ಸ್ವಪ್ನದಲ್ಲಿ ಉಷಾದೇವಿಯು ಪತಿಯೊಡನೆ ಸಮಾಗಮಮಾಡಿದುದು : ಉಷಾದೇವಿಯ ಚಿಂತೆ : ಸಖಿಯರಿಂದ ಸಾಂತ್ವನ : ಮಂತ್ರಿಯಾದ ಕುಂಭಾಂಡನ ಮಗಳ ಸಲಹೆಯಂತೆ ಉಷೆಯು ಚಿತ್ರಲೇಖೆಯನ್ನು ಕರೆಯಿಸಿ ತನ್ನ ಕಷ್ಟವನ್ನು ಹೇಳಿಕೊಂಡುದು : ಚಿತ್ರಲೇಖೆಯು ಸಿದ್ಧಪಡಿಸಿದ್ದ ಚಿತ್ರಗಳಿಂದ ತನ್ನ ಕನಸ್ಸಿನಲ್ಲಿ ಆಗಮಿಸಿದ್ದ ಅನಿರುದ್ಧನನ್ನು ಉಷೆಯು ಗುರುತಿಸಿದುದು : ಅವನನ್ನು ಕರೆತರುವ ಸಲುವಾಗಿ ದ್ವಾರಾವತಿಗೆ ಚಿತ್ರಲೇಖೆಯ ಪ್ರಯಾಣ
ಚಿತ್ರಲೇಖಾ ಮತ್ತು ನಾರದಮಹರ್ಷಿಗಳ ಸಂವಾದ : ಚಿತ್ರಲೇಖೆಯು ನಾರದರಿಂದ ತಾಮಸೀವಿದ್ಯೆಯ ಉಪದೇಶವನ್ನು ಪಡೆದು ಅದರ ಪ್ರಭಾವದಿಂದ ಅನಿರುದ್ಧನನ್ನು ಶೋಣಿತಪುರಕ್ಕೆ ಕೊಂಡೊಯ್ದುದು : ಉಷಾ ಮತ್ತು ಅನಿರುದ್ಧರ ಗಾಂಧರ್ವ ವಿವಾಹ : ಅನಿರುದ್ಧನೊಡನೆ ಬಾಣಾಸುರನ ಮತ್ತು ಅವನ ಸೈನಿಕರ ಯುದ್ಧ : ಅನಿರುದ್ಧನನ್ನು ನಾಗಪಾಶದಿಂದ ಬಂಧಿಸಿ ಬಂದಿಯನ್ನಾಗಿ ಮಾಡಿದುದು : ನಾರದರ ದ್ವಾರಕಾಪ್ರಯಾಣ
ಅನಿರುದ್ಧನು ಆರ್ಯಾದೇವಿಯನ್ನು ಸ್ತೋತ್ರ ಮಾಡಿದುದು : ದೇವಿಯು ಪ್ರಸನ್ನಳಾಗಿ ಆತನನ್ನು ಸರ್ಪಬಂಧನದಿಂದ ವಿಮುಕ್ತಿಗೊಳಿಸಿದುದು
ಬಾಣಾಸುರನ ಸೈನ್ಯದ ಪಲಾಯನ : ಭಗವಾನ್ ಶಂಕರನು ತನ್ನ ಗಣಗಳೊಡನೆ ಆಗಮಿಸಿದುದು : ಶ್ರೀಕೃಷ್ಣ-ರುದ್ರರ ಯುದ್ಧ : ಬಾಣಾಸುರನಿಂದ ರಣರಂಗಪ್ರವೇಶ
ಶ್ರೀಕೃಷ್ಣನ ಜೃಂಭಣಾಸ್ತ್ರಕ್ಕೆ ಶ್ರೀಶಂಕರನು ವಶೀಭೂತನಾದುದು : ಶಿವ ಮತ್ತು ವಿಷ್ಣು ಇಬ್ಬರೂ ಒಬ್ಬರೇ ಎಂಬುದನ್ನು ಬ್ರಹ್ಮನು ಶಿವನಿಗೆ ಸ್ಮರಣೆಮಾಡಿಕೊಟ್ಟುದು : ಬ್ರಹ್ಮನು ಪ್ರಶ್ನಿಸಲಾಗಿ ಮಾರ್ಕಂಡೇಯ ಮಹರ್ಷಿಗಳು ಹರಿಹರರ ಮಹಿಮೆಯಿಂದ ಯುಕ್ತವಾದ ಸ್ತೋತ್ರಗಳನ್ನು ವರ್ಣಿಸಿ ಹೇಳಿದುದು
ಶ್ರೀಕೃಷ್ಣ-ಕಾರ್ತಿಕೇಯರ ಯುದ್ಧ : ಕಾರ್ತಿಕೇಯನ ಪರಾಜಯ : ಕೋಟವೀದೇವಿಯಿಂದ ಕಾರ್ತಿಕೇಯನ ರಕ್ಷಣೆ : ಶ್ರೀಕೃಷ್ಣ-ಬಾಣಾಸುರರ ಯುದ್ಧ : ಶ್ರೀಕೃಷ್ಣನಿಂದ ಬಾಣಾಸುರನ ಸಾವಿರ ತೋಳುಗಳ ಛೇದನ : ಮಹಾದೇವನಿಂದ ಬಾಣಾಸುರನಿಗೆ ವರದಾನ
ನಾಗಪಾಶದಿಂದ ಅನಿರುದ್ಧನ ವಿಮೋಚನೆ : ಅನಿರುದ್ಧನು ಶ್ರೀಕೃಷ್ಣನೇ ಮೊದಲಾದವರನ್ನು ವಂದಿಸಿದುದು : ನಾರದರ ಸಲಹೆಯಂತೆ ಉಷೆಯೊಡನೆ ಅವನ ವಿವಾಹ : ದ್ವಾರಕೆಗೆ ಪ್ರಯಾಣ : ಮಾರ್ಗದಲ್ಲಿ ಶ್ರೀಕೃಷ್ಣನು ವರುಣನನ್ನು ಪರಾಜಯಗೊಳಿಸಿದುದು : ವರುಣನಿಂದ ಶ್ರೀಕೃಷ್ಣನ ಸ್ತುತಿ : ಶ್ರೀಕೃಷ್ಣನನ್ನು ಕಂಡ ದ್ವಾರಕಾವಾಸಿಗಳ ಅಮಿತಾನಂದ : ಶ್ರೀಕೃಷ್ಣನ ಸಲಹೆಯಂತೆ ಪುರವಾಸಿಗಳೆಲ್ಲರೂ ದೇವತೆಗಳನ್ನು ಪ್ರಾರ್ಥಿಸಿದುದು : ಇಂದ್ರನಿಂದ ಶ್ರೀಕೃಷ್ಣನ ಪ್ರಶಂಸೆ : ದೇವರ್ಷಿಗಳೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ತೆರಳಿದುದು
ದ್ವಾರಕೆಯಲ್ಲಿ ಉತ್ಸವ : ಉಷಾದೇವಿಯ ಅಂತಃಪುರ ಪ್ರವೇಶ : ಶ್ರೀಕೃಷ್ಣನ ಮಹಿಮೆ : ವಿಷ್ಣುಪರ್ವದ ಮಹಿಮೆ : ಪರ್ವದ ಉಪಸಂಹಾರ
ಭವಿಷ್ಯಪರ್ವ
ಜನಮೇಜಯನ ಸಂತತಿ : ಪೌರವ ಮತ್ತು ಪಾಂಡವರ ವಂಶೀಯರ ಹಿರಿಮೆಯ ವರ್ಣನೆ
ಜನಮೇಜಯ ರಾಜನು ಅಶ್ವಮೇಧಯಜ್ಞ ಮಾಡಲು ಯೋಚಿಸಿದುದು : ವ್ಯಾಸರ ಆಗಮನ : ರಾಜನಿಂದ ಅವರ ಸತ್ಕಾರ : ಪಾಂಡವರಿಗೆ ರಾಜಸೂಯ ಯಜ್ಞ ಮಾಡದಿರಲು ಏಕೆ ಸಲಹೆ ನೀಡಲಿಲ್ಲವೆಂಬ ಜನಮೇಜಯನ ಪ್ರಶ್ನೆಗೆ ವ್ಯಾಸರ ಉತ್ತರ
ಮಹರ್ಷಿಗಳಾದ ವ್ಯಾಸರು ಕಲಿಯುಗದ ಸ್ಥಿತಿಯನ್ನು ವರ್ಣಿಸಿದುದು
ಸೃಷ್ಟಿಗೆ ಸಂಬಂಧಿಸಿದ ವರ್ಣನೆಯ ಪ್ರಸಂಗದಲ್ಲಿ ಜ್ಞಾನ ಮತ್ತು ಯೋಗದ ವಿಚಾರ
ಮೈನಾಕಪರ್ವತದ ಸ್ಥಿತಿ : ಬ್ರಹ್ಮನು ಪ್ರಕಟವಾದುದು : ಮೇರುಪರ್ವತದ ಮೇಲೆ ಪರಮಾತ್ಮನಿಂದ ಮೇರುವಿನ ವಿಸ್ತಾರ : ಬ್ರಹ್ಮನ ಮೂಲಕವಾಗಿ ಸೃಷ್ಟಿ : ಬ್ರಹ್ಮಾ ಮತ್ತು ಬ್ರಹ್ಮರ ಸ್ವರೂಪ ವರ್ಣನೆ : ಗಂಗೆಯ ಪ್ರಾದುರ್ಭಾವ : ಸೋಮನ ಉತ್ಪತ್ತಿ : ಧರ್ಮದ ಪಾದಗಳು : ಯೋಗಸಾಧನೆ : ಐಶ್ವರ್ಯದಿಂದುಂಟಾಗುವ ಹಾನಿ : ವೇದಗಳ ಪ್ರಕಟನೆ : ಯಜ್ಞಪುರುಷನ ವರ್ಣನೆ : ಯೋಗವಿದನ ಮಹಿಮೆ : ಮೋಕ್ಷ ಸಂಬಂಧವಾದ ಕರ್ಮಗಳನ್ನು ಮಾಡುವ ವಿಧಾನ : ಕರ್ಮಫಲದ ತ್ಯಾಗದಿಂದ ಮುಕ್ತಿ
ಯೋಗದ ಉಪಸರ್ಗ : ಯೋಗಿಗೆ ವಿಷ್ಣು ರೂಪದಲ್ಲಿ ಸ್ಥಿತಿ : ಕರ್ಮಲಯದಿಂದ ಮುಕ್ತಿ : ಸಕಾಮಕರ್ಮಿಗಳಿಗೆ ಧೂಮಮಾರ್ಗದ ಗತಿ ಮತ್ತು ಪುನರಾವೃತ್ತಿ : ಜ್ಞಾನಿ ಮತ್ತು ಯೋಗಿಗೆ ತತ್ತ್ವದ ಸಾಕ್ಷಾತ್ಕಾರ : ಬ್ರಹ್ಮಯುಗದ ವರ್ಣನೆ
ಯೋಗಿಯ ಸ್ಥಿತಿ ಮತ್ತು ಅವನಿಗೆ ಒದಗಿಬರುವ ವಿಘ್ನಗಳ ವರ್ಣನೆ
ಬ್ರಹ್ಮನು ಯೋಗಧಾರಣಪೂರ್ವಕವಾಗಿ ಮಾಡಿದ ಮಾನಸಿಕಸೃಷ್ಟಿಯ ವರ್ಣನೆ
ಕ್ಷತ್ರಯುಗದ ಪ್ರಸಂಗದಲ್ಲಿ ಬ್ರಾಹ್ಮಣರ ವರ್ಣನೆ : ದಕ್ಷಪ್ರಜಾಪತಿಯ ಮೂಲಕವಾಗಿ ಪ್ರಾಣಿಗಳ ಮತ್ತು ನಾಲ್ಕು ವರ್ಣಗಳ ಸೃಷ್ಟಿ
ದಕ್ಷನು ತನ್ನ ಅರ್ಧಭಾಗವನ್ನು ಸ್ತ್ರೀರೂಪವನ್ನಾಗಿ ಪರಿವರ್ತಿಸಿಕೊಂಡು ಕನ್ಯೆಯರನ್ನು ಸೃಷ್ಟಿಸಿದ್ದು : ಕಶ್ಯಪನಿಗೂ ಸೋಮನಿಗೂ ಕನ್ಯಾಪ್ರದಾನ ಮಾಡಿದ್ದು : ಕಶ್ಯಪ ಮತ್ತು ದಕ್ಷ ಕನ್ಯೆಯರ ಸಂತಾನದ ವರ್ಣನೆ
ಬ್ರಹ್ಮನ ಮಹಾಯಜ್ಞದ ವರ್ಣನೆ
ಬ್ರಹ್ಮನ ಯಜ್ಞಸ್ಥಳದ ಪುಣ್ಯಪ್ರದೇಶದಲ್ಲಿ ವಾಸಮಾಡಲು ಬ್ರಾಹ್ಮಣರು ಇಚ್ಛಿಸಿದುದು
ನಾರದನೇ ಮೊದಲಾದವರಿಂದ ಬ್ರಾಹ್ಮಣರಿಗೂ ಮತ್ತು ಬ್ರಹ್ಮನಿಗೂ ಸತ್ಕಾರ : ಬ್ರಹ್ಮನು ಕಶ್ಯಪನಿಗೆ ಯಜ್ಞಮಾಡಲು ಆದೇಶವನ್ನಿತ್ತುದು : ದೇವ-ದಾನವರ ಯುದ್ಧ : ವಿಷ್ಣುವಿನಿಂದ ಮಧುರಾಕ್ಷಸನ ಪರಾಜಯ
ಮಧು-ವಿಷ್ಣು-ಇವರ ಘೋರಯುದ್ಧ : ದೇವರ್ಷಿಗಳಿಂದ ವಿಷ್ಣುವಿನ ಸ್ತುತಿ : ಹಯಗ್ರೀವರೂಪಧರನಾದ ವಿಷ್ಣುವಿನಿಂದ ಮಧುರಾಕ್ಷಸನ ಸಂಹಾರ : ಪೃಥ್ವಿಗೆ ಮೇದಿನೀ ಎಂಬ ಹೆಸರು ಬಂದುದು
ಮಧುವಿನ ಸಂಹಾರದಿಂದಾಗಿ ಸಮಸ್ತಪ್ರಾಣಿಗಳ ಹರ್ಷ : ಪರ್ವತಗಳ ಮತ್ತು ವಸಂತರ್ತುವಿನ ವರ್ಣನೆ : ಮಧುವಾಹಿನೀ ಎಂಬ ನದಿಯು ಪ್ರಕಟವಾದುದು : ಗೌರೀಸಿದ್ಧಿಯ ಮಹಿಮೆ
ಪುಷ್ಕರದಲ್ಲಿ ವಿಷ್ಣುಪ್ರಮುಖರಾದ ದೇವತೆಗಳು ತಪಸ್ಸು ಮಾಡಿದ್ದು : ತಪಸ್ಸಿನ ಪ್ರಭಾವದ ವರ್ಣನೆ
ತಪಸ್ಸಿನ ಪ್ರಭಾವದಿಂದ ದೇವತೆಗಳ ಉತ್ಕರ್ಷ
ಪೃಥುವಿನ ರಾಜ್ಯಾಭಿಷೇಕ : ದೇವ-ದಾನವರಿಂದ ಸಮುದ್ರಮಂಥನ : ಸಮುದ್ರದಲ್ಲಿ ಇತರ ರತ್ನಗಳೊಡನೆ ಅಮೃತವೂ ಪ್ರಕಟವಾದುದು : ರಾಹುವಿನ ಶಿರಚ್ಛೇದ
ಬಲಿಚಕ್ರವರ್ತಿಯ ಯಜ್ಞದ ಸಮಯದಲ್ಲಿ ವಾಮನನು ಬಲಿಚಕ್ರವರ್ತಿಗೆ ಸೇರಿದ್ದ ಮೂರು ಲೋಕಗಳನ್ನು ಅಪಹರಿಸಿದುದು : ಕಾಲಾಂತರದಲ್ಲಿ ದೇವತೆಗಳಿಂದ ಬಲಿಚಕ್ರವರ್ತಿಯ ರಾಜ್ಯಾಭಿಷೇಕ
ದಕ್ಷಯಜ್ಞವಿಧ್ವಂಸನ
ವಾರಾಹಾವತಾರದ ಉಪಕ್ರಮ
ಭಗವಾನ್ ಯಜ್ಞವರಾಹಸ್ವಾಮಿಯು ಪೃಥ್ವಿ ಯನ್ನು ಉದ್ಧರಿಸಿದುದು
ಭಗವಾನ್ ವರಾಹಸ್ವಾಮಿಯು ವಿಭಿನ್ನ ದಿಕ್ಕುಗಳಲ್ಲಿ ಹಲವಾರು ಪರ್ವತಗಳನ್ನೂ ನದಿಗಳನ್ನೂ ನಿರ್ಮಿಸಿದುದು