ಇಂದ್ರನೇ ಮೊದಲಾದ ಲೋಕಪಾಲಕರಿಂದ ಯುದ್ಧಕ್ಕೆ ಸಿದ್ಧತೆ ಮತ್ತು ಪ್ರಯಾಣ
ದೇವತೆಗಳಿಗೂ ಅಸುರರಿಗೂ ದ್ವಂದ್ವಯುದ್ಧ : ಭಯಂಕರವಾದ ಉತ್ಪಾತಗಳು : ಬ್ರಹ್ಮ-ಸನಕಾದಿ ಯೋಗೇಶ್ವರರು ಯುದ್ಧವನ್ನು ನೋಡುವ ಸಲುವಾಗಿ ಆಗಮಿಸಿದುದು
ಯಜ್ಞದ ರೂಪದಲ್ಲಿ ದೇವಾಸುರರ ಯುದ್ಧದ ವರ್ಣನೆ : ಎರಡು ಸೈನ್ಯದ ನಡುವೆ ಭಯಂಕರವಾದ ಯುದ್ಧವರ್ಣನೆ : ಸಾವಿತ್ರ ಮತ್ತು ಧ್ರುವರ ಪರಾಜಯ
ನಮುಚಿಯಿಂದ ಧರ ಎಂಬ ಹೆಸರಿನ ವಸುವಿನ ಪರಾಜಯ : ಮಯಾಸುರನಿಂದ ತ್ವಷ್ವಿವಿನ ಪರಾಜಯ : ವಾಯುದೇವನಿಂದ ಪುಲೋಮನ ಪರಾಜಯ : ಹಯಗ್ರೀವನಿಂದ ಪೂಷನ ಪರಾಜಯ : ಶಂಬರಾಸುರನಿಂದ ಭಗನ ಪರಾಜಯ : ಚಂದ್ರದೇವನಿಂದ ನಮುಚಿ ಮತ್ತು ದೈತ್ಯಸೈನ್ಯದ ಪರಾಜಯ
ದೇವ-ದಾನವರ ಘೋರಸಂಗ್ರಾಮ : ವಿರೋಚನ-ವಿಷ್ವಕ್ಸೇನರ ಯುದ್ಧ : ಕುಜಂಭನು ಅಂಶದೇವತೆಯೊಡನೆ ಯುದ್ಧಮಾಡುತ್ತಾ ತನ್ನ ಘೋರವಾದ ಪರಾಕ್ರಮವನ್ನು ಪ್ರಕಟಿಸಿದುದು
ದೇವಾಸುರಸಂಗ್ರಾಮದಲ್ಲು ಕುಜಂಭ-ಅನಿಲೋಮಾ ಮತ್ತು ವೃತ್ತಾಸುರರ ಉತ್ಕರ್ಷದ ವರ್ಣನೆ : ಹರಿ ಮತ್ತು ಅಶ್ವಿನೀಕುಮಾರರ ಪರಾಜಯ
ದೇವಶ್ರೇಷ್ಠನಾದ ರಣಾಜಿಗೂ ಮತ್ತು ದೈತ್ಯಶ್ರೇಷ್ಠನಾದ ಏಕಚಕ್ರನಿಗೂ-ಮೃಗವ್ಯಾಧನಿಗೂ ಮತ್ತು ಬಲಾಸುರನಿಗೂ ಅಜೈಕಪಾದನಿಗೂ ಮತ್ತು ರಾಹುವಿಗೂ-ಸುಧೂಮ್ರಾಕ್ಷನಿಗೂ ಮತ್ತು ಕೇಶಿಗೂ ನಡೆದ ಯುದ್ಧಗಳ ವರ್ಣನೆ
ವೃಷಪರ್ವನಿಗೂ ಮತ್ತು ನಿಷ್ಕುಂಭನೆಂಬ ಹೆಸರಿನ ವಿಶ್ವೇದೇವತೆಗೂ ಪ್ರಹ್ಲಾದನಿಗೂ ಮತ್ತು ಕಾಲನಿಗೂ ನಡೆದ ಘೋರಯುದ್ಧದ ವರ್ಣನೆ
ಕುಬೇರ ಮತ್ತು ಅನುಹ್ಲಾದರ ಭಯಂಕರಯುದ್ಧ
ವರುಣ ಮತ್ತು ವಿಪ್ರಚಿತ್ತಿ ಇವರ ಯುದ್ಧ : ವರುಣನ ಪರಾಜಯ
ಅಗ್ನಿಯಿಂದ ದೈತ್ಯರ ಪರಾಜಯ : ಬೃಹಸ್ಪತಿಯು ಮಾಡಿದ ಅಗ್ನಿಸ್ತೋತ್ರ
ಬಲಿ ಮತ್ತು ಪ್ರಹ್ಲಾದರ ಸಂಭಾಷಣೆ : ಬಲಿಯು ದೇವಸೇನೆಯನ್ನು ಆಕ್ರಮಿಸಿದುದು
ಬಲಿ ಮತ್ತು ಇಂದ್ರರ ಯುದ್ಧ : ರಣರಂಗದಿಂದ ಇಂದ್ರನ ಪಲಾಯನ
ವಿಜಯಗಳಿಸಿದ ಬಲಿರಾಜನ ಬಳಿಗೆ ರಾಜಲಕ್ಷ್ಮಿಯೇ ಮೊದಲಾದ ವೈಭವಗಳು ಆಗಮಿಸಿದುದು
ಅದಿತಿ ಮತ್ತು ಕಶ್ಯಪರ ಜೊತೆಯಲ್ಲಿ ದೇವತೆಗಳು ಬ್ರಹ್ಮಲೋಕಕ್ಕೆ ಹೋದುದು
ಬ್ರಹ್ಮನ ಆಜ್ಞೆಯಂತೆ ಕಶ್ಯಪನೂ ಮತ್ತು ಅದಿತಿಸಹಿತರಾದ ದೇವತೆಗಳೂ ಕ್ಷೀರಸಾಗರದ ಉತ್ತರ ತೀರಕ್ಕೆ ಹೋಗಿ ತಪಸ್ಸಿನಲ್ಲಿ ಮಗ್ನರಾದುದು
ಋಷಿಗಳು ಮತ್ತು ವಿವಿಧ ದೇವತೆಗಳು ವಾಮನನಿಗೆ ನಮಸ್ಕಾರಮಾಡಿದುದು : ಶ್ರೀಹರಿಯ ಜನ್ಮಮಹೋತ್ಸವದಲ್ಲಿ ಗಂಧರ್ವಾಪ್ಸರೆಯರ ನೃತ್ಯ-ಗಾನ : ಭಗವಂತನ ವೈಶಿಷ್ಟ್ಯದ ವರ್ಣನೆ : ದೇವತೆಗಳಿಂದ ಅವರ ಮನೋರಥವೇನೆಂಬುದನ್ನು ತಿಳಿದು ಭಗವಂತನು ಬೃಹಸ್ಪತಿಯೊಡನೆ ಬಲಿಯ ಯಾಗಶಾಲೆಗೆ ಹೋದುದು : ಅಲ್ಲಿ ತನ್ನ ವಾಕ್ಚಾತುರ್ಯದಿಂದ ಸಮಸ್ತರನ್ನೂ ಚಕಿತಗೊಳಿಸಿದುದು : ಬಲಿಯನ್ನು ಪರಿಚಯಮಾಡಿಕೊಂಡುದು : ಬಲಿಯು ವಾಮನನ ಆಗಮನದ ಕಾರಣವನ್ನು ಕೇಳಿದುದು
ವಾಮನನಿಂದ ಯಜ್ಞದ ಪ್ರಶಂಸೆ : ಬಲಿಯು ವರವನ್ನು ಕೇಳುವಂತೆ ವಾಮನನಿಗೆ ಹೇಳಲು ವಾಮನನು ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬಲಿಯಿಂದ ಯಾಚಿಸಿದುದು : ಶುಕ್ರಾಚಾರ್ಯ-ಪ್ರಹ್ಲಾದರು ದಾನಕೊಡದಂತೆ ಬಲಿಯನ್ನು ತಡೆದುದು : ಬಲಿಯು ದಾನ ಕೊಡುವುದನ್ನು ಸಮರ್ಥಿಸಿ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ವಾಮನನಿಗೆ ದಾನವಾಗಿ ಕೊಟ್ಟುದು : ವಾಮನನ ವಿರಾಟ್ರೂಪದ ಪ್ರದರ್ಶನ
ವಿರಾಡ್ರೂಪಧರನಾದ ವಾಮನನನ್ನು ಆಕ್ರಮಿಸಲು ಹೋದ ದೈತ್ಯರ ನಾಮಧೇಯಗಳು ಅವರ ರೂಪ ಮತ್ತು ಅವರು ಹಿಡಿದಿದ್ದ ಆಯುಧಗಳ ವರ್ಣನೆ : ಭಗವಂತನು ತನ್ನ ಹೆಜ್ಜೆಯಿಂದ ಮೂರು ಲೋಕಗಳನ್ನೂ ಅಳೆದು ವಿಭಾಗಿಸಿ ಕೊಟ್ಟುದು : ಬಲಿಗೆ ಪಾತಾಳಲೋಕವನ್ನು ಕೊಟ್ಟು ಅಲ್ಲಿಯೇ ಇರುವಂತೆ ಹೇಳಿ ಕಳುಹಿಸಿಕೊಟ್ಟುದು ಮತ್ತು ಅವನ ಜೀವನದ ವ್ಯವಸ್ಥೆ ಮಾಡಿದುದು : ನಾರದರಿಂದ ಬಲಿಗೆ ಮೋಕ್ಷವಿಂಶಕಸ್ತೋತ್ರದ ಉಪದೇಶ : ಆ ಸ್ತೋತ್ರದ ಪ್ರಭಾವದಿಂದ ಬಲಿಯು ಬಂಧನದಿಂದ ಮುಕ್ತನಾದುದು : ಸ್ತೋತ್ರದ ಮಹಿಮೆ
ರುಕ್ಮಿಣೀದೇವಿಯು ಪುತ್ರಪ್ರಾಪ್ತಿಗಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದುದು : ಭಗವಂತನು ಆಶ್ವಾಸನೆ ನೀಡಿ ಕೈಲಾಸಕ್ಕೆ ಹೋಗಲು ನಿಶ್ಚಯಿಸಿದುದು
ಭಗವಾನ್ ಶ್ರೀಕೃಷ್ಣನು ಯಾದವರ ಸಭೆಯಲ್ಲಿ ತನ್ನ ಕೈಲಾಸ ಯಾತ್ರೆಯ ಸಮಾಚಾರವನ್ನು ಪ್ರಕಟಪಡಿಸಿದುದು : ನಗರದ ರಕ್ಷಣೆಯ ವಿಷಯದಲ್ಲಿ ಜಾಗರೂಕರಾಗಿರಬೇಕೆಂದು ಯಾದವರಿಗೆ ಆದೇಶನೀಡಿದುದು
ನಗರದ ರಕ್ಷಣೆಯ ವಿಷಯದಲ್ಲಿ ಶ್ರೀಕೃಷ್ಣ-ಸಾತ್ಯಕಿ ಮತ್ತು ಉದ್ಧವರ ಮಾತುಕತೆ : ಬಲರಾಮನೇ ಮೊದಲಾದ ಯಾದವರಿಗೆ ಪಟ್ಟಣದ ರಕ್ಷಣಾಭಾರವನ್ನು ವಹಿಸಿಕೊಟ್ಟು ಶ್ರೀಕೃಷ್ಣನು ಕೈಲಾಸಯಾತ್ರೆಗೆ ಸಿದ್ಧನಾದುದು
ಗರುಡಾರೂಢನಾಗಿ ಶ್ರೀಕೃಷ್ಣನು ಬದರಿಕಾಶ್ರಮಕ್ಕೆ ತೆರಳಿದುದು : ಮಾರ್ಗದಲ್ಲಿ ದೇವತೆಗಳು ಮತ್ತು ಮುನಿಗಳು ಶ್ರೀಕೃಷ್ಣನನ್ನು ಸ್ತುತಿಸಿದುದು
ಶಂಕರನು ಮಾಡಿದ ಶ್ರೀಕೃಷ್ಣಸ್ತೋತ್ರ : ಶ್ರೀಕೃಷ್ಣನು ಕೈಲಾಸದಿಂದ ಬದರಿಕಾಶ್ರಮಕ್ಕೆ ಪ್ರಯಾಣಮಾಡಿದುದು
ಪೌಂಡ್ರಕನು ರಾಜರ ಸಭೆಯಲ್ಲಿ ಶಂಖ-ಚಕ್ರಗಳನ್ನು ಧರಿಸಿ ತಾನೇ ವಾಸುದೇವನೆಂದು ಘೋಷಿಸಿದುದು
ಪೌಂಡ್ರಕನ ಅರಮನೆಗೆ ನಾರದರ ಆಗಮನ ಮತ್ತು ಅವನೊಡನೆ ಮಾತುಕತೆ
ನಾರದರು ಶ್ರೀಕೃಷ್ಣನ ಬಳಿಗೆ ಹೋದುದು : ಪೌಂಡ್ರಕನಿಂದ ದ್ವಾರಕೆಯ ಆಕ್ರಮಣ
ಯಾದವಸೈನಿಕರಿಂದ ಪೌಂಡ್ರಕನ ಸೈನಿಕರ ಸಂಹಾರ : ಏಕಲವ್ಯನಿಂದ ಯಾದವಸೈನಿಕರ ಮರ್ದನ
ಪೌಂಡ್ರಕನು ದ್ವಾರಕಾಪಟ್ಟಣದ ಪೂರ್ವದ್ವಾರವನ್ನು ಭೇದಿಸಲು ಪ್ರಯತ್ನಿಸಿದುದು : ಸಾತ್ಯಕಿಯೇ ಮೊದಲಾದ ಯದುವೀರರು ದ್ವಾರಕೆಯ ರಕ್ಷಣೆಗಾಗಿ ಹೊರಟುದು : ಸಾತ್ಯಕಿಯು ವಾಯವ್ಯಾಸ್ತ್ರದ ಮೂಲಕ ಪೌಂಡ್ರಕನ ಸೇನೆಯು ಪಲಾಯನ ಮಾಡುವಂತೆ ಮಾಡಿದುದು : ಪೌಂಡ್ರಕನು ಯದುವೀರರನ್ನು ಯುದ್ಧಕ್ಕೆ ಆಹ್ವಾನಿಸಿದುದು : ಪೌಂಡ್ರಕನ ಗರ್ವಯುಕ್ತವಾದ ಮಾತುಗಳು
ಪೌಂಡ್ರಕ-ಸಾತ್ಯಕಿಯರ ಯುದ್ಧ
ಸಾತ್ಯಕಿ-ಪೌಂಡ್ರಕರ ಯುದ್ಧ
ಬಲರಾಮ ಮತ್ತು ಏಕಲವ್ಯರ ಯುದ್ಧ : ಬಲರಾಮನಿಂದ ನಿಷಾದರ ಸಂಹಾರ
ಏಕಲವ್ಯ-ಬಲರಾಮರ ಯುದ್ಧ : ಪೌಂಡ್ರಕ-ಸಾತ್ಯಕಿಗಳ ಯುದ್ಧ
ದ್ವಾರಕೆಗೆ ಶ್ರೀಕೃಷ್ಣನ ಆಗಮನ : ಪೌಂಡ್ರಕವಾಸುದೇವನೊಡನೆ ಮಾತುಕತೆ
ಪೌಂಡ್ರಕ-ಶ್ರೀಕೃಷ್ಣರ ಯುದ್ಧ : ಪೌಂಡ್ರಕನ ವಧೆ
ಏಕಲವ್ಯನ ದ್ವೀಪಾಂತರಗಮನ : ಶ್ರೀಕೃಷ್ಣನು ಯಾದವರಿಗೆ ತನ್ನ ಕೈಲಾಸಯಾತ್ರೆಯ ವೃತ್ತಾಂತವನ್ನು ಸಂಕ್ಷೇಪವಾಗಿ ತಿಳಿಸಿದುದು : ಅಂತಃಪುರದಲ್ಲಿ ರುಕ್ಮಿಣೀ-ಸತ್ಯಭಾಮೆಯರೊಡನೆ ಸೇರಿ ಅವರನ್ನು ಸಂತೋಷಗೊಳಿಸಿದುದು
ಹಂಸ ಮತ್ತು ಡಿಂಭಕರ ವಿಷಯದಲ್ಲಿ ಜನಮೇಜಯನ ಪ್ರಶ್ನೆ
ಬ್ರಹ್ಮದತ್ತರಾಜನು ಭಗವಾನ್ ಶಂಕರನನ್ನು ಆರಾಧಿಸಿ ಹಂಸ-ಡಿಂಭಕರೆಂಬ ಇಬ್ಬರು ಮಕ್ಕಳನ್ನು ಪಡೆದುಕೊಂಡುದು : ರಾಜಸಖನಾದ ವಿಪ್ರಶ್ರೇಷ್ಠನಾದ ಮಿತ್ರಸಹನು ವಿಷ್ಣು ಭಗವಂತನನ್ನು ಆರಾಧಿಸಿ ಜನಾರ್ದನ ಎಂಬ ಹೆಸರಿನ ಮಗನನ್ನು ಪಡೆದುಕೊಂಡುದು
ಹಂಸ-ಡಿಂಭಕರ ತಪಸ್ಸು : ವರಪ್ರಾಪ್ತಿ : ಜನಾರ್ದನಸಹಿತವಾಗಿ ಆ ಇಬ್ಬರು ರಾಜಕುಮಾರರಿಗೂ ವಿವಾಹಮಹೋತ್ಸವ : ಮೂವರು ಕುಮಾರರ ಧರ್ಮನಿಷ್ಠೆ
ರಾಜಕುಮಾರರ ಬೇಟೆ
ಹಂಸ-ಡಿಂಭಕರು ಸೇನಾಸಮೇತರಾಗಿ ಪುಷ್ಕರದ ದಂಡೆಯಲ್ಲಿ ವಿಶ್ರಾಂತರಾದುದು : ಮಹರ್ಷಿಗಳಾದ ಕಶ್ಯಪರು ಮಾಡುತ್ತಿದ್ದ ಯಜ್ಞಮಂಟಪಕ್ಕೂ ಮತ್ತು ದುರ್ವಾಸರೇ ಮುಂತಾದ ಯತಿಗಳ ಬಳಿಗೂ ಹೋಗಿ ಅವರಲ್ಲಿ ಮತ್ತು ಅವರ ಕರ್ಮಗಳಲ್ಲಿ ಅಶ್ರದ್ಧೆಯನ್ನು ತೋರ್ಪಡಿಸಿದುದು
ಭಾರತ ಮತ್ತು ಹರಿವಂಶಗಳ ಶ್ರವಣವಿಧಿ ಮತ್ತು ಫಲ : ವಾಚಕನಿಗಿರಬೇಕಾದ ಗುಣಗಳು : ಪ್ರತ್ಯೇಕ-ಪ್ರತ್ಯೇಕ ಪರ್ವಗಳ ಶ್ರವಣಾನಂತರದಲ್ಲಿ ಕೊಡಬೇಕಾದ ದಾನ-ದಕ್ಷಿಣೆಗಳು : ಒಂದರಿಂದ ಹಿಡಿದು ಹತ್ತು ಪಾರಾಯಣ-ಪಾರಣೆಗಳ ಮಹತ್ತ್ವ : ಮಹಾಭಾರತ ಮತ್ತು ಹರಿವಂಶಗಳ ಮಾಹಾತ್ಮ್ಯ