Volume 2 (Prose)

ವಿಷ್ಣುಪರ್ವ

  • ಕಂಸನ ಚಿಂತೆ : ಕಂಸನು ರಂಗಶಾಲೆಯನ್ನು ಸಜ್ಜುಗೊಳಿಸಲು ಆಜ್ಞಾಪಿಸಿದುದು : ಚಾಣೂರ-ಮುಷ್ಟಿಕರಿಗೂ ಕುವಲಯಾಪೀಡ ಎಂಬ ಆನೆಯ ಮಾವಟಿಗನಿಗೂ ಶ್ರೀಕೃಷ್ಣ-ಬಲರಾಮರನ್ನು ವಧಿಸುವಂತೆ ಆಜ್ಞೆಮಾಡಿದುದು : ಕಂಸನ ಹುಟ್ಟು
  • ನಾಗರಿಕರಿಂದ ತುಂಬಿರುವ ರಂಗಶಾಲೆಯ ಸೊಬಗು : ಕಂಸ-ಮಲ್ಲರ ಆಗಮನ : ರಂಗದ್ವಾರಕ್ಕೆ ಶ್ರೀಕೃಷ್ಣ-ಬಲರಾಮರ ಆಗಮನ : ಕುವಲಯಾಪೀಡ, ಮಾವಟಿಗ ಮತ್ತು ಆನೆಯ ಪಾದರಕ್ಷಕರ ಸಂಹಾರ : ಬಳಿಕ ಬಲರಾಮ-ಕೃಷ್ಣರಿಂದ ರಂಗಭೂಮಿಯ ಪ್ರವೇಶ
  • ರಂಗಶಾಲೆಯಲ್ಲಿ ಮಲ್ಲಯುದ್ಧದ ವಿಷಯದಲ್ಲಿ ಶ್ರೀಕೃಷ್ಣನ ಅಭಿಪ್ರಾಯ : ಕೃಷ್ಣ-ಬಲರಾಮರಿಂದ ಚಾಣೂರ-ಮುಷ್ಟಿಕರೇ ಮೊದಲಾದ ಮಲ್ಲರ ಸಂಹಾರ : ಕಂಸವಧೆ : ಶ್ರೀಕೃಷ್ಣನು ತಂದೆ-ತಾಯಿಗಳಿಗೆ ನಮಸ್ಕರಿಸಿ ಅವರ ಭವನಕ್ಕೆ ತೆರಳಿದುದು
  • ಕಂಸನ ಪತ್ನಿಯರ ಮತ್ತು ತಾಯಿಯ ಗೋಳಾಟ
  • ಶ್ರೀಕೃಷ್ಣನು ಕಂಸನ ವಧೆಗೆ ಪಶ್ಚಾತ್ತಾಪವನ್ನು ಸೂಚಿಸುತ್ತಾ ತಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಂಡುದು : ಉಗ್ರಸೇನನು ಸಮಸ್ತವನ್ನೂ ಶ್ರೀಕೃಷ್ಣನಿಗೆ ಸಮರ್ಪಣಮಾಡಿ ಕಂಸನ ಅಂತ್ಯೇಷ್ಟಿಗೆ ವ್ಯವಸ್ಥೆಗೊಳಿಸುವಂತೆ ಪ್ರಾರ್ಥಿಸಿದುದು : ಶ್ರೀಕೃಷ್ಣನು ಉಗ್ರಸೇನನನ್ನು ಸಮಾಧಾನಗೊಳಿಸಿ ಅವನಿಗೆ ರಾಜ್ಯದ ಪಟ್ಟಾಭಿಷೇಕ ಮಾಡಿದುದು : ಕಂಸನೇ ಮೊದಲಾದವರಿಗೆ ಅಂತ್ಯೇಷ್ಟಿ ಸಂಸ್ಕಾರ
  • ಸಾಂದೀಪನಿಮುನಿಯ ಬಳಿಯಲ್ಲಿ ಬಲರಾಮ-ಕೃಷ್ಣರ ವಿದ್ಯಾಭ್ಯಾಸ : ಗುರುದಕ್ಷಿಣೆಗಾಗಿ ಮುನಿಯ ಸತ್ತುಹೋಗಿದ್ದ ಮಗನನ್ನು ಬದುಕಿಸಿ ಮಥುರಾಪಟ್ಟಣಕ್ಕೆ ರಾಮ-ಕೃಷ್ಣರ ಪ್ರತ್ಯಾಗಮನ
  • ಜರಾಸಂಧನು ತನ್ನ ಅಪಾರವಾದ ಸೈನ್ಯದೊಡನೆ ಮಥುರಾಪಟ್ಟಣಕ್ಕೆ ಮುತ್ತಿಗೆ ಹಾಕಿದುದು
  • ಜರಾಸಂಧನ ಸೇನೆಯ ವರ್ಣನೆ : ಸೈನ್ಯವು ನಾಲ್ಕು ಕಡೆಗಳಿಂದಲೂ ಮಥುರಾಪಟ್ಟಣಕ್ಕೆ ಮುತ್ತಿಗೆಹಾಕಿದುದು : ಯಾದವ ಸೈನ್ಯದೊಡನೆ ಜರಾಸಂಧನ ಸೈನ್ಯದ ಭಯಂಕರಯುದ್ಧ : ಶ್ರೀರಾಮ-ಕೃಷ್ಣರ ಪರಾಕ್ರಮದಿಂದಾಗಿ ಜರಾಸಂಧನ ಪ್ರೋತ್ಸಾಹ : ಪುನಃ ಎರಡು ಸೈನ್ಯಗಳ ನಡುವೆ ಭಯಂಕರವಾದ ಯುದ್ಧ
  • ವೃಷ್ಣಿವಂಶದವರೊಡನೆ ಜರಾಸಂಧನ ಯುದ್ಧ : ಬಲರಾಮನೊಡನೆ ಗದಾಯುದ್ಧ : ಜರಾಸಂಧನ ಪಲಾಯನ
  • ಜರಾಸಂಧನ ಆಕ್ರಮಣವನ್ನು ಪುನಃ ಶಂಕಿಸಿದ ಯಾದವರ ಸಭೆಯಲ್ಲಿ ವಿಕದ್ರುವಿನ ಭಾಷಣ : ಹರ್ಯಶ್ವರಾಜನ ಚರಿತ್ರೆ : ಯಾದವರ ಉತ್ಪತ್ತಿಯ ವರ್ಣನೆ
  • ವಿಕದ್ರುವಿನ ಮೂಲಕ ಯದುಸಂತತಿಯ ವರ್ಣನೆ
  • ಮಥುರಾಪಟ್ಟಣವನ್ನೂ ಮತ್ತು ಪ್ರಜೆಗಳನ್ನೂ ಜರಾಸಂಧನ ಉಪಟಳದಿಂದ ರಕ್ಷಿಸುವುದಕ್ಕಾಗಿ ಮಥುರಾಪಟ್ಟಣದ ದಕ್ಷಿಣದಿಕ್ಕಿಗೆ ಬಲರಾಮ-ಕೃಷ್ಣರ ಪ್ರಯಾಣ : ಪರಶುರಾಮನೊಡನೆ ಸಮಾಗಮ : ಗೋಮಂತಕಪರ್ವತಕ್ಕೆ ಹೋಗಲು ಬಲರಾಮನ ಸಲಹೆ
  • ಶ್ರೀಕೃಷ್ಣ-ಬಲರಾಮ-ಪರಶುರಾಮರಿಂದ ಗೋಮಂತ ಪರ್ವತದ ಆರೋಹಣ : ಪರಶುರಾಮನು ಶ್ರೀಕೃಷ್ಣನಿಗೆ ಯುದ್ಧಮಾಡಲು ಪ್ರೋತ್ಸಾಹಿಸಿ ಅಲ್ಲಿಂದ ಹೊರಟುದು
  • ಬಲರಾಮನ ಬಳಿಗೆ ವಾರುಣೀ, ಕಾಂತಿ ಮತ್ತು ಶ್ರೀ-ಇವರ ಆಗಮನ : ಗರುಡನ ಮೂಲಕ ಶ್ರೀಕೃಷ್ಣನಿಗೆ ಮಹಾವಿಷ್ಣುವಿನ ಕಿರೀಟಪ್ರಾಪ್ತಿ : ಶ್ರೀಕೃಷ್ಣ-ಬಲರಾಮರ ಸಂಭಾಷಣೆ
  • ಜರಾಸಂಧನ ಸೈನ್ಯದ ವರ್ಣನೆ : ಪರ್ವತವನ್ನು ಆಕ್ರಮಿಸಲು ಜರಾಸಂಧನು ಸೈನ್ಯಕ್ಕೆ ಆಜ್ಞೆ ಮಾಡಿದುದು : ಶಿಶುಪಾಲನ ಸಮ್ಮತಿಯನ್ನು ಪಡೆದು ಗೋಮಂತಪರ್ವತಕ್ಕೆ ಬೆಂಕಿ ಹಚ್ಚಿದುದು : ಬಲರಾಮ-ಕೃಷ್ಣರು ಪರ್ವತದ ಮೇಲಿನಿಂದ ಧುಮುಕಿ ಜರಾಸಂಧನ ಸೈನ್ಯದೊಳಗೆ ನುಗ್ಗಿದುದು
  • ಕೃಷ್ಣ-ಬಲರಾಮ ಮತ್ತು ಸೈನ್ಯಸಮೇತನಾದ ಜರಾಸಂಧ ಇವರ ಯುದ್ಧ : ದರದರಾಜನ ಮರಣ : ಜರಾಸಂಧನ ಪರಾಜಯ ಮತ್ತು ಪಲಾಯನ : ಕರವೀರಪುರಕ್ಕೆ ಚೇದಿರಾಜನಾದ ದಮಘೋಷನೊಡನೆ ಶ್ರೀಕೃಷ್ಣ-ಬಲರಾಮರ ಪ್ರಯಾಣ
  • ಶ್ರೀಕೃಷ್ಣನಿಂದ ಶೃಗಾಲರಾಜನ ಸಂಹಾರ : ಅವನ ಮಗನಿಗೆ ಕರವೀರಪುರದ ರಾಜ್ಯಾಭಿಷೇಕ
  • ಮಥುರೆಗೆ ಬಲರಾಮ-ಕೃಷ್ಣರ ಪ್ರತ್ಯಾಗಮನ : ಪೌರರ ಸ್ವಾಗತ
  • ಬಲರಾಮನ ವ್ರಜಯಾತ್ರೆ : ಹಲಾಯುಧದಿಂದ ಯಮುನಾನದಿಯ ಆಕರ್ಷಣೆ
  • ರುಕ್ಮಿಣಿಯ ಸ್ವಯಂವರಕ್ಕಾಗಿ ಕುಂಡಿನಪುರಕ್ಕೆ ಶ್ರೀಕೃಷ್ಣನ ಪ್ರಯಾಣ : ಕೈಶಿಕರಾಜನ ಸತ್ಕಾರ
  • ಶ್ರೀಕೃಷ್ಣನ ಆಗಮನದಿಂದ ರಾಜರು ಚಿಂತಿತರಾದುದು : ರಾಜಸಭೆಯಲ್ಲಿ ಜರಾಸಂಧ ಮತ್ತು ಸುನೀಥರ ಭಾಷಣ
  • ದಂತವಕ್ತ್ರ ಮತ್ತು ಶಾಲ್ವರ ಭಾಷಣವನ್ನು ಕೇಳಿದ ಭೀಷ್ಮಕನು ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಲು ನಿಶ್ಚಯಿಸಿದುದು
  • ಕ್ರಥ ಮತ್ತು ಕೈಶಿಕರು ಶ್ರೀಕೃಷ್ಣನಿಗೆ ತಮ್ಮ ರಾಜ್ಯಗಳನ್ನು ಅರ್ಪಿಸಿದುದು : ಇಂದ್ರನ ಆದೇಶ ದಂತೆ ಎಲ್ಲ ರಾಜರೂ ಶ್ರೀಕೃಷ್ಣನನ್ನು ಚಕ್ರವರ್ತಿಯ ಪದವಿಯಲ್ಲಿ ಪಟ್ಟಾಭಿಷೇಕಮಾಡಿದುದು : ಶ್ರೀಕೃಷ್ಣನ ಅಭಯಪ್ರದಾನ
  • ಶ್ರೀಕೃಷ್ಣ-ಭೀಷ್ಮಕರ ಸಂವಾದ : ಭೀಷ್ಮಕನಿಂದ ಶ್ರೀಕೃಷ್ಣನ ಸ್ತುತಿ : ಶ್ರೀಕೃಷ್ಣನ ಮಥುರಾಪ್ರಯಾಣ
  • ಶಾಲ್ವನು ಹೇಳಿದಂತೆ ಜರಾಸಂಧನೇ ಮೊದಲಾದ ರಾಜರು ಶಾಲ್ವನನ್ನೇ ಕಾಲಯವನನ ಬಳಿಗೆ ದೂತನನ್ನಾಗಿ ಕಳುಹಿಸಿದುದು
  • ಕಾಲಯವನನ ವೈಶಿಷ್ಟ್ಯ : ಶಾಲ್ವನು ರಾಜರ ದೂತನಾಗಿ ಕಾಲಯವನನ ಬಳಿಗೆ ಹೋಗಿ ಜರಾಸಂಧನ ಸಂದೇಶವನ್ನು ತಿಳಿಸಿದುದು
  • ರಾಜರ ಪ್ರೇರಣೆಯಂತೆ ಕಾಲಯವನನು ಶ್ರೀಕೃಷ್ಣನನ್ನು ಜಯಿಸಲು ಮಥುರೆಗೆ ಹೋದುದು
  • ಶ್ರೀಕೃಷ್ಣನು ವಾಸಮಾಡಲು ಯೋಗ್ಯವಾದ ಪ್ರದೇಶವನ್ನು ಹುಡುಕುವ ಸಲುವಾಗಿ ಗರುಡನ ಪ್ರಯಾಣ : ಮಥುರಾಪಟ್ಟಣದಲ್ಲಿ ರಾಜೇಂದ್ರನಾದ ಶ್ರೀಕೃಷ್ಣನಿಗೆ ಭವ್ಯಸ್ವಾಗತ : ಉಗ್ರಸೇನನಿಗೂ ಮಥುರೆಯ ಪ್ರಜೆಗಳಿಗೂ ಶ್ರೀಕೃಷ್ಣನಿಂದ ಸತ್ಕಾರ : ಗರುಡನು ಹಿಂದಿರುಗಿ ಬಂದು ಕುಶಸ್ಥಲಿಯು ವಾಸಕ್ಕೆ ಯೋಗ್ಯವಾಗಿರುವುದೆಂದು ಶ್ರೀಕೃಷ್ಣನಿಗೆ ಹೇಳಿದುದು
  • ಶ್ರೀಕೃಷ್ಣನ ಸಲಹೆಯಂತೆ ಯಾದವರೆಲ್ಲರೂ ದ್ವಾರಾವತಿಗೆ ತೆರಳಿದುದು
  • ಕಾಲಯವನನ ವಧೆ
  • ವಿಶ್ವಕರ್ಮನ ಮೂಲಕ ದ್ವಾರವತಿಯ ನಿರ್ಮಾಣ : ನಿಧಿಗಳಿಗೆ ಅಧಿಪತಿಯಾದ ಶಂಖನನ್ನು ಕರೆಸಿದುದು : ಸುಧರ್ಮಾ ಸಭೆಯನ್ನು ತಂದುದು : ಶ್ರೀಕೃಷ್ಣನು ವ್ಯವಸ್ಥಾ ಪೂರ್ವಕವಾಗಿ ಯಾದವರನ್ನು ನೆಲೆಗೊಳಿಸಿದುದು : ಬಲರಾಮನೊಡನೆ ರೇವತಿಯ ವಿವಾಹ
  • ಶ್ರೀಕೃಷ್ಣನಿಂದ ರುಕ್ಮಿಣಿಯ ಅಪಹರಣ : ಜರಾಸಂಧ-ಶಿಶುಪಾಲರ ಮತ್ತು ಯಾದವರ ನಡುವೆ ಘೋರಯುದ್ಧ
  • ಶ್ರೀಕೃಷ್ಣನಿಂದ ರುಕ್ಮಿಯ ಪರಾಜಯ : ರುಕ್ಮಿಣಿಯೇ ಮುಂತಾದವರೊಡನೆ ಶ್ರೀಕೃಷ್ಣನ ವಿವಾಹ : ಅವರ ಸಂತಾನದ ಸಂಕ್ಷಿಪ್ತಪರಿಚಯ
  • ಪ್ರದ್ಯುಮ್ನನು ರುಕ್ಮಿಯ ಮಗಳಾದ ಶುಭಾಂಗಿಯನ್ನು ಸ್ವಯಂವರದಲ್ಲಿ ವರಿಸಿದುದು : ರುಕ್ಮಿಯ ಮೊಮ್ಮಗಳಾದ ರುಕ್ಮವತಿಯೊಡನೆ ಪ್ರದ್ಯುಮ್ನನ ಮಗನಾದ ಅನಿರುದ್ಧನ ವಿವಾಹ : ಬಲರಾಮನಿಂದ ರುಕ್ಮಿಯ ಸಂಹಾರ
  • ಬಲರಾಮನ ಮಹಿಮೆ ಮತ್ತು ಅವನ ಅದ್ಭುತಕಾರ್ಯಸಾಧನೆ
  • ನರಕಾಸುರನ ಪರಿಚಯ : ದ್ವಾರಕಾಪಟ್ಟಣಕ್ಕೆ ಇಂದ್ರನ ಆಗಮನ : ನರಕಾಸುರನ ವಧೆಗಾಗಿ ಶ್ರೀಕೃಷ್ಣನಲ್ಲಿ ಇಂದ್ರನ ಪ್ರಾರ್ಥನೆ : ಪ್ರಾಗ್ಜ್ಯೋತಿಷಪುರಕ್ಕೆ ಸತ್ಯಭಾಮಾಸಮೇತನಾದ ಶ್ರೀಕೃಷ್ಣನ ಪ್ರಯಾಣ : ಮುರು-ನಿಸುಂದ-ಹಯಗ್ರೀವ-ವಿರೂಪಾಕ್ಷ-ಪಂಚನಾದ ಮತ್ತು ನರಕಾಸುರನ ಸಂಹಾರ
  • ಶ್ರೀಕೃಷ್ಣನು ನರಕಾಸುರನ ಅರಮನೆಯನ್ನು ಪ್ರವೇಶಿಸಿ ಅಲ್ಲಿದ್ದ ಸಕಲೈಶ್ವರ್ಯಗಳನ್ನೂ ಮತ್ತು ಹದಿನಾರು ಸಾವಿರ ಕನ್ಯೆಯರನ್ನೂ ದ್ವಾರಕೆಗೆ ಕಳುಹಿಸಿದುದು : ದೇವಲೋಕಕ್ಕೆ ಹೋಗಿ ಅದಿತಿಗೆ ಕುಂಡಲಗಳನ್ನು ಸಮರ್ಪಿಸಿ ಸ್ವರ್ಗದಿಂದ ಪಾರಿಜಾತವೃಕ್ಷವನ್ನು ತಂದುದು
  • ರೈವತಕಪರ್ವತದಲ್ಲಿ ರುಕ್ಮಿಣಿಯ ವ್ರತೋದ್ಯಾಪನೆಯ ಉತ್ಸವ : ಅಲ್ಲಿ ಶ್ರೀಕೃಷ್ಣನು ಪಾರಿಜಾತದ ಪುಷ್ಪವನ್ನು ಕೊಟ್ಟು ರುಕ್ಮಿಣಿಯನ್ನು ಸಮ್ಮಾನಿಸಿದುದು : ನಾರದರಿಂದ ರುಕ್ಮಿಣಿಯ ಸರ್ವಾಧಿಕಸೌಭಾಗ್ಯದ ಪ್ರಶಂಸೆ : ಸತ್ಯಭಾಮೆಯ ಕೋಪಭವನದ ಪ್ರವೇಶ
  • ಶ್ರೀಕೃಷ್ಣನು ಸತ್ಯಭಾಮೆಯನ್ನು ಸಮಾಧಾನಗೊಳಿಸಿದುದು : ಸತ್ಯಭಾಮೆಯು ಮಾನಸಿಕವಾದ ಖೇದವನ್ನು ಪ್ರಕಟಪಡಿಸುತ್ತಾ ತಪಸ್ಸಿಗೆ ಅನುಮತಿಯನ್ನು ಕೋರಿದುದು
  • ಶ್ರೀಕೃಷ್ಣನಪ್ರಶ್ನೆಗೆ ಸತ್ಯಭಾಮೆಯು ತನ್ನ ದುಃಖಕ್ಕೂ-ಖೇದಕ್ಕೂ ಕಾರಣವನ್ನು ತಿಳಿಸಿದುದು : ಪಾರಿಜಾತಪುಷ್ಪವನ್ನು ತಂದು ಕೊಡುವುದಾಗಿ ಆಶ್ವಾಸನೆಯನ್ನಿತ್ತು ಶ್ರೀಕೃಷ್ಣನು ಸತ್ಯಭಾಮೆಯನ್ನು ಸಮಾಧಾನಪಡಿಸಿದುದು : ಸತ್ಯಭಾಮಾ-ಕೃಷ್ಣರಿಂದ ನಾರದರಿಗೆ ಸತ್ಕಾರ : ನಾರದರಿಂದ ಪಾರಿಜಾತದ ಉತ್ಪತ್ತಿ ಮತ್ತು ಮಹಿಮೆಗಳ ವರ್ಣನೆ
  • ಪಾರಿಜಾತವೃಕ್ಷವನ್ನು ಕೊಡುವಂತೆ ಇಂದ್ರನನ್ನು ಪ್ರಾರ್ಥಿಸುವ ಸಲುವಾಗಿ ಶ್ರೀಕೃಷ್ಣನು ನಾರದರನ್ನು ಕಳುಹಿಸಿಕೊಟ್ಟುದು
  • ಸ್ವರ್ಗದಲ್ಲಿ ಮಹಾದೇವನ ಪರಿವಾರದ ಸಂತೋಷಾರ್ಥವಾಗಿ ನೃತ್ಯ-ಗೀತಗಳ ಸಂಭ್ರಮ : ನಾರದರು-ಶ್ರೀಕೃಷ್ಣನ ಸಂದೇಶವನ್ನು ಇಂದ್ರನಿಗೆ ಹೇಳಿದುದು : ಇಂದ್ರನು ನಾನಾ ಕಾರಣಗಳನ್ನು ಮುಂದೆಮಾಡಿ ಪಾರಿಜಾತ ವೃಕ್ಷವನ್ನು ಕೊಡಲು ನಿರಾಕರಿಸಿದುದು
  • ಪಾರಿಜಾತವೃಕ್ಷವನ್ನು ಕೊಡದಿದ್ದರೆ ಗದಾಪ್ರಹಾರ ಮಾಡುವುದಾಗಿ ಹೇಳಿಕಳುಹಿಸಿದ ಶ್ರೀಕೃಷ್ಣನ ವಿಷಯದಲ್ಲಿ ಇಂದ್ರನ ಕೋಪ : ಯುದ್ಧವಿಲ್ಲದೇ ಪಾರಿಜಾತವೃಕ್ಷವನ್ನು ಕೊಡಲಾರೆನೆಂದು ಇಂದ್ರನ ನಿಶ್ಚಯ
  • ನಾರದರು ಶ್ರೀಕೃಷ್ಣನ ಮಹಿಮೆಯನ್ನು ಪುನಃ ಪ್ರತಿಪಾದಿಸಿದರೂ ಇಂದ್ರನು ಪಾರಿಜಾತ ವೃಕ್ಷವನ್ನು ಕೊಡಲು ನಿರಾಕರಿಸಿದುದು
  • ಅಮರಾವತಿಯ ಮೇಲೆ ಆಕ್ರಮಣನಡೆಸುವುದು ನಿಶ್ಚಯವೆಂದು ಹೇಳಿ ಶ್ರೀಕೃಷ್ಣನು ನಾರದರ ಮೂಲಕ ಇಂದ್ರನಿಗೆ ಸಂದೇಶವನ್ನು ಕಳುಹಿಸಿಕೊಟ್ಟುದು : ಇಂದ್ರ-ಬೃಹಸ್ಪತಿಗಳ ಸಂಭಾಷಣೆ : ಬೃಹಸ್ಪತಿಯು ಕಶ್ಯಪನಿಗೆ ಈ ಯುದ್ಧ ವಾರ್ತೆಯನ್ನು ತಿಳಿಸಿದುದು : ಶಾಂತಿಯ ಸ್ಥಾಪನೆಗಾಗಿ ಕಶ್ಯಪನಿಂದ ಶ್ರೀಶಂಕರನ ಪ್ರಾರ್ಥನೆ
  • ಇಂದ್ರ-ಕೃಷ್ಣರ, ಜಯಂತ-ಪ್ರದ್ಯುಮ್ನರ ಪ್ರವರ-ಸಾತ್ಯಕಿಗಳ ಮತ್ತು ಐರಾವತ-ಗರುಡರ ಘೋರಯುದ್ಧ
  • ಶ್ರೀಕೃಷ್ಣನು ರಾತ್ರಿಯಲ್ಲಿ ಯುದ್ಧವನ್ನು ಸ್ಥಗಿತಗೊಳಿಸಿ ಪಾರಿಯಾತ್ರ ಪರ್ವತಕ್ಕೆ ವರವನ್ನಿತ್ತುದು : ಗಂಗೆಯ ಸ್ಮರಣೆ : ಬಿಲ್ವಪತ್ರೆಯಲ್ಲಿಯೂ ಮತ್ತು ಗಂಗೆಯಲ್ಲಿಯೂ ಮಹಾದೇವನನ್ನು ಆವಾಹಿಸಿ ಬಿಲ್ವೋದಕೇಶ್ವರನ ಪೂಜೆಯನ್ನೂ ಮತ್ತು ಸ್ತೋತ್ರವನ್ನೂ ಮಾಡಿದುದು : ಮಹಾದೇವನು ಶ್ರೀಕೃಷ್ಣನಿಗೆ ಅಭೀಷ್ಟವಾದ ವರವನ್ನಿತ್ತು ದೈತ್ಯರನ್ನು ಸಂಹರಿಸಲು ಆದೇಶವನ್ನಿತ್ತುದು : ಪಾರಿಯಾತ್ರ ಪರ್ವತದ ಮೇಲೆ ಭಗವಂತನು ನಿವಾಸ ಮಾಡಿದುದು : ಅವನ ಪ್ರತಿಮೆಯ ಪೂಜಾ ಮಹಿಮೆ
  • ಪುನಃ ಇಂದ್ರೋಪೇಂದ್ರರ ಯುದ್ಧ : ಉತ್ಪಾತಗಳ ಪರಂಪರೆ : ಬ್ರಹ್ಮನ ಆಜ್ಞೆಯಂತೆ ಅದಿತಿ ಮತ್ತು ಕಶ್ಯಪರು ಮಧ್ಯೆ ಬಂದು ಇಂದ್ರೋ-ಪೇಂದ್ರರ ಯುದ್ಧವನ್ನು ನಿಲ್ಲಿಸಿದುದು : ಸ್ವರ್ಗಾಭಿಗಮನ : ಅದಿತಿಯ ಆಜ್ಞೆಯಂತೆ ಶ್ರೀಕೃಷ್ಣನು ಶಚೀದೇವಿಯಿಂದ ಉಪಹಾರವನ್ನು ಸ್ವೀಕರಿಸಿ ಪಾರಿಜಾತವೃಕ್ಷದೊಡನೆ ದ್ವಾರಕೆಗೆ ಬಂದುದು : ಪಾರಿಜಾತದ ಆಗಮನದಿಂದ ದ್ವಾರಕಾನಗರವಾಸಿಗಳಿಗೆ ಆನಂದ : ಸತ್ಯಭಾಮೆಯು ಮಾಡಿದ್ದ ಪುಣ್ಯಕವ್ರತದ ಸಮಾಪ್ತಿಯ ಕಾಲದಲ್ಲಿ ದಾನವನ್ನು ಪ್ರತಿಗ್ರಹಿಸುವ ಸಲುವಾಗಿ ಶ್ರೀಕೃಷ್ಣನು ನಾರದರನ್ನು ಸ್ಮರಿಸಿದುದು
  • ಪುಣ್ಯಕವ್ರತದ ಸಾದ್ಗುಣ್ಯಕ್ಕಾಗಿ ಸತ್ಯಭಾಮೆಯು ಶ್ರೀಕೃಷ್ಣನನ್ನು ನಾರದರಿಗೆ ದಾನಮಾಡಿದುದು : ಯಥಾಯೋಗ್ಯವಾದ ಕ್ರಯವನ್ನು ಪಡೆದು ನಾರದರು ಶ್ರೀಕೃಷ್ಣನನ್ನು ಬಿಟ್ಟುಕೊಟ್ಟುದು : ನಾರದರು ಶ್ರೀಕೃಷ್ಣನಿಂದ ವರವನ್ನು ಬೇಡಿದುದು : ಶ್ರೀಕೃಷ್ಣನು ತನ್ನ ಬಾಂಧವರೆಲ್ಲರಿಗೂ ಪಾರಿಜಾತವೃಕ್ಷವನ್ನು ತೋರಿಸಿ ಅದನ್ನು ಸ್ವರ್ಗಕ್ಕೆ ಕಳುಹಿಸಿಕೊಟ್ಟುದು
  • ಪುಣ್ಯಕವ್ರತದ ವಿಧಿಯ ವರ್ಣನೆ
  • ಉಮೆಯಿಂದ ಸ್ತ್ರೀಮಹತ್ತ್ವದ ವರ್ಣನೆ : ಪುಣ್ಯಕವ್ರತದ ವಿಧಿಯ ಉಪದೇಶ
  • ಪುಣ್ಯಕವ್ರತಕ್ಕೆ ಸಂಬಂಧಿಸಿದ ನಿಯಮಗಳು : ದಾನದ ವರ್ಣನೆ : ಪುತ್ರಪ್ರಾಪ್ತಿಯ ಸಲುವಾಗಿ ಮಾಡುವ ಇತರ ವ್ರತಗಳ ವರ್ಣನೆ
  • ನಾನಾಪ್ರಕಾರವಾದ ವ್ರತಗಳ ವಿಧಿ-ನಿಯಮಗಳು
  • ಉಮಾದೇವಿಯಿಂದ ವ್ರತಗಳ ನಿರೂಪಣೆ : ನಾರದರು ದೇವಿಯರು ಮಾಡಿದ ವ್ರತಗಳನ್ನು ವಿವರಿಸಿ ಹೇಳಿದುದು : ಶ್ರೀಕೃಷ್ಣನ ಪತ್ನಿಯರು ವ್ರತಗಳನ್ನು ಆಚರಿಸಿಕೊಟ್ಟ ದಾನಗಳ ವಿವರಣೆ
  • ಷಟ್ಪುರವಾಸಿಗಳಾದ ಅಸುರರ ಸಂಕ್ಷಿಪ್ತ ಚರಿತ್ರೆ : ಅವರಿಗೆ ಶಿವ-ಬ್ರಹ್ಮರ ವರದಾನ
  • ಬ್ರಹ್ಮದತ್ತನ ಯಜ್ಞಕ್ಕೆ ವಸುದೇವ-ದೇವಕಿಯರ ಆಗಮನ : ದೈತ್ಯರಿಂದ ಬ್ರಹ್ಮದತ್ತನ ಕನ್ಯೆಯರ ಅಪಹರಣ : ಪ್ರದ್ಯುಮ್ನನಿಂದ ಕನ್ಯೆಯರ ರಕ್ಷಣೆ ನಾರದರ ಸಲಹೆಯಂತೆ ದೈತ್ಯರು ಕ್ಷತ್ರಿಯ ರಾಜರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡುದು ಷಟ್ಪುರಕ್ಕೆ ಶ್ರೀಕೃಷ್ಣನ ಆಗಮನ
  • ಶ್ರೀಕೃಷ್ಣನು ಯಾದವಸೈನಿಕರನ್ನು ಯುದ್ಧದಲ್ಲಿ ನಿಯೋಜಿಸಿದುದು : ದಾನವರು ಷಟ್ಪುರದಿಂದ ಹೊರಟುದು : ನಿಕುಂಭನು ಹಲವಾರು ಯದುವೀರರನ್ನು ಗುಹೆಯಲ್ಲಿ ಬಂಧಿಸಿದುದು : ಶ್ರೀಕೃಷ್ಣನಿಂದ ದಾನವಸೈನಿಕರ ಸಂಹಾರ : ಪ್ರದ್ಯುಮ್ನನು ರಾಜರ ಸೈನ್ಯವನ್ನು ಗುಹೆಯಲ್ಲಿಯೇ ನಿರೋಧಿಸಿದುದು : ಬ್ರಹ್ಮದತ್ತನ ಸಾಂತ್ವವಚನ
  • ನಿಕುಂಭನು ಜಯಂತನಿಂದ ಪರಾಜಿತನಾಗಿ ಶ್ರೀಕೃಷ್ಣನೊಡನೆ ಯುದ್ಧಕ್ಕೆ ಹೋದುದು : ಶ್ರೀಕೃಷ್ಣನು ಅರ್ಜುನನಿಗೆ ನಿಕುಂಭನ ಚರಿತ್ರೆಯನ್ನು ಹೇಳಿದುದು : ಶ್ರೀಕೃಷ್ಣನು ಆಕಾಶವಾಣಿಯ ಪ್ರೇರಣೆಯಂತೆ ಸುದರ್ಶನ ಚಕ್ರದಿಂದ ನಿಕುಂಭನನ್ನು ಸಂಹರಿಸಿದುದು : ಬ್ರಹ್ಮದತ್ತನು ಷಟ್ಪುರದಲ್ಲಿ ಸುಖವಾಗಿರುವುದನ್ನು ನೋಡಿ ಶ್ರೀಕೃಷ್ಣನು ದ್ವಾರಕೆಗೆ ಹಿಂದಿರುಗಿದುದು
  • ಅಂಧಕಾಸುರನ ಜನನ ಮತ್ತು ದುರಾಚಾರಗಳ ವರ್ಣನೆ : ಅವನ ವಧೆಗಾಗಿ ಋಷಿಗಳ ಸಮಾಲೋಚನೆ : ನಾರದರು ಮಂದಾರ ಪುಷ್ಪದ ಮಾಲೆಯನ್ನು ಧರಿಸಿ ಅಂಧಕನ ಅರಮನೆಗೆ ಹೋಗಿ ಅವನಿಗೆ ಮಂದಾರವನದ ಮಹತ್ತ್ವವನ್ನು ವರ್ಣಿಸಿ ಹೇಳಿದುದು
  • ಮಂದರಾಚಲಕ್ಕೆ ಹೋದ ಅಂಧಕಾಸುರನನ್ನು ಮಹಾದೇವನು ವಧಿಸಿದುದು
  • ಶ್ರೀಕೃಷ್ಣ ಮತ್ತು ಯಾದವರ ಜಲವಿಹಾರ
  • ಬಲರಾಮ ಮತ್ತು ಶ್ರೀಕೃಷ್ಣರೇ ಮೊದಲಾದವರ ಜಲಕ್ರೀಡಾದಿಗಳ ವರ್ಣನೆ
  • ನಿಕುಂಭನಿಂದ ಭಾನುಮತಿಯ ಅಪಹರಣ : ಕೃಷ್ಣಾರ್ಜುನ-ಪ್ರದ್ಯುಮ್ನರೊಡನೆ ನಿಕುಂಭನ ಯುದ್ಧ : ಗೋಕರ್ಣತೀರ್ಥದಲ್ಲಿ ನಿಕುಂಭನ ಪತನ : ಪ್ರದ್ಯುಮ್ನನು ಭಾನುಮತಿಯನ್ನು ಕರೆದುಕೊಂಡು ದ್ವಾರಕೆಗೆ ಹಿಂದಿರುಗಿದುದು : ಪುನಃ ನಿಕುಂಭನೊಡನೆ ಕೃಷ್ಣಾರ್ಜುನ-ಪ್ರದ್ಯುಮ್ನರ ಯುದ್ಧ : ನಿಕುಂಭಾಸುರನ ಮಾಯಾಯುದ್ಧದ ವರ್ಣನೆ : ಶ್ರೀಕೃಷ್ಣನಿಂದ ನಿಕುಂಭನ ಸಂಹಾರ
  • ವಜ್ರನಾಭನ ತಪಸ್ಸು : ವರಪ್ರಾಪ್ತಿ : ಮೂರು ಲೋಕಗಳನ್ನೂ ಜಯಿಸಲು ವಜ್ರನಾಭನ ಪ್ರಯತ್ನ : ಇಂದ್ರನಿಗೆ ಶ್ರೀಕೃಷ್ಣನ ಸಂದೇಶ : ಭದ್ರನಾಭನೆಂಬ ನಟನಿಗೆ ಮುನಿಗಳಿಂದ ವರಪ್ರದಾನ : ಇಂದ್ರನು ಮಾಡಬೇಕಾದ ಕರ್ತವ್ಯವನ್ನು ತಿಳಿಸಿ ಹಂಸಗಳನ್ನು ವಜ್ರನಾಭನ ಪುರಕ್ಕೆ ಕಳುಹಿಸಿಕೊಟ್ಟುದು
  • ವಜ್ರನಾಭಪುರದಲ್ಲಿ ಹಂಸಗಳ ನಿವಾಸ : ಹಂಸಿಯು ಪ್ರಭಾವತಿಯನ್ನು ಪ್ರದ್ಯುಮ್ನನಲ್ಲಿ ಅನುರಕ್ತಳಾಗುವಂತೆ ಮಾಡಿದುದು : ಪ್ರಭಾವತಿಯು ಪ್ರದ್ಯುಮ್ನನನ್ನು ಕರೆತರುವಂತೆ ಹಂಸಿಗೆ ಹೇಳಿದುದು : ಹಂಸೀ-ವಜ್ರನಾಭರ ಸಂವಾದ : ಹಂಸಿಯಿಂದ ಎಲ್ಲ ಸಮಾಚಾರಗಳನ್ನು ಕೇಳಿ ಶ್ರೀಕೃಷ್ಣನು ಪ್ರದ್ಯುಮ್ನನೇ ಮೊದಲಾದ ಯದುವೀರರನ್ನು ನಟರ ವೇಷದಲ್ಲಿ ವಜ್ರಪುರಕ್ಕೆ ಕಳುಹಿಸಿಕೊಟ್ಟದು
  • ನಟವೇಷಧಾರಿಗಳಾದ ಯಾದವರು ಸುಪುರದಲ್ಲಿಯೂ ವಜ್ರಪುರದಲ್ಲಿಯೂ ಅಭಿನಯಿಸಿ ದಾನವರಿಗೆ ಆನಂದವನ್ನುಂಟು ಮಾಡಿದುದು : ಕಾಣಿಕೆಗಳ ಸ್ವೀಕಾರ : ಪ್ರದ್ಯುಮ್ನನು ಪ್ರಭಾವತಿಯ ಅಂತಃಪುರವನ್ನು ಪ್ರವೇಶಿಸಿದುದು
  • ಪ್ರದ್ಯುಮ್ನ-ಪ್ರಭಾವತಿಯರ, ಗದ-ಚಂದ್ರವತಿಯರ ಮತ್ತು ಸಾಂಬ-ಗುಣವತಿಯರ ಗಾಂಧರ್ವವಿವಾಹ
  • ಪ್ರದ್ಯುಮ್ನನು ವರ್ಷಾಕಾಲದ ವರ್ಣನೆ ಮಾಡುತ್ತಾ ಪ್ರಭಾವತಿಗೆ ತನ್ನ ಕುಲದ ಪರಿಚಯಮಾಡಿಕೊಟ್ಟುದು
  • ಕಶ್ಯಪನು ತಡೆದರೂ ವಜ್ರನಾಭನು ಮೂರು ಲೋಕಗಳ ವಿಜಯಕ್ಕಾಗಿ ಹೊರಟುದು : ಇಂದ್ರೋಪೇಂದ್ರರು ಪ್ರದ್ಯುಮ್ನನಿಗೆ ಸಂದೇಶವನ್ನು ಕಳುಹಿಸಿದುದು : ಅವರ ವಂಶದ ಪ್ರಭಾವವನ್ನು ಉಲ್ಲೇಖಿಸಿದುದು : ಪ್ರಭಾವತಿಯೇ ಮೊದಲಾದವರು ತಮ್ಮ ಗಂಡಂದಿರಿಗೆ ಕತ್ತಿಗಳನ್ನು ಕೊಟ್ಟು ಯುದ್ಧಕ್ಕಾಗಿ ಕಳುಹಿಸಿಕೊಟ್ಟುದು : ಇಂದ್ರನ ಸಹಾಯ : ಪ್ರದ್ಯುಮ್ನನ ಅದ್ಭುತಪರಾಕ್ರಮ
  • ಪ್ರದ್ಯುಮ್ನನಿಂದ ವಜ್ರನಾಭನ ಸಂಹಾರ : ಪ್ರದ್ಯುಮ್ನನ ಮಕ್ಕಳಿಗೆ ರಾಜ್ಯಾಭಿಷೇಕ
  • ಇಂದ್ರನ ಆಜ್ಞೆಯಂತೆ ವಿಶ್ವಕರ್ಮನು ಪುನರ್ನಿರ್ಮಾಣಮಾಡಿದ ದ್ವಾರಾವತಿಯ ವರ್ಣನೆ
  • ಶ್ರೀಕೃಷ್ಣನು ಅಂತಃಪುರವನ್ನು ಪ್ರವೇಶಿಸಿದುದು : ಮಣಿಪರ್ವತ ಮತ್ತು ಪಾರಿಜಾತವೃಕ್ಷಗಳನ್ನು ಯಥೋಚಿತವಾದ ಸ್ಥಾನಗಳಲ್ಲಿ ಸ್ಥಾಪಿಸಿದುದು
  • ಯದುವೀರರನ್ನು ಸಮ್ಮಾನಿಸಲು ಶ್ರೀಕೃಷ್ಣನು ಯದುಪುಂಗವರ ಸಭೆಯನ್ನು ಏರ್ಪಡಿಸಿದುದು
  • ಶ್ರೀಕೃಷ್ಣನಿಂದ ಯಾದವರಿಗೆ ಸತ್ಕಾರ : ನಾರದರು ಆ ಮಹಾಸಭೆಯಲ್ಲಿ ಶ್ರೀಕೃಷ್ಣನ ಪ್ರಭಾವವನ್ನು ವರ್ಣಿಸಿದುದು
  • ನಾರದರಿಂದ ಶ್ರೀಕೃಷ್ಣನ ಅದ್ಭುತಕರ್ಮಗಳ ವರ್ಣನೆ
  • ಶ್ರೀಕೃಷ್ಣನ ಸಂತತಿಯ ವರ್ಣನೆ : ವೃಷ್ಣಿವಂಶದ ಉಪಸಂಹಾರ
  • ಪ್ರದ್ಯುಮ್ನನ ಜನ್ಮ : ಶಂಬರಾಸುರನು ಸೂತಿಕಾ ಗೃಹದಿಂದಲೇ ಪ್ರದ್ಯುಮ್ನನನ್ನು ಅಪಹರಿಸಿದುದು : ಪ್ರದ್ಯುಮ್ನ-ಮಾಯಾವತಿಯರ ಸಂವಾದ : ಶಂಬರಾಸುರನ ನೂರು ಮಕ್ಕಳೊಡನೆ ಪ್ರದ್ಯುಮ್ನನ ಯುದ್ಧ
  • ಪ್ರದ್ಯುಮ್ನನು ಶಂಬರಾಸುರನ ಸೈನಿಕರನ್ನೂ ಮಂತ್ರಿಗಳನ್ನೂ ಸಂಹರಿಸಿದುದು
  • ಶಂಬರಾಸುರ-ಪ್ರದ್ಯುಮ್ನರ ಮಾಯಾಮಯವಾದ ಯುದ್ಧ : ಶಂಬರನ ಚಿಂತೆ : ದೇವರಾಜನಾದ ಇಂದ್ರನ ಆಜ್ಞೆಯಂತೆ ನಾರದರು ಪ್ರದ್ಯುಮ್ನನಿಗೆ ಅವನ ಹಿಂದಿನ ಜನ್ಮದ ಸ್ಮರಣೆಯನ್ನು ಮಾಡಿಕೊಟ್ಟುದು
  • ಪ್ರದ್ಯುಮ್ನನಿಂದ ಶಂಬರಾಸುನ ವಧೆ
  • ಮಾಯಾವತಿಯ ಸಮೇತನಾಗಿ ಪ್ರದ್ಯುಮ್ನನು ದ್ವಾರಕೆಗೆ ಆಗಮಿಸಿ ರುಕ್ಮಿಣಿಯ ಭವನಕ್ಕೆ ತೆರಳಿದುದು

Other Books in this COllection

ಸಂಪುಟ ೧ (ಮೂಲ)

Volume 2 (Original)

ಸಂಪುಟ ೧ (ಗದ್ಯ)

Volume 3 (Prose)

Volume 4 (Prose)