಮಣರ ಪ್ರಶ್ನೆ : ವಿಶ್ವಾಮಿತ್ರರಿಂದ ವಿವರಣೆ : ಮಲದ-ಕರೂಷ ಮತ್ತು ತಾಟಕಾವನಗಳ ಪರಿಯಚಮಾಡಿಕೊಡುತ್ತಾ ತಾಟಕಿಯನ್ನು ಸಂಹರಿಸುವಂತೆ ವಿಶ್ವಾಮಿತ್ರರು ಶ್ರೀರಾಮನಿಗೆ ಆಜ್ಞಾಪಿಸಿದುದು
ವಿಶ್ವಾಮಿತ್ರ-ರಾಮರ ಸಂಭಾಷಣೆ : ತಾಟಕಾ-ಮಾರೀಚರ ಜನ್ಮವೃತ್ತಾಂತಕಥನ : ತಾಟಕಿಯ ವಧೆಗೆ ವಿಶ್ವಾಮಿತ್ರರ ಪ್ರೋತ್ಸಾಹ
ಶ್ರೀರಾಮನಿಂದ ತಾಟಕಿಯ ಸಂಹಾರ
ವಿಶ್ವಾಮಿತ್ರರಿಂದ ಶ್ರೀರಾಮನಿಗೆ ದಿವ್ಯಾಸ್ತ್ರಗಳ ಉಪದೇಶ
ವಿಶ್ವಾಮಿತ್ರರು ರಾಮನಿಗೆ ಪ್ರತ್ಯಸ್ತ್ರಸಂಹಾರಗಳನ್ನೂ ಇನ್ನೂ ಇತರ ಅಸ್ತ್ರಗಳನ್ನೂ ಉಪದೇಶಿಸಿದುದು : ಹಾದಿಯಲ್ಲಿ ಸಿಕ್ಕಿದ ಆಶ್ರಮದ ವಿಷಯವಾಗಿ ಶ್ರೀರಾಮನು ವಿಶ್ವಾಮಿತ್ರರನ್ನು ಪ್ರಶ್ನಿಸಿದುದು
ಸರಗನ ಅಶ್ವಮೇಧಾಶ್ವದ ಅಪಹರಣ : ಸರಗನ ಮಕ್ಕಳು ಕುದುರೆಯನ್ನು ಹುಡುಕಲು ಪೃಥ್ವಿಯನ್ನೇ ಭೇದಿಸಿದುದು : ಸಂಭ್ರಾಂತರಾದ ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದುದು
ಸಗರಪುತ್ರರು ವಿನಾಶಹೊಂದುವರೆಂಬುದನ್ನು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು : ಸಗರನ ಮಕ್ಕಳು ಭೂಮಿಯನ್ನು ಅಗೆಯುತ್ತಾ ಕಪಿಲಮಹರ್ಷಿಗಳ ಬಳಿಗೆ ಹೋದುದು : ಕಪಿಲರು ಕುಪಿತರಾಗಿ ಸಗರನ ಮಕ್ಕಳನ್ನು ದಹಿಸಿದುದು
ಸಗರನ ಆಜ್ಞೆಯಂತೆ ಅಂಶುಮಂತನು ರಸಾತಲಕ್ಕೆ ಹೋಗಿ ಕುದುರೆಯನ್ನು ತಂದುದು : ಮಕ್ಕಳ ನಿಧನವಾರ್ತೆಯನ್ನು ತಿಳಿದು ಸಗರನು ಶೋಕಾಕುಲನಾಗಿ ಯಜ್ಞವನ್ನು ಪೂರ್ತಿಮಾಡಿದುದು
ಗಂಗೆಯನ್ನು ತರುವ ಸಲುವಾಗಿ ಅಂಶುಮಂತನ ಪ್ರಯತ್ನ : ಭಗೀರಥನ ತಪಸ್ಸಿನಿಂದ ಸುಪ್ರೀತನಾದ ಬ್ರಹ್ಮನು ವರವನ್ನಿತ್ತು ಗಂಗೆಯನ್ನು ಧರಿಸಲು ಈಶ್ವರನನ್ನು ಪ್ರಾರ್ಥಿಸುವಂತೆ ಸಲಹೆಯನ್ನಿತ್ತುದು
ಶ್ರೀ ಶಂಕರನು ಗಂಗೆಯನ್ನು ಧರಿಸುವುದಾಗಿ ಆಶ್ವಾಸನೆಯನ್ನಿತ್ತುದು : ಜಹ್ನುಮಹರ್ಷಿಯ ಕಿವಿಯಿಂದ ಹೊರಬಂದ ಗಂಗಾನದಿಯು ಏಳು ಪ್ರಕಾರವಾಗಿ ಹರಿದು ಭಗೀರಥನೊಡನೆ ಪಾತಾಳಕ್ಕೆ ಹೋಗಿ ಅವನ ಪ್ರಪಿತಾಮಹರನ್ನು ಉದ್ಧರಿಸಿದುದು
ವಸಿಷ್ಠ-ವಿಶ್ವಾಮಿತ್ರರ ಕುಶಲಪ್ರಶ್ನೆಗಳು : ಸೈನ್ಯದೊಡನೆ ಬಂದಿರುವ ವಿಶ್ವಾಮಿತ್ರರ ಆತಿಥ್ಯಕ್ಕಾಗಿ ಸಕಲಸಂಭಾರಗಳನ್ನೂ ಸಿದ್ಧಪಡಿಸುವಂತೆ ಶಬಲಾಧೇನುವಿಗೆ ವಸಿಷ್ಠರ ಆದೇಶ
ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರರನ್ನೂ ಅವರ ಪರಿವಾರದವರನ್ನೂ ಯಥೋಚಿತವಾಗಿ ಸತ್ಕರಿಸಿದುದು : ವಿಶ್ವಾಮಿತ್ರರು ಕಾಮಧೇನುವನ್ನು ಅಪೇಕ್ಷಿಸಿದುದು : ವಸಿಷ್ಠರ ಅಸಮ್ಮತಿ
ಶಬಲೆಯನ್ನು ಬಲಾತ್ಕಾರಪೂರ್ವಕವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರರ ಪ್ರಯತ್ನ : ವಸಿಷ್ಠರಲ್ಲಿ ಶಬಲೆಯ ಪ್ರಲಾಪ : ಅವರ ಆಜ್ಞೆಯಂತೆ ಶಬಲೆಯಿಂದ ಶಕ-ಯವನಾದಿಗಳ ಸೃಷ್ಟಿ ಮತ್ತು ವಿಶ್ವಾಮಿತ್ರರ ಸೈನ್ಯದ ಸಂಹಾರ
ತನ್ನ ನೂರು ಮಕ್ಕಳೂ ಮತ್ತು ಅಪಾರ ಸೈನ್ಯವೂ ವಿನಾಶವಾಗಲಾಗಿ ವಿಶ್ವಾಮಿತ್ರರು ತಪಸ್ಸುಮಾಡಿ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು : ಆಶ್ರಮವಾಸಿಗಳಿಗೆ ಉಪದ್ರವ
ವಿಶ್ವಾಮಿತ್ರರಿಂದ ವಸಿಷ್ಠರ ಮೇಲೆ ನಾನಾವಿಧವಾದ ದಿವ್ಯಾಸ್ತ್ರಗಳ ಪ್ರಯೋಗ : ವಸಿಷ್ಠರ ಬ್ರಹ್ಮದಂಡದಿಂದ ಎಲ್ಲ ಮಹಾಸ್ತ್ರಗಳ ಉಪಶಮನ
ಜನಕರಾಜನು ವಿಶ್ವಾಮಿತ್ರರನ್ನೂ ರಾಮ-ಲಕ್ಷ್ಮಣರನ್ನೂ ಸತ್ಕರಿಸಿ ಅವರಿಗೆ ತನ್ನ ಅರಮನೆಯಲ್ಲಿದ್ದ ಧನುಸ್ಸಿನ ಇತಿಹಾಸವನ್ನೂ ಸೀತಾಪ್ರಾಪ್ತಿಯ ವಿಷಯವನ್ನೂ ತಿಳಿಸಿ, ರಾಮನು ಧನುಸ್ಸಿನ ಶಿಂಜಿನಿಯನ್ನು ಸೆಳೆದು ಕಟ್ಟಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿದುದು
ಮಂತ್ರಿಗಳು ದಶರಥನಿಗೆ ಜನಕನ ಸಂದೇಶವನ್ನು ತಿಳಿಸಿದುದು : ವಸಿಷ್ಠ-ವಾಮದೇವರ ಸಲಹೆಯಂತೆ ದಶರಥನ ಪ್ರಯಾಣಸನ್ನಾಹ
ಚತುರಂಗಬಲದೊಡನೆ ಮಿಥಿಲೆಗೆ ದಶರಥನ ಪ್ರಯಾಣ : ಜನಕನಿಂದ ಆದರದ ಸ್ವಾಗತ
ಜನಕರಾಜನು ಸಾಂಕಾಶ್ಯಾನಗರಿಯಿಂದ ತನ್ನ ತಮ್ಮನನ್ನು ಕರೆಸಿದುದು : ವಸಿಷ್ಠರು ಸೂರ್ಯವಂಶದವರ ಪರಿಚಯವನ್ನು ಮಾಡಿ ಕೊಟ್ಟುದು : ಸೀತೆಯನ್ನು ರಾಮನಿಗೂ ಊರ್ಮಿಳೆಯನ್ನು ಲಕ್ಷ್ಮಣನಿಗೂ ವಸಿಷ್ಠರು ವರಣಮಾಡಿದುದು
ಜನಕನು ತನ್ನ ವಂಶವನ್ನು ಪರಿಚಯಮಾಡಿ ಕೊಟ್ಟುದು : ಶ್ರೀರಾಮನಿಗೆ ಸೀತೆಯನ್ನೂ, ಲಕ್ಷ್ಮಣನಿಗೆ ಊರ್ಮಿಳೆಯನ್ನೂ ಮದುವೆ ಮಾಡಿಕೊಡುವುದಾಗಿ ಮಾತುಕೊಟ್ಟುದು
ವಿಶ್ವಾಮಿತ್ರರು ಭರತ-ಶತ್ರುಘ್ನರಿಗೆ ಕನ್ಯೆಯರನ್ನು ವರಣಮಾಡಿದುದು : ಜನಕನ ಸಮ್ಮತಿ : ದಶರಥನು ತನ್ನ ಮಕ್ಕಳ ಕಲ್ಯಾಣಕ್ಕಾಗಿ ನಾಂದೀಶ್ರಾದ್ಧ-ಸಮಾವರ್ತನೆ ಮುಂತಾದ ಕರ್ಮಗಳನ್ನು ಮಾಡಿದುದು
ಶ್ರೀರಾಮ-ಲಕ್ಷ್ಮಣ-ಭರತ-ಶತ್ರುಘ್ನರ ವಿವಾಹ
ವಿಶ್ವಾಮಿತ್ರರು ಆಶ್ರಮಕ್ಕೆ ತೆರಳಿದುದು : ಜನಕನು ಹೆಣ್ಣುಮಕ್ಕಳಿಗೆ ಅಪಾರವಾದ ಬಳುವಳಿಗಳನ್ನು ಕೊಟ್ಟು ದಶರಥನೊಡನೆ ಕಳುಹಿಸಿಕೊಟ್ಟುದು : ಮಾರ್ಗದಲ್ಲಿ ಶುಭಾಶುಭ ಶಕುನಗಳು : ಪರಶುರಾಮನ ಆಗಮನ
ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು