ಸಂಪುಟ ೧ (ಗದ್ಯ)

ಹರಿವಂಶಪರ್ವ

  • ಮಂಗಳಾಚರಣೆ : ಶೌನಕ-ಉಗ್ರಶ್ರವರ ಸಂವಾದ : ವೃಷ್ಣಿವಂಶದ ವಿಸ್ತೃತಚರಿತ್ರೆಯನ್ನು ಕೇಳಲು ಜನಮೇಜಯನ ಪ್ರಾರ್ಥನೆ : ಆದಿಸೃಷ್ಟಿಯ ವರ್ಣನೆ
  • ಸ್ವಾಯಂಭುವಮನುವಿನ ವಂಶದ ವರ್ಣನೆ ಮತ್ತು ದಕ್ಷಪ್ರಜಾಪತಿಯ ಜನ್ಮವೃತ್ತಾಂತ
  • ದಕ್ಷಪ್ರಜಾಪತಿಯ ಮೂಲಕವಾಗಿ ಸೃಷ್ಟಿಯ ವಿಸ್ತಾರ : ನಾರದರು ದಕ್ಷನ ಪುತ್ರರನ್ನು ವಿರಕ್ತರನ್ನಾಗಿ ಮಾಡಿದುದು : ದಕ್ಷನ ಅರುವತ್ತು ಕನ್ಯೆಯರ ಮತ್ತು ಅವರ ಸಂತಾನಗಳ ವರ್ಣನೆ
  • ಪೃಥುವಿನ ಉಪಾಖ್ಯಾನ : ರಾಜ್ಯವಿಸ್ತರಣೆ ಮತ್ತು ದಿಕ್ಪಾಲರ ಸ್ಥಾಪನೆ
  • ಪೃಥುವಿನ ಉಪಾಖ್ಯಾನ-ವೇನನು ತನ್ನ ಅತ್ಯಾಚಾರದಿಂದ ತಾನೇ ವಿನಾಶಹೊಂದಿದುದು : ಪೃಥುವಿನ ಜನ್ಮವೃತ್ತಾಂತ
  • ಪೃಥುವಿನ ಉಪಾಖ್ಯಾನ : ಪೃಥುವು ಭೂದೇವಿಯನ್ನು ತನ್ನ ಮಗಳನ್ನಾಗಿ ಮಾಡಿಕೊಂಡುದು : ಧೇನುರೂಪಳಾಗಿ ಪೃಥ್ವೀದೇವಿಯು ನಾನಾ ಪ್ರಕಾರವಾದ ಹಾಲುಗಳನ್ನು ಕರೆದುದು : ಹಾಲುಕರೆದ ಪಾತ್ರೆಗಳು ಮತ್ತು ಹಾಲನ್ನು ಕರೆದವರ ವರ್ಣನೆ
  • ಮನ್ವಂತರಗಳ, ಮನುಗಳ, ದೇವತೆಗಳ ಮತ್ತು ಋಷಿಗಳ ಪ್ರತ್ಯೇಕವರ್ಣನೆ
  • ಬ್ರಹ್ಮನ ನಾಲ್ಕು ಯುಗಗಳ, ಮನ್ವಂತರಗಳ ಮತ್ತು ದಿನ-ವರ್ಷಗಳ ಪರಿಮಾಣ
  • ವೈವಸ್ವತಮನು, ಯಮ, ಯಮೀ (ಯಮುನಾ), ಅಶ್ವಿನೀಕುಮಾರರು ಮತ್ತು ಶನೈಶ್ಚರ–ಇವರ ಹುಟ್ಟು
  • ವೈವಸ್ವತಮನುವಿನ ವಂಶದಲ್ಲಿ ಹುಟ್ಟಿದವರ ವರ್ಣನೆ : ಪುರೂರವನ ಉತ್ಪತ್ತಿ
  • ಧುಂಧುಮಾರನ ಕಥೆ
  • ಧುಂಧುಮಾರನ ವಂಶವರ್ಣನೆ : ಗಾಲವನ ಜನ್ಮ
  • ತ್ರಿಶಂಕುವಿನ ಚರಿತ್ರೆ : ಅವನ ವಂಶೀಯರಾದ ಹರಿಶ್ಚಂದ್ರಾದಿಗಳ ಜನ್ಮಕಥೆ
  • ಸಗರನ ಜನ್ಮ ಮತ್ತು ಚರಿತ್ರೆ : ಸಗರನ ಮಕ್ಕಳ ಪ್ರಯತ್ನದಿಂದ ಸಾಗರದ ನಿರ್ಮಾಣ
  • ಸೂರ್ಯವಂಶದ ವರ್ಣನೆ
  • ಶ್ರಾದ್ಧಕಲ್ಪ : ಜನಮೇಜಯನು ಪಿತೃಸ್ವರೂಪವನ್ನೂ ಮತ್ತು ಶ್ರಾದ್ಧಕಲ್ಪವನ್ನೂ ಪ್ರಶ್ನಿಸಿದುದು : ಶಂತನುವು ಭೀಷ್ಮನಿಂದ ಕೈಚಾಚಿ ಪಿಂಡವನ್ನು ಸ್ವೀಕರಿಸಿದುದು
  • ಪಿತೃಕಲ್ಪ : ಭೀಷ್ಮ-ಮಾರ್ಕಂಡೇಯ ಸಂವಾದ : ಮಾರ್ಕಂಡೇಯ-ಸನತ್ಕುಮಾರರ ಸಂಭಾಷಣೆ
  • ಪಿತೃಕಲ್ಪ : ಮಾರ್ಕಂಡೇಯ-ಸನತ್ಕುಮಾರರ ಸಂವಾದದಲ್ಲಿ ಪಿತೃಗಣಗಳು, ಲೋಕ, ಶಕ್ತಿ ಮತ್ತು ಕನ್ಯೆಯರ ವರ್ಣನೆ : ಪಿತೃಗಳ ಪ್ರಭಾವವನ್ನು ನೋಡುವ ಸಲುವಾಗಿ ಮಾರ್ಕಂಡೇಯನಿಗೆ ದಿವ್ಯದೃಷ್ಟಿಪ್ರಾಪ್ತಿ
  • ಪಿತೃಕಲ್ಪ-ಭರದ್ವಾಜನ ಮಕ್ಕಳ ಕಥೆ : ಯೋಗಭ್ರಷ್ಟರಾದ ಪುರುಷರ ಗತಿ : ಯೋಗಸಿದ್ಧಿಗೆ ಅಧಿಕಾರಿಗಳಾದ ಪುರುಷರ ಲಕ್ಷಣ : ಮಾರ್ಕಂಡೇಯ-ಸನತ್ಕುಮಾರಸಂವಾದದ ಸಮಾಪ್ತಿ
  • ಪಿತೃಕಲ್ಪ : ಬ್ರಹ್ಮದತ್ತ ಮತ್ತು ಉಗ್ರಾಯುಧರ ವಂಶದ ವರ್ಣನೆ : ಪಕ್ಷಿಯ ಮೂಲಕ ಶುಕನೀತಿಯ ಕಥನ
  • ಪಿತೃಕಲ್ಪ-ಮಾರ್ಕಂಡೇಯರು ಶ್ರಾದ್ಧದ ಮಹಿಮೆಯನ್ನು ಹೇಳಿದುದು : ಶ್ರಾದ್ಧದ ಫಲದಿಂದ ಕೌಶಿಕಪುತ್ರರಿಗೆ ಉತ್ತಮ ಜನ್ಮಪ್ರಾಪ್ತಿ
  • ಪಿತೃಕಲ್ಪ-ಶುಚಿವಾಕ್‍ ಎಂಬ ಪಕ್ಷಿಯು ಸ್ವತಂತ್ರವೇ ಮೊದಲಾದ ಮೂರು ಹಂಸಗಳಿಗೆ ಶಾಪವನ್ನಿತ್ತುದು : ಸುಮನಾ ಎಂಬ ಹಂಸವು ಅನುಗ್ರಹಪೂರ್ವಕವಾಗಿ ಅವುಗಳನ್ನು ಶಾಪದಿಂದ ವಿಮೋಚನಗೊಳಿಸಿದುದು
  • ಶಾಪಗ್ರಸ್ತವಾದ ಮೂರು ಹಂಸಪಕ್ಷಿಗಳೂ ಕಾಂಪಿಲ್ಯನಗರದಲ್ಲಿ ರಾಜ ಮತ್ತು ಮಂತ್ರಿಗಳಾಗಿ ಜನ್ಮತಾಳಿದುದು : ಉಳಿದ ನಾಲ್ಕು ಹಂಸಗಳು ತಂದೆಯ ಆಜ್ಞಾನುಸಾರ ಮುಕ್ತರಾದುದು
  • ಬ್ರಹ್ಮದತ್ತನಿಗೆ ವಿಭ್ರಾಜನೆಂಬ ಮಗನು ಹುಟ್ಟಿ ದುದು : ಪತ್ನಿಯಾದ ಸನ್ನತಿಯೊಡನೆ ಬ್ರಹ್ಮದತ್ತನ ಮನಸ್ತಾಪ : ಬ್ರಾಹ್ಮಣನೊಬ್ಬನು ಹೇಳಿದ ಶ್ಲೋಕದಿಂದಾಗಿ ಬ್ರಹ್ಮದತ್ತ-ಪಾಂಚಲ್ಯ- ಕಂಡರೀಕರು ತಮ್ಮ ಪೂರ್ವಜನ್ಮದ ಸ್ಮರಣೆಯನ್ನು ಪಡೆದು ಸಂಸಾರವನ್ನು ಪರಿತ್ಯಜಿಸಿ ತಪಶ್ಚರಣೆಯಿಂದ ಮುಕ್ತರಾದುದು
  • ಚಂದ್ರನ ಉತ್ಪತ್ತಿ : ರಾಜಸೂಯಯಾಗ : ದೇವಾಸುರರ ಯುದ್ಧ : ಬುಧನ ಉತ್ಪತ್ತಿ
  • ಪುರೂರವ ಮಹಾರಾಜನ ಚರಿತ್ರೆ : ಅವನ ವಂಶದ ವರ್ಣನೆ : ಪುರೂರವನು ತ್ರೇತಾಗ್ನಿಗಳನ್ನು ರಚಿಸಿದುದು : ಗಂಧರ್ವರ ಲೋಕಕ್ಕೆ ಪ್ರಯಾಣ
  • ಪುರೂರವನ ಎರಡನೆಯ ಮಗನಾದ ಅಮಾವಸುವಿನ ವಂಶವರ್ಣನೆ : ವಿಶ್ವಾಮಿತ್ರ ಮತ್ತು ಪರಶುರಾಮರ ಜನನ
  • ರಾಜನಾದ ರಜಿ ಮತ್ತು ಅವನ ಮಕ್ಕಳ ಚರಿತ್ರೆ : ಇಂದ್ರನು ತನ್ನ ಸ್ಥಾನದಿಂದ ಭ್ರಷ್ಟನಾಗಿ ಪುನಃ ಪದವಿಯನ್ನು ಪಡೆದುಕೊಂಡುದು
  • ಅನೇನಸನ ವಂಶದ ವರ್ಣನೆ : ಕಾಶೀರಾಜನಾದ ಧನ್ವನಿಗೆ ಧನ್ವಂತರಿಯು ಮಗನಾಗಿ ಅವತರಿಸಿದುದು : ದಿವೋದಾಸನ ರಾಜ್ಯಭಾರದ ಸಮಯದಲ್ಲಿ ಭಗವಾನ್‍ ಶಂಕರನ ಆಜ್ಞೆಯಂತೆ ಗಣೇಶ್ವರನಾದ ನಿಕುಂಭಕನು ವಾರಾಣಸಿಯನ್ನು ಜನಶೂನ್ಯವನ್ನಾಗಿ ಮಾಡಲು ಪ್ರಯತ್ನಿಸಿದುದು : ಅಲ್ಲಿಯೇ ಪಾರ್ವತೀ-ಪರಮೇಶ್ವರರು ನಿವಾಸಮಾಡಿದುದು : ವಾರಾಣಸಿಯ ಮೇಲೆ ದಿವೋದಾಸನ ಅಧಿಕಾರ : ಅಲರ್ಕನ ಪ್ರಶಂಸೆ
  • ನಹುಷ ಮತ್ತು ಯಯಾತಿಗಳ ವಂಶವರ್ಣನೆ ಮತ್ತು ಯಯಾತಿಯ ಚರಿತ್ರೆ
  • ಪೂರುವಿನ ವಂಶಾವಳಿಯ ವರ್ಣನೆ
  • ಪೂರುವಿನ ವಂಶದಲ್ಲಿ ಅಂತರ್ಗತವಾದ ಋಚೇಯುವಿನ ವಂಶಪರಂಪರೆ : ಅಜಮೀಢ-ಪಾಂಚಾಲ-ಸೋಮಕರ ವಂಶಗಳು : ಕೌರವ ವಂಶ-ತುರ್ವಸು-ದ್ರುಹ್ಯು ಮತ್ತು ಅನು ಇವರ ಸಂತತಿಯ ವರ್ಣನೆ
  • ಯದುವಂಶದ ವರ್ಣನೆ : ಕಾರ್ತವೀರ್ಯನ ಜನನ ಮತ್ತು ಅವನ ಚರಿತ್ರೆ : ಯಯಾತಿಯ ಐವರು ಮಕ್ಕಳ ವಂಶಾವಳಿಯನ್ನು ಕೇಳುವುದರಿಂದ ಉಂಟಾಗುವ ಫಲ
  • ವೃಷ್ಣಿವಂಶದ ವರ್ಣನೆ : ಅಕ್ರೂರ, ವಸುದೇವ, ಕುಂತೀ, ಸಾತ್ಯಕಿ, ಉದ್ಧವ, ಚಾರುದೇಷ್ಣ, ಏಕಲವ್ಯ–ಇವರೇ ಮುಂತಾದವರ ಪರಿಚಯ
  • ಶ್ರೀಕೃಷ್ಣನ ಅವತಾರ : ಶ್ರೀಕೃಷ್ಣನ ಅಣ್ಣ-ತಂಗಿಯರ ಉತ್ಪತ್ತಿಯ ವರ್ಣನೆ : ಕಾಲಯವನನ ಆವಿರ್ಭಾವ
  • ಕ್ರೋಷ್ಟುವಿನ ವಂಶದ ವರ್ಣನೆ : ಪುರೋಹಿತರ ಮತ್ತು ಕ್ಷತ್ರಿಯರ ಗೋತ್ರಗಳ ವಿನಿಮಯ
  • ಬಭ್ರುವಂಶದ ವರ್ಣನೆ
  • ಭಜಮಾನವಂಶದ ವರ್ಣನೆ : ಸ್ಯಮಂತಕಮಣಿಯ ಕಥೆ
  • ಸ್ಯಮಂತಕಮಣಿಯ ಕಾರಣದಿಂದಾಗಿ ಪ್ರಸೇನ, ಸತ್ರಾಜಿತ ಮತ್ತು ಶತಧನ್ವರ ಮರಣ : ಬಲದೇವನು ದುರ್ಯೋಧನನಿಗೆ ಗದಾಯುದ್ಧ ನೈಪುಣ್ಯವನ್ನು ಕಲಿಸಿದುದು : ಅಕ್ರೂರನು ಶ್ರೀಕೃಷ್ಣನಿಗೆ ಮಣಿಯನ್ನು ಕೊಟ್ಟುದು : ಶ್ರೀಕೃಷ್ಣನು ಮಣಿಯನ್ನು ಪುನಃ ಅಕ್ರೂರನಿಗೇ ಹಿಂದಿರುಗಿಸಿದುದು
  • ಜನಮೇಜಯನು ವರಾಹ, ನೃಸಿಂಹ, ಪರಶುರಾಮ, ಶ್ರೀಕೃಷ್ಣ–ಮುಂತಾದ ಅವತಾರಗಳ ರಹಸ್ಯವನ್ನು ಪ್ರಶ್ನಿಸಿದುದು
  • ಮಹಾವಿಷ್ಣುವಿನ ವರಾಹ, ನೃಸಿಂಹ, ವಾಮನ, ದತ್ತಾತ್ರೇಯ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ವ್ಯಾಸ ಮತ್ತು ಕಲ್ಕಿ–ಈ ಅವತಾರಗಳ ಸಂಕ್ಷಿಪ್ತವರ್ಣನೆ
  • ವಿಷ್ಣುವಿನ ಈಶ್ವರತ್ವದ ವರ್ಣನೆ : ಅದ್ಭುತವಾದ ತಾರಕಾಮಯ ಸಂಗ್ರಾಮದ ಕಥೆ
  • ದೇವತೆಗಳೊಡನೆ ಯುದ್ಧಮಾಡಲು ಸನ್ನದ್ಧವಾಗಿದ್ದ ದೈತ್ಯಸೇನೆಯ ವರ್ಣನೆ
  • ಆಶ್ಚರ್ಯಕರವಾದ ತಾರಕಾಮಯಸಂಗ್ರಾಮದಲ್ಲಿ ದೇವತೆಗಳ ಯುದ್ಧಸಿದ್ಧತೆ
  • ದೇವಾಸುರರ ಯುದ್ಧ : ಔರ್ವಾಗ್ನಿಯ ಉತ್ಪತ್ತಿ
  • ಇಂದ್ರನಿಂದ ಚಂದ್ರನ ಸ್ತುತಿ : ಚಂದ್ರ-ವರುಣರಿಂದ ದೈತ್ಯ ಸೈನ್ಯಸಂಹಾರ : ಮಯನಿಂದ ಚಂದ್ರ-ವರುಣರ ಮೇಲೆ ಮಾಯಾಪ್ರಯೋಗ : ದೈತ್ಯಸೈನ್ಯದೊಡನೆ ವಾಯ್ಮಗ್ನಿಗಳ ಯುದ್ಧ : ರಣರಂಗಕ್ಕೆ ಕಾಲನೇಮಿಯ ಆಗಮನ
  • ಕಾಲನೇಮಿಯ ಯುದ್ಧ ಮತ್ತು ಪ್ರಭಾವ
  • ಕಾಲನೇಮಿ ಮತ್ತು ಮಹಾವಿಷ್ಣುಗಳ ಸಂವಾದ : ಮಹಾವಿಷ್ಣುವಿನಿಂದ ಕಾಲನೇಮಿಯ ಸಂಹಾರ : ವಿಷ್ಣುವು ದೇವತೆಗಳನ್ನು ಆಶ್ವಸಿಸಿ ಬ್ರಹ್ಮಲೋಕಕ್ಕೆ ತೆರಳಿದುದು
  • ಬ್ರಹ್ಮಲೋಕದಲ್ಲಿ ಮಹಾವಿಷ್ಣುವಿಗೆ ಸತ್ಕಾರ
  • ನಾರಾಯಣಾಶ್ರಮದಲ್ಲಿ ಮಹಾವಿಷ್ಣುವು ಪವಡಿಸಿದುದು : ಬ್ರಹ್ಮಾದಿಗಳು ತನ್ನ ಬಳಿಗೆ ಬಂದೊಡನೆಯೇ ಮೇಲೆದ್ದು ಅವರ ಆಗಮನದ ಕಾರಣವನ್ನು ಕೇಳಿದುದು
  • ಬ್ರಹ್ಮನು ವಿಷ್ಣುವಿಗೆ ಪ್ರಪಂಚದ ಸದ್ಯದ ಪರಿಸ್ಥಿತಿಯನ್ನು ವಿವರಿಸಿ ಹೇಳುತ್ತಾ ಭೂಭಾರವನ್ನು ಇಳಿಸುವಂತೆ ಒತ್ತಾಯಿಸಿದುದು
  • ಭಗವಂತನಾದ ಮಹಾವಿಷ್ಣುವೂ ಮತ್ತು ದೇವತೆಗಳೂ ಮೇರುಪರ್ವತದಲ್ಲಿ ಸಭೆಸೇರಿದುದು : ಪೃಥ್ವೀದೇವಿಯು ತನ್ನ ಭಾರವನ್ನಿಳಿಸಲು ಭಗವಂತನನ್ನು ಕೇಳಿಕೊಂಡುದು
  • ಬ್ರಹ್ಮನ ಆಜ್ಞೆಯಂತೆ ದೇವತೆಗಳ ಅಂಶಾವತರಣ
  • ಭಗವಂತನಾದ ಮಹಾವಿಷ್ಣುವಿನೊಡನೆ ನಾರದರ ಸಂಭಾಷಣೆ : ಭೂಲೋಕದಲ್ಲಿನ ದುರವಸ್ಥೆಯನ್ನು ವಿವರಿಸಿ ದುಷ್ಟನಿಗ್ರಹಕ್ಕಾಗಿ ಅವತರಿಸುವಂತೆ ಪ್ರಚೋದಿಸಿದುದು
  • ಮಹಾವಿಷ್ಣುವು ನಾರದರಿಗೆ ಉತ್ತರಿಸಿದುದು : ಬ್ರಹ್ಮನು ಮಹಾವಿಷ್ಣುವು ಅವತರಿಸಲು ಯೋಗ್ಯವಾದ ಸ್ಥಾನವನ್ನು ತಿಳಿಸಿ ಅವನು ಭಾವಿ ತಂದೆ-ತಾಯಿಗಳನ್ನು ಪರಿಚಯಿಸಿದುದು

ವಿಷ್ಣುಪರ್ವ

  • ನಾರದರು ಮಥುರೆಗೆ ಹೋಗಿ ಕಂಸನಿಗೆ ಮುಂದೆ ಒದಗಲಿರುವ ಭಯದ ಸೂಚನೆಯನ್ನಿತ್ತುದು : ಕಂಸನು ಸೇವಕರ ಎದುರಿನಲ್ಲಿ ತನ್ನ ಪ್ರತಾಪವನ್ನು ಕೊಚ್ಚಿಕೊಂಡುದು
  • ಕಂಸನು ದೇವಕಿಯ ಗರ್ಭವನ್ನು ವಿನಾಶಗೊಳಿಸಲು ಪ್ರಯತ್ನಿಸಿದುದು : ವಿಷ್ಣುವು ಪಾತಾಳ ಲೋಕದಲ್ಲಿದ್ದ ಷಡ್ಗರ್ಭರೆಂಬ ಹೆಸರಿನ ದೈತ್ಯರ ಜೀವಗಳನ್ನು ಅಪಕರ್ಷಣೆಮಾಡಿ ಅವನ್ನು ನಿದ್ರಾದೇವಿಗೆ ಕೊಟ್ಟುದು : ಆ ಆರು ಜೀವಗಳನ್ನೂ ಅನುಕ್ರಮವಾಗಿ ದೇವಕಿಯ ಗರ್ಭದಲ್ಲಿ ಸ್ಥಾಪಿಸಲು ಹೇಳಿದುದು
  • ಆರ್ಯೆಯ ಸ್ತುತಿ
  • ಕಂಸನು ದೇವಕಿಯಲ್ಲಿ ಹುಟ್ಟಿದ ಮಕ್ಕಳೆಲ್ಲರನ್ನೂ ಸಂಹರಿಸಿದುದು : ಏಳನೆಯ ಗರ್ಭದಲ್ಲಿ ಸಂಕರ್ಷಣನೂ ಅನಂತರ ಶ್ರೀಕೃಷ್ಣನೂ ಹುಟ್ಟಿ ಯೋಗಮಾಯೆಯ ಮೂಲಕವಾಗಿ ನಂದನ ಅರಮನೆಗೆ ಪ್ರವೇಶಿಸಿದುದು : ಕಂಸನು ದೇವಕಿಯ ಬಳಿಯಲ್ಲಿದ್ದ ನಂದನ ಕನ್ಯೆಯನ್ನು (ಯೋಗಮಾಯೆಯನ್ನು) ವಧಿಸಲು ಪ್ರಯತ್ನಿಸಿದುದು : ಯೋಗಮಾಯೆಯು ತನ್ನ ದಿವ್ಯರೂಪವನ್ನು ಕಂಸನಿಗೆ ತೋರಿದುದು : ಕಂಸನು ದೇವಕಿಯ ಕ್ಷಮೆಯನ್ನು ಯಾಚಿಸಿದುದು : ದೇವಕಿಯು ಕಂಸನನ್ನು ಕ್ಷಮಿಸಿದುದು
  • ಗೋವ್ರಜದ ಸೌಂದರ್ಯ : ಗೋವ್ರಜಕ್ಕೆ ನಂದಗೋಪನ ಆಗಮನ
  • ಶಕಟಭಂಜನ-ಪೂತನೆಯ ವಧೆ
  • ಯಮಲಾರ್ಜುನವೃಕ್ಷಭಂಗ
  • ಶ್ರೀಕೃಷ್ಣ-ಬಲರಾಮರ ಬಾಲಲೀಲೆಗಳು : ಶ್ರೀಕೃಷ್ಣನು ಗೋವ್ರಜವನ್ನು ಬಿಟ್ಟುಹೋಗಲು ನಿಶ್ಚಯಿಸಿ ತನ್ನ ಶರೀರದಿಂದ ತೋಳಗಳನ್ನು ಸೃಷ್ಟಿಸಿ ಗೋವ್ರಜದ ಜನರನ್ನು ಭಯಗೊಳಿಸಿದುದು
  • ತೋಳಗಳ ಉಪಟಳದಿಂದಾಗಿ ವ್ರಜವಾಸಿಗಳು ಗೋವ್ರಜವನ್ನು ಬಿಟ್ಟು ವೃಂದಾವನಕ್ಕೆ ತೆರಳಿದುದು
  • ವರ್ಷರ್ತುವಿನ ವರ್ಣನೆ
  • ಶ್ರೀಕೃಷ್ಣನ ಅಂಗಸೌಂದರ್ಯ : ಭಾಂಡೀರವಟ : ಯಮುನೆಯ ವರ್ಣನೆ : ಕಾಳಿಂಗಸರ್ಪದ ಆರ್ಭಟ
  • ಶ್ರೀಕೃಷ್ಣನಿಂದ ಕಾಲಿಯ ದಮನ : ಕಾಲಿಯನು ಸಮುದ್ರಕ್ಕೆ ತೆರಳಿದುದು : ಗೋಪಾಲಕರಿಗೆ ಶ್ರೀಕೃಷ್ಣನ ಮಾಹಾತ್ಮ್ಯೆಯ ಅನುಭವ
  • ಬಲರಾಮನಿಂದ ಧೇನುಕಾಸುರನ ಸಂಹಾರ : ನಿರ್ಭಯವಾದ ತಾಲವನದಲ್ಲಿ ಗೋವುಗಳ ಮತ್ತು ಗೋಪಾಲಕರ ಸಂಚಾರ
  • ಬಲರಾಮನಿಂದ ಪ್ರಲಂಬಾಸುರನ ವಧೆ
  • ಇಂದ್ರೋತ್ಸವದ ವಿಷಯದಲ್ಲಿ ಶ್ರೀಕೃಷ್ಣನ ಜಿಜ್ಞಾಸೆ : ವೃದ್ಧಗೋಪಾಲಕನಿಂದ ಉತ್ಸವದ ಆವಶ್ಯಕತೆಯ ಪ್ರತಿಪಾದನೆ
  • ಶ್ರೀಕೃಷ್ಣನು ಗಿರಿಯಜ್ಞದ ಮತ್ತು ಗೋಪೂಜೆಯ ಪ್ರಸ್ತಾಪಮಾಡಿದುದು : ಶರದೃತುವಿನ ವರ್ಣನೆ
  • ಶ್ರೀಕೃಷ್ಣನ ಮಾತಿಗೆ ಗೋಪಾಲಕರ ಸಮ್ಮತಿ : ಗಿರಿಯಜ್ಞಾನುಷ್ಠಾನ : ಭಗವಂತನಿಂದ ದಿವ್ಯ ರೂಪಧಾರಣೆ ಮತ್ತು ವರಪ್ರದಾನ
  • ಇಂದ್ರನು ಸಂವರ್ತಕಮೇಘಗಳ ಮೂಲಕವಾಗಿ ಮಳೆಗರೆದು ಗೋವುಗಳನ್ನೂ ಗೋಪಾಲಕರನ್ನೂ ಕಷ್ಟಕ್ಕೀಡುಮಾಡಿದುದು : ಶ್ರೀಕೃಷ್ಣನು ಗೋವರ್ಧನ ಪರ್ವತವನ್ನೆತ್ತಿದುದು : ಗೋವುಗಳಿಂದ ಪರ್ವತದ ಅಡಿಯಲ್ಲಿ ಆಶ್ರಯವನ್ನು ಪಡೆದುದು
  • ದೇವರಾಜನಾದ ಇಂದ್ರನ ಆಗಮನ : ಇಂದ್ರನು ಶ್ರೀಕೃಷ್ಣನನ್ನು ಗೋವಿಂದನ ಸ್ಥಾನದಲ್ಲಿ ಅಭಿಷೇಕ ಮಾಡಿದುದು : ಇಂದ್ರನು ಶ್ರೀಕೃಷ್ಣನಿಗೆ ಮುಂದೆ ಮಾಡಬೇಕಾಗಿರುವ ಕಾರ್ಯವನ್ನು ಹೇಳಿ ಅರ್ಜುನನನ್ನು ನೋಡುವಂತೆ ಸಲಹೆಯನ್ನಿತ್ತುದು : ಶ್ರೀಕೃಷ್ಣನ ಸಮ್ಮತಿ
  • ಶ್ರೀಕೃಷ್ಣನ ಅಲೌಕಿಕವಾದ ಚರಿತ್ರೆಯನ್ನು ನೋಡಿ ಆಶಂಕಿತರಾದ ಗೋಪರು ಶ್ರೀಕೃಷ್ಣನನ್ನು ಪ್ರಶ್ನಿಸಿದುದು : ಶ್ರೀಕೃಷ್ಣನ ಉತ್ತರ : ರಾಸಲೀಲೆಯ ಸಂಕ್ಷಿಪ್ತ ವರ್ಣನೆ
  • ಅರಿಷ್ಟಾಸುರನ ವಧೆ
  • ಕಂಸನ ಆಶಂಕೆ : ರಾತ್ರಿಯಲ್ಲಿ ಯದುವಂಶೀಯರನ್ನು ಮಹಾಸಭೆಗೆ ಆಹ್ವಾನಿಸಿ ಶ್ರೀಕೃಷ್ಣನ ಮತ್ತು ಮಹಾವಿಷ್ಣುವಿನ ಪ್ರಭಾವವನ್ನು ವಿವರಿಸಿ ಹೇಳಿದುದು : ವಸುದೇವನನ್ನು ಆಕ್ಷೇಪಿಸುತ್ತಾ ಶ್ರೀಕೃಷ್ಣನೇ ಮೊದಲಾದವರನ್ನು ಕರೆತರಲು ವ್ರಜಭೂಮಿಗೆ ಅಕ್ರೂರನನ್ನು ಕಳುಹಿಸಿಕೊಟ್ಟುದು
  • ಕಂಸನಿಗೆ ಅಂಧಕನ ಉತ್ತರ
  • ಕೇಶಿಯ ಅತ್ಯಾಚಾರ : ಶ್ರೀಕೃಷ್ಣನಿಂದ ಅವನ ವಧೆ ಮೂಲ, ಅರ್ಥ
  • ಅಕ್ರೂರನು ವ್ರಜಭೂಮಿಗೆ ಬಂದು ಶ್ರೀಕೃಷ್ಣನನ್ನು ಸಂದರ್ಶಿಸಿದುದು : ಅಕ್ರೂರ-ಕೃಷ್ಣರ ಮಾತುಕತೆ
  • ಅಕ್ರೂರನು ಗೋಪರಿಗೆ ಕಂಸನ ಆದೇಶವನ್ನು ತಿಳಿಸಿದುದು : ವಸುದೇವ-ದೇವಕಿಯರ ದಯನೀಯಸ್ಥಿತಿಯನ್ನು ವಿವರಿಸಿದುದು : ಶ್ರೀಕೃಷ್ಣ-ಬಲರಾಮರಿಗೆ ಮಥುರಾಪಟ್ಟಣಕ್ಕೆ ಬರುವಂತೆ ಪ್ರೇರಿಸಿದುದು : ಶ್ರೀಕೃಷ್ಣ-ಬಲರಾಮರೊಡನೆ ಅಕ್ರೂರನ ಪ್ರಯಾಣ : ಹಾದಿಯಲ್ಲಿ ಅಕ್ರೂರನು ಯಮುನೆಯ ನೀರಿನಲ್ಲಿ ಆಶ್ಚರ್ಯಕರವಾದ ನಾಗಲೋಕವನ್ನೂ, ಪೂಜ್ಯನಾದ ಅನಂತನನ್ನೂ ಅವನ ತೊಡೆಯ ಮೇಲಿದ್ದ ಶ್ರೀಕೃಷ್ಣನನ್ನೂ ಕಂಡುದು
  • ಶ್ರೀಕೃಷ್ಣ-ಬಲರಾಮರ ಮಥುರಾಪ್ರವೇಶ : ರಜಕನ ವಧೆ : ಮಾಲಿಗೆ ವರದಾನ : ಕುಬ್ಜೆಗೆ ಅನುಗ್ರಹ : ಕಂಸನ ಧನುರ್ಭಂಜನ
  • ಶ್ರೀಕೃಷ್ಣ-ಬಲರಾಮರ ಮಥುರಾಪ್ರವೇಶ : ರಜಕನ ವಧೆ : ಮಾಲಿಗೆ ವರದಾನ : ಕುಬ್ಜೆಗೆ ಅನುಗ್ರಹ : ಕಂಸನ ಧನುರ್ಭಂಜನ

Other Books in this COllection

ಸಂಪುಟ ೧ (ಮೂಲ)

Volume 2 (Original)

Volume 2 (Prose)

Volume 3 (Prose)

Volume 4 (Prose)