ಕಂಸನ ಚಿಂತೆ : ಕಂಸನು ರಂಗಶಾಲೆಯನ್ನು ಸಜ್ಜುಗೊಳಿಸಲು ಆಜ್ಞಾಪಿಸಿದುದು : ಚಾಣೂರ-ಮುಷ್ಟಿಕರಿಗೂ ಕುವಲಯಾಪೀಡ ಎಂಬ ಆನೆಯ ಮಾವಟಿಗನಿಗೂ ಶ್ರೀಕೃಷ್ಣ-ಬಲರಾಮರನ್ನು ವಧಿಸುವಂತೆ ಆಜ್ಞೆಮಾಡಿದುದು : ಕಂಸನ ಹುಟ್ಟು
ನಾಗರಿಕರಿಂದ ತುಂಬಿರುವ ರಂಗಶಾಲೆಯ ಸೊಬಗು : ಕಂಸ-ಮಲ್ಲರ ಆಗಮನ : ರಂಗದ್ವಾರಕ್ಕೆ ಶ್ರೀಕೃಷ್ಣ-ಬಲರಾಮರ ಆಗಮನ : ಕುವಲಯಾಪೀಡ, ಮಾವಟಿಗ ಮತ್ತು ಆನೆಯ ಪಾದರಕ್ಷಕರ ಸಂಹಾರ : ಬಳಿಕ ಬಲರಾಮ-ಕೃಷ್ಣರಿಂದ ರಂಗಭೂಮಿಯ ಪ್ರವೇಶ
ರಂಗಶಾಲೆಯಲ್ಲಿ ಮಲ್ಲಯುದ್ಧದ ವಿಷಯದಲ್ಲಿ ಶ್ರೀಕೃಷ್ಣನ ಅಭಿಪ್ರಾಯ : ಕೃಷ್ಣ-ಬಲರಾಮರಿಂದ ಚಾಣೂರ-ಮುಷ್ಟಿಕರೇ ಮೊದಲಾದ ಮಲ್ಲರ ಸಂಹಾರ : ಕಂಸವಧೆ : ಶ್ರೀಕೃಷ್ಣನು ತಂದೆ-ತಾಯಿಗಳಿಗೆ ನಮಸ್ಕರಿಸಿ ಅವರ ಭವನಕ್ಕೆ ತೆರಳಿದುದು
ಕಂಸನ ಪತ್ನಿಯರ ಮತ್ತು ತಾಯಿಯ ಗೋಳಾಟ
ಶ್ರೀಕೃಷ್ಣನು ಕಂಸನ ವಧೆಗೆ ಪಶ್ಚಾತ್ತಾಪವನ್ನು ಸೂಚಿಸುತ್ತಾ ತಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಂಡುದು : ಉಗ್ರಸೇನನು ಸಮಸ್ತವನ್ನೂ ಶ್ರೀಕೃಷ್ಣನಿಗೆ ಸಮರ್ಪಣಮಾಡಿ ಕಂಸನ ಅಂತ್ಯೇಷ್ಟಿಗೆ ವ್ಯವಸ್ಥೆಗೊಳಿಸುವಂತೆ ಪ್ರಾರ್ಥಿಸಿದುದು : ಶ್ರೀಕೃಷ್ಣನು ಉಗ್ರಸೇನನನ್ನು ಸಮಾಧಾನಗೊಳಿಸಿ ಅವನಿಗೆ ರಾಜ್ಯದ ಪಟ್ಟಾಭಿಷೇಕ ಮಾಡಿದುದು : ಕಂಸನೇ ಮೊದಲಾದವರಿಗೆ ಅಂತ್ಯೇಷ್ಟಿ ಸಂಸ್ಕಾರ
ಜರಾಸಂಧನು ತನ್ನ ಅಪಾರವಾದ ಸೈನ್ಯದೊಡನೆ ಮಥುರಾಪಟ್ಟಣಕ್ಕೆ ಮುತ್ತಿಗೆ ಹಾಕಿದುದು
ಜರಾಸಂಧನ ಸೇನೆಯ ವರ್ಣನೆ : ಸೈನ್ಯವು ನಾಲ್ಕು ಕಡೆಗಳಿಂದಲೂ ಮಥುರಾಪಟ್ಟಣಕ್ಕೆ ಮುತ್ತಿಗೆಹಾಕಿದುದು : ಯಾದವ ಸೈನ್ಯದೊಡನೆ ಜರಾಸಂಧನ ಸೈನ್ಯದ ಭಯಂಕರಯುದ್ಧ : ಶ್ರೀರಾಮ-ಕೃಷ್ಣರ ಪರಾಕ್ರಮದಿಂದಾಗಿ ಜರಾಸಂಧನ ಪ್ರೋತ್ಸಾಹ : ಪುನಃ ಎರಡು ಸೈನ್ಯಗಳ ನಡುವೆ ಭಯಂಕರವಾದ ಯುದ್ಧ
ವೃಷ್ಣಿವಂಶದವರೊಡನೆ ಜರಾಸಂಧನ ಯುದ್ಧ : ಬಲರಾಮನೊಡನೆ ಗದಾಯುದ್ಧ : ಜರಾಸಂಧನ ಪಲಾಯನ
ಜರಾಸಂಧನ ಆಕ್ರಮಣವನ್ನು ಪುನಃ ಶಂಕಿಸಿದ ಯಾದವರ ಸಭೆಯಲ್ಲಿ ವಿಕದ್ರುವಿನ ಭಾಷಣ : ಹರ್ಯಶ್ವರಾಜನ ಚರಿತ್ರೆ : ಯಾದವರ ಉತ್ಪತ್ತಿಯ ವರ್ಣನೆ
ವಿಕದ್ರುವಿನ ಮೂಲಕ ಯದುಸಂತತಿಯ ವರ್ಣನೆ
ಮಥುರಾಪಟ್ಟಣವನ್ನೂ ಮತ್ತು ಪ್ರಜೆಗಳನ್ನೂ ಜರಾಸಂಧನ ಉಪಟಳದಿಂದ ರಕ್ಷಿಸುವುದಕ್ಕಾಗಿ ಮಥುರಾಪಟ್ಟಣದ ದಕ್ಷಿಣದಿಕ್ಕಿಗೆ ಬಲರಾಮ-ಕೃಷ್ಣರ ಪ್ರಯಾಣ : ಪರಶುರಾಮನೊಡನೆ ಸಮಾಗಮ : ಗೋಮಂತಕಪರ್ವತಕ್ಕೆ ಹೋಗಲು ಬಲರಾಮನ ಸಲಹೆ
ಶ್ರೀಕೃಷ್ಣ-ಬಲರಾಮ-ಪರಶುರಾಮರಿಂದ ಗೋಮಂತ ಪರ್ವತದ ಆರೋಹಣ : ಪರಶುರಾಮನು ಶ್ರೀಕೃಷ್ಣನಿಗೆ ಯುದ್ಧಮಾಡಲು ಪ್ರೋತ್ಸಾಹಿಸಿ ಅಲ್ಲಿಂದ ಹೊರಟುದು
ಬಲರಾಮನ ಬಳಿಗೆ ವಾರುಣೀ, ಕಾಂತಿ ಮತ್ತು ಶ್ರೀ-ಇವರ ಆಗಮನ : ಗರುಡನ ಮೂಲಕ ಶ್ರೀಕೃಷ್ಣನಿಗೆ ಮಹಾವಿಷ್ಣುವಿನ ಕಿರೀಟಪ್ರಾಪ್ತಿ : ಶ್ರೀಕೃಷ್ಣ-ಬಲರಾಮರ ಸಂಭಾಷಣೆ
ಜರಾಸಂಧನ ಸೈನ್ಯದ ವರ್ಣನೆ : ಪರ್ವತವನ್ನು ಆಕ್ರಮಿಸಲು ಜರಾಸಂಧನು ಸೈನ್ಯಕ್ಕೆ ಆಜ್ಞೆ ಮಾಡಿದುದು : ಶಿಶುಪಾಲನ ಸಮ್ಮತಿಯನ್ನು ಪಡೆದು ಗೋಮಂತಪರ್ವತಕ್ಕೆ ಬೆಂಕಿ ಹಚ್ಚಿದುದು : ಬಲರಾಮ-ಕೃಷ್ಣರು ಪರ್ವತದ ಮೇಲಿನಿಂದ ಧುಮುಕಿ ಜರಾಸಂಧನ ಸೈನ್ಯದೊಳಗೆ ನುಗ್ಗಿದುದು
ಕೃಷ್ಣ-ಬಲರಾಮ ಮತ್ತು ಸೈನ್ಯಸಮೇತನಾದ ಜರಾಸಂಧ ಇವರ ಯುದ್ಧ : ದರದರಾಜನ ಮರಣ : ಜರಾಸಂಧನ ಪರಾಜಯ ಮತ್ತು ಪಲಾಯನ : ಕರವೀರಪುರಕ್ಕೆ ಚೇದಿರಾಜನಾದ ದಮಘೋಷನೊಡನೆ ಶ್ರೀಕೃಷ್ಣ-ಬಲರಾಮರ ಪ್ರಯಾಣ
ಶ್ರೀಕೃಷ್ಣನಿಂದ ಶೃಗಾಲರಾಜನ ಸಂಹಾರ : ಅವನ ಮಗನಿಗೆ ಕರವೀರಪುರದ ರಾಜ್ಯಾಭಿಷೇಕ
ಮಥುರೆಗೆ ಬಲರಾಮ-ಕೃಷ್ಣರ ಪ್ರತ್ಯಾಗಮನ : ಪೌರರ ಸ್ವಾಗತ
ಬಲರಾಮನ ವ್ರಜಯಾತ್ರೆ : ಹಲಾಯುಧದಿಂದ ಯಮುನಾನದಿಯ ಆಕರ್ಷಣೆ
ರುಕ್ಮಿಣಿಯ ಸ್ವಯಂವರಕ್ಕಾಗಿ ಕುಂಡಿನಪುರಕ್ಕೆ ಶ್ರೀಕೃಷ್ಣನ ಪ್ರಯಾಣ : ಕೈಶಿಕರಾಜನ ಸತ್ಕಾರ
ಶ್ರೀಕೃಷ್ಣನ ಆಗಮನದಿಂದ ರಾಜರು ಚಿಂತಿತರಾದುದು : ರಾಜಸಭೆಯಲ್ಲಿ ಜರಾಸಂಧ ಮತ್ತು ಸುನೀಥರ ಭಾಷಣ
ದಂತವಕ್ತ್ರ ಮತ್ತು ಶಾಲ್ವರ ಭಾಷಣವನ್ನು ಕೇಳಿದ ಭೀಷ್ಮಕನು ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಲು ನಿಶ್ಚಯಿಸಿದುದು
ಕ್ರಥ ಮತ್ತು ಕೈಶಿಕರು ಶ್ರೀಕೃಷ್ಣನಿಗೆ ತಮ್ಮ ರಾಜ್ಯಗಳನ್ನು ಅರ್ಪಿಸಿದುದು : ಇಂದ್ರನ ಆದೇಶ ದಂತೆ ಎಲ್ಲ ರಾಜರೂ ಶ್ರೀಕೃಷ್ಣನನ್ನು ಚಕ್ರವರ್ತಿಯ ಪದವಿಯಲ್ಲಿ ಪಟ್ಟಾಭಿಷೇಕಮಾಡಿದುದು : ಶ್ರೀಕೃಷ್ಣನ ಅಭಯಪ್ರದಾನ
ಶ್ರೀಕೃಷ್ಣನಪ್ರಶ್ನೆಗೆ ಸತ್ಯಭಾಮೆಯು ತನ್ನ ದುಃಖಕ್ಕೂ-ಖೇದಕ್ಕೂ ಕಾರಣವನ್ನು ತಿಳಿಸಿದುದು : ಪಾರಿಜಾತಪುಷ್ಪವನ್ನು ತಂದು ಕೊಡುವುದಾಗಿ ಆಶ್ವಾಸನೆಯನ್ನಿತ್ತು ಶ್ರೀಕೃಷ್ಣನು ಸತ್ಯಭಾಮೆಯನ್ನು ಸಮಾಧಾನಪಡಿಸಿದುದು : ಸತ್ಯಭಾಮಾ-ಕೃಷ್ಣರಿಂದ ನಾರದರಿಗೆ ಸತ್ಕಾರ : ನಾರದರಿಂದ ಪಾರಿಜಾತದ ಉತ್ಪತ್ತಿ ಮತ್ತು ಮಹಿಮೆಗಳ ವರ್ಣನೆ
ಪಾರಿಜಾತವೃಕ್ಷವನ್ನು ಕೊಡುವಂತೆ ಇಂದ್ರನನ್ನು ಪ್ರಾರ್ಥಿಸುವ ಸಲುವಾಗಿ ಶ್ರೀಕೃಷ್ಣನು ನಾರದರನ್ನು ಕಳುಹಿಸಿಕೊಟ್ಟುದು
ಸ್ವರ್ಗದಲ್ಲಿ ಮಹಾದೇವನ ಪರಿವಾರದ ಸಂತೋಷಾರ್ಥವಾಗಿ ನೃತ್ಯ-ಗೀತಗಳ ಸಂಭ್ರಮ : ನಾರದರು-ಶ್ರೀಕೃಷ್ಣನ ಸಂದೇಶವನ್ನು ಇಂದ್ರನಿಗೆ ಹೇಳಿದುದು : ಇಂದ್ರನು ನಾನಾ ಕಾರಣಗಳನ್ನು ಮುಂದೆಮಾಡಿ ಪಾರಿಜಾತ ವೃಕ್ಷವನ್ನು ಕೊಡಲು ನಿರಾಕರಿಸಿದುದು
ಪಾರಿಜಾತವೃಕ್ಷವನ್ನು ಕೊಡದಿದ್ದರೆ ಗದಾಪ್ರಹಾರ ಮಾಡುವುದಾಗಿ ಹೇಳಿಕಳುಹಿಸಿದ ಶ್ರೀಕೃಷ್ಣನ ವಿಷಯದಲ್ಲಿ ಇಂದ್ರನ ಕೋಪ : ಯುದ್ಧವಿಲ್ಲದೇ ಪಾರಿಜಾತವೃಕ್ಷವನ್ನು ಕೊಡಲಾರೆನೆಂದು ಇಂದ್ರನ ನಿಶ್ಚಯ
ನಾರದರು ಶ್ರೀಕೃಷ್ಣನ ಮಹಿಮೆಯನ್ನು ಪುನಃ ಪ್ರತಿಪಾದಿಸಿದರೂ ಇಂದ್ರನು ಪಾರಿಜಾತ ವೃಕ್ಷವನ್ನು ಕೊಡಲು ನಿರಾಕರಿಸಿದುದು
ಅಮರಾವತಿಯ ಮೇಲೆ ಆಕ್ರಮಣನಡೆಸುವುದು ನಿಶ್ಚಯವೆಂದು ಹೇಳಿ ಶ್ರೀಕೃಷ್ಣನು ನಾರದರ ಮೂಲಕ ಇಂದ್ರನಿಗೆ ಸಂದೇಶವನ್ನು ಕಳುಹಿಸಿಕೊಟ್ಟುದು : ಇಂದ್ರ-ಬೃಹಸ್ಪತಿಗಳ ಸಂಭಾಷಣೆ : ಬೃಹಸ್ಪತಿಯು ಕಶ್ಯಪನಿಗೆ ಈ ಯುದ್ಧ ವಾರ್ತೆಯನ್ನು ತಿಳಿಸಿದುದು : ಶಾಂತಿಯ ಸ್ಥಾಪನೆಗಾಗಿ ಕಶ್ಯಪನಿಂದ ಶ್ರೀಶಂಕರನ ಪ್ರಾರ್ಥನೆ
ಇಂದ್ರ-ಕೃಷ್ಣರ, ಜಯಂತ-ಪ್ರದ್ಯುಮ್ನರ ಪ್ರವರ-ಸಾತ್ಯಕಿಗಳ ಮತ್ತು ಐರಾವತ-ಗರುಡರ ಘೋರಯುದ್ಧ
ಶ್ರೀಕೃಷ್ಣನು ರಾತ್ರಿಯಲ್ಲಿ ಯುದ್ಧವನ್ನು ಸ್ಥಗಿತಗೊಳಿಸಿ ಪಾರಿಯಾತ್ರ ಪರ್ವತಕ್ಕೆ ವರವನ್ನಿತ್ತುದು : ಗಂಗೆಯ ಸ್ಮರಣೆ : ಬಿಲ್ವಪತ್ರೆಯಲ್ಲಿಯೂ ಮತ್ತು ಗಂಗೆಯಲ್ಲಿಯೂ ಮಹಾದೇವನನ್ನು ಆವಾಹಿಸಿ ಬಿಲ್ವೋದಕೇಶ್ವರನ ಪೂಜೆಯನ್ನೂ ಮತ್ತು ಸ್ತೋತ್ರವನ್ನೂ ಮಾಡಿದುದು : ಮಹಾದೇವನು ಶ್ರೀಕೃಷ್ಣನಿಗೆ ಅಭೀಷ್ಟವಾದ ವರವನ್ನಿತ್ತು ದೈತ್ಯರನ್ನು ಸಂಹರಿಸಲು ಆದೇಶವನ್ನಿತ್ತುದು : ಪಾರಿಯಾತ್ರ ಪರ್ವತದ ಮೇಲೆ ಭಗವಂತನು ನಿವಾಸ ಮಾಡಿದುದು : ಅವನ ಪ್ರತಿಮೆಯ ಪೂಜಾ ಮಹಿಮೆ
ಪುನಃ ಇಂದ್ರೋಪೇಂದ್ರರ ಯುದ್ಧ : ಉತ್ಪಾತಗಳ ಪರಂಪರೆ : ಬ್ರಹ್ಮನ ಆಜ್ಞೆಯಂತೆ ಅದಿತಿ ಮತ್ತು ಕಶ್ಯಪರು ಮಧ್ಯೆ ಬಂದು ಇಂದ್ರೋ-ಪೇಂದ್ರರ ಯುದ್ಧವನ್ನು ನಿಲ್ಲಿಸಿದುದು : ಸ್ವರ್ಗಾಭಿಗಮನ : ಅದಿತಿಯ ಆಜ್ಞೆಯಂತೆ ಶ್ರೀಕೃಷ್ಣನು ಶಚೀದೇವಿಯಿಂದ ಉಪಹಾರವನ್ನು ಸ್ವೀಕರಿಸಿ ಪಾರಿಜಾತವೃಕ್ಷದೊಡನೆ ದ್ವಾರಕೆಗೆ ಬಂದುದು : ಪಾರಿಜಾತದ ಆಗಮನದಿಂದ ದ್ವಾರಕಾನಗರವಾಸಿಗಳಿಗೆ ಆನಂದ : ಸತ್ಯಭಾಮೆಯು ಮಾಡಿದ್ದ ಪುಣ್ಯಕವ್ರತದ ಸಮಾಪ್ತಿಯ ಕಾಲದಲ್ಲಿ ದಾನವನ್ನು ಪ್ರತಿಗ್ರಹಿಸುವ ಸಲುವಾಗಿ ಶ್ರೀಕೃಷ್ಣನು ನಾರದರನ್ನು ಸ್ಮರಿಸಿದುದು
ಪುಣ್ಯಕವ್ರತದ ಸಾದ್ಗುಣ್ಯಕ್ಕಾಗಿ ಸತ್ಯಭಾಮೆಯು ಶ್ರೀಕೃಷ್ಣನನ್ನು ನಾರದರಿಗೆ ದಾನಮಾಡಿದುದು : ಯಥಾಯೋಗ್ಯವಾದ ಕ್ರಯವನ್ನು ಪಡೆದು ನಾರದರು ಶ್ರೀಕೃಷ್ಣನನ್ನು ಬಿಟ್ಟುಕೊಟ್ಟುದು : ನಾರದರು ಶ್ರೀಕೃಷ್ಣನಿಂದ ವರವನ್ನು ಬೇಡಿದುದು : ಶ್ರೀಕೃಷ್ಣನು ತನ್ನ ಬಾಂಧವರೆಲ್ಲರಿಗೂ ಪಾರಿಜಾತವೃಕ್ಷವನ್ನು ತೋರಿಸಿ ಅದನ್ನು ಸ್ವರ್ಗಕ್ಕೆ ಕಳುಹಿಸಿಕೊಟ್ಟುದು
ಅಂಧಕಾಸುರನ ಜನನ ಮತ್ತು ದುರಾಚಾರಗಳ ವರ್ಣನೆ : ಅವನ ವಧೆಗಾಗಿ ಋಷಿಗಳ ಸಮಾಲೋಚನೆ : ನಾರದರು ಮಂದಾರ ಪುಷ್ಪದ ಮಾಲೆಯನ್ನು ಧರಿಸಿ ಅಂಧಕನ ಅರಮನೆಗೆ ಹೋಗಿ ಅವನಿಗೆ ಮಂದಾರವನದ ಮಹತ್ತ್ವವನ್ನು ವರ್ಣಿಸಿ ಹೇಳಿದುದು
ಮಂದರಾಚಲಕ್ಕೆ ಹೋದ ಅಂಧಕಾಸುರನನ್ನು ಮಹಾದೇವನು ವಧಿಸಿದುದು
ಶ್ರೀಕೃಷ್ಣ ಮತ್ತು ಯಾದವರ ಜಲವಿಹಾರ
ಬಲರಾಮ ಮತ್ತು ಶ್ರೀಕೃಷ್ಣರೇ ಮೊದಲಾದವರ ಜಲಕ್ರೀಡಾದಿಗಳ ವರ್ಣನೆ
ನಿಕುಂಭನಿಂದ ಭಾನುಮತಿಯ ಅಪಹರಣ : ಕೃಷ್ಣಾರ್ಜುನ-ಪ್ರದ್ಯುಮ್ನರೊಡನೆ ನಿಕುಂಭನ ಯುದ್ಧ : ಗೋಕರ್ಣತೀರ್ಥದಲ್ಲಿ ನಿಕುಂಭನ ಪತನ : ಪ್ರದ್ಯುಮ್ನನು ಭಾನುಮತಿಯನ್ನು ಕರೆದುಕೊಂಡು ದ್ವಾರಕೆಗೆ ಹಿಂದಿರುಗಿದುದು : ಪುನಃ ನಿಕುಂಭನೊಡನೆ ಕೃಷ್ಣಾರ್ಜುನ-ಪ್ರದ್ಯುಮ್ನರ ಯುದ್ಧ : ನಿಕುಂಭಾಸುರನ ಮಾಯಾಯುದ್ಧದ ವರ್ಣನೆ : ಶ್ರೀಕೃಷ್ಣನಿಂದ ನಿಕುಂಭನ ಸಂಹಾರ
ವಜ್ರನಾಭನ ತಪಸ್ಸು : ವರಪ್ರಾಪ್ತಿ : ಮೂರು ಲೋಕಗಳನ್ನೂ ಜಯಿಸಲು ವಜ್ರನಾಭನ ಪ್ರಯತ್ನ : ಇಂದ್ರನಿಗೆ ಶ್ರೀಕೃಷ್ಣನ ಸಂದೇಶ : ಭದ್ರನಾಭನೆಂಬ ನಟನಿಗೆ ಮುನಿಗಳಿಂದ ವರಪ್ರದಾನ : ಇಂದ್ರನು ಮಾಡಬೇಕಾದ ಕರ್ತವ್ಯವನ್ನು ತಿಳಿಸಿ ಹಂಸಗಳನ್ನು ವಜ್ರನಾಭನ ಪುರಕ್ಕೆ ಕಳುಹಿಸಿಕೊಟ್ಟುದು
ಪ್ರದ್ಯುಮ್ನ-ಪ್ರಭಾವತಿಯರ, ಗದ-ಚಂದ್ರವತಿಯರ ಮತ್ತು ಸಾಂಬ-ಗುಣವತಿಯರ ಗಾಂಧರ್ವವಿವಾಹ
ಪ್ರದ್ಯುಮ್ನನು ವರ್ಷಾಕಾಲದ ವರ್ಣನೆ ಮಾಡುತ್ತಾ ಪ್ರಭಾವತಿಗೆ ತನ್ನ ಕುಲದ ಪರಿಚಯಮಾಡಿಕೊಟ್ಟುದು
ಕಶ್ಯಪನು ತಡೆದರೂ ವಜ್ರನಾಭನು ಮೂರು ಲೋಕಗಳ ವಿಜಯಕ್ಕಾಗಿ ಹೊರಟುದು : ಇಂದ್ರೋಪೇಂದ್ರರು ಪ್ರದ್ಯುಮ್ನನಿಗೆ ಸಂದೇಶವನ್ನು ಕಳುಹಿಸಿದುದು : ಅವರ ವಂಶದ ಪ್ರಭಾವವನ್ನು ಉಲ್ಲೇಖಿಸಿದುದು : ಪ್ರಭಾವತಿಯೇ ಮೊದಲಾದವರು ತಮ್ಮ ಗಂಡಂದಿರಿಗೆ ಕತ್ತಿಗಳನ್ನು ಕೊಟ್ಟು ಯುದ್ಧಕ್ಕಾಗಿ ಕಳುಹಿಸಿಕೊಟ್ಟುದು : ಇಂದ್ರನ ಸಹಾಯ : ಪ್ರದ್ಯುಮ್ನನ ಅದ್ಭುತಪರಾಕ್ರಮ
ಪ್ರದ್ಯುಮ್ನನಿಂದ ವಜ್ರನಾಭನ ಸಂಹಾರ : ಪ್ರದ್ಯುಮ್ನನ ಮಕ್ಕಳಿಗೆ ರಾಜ್ಯಾಭಿಷೇಕ